ಅಪಘಾತ ಪ್ರಕರಣಗಳು
:
ಫರತಾಬಾದ ಠಾಣೆ : ದಿನಾಂಕ 23/11/2018 ರಂದು ರಾಷ್ಟ್ರೀಯ ಹೇದ್ದಾರಿ 218ರ ಶಹಾಬಾದ ಕ್ರಾಸ ದಾಟಿ ರೋಡಿನ ಮೇಲೆ ಕಾರ ನಂ ಕೆಎ-04 ಎಮ.ಎನ್-5558 ನೇದ್ದರ ಚಾಲಕನು ತನ್ನ
ಕಾರನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ
ಮೋಟಾರ ಸೈಕಲ ನಂ ಕೆಎ-32 ಇ.ಜಿ-3507 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಫಿರ್ಯಾದಿ & ಮೋಟಾರ ಸೈಕಲ ಹಿಂದೆ
ಕುಳಿತ್ತಿದ್ದ ಫಿರ್ಯಾದಿದಾರರ ಅಕ್ಕಳ ಮಗನಾದ ಶಿವು @
ಶಿವರಾಜ ತಂದೆ ಕೊತಲಪ್ಪ ಇಬ್ಬರು ರೋಡಿನ ಮೇಲೆ ಬಿದ್ದಿದ್ದು, ಇದ್ದರಿಂದ ಫಿರ್ಯಾದಿಯ
ಬಲಗಾಲಿಗೆ ಭಾರಿ ರಕ್ತಗಾಯ & ಗುಪ್ತಗಾಯ ಹಾಗೂ ಎಡಗೈ ಮೊಳಕೈಗೆ ಭಾರಿ ಗುಪ್ತಗಾಯ, ಅಲಲ್ಲಿ ತರಚಿದ
ಗಾಯಗಳಾಗಿದ್ದು, ಶಿವು @ ಶಿವರಾಜ ಇತನಿಗೆ ತಲೆಗೆ ಭಾರಿ ರಕ್ತಗಾಯ,
ಎಡಮುಖಕ್ಕೆ ಭಾರಿ ರಕ್ತಗಾಯ, ಎರಡು ಕಾಲುಗಳಿಗೆ ಭಾರಿ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸದರಿ ಕಾರ ಚಾಲಕನು
ಅಪಘಾತಪಡಿಸಿದ ನಂತರ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಹೊಗಿದ್ದು, ಸದರಿ ಕಾರ ನಂ ಕೆಎ-04 ಎಮ.ಎನ್-5558 ನೇದ್ದರ ಚಾಲಕನ ವಿರುದ್ದ
ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೆಕು ಅಂತಾ ಶ್ರೀ ಶರಣಬಸಪ್ಪ ತಂದೆ ತಿಪ್ಪಣ್ಣ ಹೋಸಮನಿ ಸಾಃ
ಕಾಖಂಡಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 23-11-2018 ರಂದು ಮಧ್ಯಾಹ್ನ ನನ್ನ ಮಗನಾದ ಜಾವೀದ ಇತನು ಮತ್ತು ನಮ್ಮ ಮನೆಯ ಹತ್ತಿರ ಇರುವ ಅವನ ಸ್ನೇಹಿತನಾದ ಶಿವರಾಜ
ತಂದೆ ಸಿದ್ದಪ್ಪ ತೆನ್ನಳ್ಳಿ
ಇಬ್ಬರು ಕೂಡಿಕೊಂಡು ನಮ್ಮ ಹೋಸ ಬಜಾಜ ಪ್ಲ್ಯಾಟಿನಂ ಮೋಟಾರ
ಸೈಕಲ್ ಚಸ್ಸಿ ನಂ MD2A18AY1JWD17365 ನೇದ್ದರ ಮೇಲೆ ಅಫಜಲಪೂರಕ್ಕೆ ಸಂತೆ ಮಾಡಿಕೊಂಡು ಬರುತ್ತೇವೆಂದು
ಹೇಳಿ ಹೋಗಿರುತ್ತಾರೆ. ಸಾಯಂಕಾಲ ನಾನು ಮತ್ತು ನನ್ನ ಹೆಂಡತಿ ಮಕ್ಕಳು ನಮ್ಮ ಮನೆಯಲ್ಲಿದ್ದಾಗ, ನಮ್ಮ ಗ್ರಾಮದ ರುಕ್ಮುದ್ದಿನ್ ತಂದೆ ಚುನ್ನುಮಿಯಾ ಶೇಖ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಾನು ಖಾಸಗಿ ಕೆಲಸ ನಿಮೀತ್ಯ ನನ್ನ ಮೋಟಾರ ಸೈಕಲ್ ನಂ ಕೆಎ-32-ಎಲ್-6021 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗುತ್ತಿರುವಾಗ
ಘತ್ತರಗಿ ದಿಂದ ಅಫಜಲಪೂರ ರಸ್ತೆಯ ಹಳೆ ಕಡಿ ಮೀಶಿನ್ ಹತ್ತಿರ ನಿಮ್ಮ ಮಗ ಜಾವೀದ ಇತನು ಮೋಟಾರ ಸೈಕಲ ಚಲಾಯಿಸುತ್ತಿದ್ದು, ಶಿವರಾಜ ಇತನು ಹಿಂದೆ ಕುಳಿತ್ತಿದ್ದು ಇರುತ್ತದೆ. ಇಬ್ಬರು
ನಮ್ಮ ಮೋಟಾರ ಸೈಕಲ್ ಮುಂದೆ ಹೋಗುತ್ತಿದ್ದು ನಾವು ಅವರ ಹಿಂದೆ ಹೋಗುತ್ತಿದ್ದೇನು. ಅದೆ ಸಮಯಕ್ಕೆ ನಮ್ಮ ಹಿಂದಿನಿಂದ
ಮೋಟಾರ ಸೈಕಲ್ ನಂ ಕೆಎ-32-ಇಹೆಚ್-9490 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ್ ಅನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಓವರ ಟೇಕ ಮಾಡುವಾಗ ಎದುರುಗಡೆ ಕಬ್ಬು
ತುಂಬಿದ ಒಂದು ಟ್ರ್ಯಾಕ್ಟರ ಬಂದಿದ್ದರಿಂದ ಸದರಿ ಮೋಟಾರ ಸೈಕಲ ಸವಾರನು ನಿಮ್ಮ ಮಗನ ಮೋಟಾರ ಸೈಕಲಗೆ ಹಿಂದಿ ನಿಂದ ಡಿಕ್ಕಿ ಪಡೆಸಿ ಅಫಘಾತ ಪಡೆಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋದನು. ಆಗ ನಾನು ನಿಮ್ಮ ಮಗ ಮತ್ತು ಶಿವರಾಜ ಇವರ ಹತ್ತಿರ ಹೋಗಿ ನೋಡಲು ನಿಮ್ಮ ಮಗ ಜಾಮೀದ ಇತನಿಗೆ ತಲೆಗೆ, ಎದೆಗೆ, ಎಡ ಕಣ್ಣಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ ವಾಗಿದ್ದು ಮತ್ತು
ಶಿವರಾಜ ಇತನಿಗೆ ತಲೆಗೆ ರಕ್ತಗಾಯವಾಗಿ, ಬಲಗಾಲು
ಮುರಿದಿರುತ್ತದೆ ಅಂತಾ ತಿಳಿಸಿದ ಮೇರೆಗೆ ಘಾಬರಿಯಾಗಿ ನಾನು ನನ್ನ ಮತ್ತು ನನ್ನ ಮಕ್ಕಳಾದ ಮಜೀದ,
ಸಾಜೀದ ಹಾಗೂ ಗ್ರಾಮದವರಾದ ಸಾತವೀರಪ್ಪ ತಂದೆ ಮಾಹಾದೇವಪ್ಪ, ಸಿದ್ದು
ತಂದೆ ಕೆಂಚಪ್ಪ ಹಾಗೂ ಇನ್ನು ಇತರರು ಸೇರಿಕೊಂಡು ಒಂದು ಖಾಸಗಿ ವಾನದಲ್ಲಿ ಘಟನಾ ಸ್ಥಳಕ್ಕೆ ಬಂದು ನನ್ನ ಮಗ ಮತ್ತು ಶಿವರಾಜನಿಗೆ ಆಗಿರುವ
ಗಾಯಗಳನ್ನು ನೋಡಿ ನಾವು ತಂದಿರುವ ಖಾಸಗಿ
ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ
ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ
ಸಾಯಂಕಾಲ 5:45 ಗಂಟೆಯ ಸುಮಾರಿಗೆ ನನ್ನ ಮಗನು ಅಫಜಲಪೂರದ ಘತ್ತರಗಿ
ರಸ್ತೆಗೆ ಇರುವ ಲಕ್ಷ್ಮಿ ಗುಡಿಯ ಹತ್ತಿರ ಮೃತಪಟ್ಟಿರುತ್ತಾನೆ. ನಂತರ ನನ್ನ ಮಗನ ಶವವನ್ನು ಅಫಜಲಪೂರ ಸರಕಾರಿ
ಆಸ್ಪತ್ರೆಯಲ್ಲಿ ಹಾಕಿಸಿರುತ್ತೇನೆ. ಶಿವರಾಜನಿಗೆ ಅಫಜಲಪೂರ
ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ
ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳುಹಿಸಿಕೊಟ್ಟಿರುತ್ತೆವೆ ಅಂತಾ ಶ್ರೀ ಮೈನೊದ್ದಿನ್ ತಂದೆ ಬಾಷಾಸಾಸ ಶೇಖ @
ಮುಲ್ಲಾ ಸಾ: ಕೊಳ್ಳುರ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 19-11-2018 ರಂದು ಬೆಳಿಗ್ಗೆ ಮೃತ ಸೋಮನಾಥ ರೆಡ್ಡಿ ಇತನು ಜಿಲ್ಲಾ ಸರಕಾರಿ ಆಸ್ಪತ್ರೆ ಎದುರುಗಡೆ ಬರುವ ಬಂಡಿ ಹೊಟೇಲನಲ್ಲಿ ಚಹಾ ಕುಡಿಯುವ
ಸಂಬಂದ ಹೋಗಿ ಚಹಾ ಕುಡಿದು ವಾಪಸ್ಸ ಸರಕಾರಿ ಆಸ್ಪತ್ರೆ ಒಳಗಡೆ ಉಪಚಾರ ಪಡೆಯುವ ಕುರಿತು ನಡೆದುಕೊಂಡು
ಆಸ್ಪತ್ರೆ ಎದುರಿನ ರೋಡ ದಾಟುತ್ತೀರುವಾಗ ಆರೋಪಿ ಡಾ||
ರಾಹುಲ ಇವರು ಜಿ.ಜಿ.ಹೆಚ್ ಸರ್ಕಲ ಕಡೆಯಿಂದ ಆರ.ಟಿ.ಓ ಕ್ರಾಸ ಕಡೆಗೆ ಹೋಗುವ
ಕುರಿತು ತನ್ನ ಕಾರ ನಂ ಕೆಎ-32/ಎನ್-6611 ನೇದ್ದನ್ನು ಅತಿವೆಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ
ಸೋಮನಾಥ ರೆಡ್ಡಿ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕರೆದುಕೊಂಡು ಹೋಗಿ ಸೇರಿಕೆ
ಮಾಡಿದ್ದು ಸೋಮನಾಥ ರೆಡ್ಡಿ ಇತನು ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ದಿನಾಂಕ 23-11-2018 ರಂದು ಮದ್ಯಾಹ್ನ 1-45 ಗಂಟೆ ಸುಮಾರಿಗೆ
ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಸೋಮನಾಥ ರೆಡ್ಡಿ ತಂದೆ ಬಸವರಾಜ ರೆಡ್ಡಿ ಸಾ: ಆಶ್ರಯ ಕಾಲೋನಿ ಶಹಾಬಜಾರ ಕಲಬುರಗಿ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.