ಜೊಡಿ ಕೊಲೆ ಪ್ರಕರಣದ ಆರೋಪಿಗಳ ಬಂಧನ.
ಸ್ಟೇಷನ ಬಜಾರ ಪೊಲೀಸ್ ಠಾಣೆ : ದಿನಾಂಕ 07/02/2015 ರಂದು ಮಧ್ಯರಾತ್ರಿ 02:00 ಗಂಟೆಯಿಂದ ಬೆಳಿಗಿನ ಜಾವಾ 05:00 ಗಂಟೆಯ ಅವಧಿಯಲ್ಲಿ ಇಬ್ಬರೂ ಅಪರಿಚಿತ ಮನುಷ್ಯರನ್ನು ಯಾರೋ ದುಷ್ಕರ್ಮಿಗಳು ಯಾವುದೋ ಕಾರಣದಿಂದ ಐ.ಟಿ.ಐ ಕಾಲೇಜ ಎದುರುಗಡೆ ರೋಡಿನ ಪಕ್ಕದ ನಾಲಿಯ ಹತ್ತಿರ ಶಿವಸಾಗರ ಬಟ್ಟೆ ಅಂಗಡಿ ಪಕ್ಕದಲ್ಲಿ ಒಬ್ಬನು ಅಂದಾಜು ವಯಸ್ಸು 28-35 ವರ್ಷ, ಅಪರಿಚಿತನಿದ್ದು ಮೈ ಮೇಲೆ ಕೆಂಪು ಗೇರಿ ಗೇರಿಯ ಶರ್ಟ, ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದು ಮೈಮೇಲೆ ಒಂದು ಕೆಂಪು ಬಣ್ಣದ ಶಾಲ ಮತ್ತು ಒಂದು ಟಾವೆಲ್ ಇರುತ್ತದೆ ಈತನನ್ನು ಕಲ್ಲಿನಿಂದ ಎತ್ತಿ ಹೊಡೆದು ಕೊಲೆ ಮಾಡಿದ್ದು ಮತ್ತು ಕಾಮರೆಡ್ಡಿ ಆಸ್ಪತ್ರೆ ಹತ್ತಿರ ಕಾರ್ಖಾನೆ ಮತ್ತು ಬೈಲರಗಳ ಇಲಾಖೆ ಹತ್ತಿರ ಗಾರ್ಡನ ಪಕ್ಕದಲ್ಲಿ ರೋಡಿನ ಮೇಲೆ ಇನ್ನೋಬ್ಬ ಅಂದಾಜು ವಯಸ್ಸು 25-30 ವರ್ಷ, ಮೈಮೇಲೆ ಒಂದು ಕೆಂಪು ಮತ್ತು ಬಿಳಿ ಪಟ್ಟಿಯ ಟಿ-ಶರ್ಟ ಮತ್ತು ಒಂದು ಕಂದು ನೀಲಿ ಬಣ್ಣದ ಪ್ಯಾಂಟ ಧರಿಸಿದ್ದು ತಲೆಗೆ ಕಲ್ಲಿನಿಂದ ಹೊಡೆದರಿಂದ ಭಾರಿ ರಕ್ತಗಾಯವಾಗಿದ್ದು ಇನ್ನೂ ಜೀವಂತ ಇದ್ದು ಸದರಿಯವನಿಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಸದರಿಯವನು ಉಪಚಾರ ಪಡೆಯುತ್ತಾ ಮೃತ ಪಟ್ಟಿದ್ದು ಮತ್ತು ಮುಖವನ್ನು ಗುರುತು ಹಿಡಿಯದ ಹಾಗೆ ಕಲ್ಲಿನಿಂದ ಮುಖಕ್ಕೆ ಹೊಡೆದಿರುತ್ತಾರೆ ಈ ಬಗ್ಗೆ ಸ್ಟೇಷನ ಬಜಾರ ಪೊಲೀಸ್ ಠಾಣೆ ಗುನ್ನೆ ನಂ. 20/2015 ಕಲಂ 302, 201 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
ಇಂದು ದಿನಾಂಕ 08/02/2015 ರಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಡಾ|| ಅಮೀತಸಿಂಗ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಮಹಾಂತೇಶ, ಆರಕ್ಷಕ ಉಪಾಧೀಕ್ಷಕರಾದ ಶ್ರೀ ಮಹಾನಿಂಗ ನಂದಗಾಂವಿ ಇವರ ಮಾರ್ಗದರ್ಶನದಲ್ಲಿ ಶ್ರೀ ರಾಜಶೇಖರ ಹಳಿಗೋಧಿ ಪಿ.ಐ ಸ್ಟೇಷನ ಬಜಾರ ಠಾಣೆ, ಶ್ರೀ ಎಸ್.ಎಸ್ ದೊಡಮನಿ ಪಿ.ಎಸ್.ಐ(ಕಾಸು) ಸ್ಟೇಷಜ ಬಜಾರ ಠಾಣೆ ಮತ್ತು ಸಿಬ್ಬಂದಿಯವರಾದ ಚನ್ನಮಲ್ಲಪ್ಪಾ ಪಿಸಿ 241, ಮಲ್ಲಿನಗೌಡ ಪಿಸಿ 619, ರಾಜಕುಮಾರ ಪಿಸಿ 1100, ರಾಮು ಪವಾರ ಪಿಸಿ(ಬ್ರಹ್ಮಪೂರ ಠಾಣೆ) ರವರೊಂದಿಗೆ ಪ್ರಕರಣದ ಆರೋಪಿ ಪತ್ತೆ ಕುರಿತು ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ಅಲ್ಲೆ ಹತ್ತಿರ ಇರುವ ಆಸ್ಪತ್ರೆಯ ಸಿ.ಸಿ ಟಿ.ವಿ ಕ್ಯಾಮೆರಾದ ಆಧಾರದ ಮೇಲಿಂದ ಮಾಹಿತಿ ಕಲೆ ಹಾಕಿ ಆರೋಪಿತರ ಪತ್ತೆ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿ ಸಿ.ಸಿ ಟಿ.ವಿಯ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಗಳನ್ನು ಇಂದು ಹೀರಾಪೂರ ಕ್ರಾಸ್ ಹತ್ತಿರ ವಶಪಡಿಸಿಕೊಂಡು ವಿಚಾರಿಸಲಾಗಿ ತಮ್ಮ ಹೆಸರು 1) ವಿಕಾಸ ತಂದೆ ಸಾಯಬಣ್ಣ ಬಿದನೂರ ವಯಃ 19 ವರ್ಷ ಜಾತಿಃ ಪ.ಜಾತಿ ಉಃ ಕೂಲಿ ಕೆಲಸ ಸಾಃ ಇಂದ್ರಾ ನಗರ ಕಲಬುರಗಿ, 2) ಪುಟ್ಯಾ @ ಶ್ರೀಶೈಲ ತಂದೆ ರಾಮು ಸರಪಂಚ ವಯಃ 19 ವರ್ಷ ಜಾತಿಃ ಪ.ಜಾತಿ ಉಃ ಕೂಲಿ ಕೆಲಸ ಸಾಃ ಇಂದ್ರಾ ನಗರ ಕಲಬುರಗಿ ಅಂತಾ ತಿಳಿಸಿ ತಾವು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದು ಮತ್ತು ಸದರಿ ಆರೋಪಿತರ ಹೇಳಿಕೆ ಮೇಲಿಂದ ಹಣಕ್ಕಾಗಿ ಕೊಲೆ ಮಾಡಿರುತ್ತಾರೆ ಅಂತಾ ಒಪ್ಪಿಕೊಂಡಿರುತ್ತಾರೆ ಅಂತಾ ತಮ್ಮ ಹೇಳಿಕೆಯಲ್ಲಿ ಐ.ಟಿ.ಐ ಕಾಲೇಜ ಹತ್ತಿರ ಎದುರುಗಡೆ ಒಬ್ಬನು ಮಲಗಿದ್ದನು ಆಗ ನಾವಿಬ್ಬರು ಮಲಗಿದವನ ಮೇಲೆ ತಲಾ ಒಂದೊಂದು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ನಂತರ ಅವನ ಜೆಬಿನಲ್ಲಿದ್ದ 30/-ರೂ ತೆಗೆದುಕೊಂಡೆವು. ನಂತರ ಆರೋಪಿ ವಿಕಾಸ ಇತನು ಅಲ್ಲಿಯೇ ಒಬ್ಬ ವ್ಯಕ್ತಿಯು ರಸ್ತೆಯ ಮೇಲೆ ನಡೆದುಕೊಂಡು ಹೊರಟಿದ್ದು ಅವನನ್ನು ವಿಕಾಸ ಇವನು ನಂಬಿಸಿ ವಸಂತ ನಗರ ಗಾರ್ಡನ ಹತ್ತಿರ ಕರೆದುಕೊಂಡು ಹೋದನು ಅಲ್ಲಿ ಮೊದಲೇ ಇನ್ನೊಬ್ಬ ಆರೋಪಿ ಪುಟ್ಟು @ ಶ್ರೀಶೈಲ ಇದ್ದನು ಇಬ್ಬರೂ ಕೂಡಿ ಸದರಿಯವನ ಹತ್ತಿರ ಇದ್ದ ಹಣವನ್ನು ಕೊಡು ಅಂದಾಗ ಆತ ಕೊಡದಿದ್ದಾಗ ಸದರಿ ಆರೋಪಿತರಿಬ್ಬರು ಆತನನ್ನು ಕೆಳಗಡೆ ಹಾಕಿ ಕಲ್ಲಿನಿಂದ ತಲೆಯ ಮೇಲೆ ಹಾಕಿ ಕೊಲೆ ಮಾಡಿರುತ್ತೆವೆ ಅಂತಾ ಒಪ್ಪಿಕೊಂಡಿರುತ್ತಾರೆ. ಸದರಿ ಇಬ್ಬರು ಆರೋಪಿತರು ಯಾವುದೇ ಉದ್ಯೋಗ ಮಾಡದೇ ದುಶ್ಚಟಕ್ಕೆ ಅಂಟಿಕೊಂಡಿದ್ದು ತಮ್ಮ ದಿನನಿತ್ಯದ ಚಟಗಳ ಸಲುವಾಗಿ ಹಣದ ಸಲುವಾಗಿ ಈ ಕೃತ್ಯ ವೆಸಗಿದ್ದು ತನಿಖೆಯಿಂದ ತಿಳಿದು ಬಂದಿದೆ. ಸದರಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಲೆಯಾದ ಅಪರಿಚಿತರ ವಿಳಾಸದ ಪತ್ತೆ ಹಚ್ಚುವ ಸಲುವಾಗಿ ಪಿ.ಐ ಸ್ಟೇಷನ ಬಜಾರ ರವರ ನೇತೃತ್ವದಲ್ಲಿ ತಂಡ ರಚೀಸಿ ತನಿಖೆ ನಡೆಸುತ್ತಿದ್ದಾರೆ.