ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-07-2021
ಸಂತಪೂರ ಪೋಲಿಸ ಠಾಣೆ ಯು.ಡಿ.ಆರ್ ನಂ. 08/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸೋಪಾನ ತಂದೆ ಬಾಳಪ್ಪಾ ಆಳೆ ಸಾ: ಸಂತಪೂರ ರವರ ಮಗನಾದ ದೀಪಕ ತಂದೆ ಸೋಪಾನ ಆಳೆ ಇತನು ಸುಮಾರು 8-10 ದಿನಗಳಿಂದ ಮೌನವಾಗಿದ್ದು ಅವನಿಗೆ ಹೀಗೆಕೆ ಮೌನವಾಗಿರುತ್ತಿದ್ದಿ ಎಂದು ವಿಚಾರಿಸಿದರೂ ಏನು ಉತ್ತರಿಸುತ್ತಿರಲಿಲ್ಲ, ಏನೋ ಯೋಚನೆ ಮಾಡುತ್ತಾ ಕೊರಗುತ್ತಿದ್ದನು, ಹೀಗಿರುವಾಗ ದೀಪಕ ಇತನು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ಖಿನ್ನತೆಗೆ ಒಳಗಾಗಿ ದಿನಾಂಕ 20-07-2021 ರಂದು 1700 ಗಂಟೆಯಿಂದ ದಿನಾಂಕ 21-07-2021 ರಂದು 0800 ಗಂಟೆಯ ಮಧ್ಯಾವಧಿಯಲ್ಲಿ ದೀಪಕ ಈತನು ತಮ್ಮ ಹೊಲ ಸರ್ವೆ ನಂ. 94 ನೇದರಲ್ಲಿದ್ದ ಜಂಗಲಿ ಜಾತಿ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ದೂರು ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲಿಸ್ ಠಾಣೆ ಅಪರಾಧ ಸಂ. 47/2021, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 20-07-2021 ರಂದು ಫಿರ್ಯಾದಿ ಸುಜಾತಾ ಗಂಡ ರವೀಂದ್ರ ವರ್ಮಾ ಸಾ: ಮಾಡಗೋಳ ಗ್ರಾಮ, ಸದ್ಯ: ಅಣದೂರ ರವರ ಗಂಡ ರವೀಂದ್ರ ವರ್ಮಾ ರವರು ತಮ್ಮ ಟಾಟಾ ಎಸ್ ಗೂಡ್ಸ್ ವಾಹನ ಸಂ. ಕೆಎ-38/ಎ-3039 ನೇದರಲ್ಲಿ ಹಾಲು ತೆಗೆದುಕೊಂಡು ಚಿಕಪೇಟ್ ಹಾಲಿನ ಡೈರಿಗೆ ಹೊಗುತ್ತಿರುವಾಗ ಅಣದೂರ ನೌಬಾದ ರೋಡಿನ ವಿಜಯರೆಡ್ಡಿ ಪೆಂಟಿನ ಅಂಗಡಿ ಹತ್ತಿರ ಬಂದಾಗ ಎದುರುಗಡೆ ನೌಬಾದ ಕಡೆಯಿಂದ ಕಂಟೇನರ್ ಲಾರಿ ನಂ. ಟಿಎಸ್-07/ಯುಎಪ್-9559 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಗಂಡನ ವಾಹನಕ್ಕೆ ಡಿಕ್ಕಿ ಪಡಿಸಿ ತನ್ನ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಗಂಡನ ಹಣೆಯ ಎಡ ಮತ್ತು ಬಲಭಾಗದಲ್ಲಿ ರಕ್ತಗಾಯ, ಮೂಗಿನ ಮೇಲೆ, ಬಲಗಣ್ಣಿನ ಕೆಳಗಡೆ, ಬಲಗೈ ಭುಜಕ್ಕೆ ರಕ್ತಗಾಯ, ಬಲಗಾಲಿನ ತೊಡೆಗೆ ಭಾರಿ ಗುಪ್ತಗಾಯ, ಪಾದಕ್ಕೆ ರಕ್ತಗಾಯ, ಎಡಗಾಲಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ, ಎದೆಯ ಮೇಲೆ ಗುಪ್ತಗಾಯ ಮತ್ತು ತರಚಿದ ಗಾಯಗಳಾಗಿದ್ದು, ಮಾತನಾಡಲಾರದ ಸ್ಥಿತಿಯಲ್ಲಿ ಇದ್ದರು, ನಂತರ ಅವರಿಗೆ 108 ಅಂಬುಲೇನ್ಸ್ ನಲ್ಲಿ ಚಿಕಿತ್ಸೆಗಾಗಿ ಬೀದರನ ಶ್ರೀ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21-07-2021 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ.125/2021, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 21-07-2021 ರಂದು ಭಾಲ್ಕಿಯ ಸಿಧಾರ್ಥ ನಗರದಲ್ಲಿರುವ ಆಕಾಶ ತಂದೆ ವಿಲಾಸ ಕೊಡಂಬಲೆ ಇವನ ಚಹಾ ಹೋಟೆಲದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು ಟಿ.ಆರ್ ರಾಘವೆಂದ್ರ ಪಿ.ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಭಾಲ್ಕಿಯ ಸಿಧಾರ್ಥ ನಗರದ ಆಕಾಶನ ಹೋಟೆಲದ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಚಹಾ ಹೋಟೆಲದಲ್ಲಿ ಮಧ್ಯ ಮಾರಾಟ ಮಾಡುವದನ್ನು ನೋಡಿ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಆಕಾಶ ತಂದೆ ವಿಲಾಸ ಕೊಡಂಬಲೆ ವಯ: 20 ವರ್ಷ, ಜಾತಿ: ಕುರುಬ, ಸಾ: ಬೀರ ದೆವಗಲ್ಲಿ ಬಸವೇಶ್ವರ ಚೌಕ ಹತ್ತಿರ ಭಾಲ್ಕಿ ಅಂತಾ ತಿಳಿಸಿದನು, ನಂತರ ಸದರಿಯವನಿಗೆ ಸರಾಯಿ ಮಾರಾಟ ಮಾಡುವ ಬಗ್ಗೆ ಸಂಬಂಧಪಟ್ಟಿ ಇಲಾಖೆಯಿಂದ ಪಡೆದ ಯಾವುದಾದರು ಪರವಾನಿಗೆ ಪತ್ರ ಇದೆಯೇ? ಅಂತಾ ವಿಚಾರಿಸಲು ತನ್ನ ಹತ್ತಿರ ಯಾವದೆ ಅನುಮತಿ ಪತ್ರ ಇರುವದಿಲ್ಲಾ ಅಂತಾ ತಿಳಿಸಿದನು, ನಂತರ ಸದರಿ ಹೋಟೆಲದಲ್ಲಿ ಶೋಧನೆ ಮಾಡಲು ಅಲ್ಲಿ 1) 90 ಎಂ.ಎಲ್ ವುಳ್ಳ 26 ಓರಿಜೀನಲ್ ಚಾಯ್ಸ ಡೀಲಕ್ಸ್ ವಿಸ್ಕಿ ಪೇಪರ ಪೌಚಗಳು ಅ.ಕಿ 913/- ರೂ., 2) 180 ಎಂ.ಎಲ್ ವುಳ್ಳ 2 ಬ್ಯಾಗ ಪೈಪರ ವಿಸ್ಕಿ ಪೇಪರ ಪೌಚಗಳು ಅ.ಕಿ 212/- ರೂ. ಹಾಗೂ 3) ನಗದು ಹಣ 350 ರೂ. ಹೀಗೆ ಎಲ್ಲಾ ಸೆರಿ ಒಟ್ಟು ಅ.ಕಿ 1475/- ರೂಪಾಯಿ ಬೆಲೆವುಳ್ಳದನ್ನು ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ.128/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 21-07-2021 ರಂದು ಫಿರ್ಯಾದಿ ಪ್ರಶಾಂತ ತಂದೆ ಝರೆಪ್ಪಾ ಫುಲೆ ವಯ: 28
ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ದತ್ತ ನಗರ ಭಾಲ್ಕಿ ರವರು ತರಕಾರಿ ತರಲು ತನ್ನ ಫ್ಯಾಶನ ಪ್ರೋ
ದ್ವಿಚಕ್ರ ವಾಹನ ಸಂ. ಕೆಎ-39/ಜೆ- 8830 ನೇದರ ಮೇಲೆ ತರಕಾರಿ ಮಾರುಕ್ಕಟ್ಟೆಗೆ ಹೋಗಿ ತರಕಾರಿ
ತೆಗೆದುಕೊಂಡು ಬರುವ ಸಮಯದಲ್ಲಿ ಉದಗಿರ ರೋಡನಲ್ಲಿರುವ ಎಸ.ಬಿ.ಐ ಬ್ಯಾಂಕ ಎದುರುಗಡೆ ಇರುವ ಶಾರದಾ
ಖಾನಾವಳಿಯಲ್ಲಿ ಊಟ ತೆಗೆದುಕೊಂಡು ಹೋಗುವಾಗ ಹಿಂದುಗಡೆಯಿಂದ ಅಂದರೆ ಅಂಬೇಡ್ಕರ ಸರ್ಕಲ ಕಡೆಯಿಂದ ಕಾರ
ನಂ. ಕೆಎ-39/ಎಂ-1138 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ
ಚಾಲಯಿಸಿಕೊಂಡು ಬಂದು ಫಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ತನ್ನ ಕಾರನ್ನು ಬಿಟ್ಟು
ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಫಿರ್ಯಾದಿಯ
ಬಲಗೈ ಮುಂಗೈ ಮೇಲ್ಭಾಗದಲ್ಲಿ ಹರಿದ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ ಬಲ ಗಲ್ಲದ ಮೇಲೆ ತರಚಿದ
ರಕ್ತಗಾಯವಾಗಿದ್ದು ಮತ್ತು ಎಡ ಹಿಂಬದಿ ಮತ್ತು ಬಲ ತೊಡೆಗೆ ಗುಪ್ತಗಾಯವಾಗಿದ್ದು ಇರುತ್ತದೆ, ಸದರಿ
ಘಟನೆಯನ್ನು ನೋಡಿ ಎಸ.ಬಿ.ಐ ಬ್ಯಾಂಕನಲ್ಲಿ ಕೆಲಸ ನಿರ್ವಹಿಸುವ ಬಸವರಾಜ ಎಂಬುವರು ಚಿಕಿತ್ಸೆ
ಕುರಿತು ಒಂದು ಆಟೋದಲ್ಲಿ ಹಾಕಿಕೊಂಡು ಭಾಲ್ಕಿ ಸರಕಾರಿ
ಆಸ್ಪತ್ರೆಗೆ ತೆಗದುಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.