Police Bhavan Kalaburagi

Police Bhavan Kalaburagi

Monday, August 31, 2020

BIDAR DISTRICT DAILY CRIME UPDATE 31-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 31-08-2020

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 19/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ರವಿಕುಮಾರ ತಂದೆ ಶರಣಯ್ಯಾ ಕೊಳ್ಳಿ ವಯ: 50 ವರ್ಷ, ಜಾತಿ: ಇಡಿಗ, ಸಾ: ಕಾಳಗಿ, ತಾ: ಕಾಳಗಿ, ಜಿಲ್ಲಾ: ಕಲಬುರ್ಗಿ ರವರ ಮಗಳಾದ ಶ್ವೇತಾ ಗಂಡ ಅನೀಲಕುಮಾರ ತೇಲಂಗ ವಯ: 25 ವರ್ಷ, ಜಾತಿ: ಇಡಿಗ, ಸಾ: ಸಿಂಧನಕೇರಾ ಇವಳಿಗೆ ಮುಟ್ಟಿನ ಸಮಸ್ಯೆ ತೊಂದರೆ ಇದ್ದು, ಆಸ್ಪತ್ರೆಗೆ ತೊರಿಸಿದರೂ ಸಹ ತೊಂದರೆ ಕಡಿಮೆಯಾಗಿರುವುದಿಲ್ಲ ಅಂತಾ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 30-08-2020 ರಂದು ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿದ್ದರಿಂದ ಆಕೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತರುವಾಗ ದಾರಿ ಮದ್ಯ ಮೃತಪಟ್ಟಿರುತ್ತಾಳೆ, ತನ್ನ ಮಗಳ ಸಾವಿನ ಬಗ್ಗೆ ಯಾರ ಮೇಲೆಯು ಯಾವುದೇ ಸಂಶಯವಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 51/2020, ಕಲಂ. 279, 337, 304() ಐಪಿಸಿ :-

ಮೃತ ವೆಂಕಟೇ ತಂದೆ ಶಿವರಾಜ ಕೋರೆ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ: ಕುಂಬಾರವಾಡಾ ಬೀದರ ರವರು ತನ್ನ ಮಾರುತಿ ಇರಟಿಗಾ ಕಾರ್ ನಂ. ಕೆಎ-05/ಎಂ.ಕ್ಯೂ-942 ನೇದರಲ್ಲಿ ತನ್ನ ಗೆಳೆಯರಾದ 1) ರಾಜಕುಮಾರ ತಂದೆ ನಾಗಶೆಟ್ಟಿ ಭೈಯ್ಯಾ ಸಾ: ಮರಖಲ ಗ್ರಾಮ, ತಾ: ಜಿ: ಬೀದರ ಹಾಗೂ 2) ನಾಗನಾಥ ತಂದೆ ವೈಜಿನಾಥ ಭಟ್ನಾಪುರೆ ಸಾ: ಜನವಾಡಾ ಮೂವರು ಕೂಡಿ ದಿನಾಂಖ 29-08-2020 ರಂದು ಸಾಯಂಕಾಲ ಹೈದ್ರಾಬಾದದಿಂದ ಸದರಿ ಕಾರನಲ್ಲಿ ಬೀದರಗೆ ಬರುವಾಗ ವೆಂಕಟೇಶ ಇವನು ಕಾರ ಚಲಾಯಿಸುತ್ತಿದ್ದು, ಬೀದರ ಜಹಿರಾಬಾದ ರೋಡ್ ದೇವ ದೇವ ವನದ ಹತ್ತಿರ ಬಂದಾಗ 2300 ಗಂಟೆಯ ಸುಮಾರಿಗೆ ವೆಂಕಟೇಶ ಇವನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಪಲ್ಟಿ ಮಾಡಿದ್ದರಿಂದ ವೆಂಕಟೇಶ ಇವನ ತಲೆ ಹಾಗೂ ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ರಾಜಕುಮಾರ ಇವನ ತಲೆಗೆ ಕ್ತಗಾಯವಾಗಿರುತ್ತದೆ ಹಾಗೂ ನಾಗನಾಥ ಇವನಿಗೆ ಯಾವುದೇ ಗಾಯಾಗಳು ಆಗಿರುವುದಿಲ್ಲಾ ಅಂತ ಫಿರ್ಯಾದಿ ರಾಜಕುಮಾರ ತಂದೆ ನಾಗಶೆಟ್ಟಿ ಭೂಯ್ಯಾ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಮರಖಲ ರವರು ನೀಡಿದ ದೂರಿನ ಮೇರೆಗೆ ದಿನಾಂಕ 30-08-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 70/2020, ಕಲಂ. 302, 201 ಜೊತೆ 149 ಐಪಿಸಿ :-

ದಿನಾಂಕ 29-08-2020 2300 ಗಂಟೆ ಸುಮಾರಿಗೆ ಫಿರ್ಯಾದಿ ಫಿರ್ಯಾದಿ ಶ್ರೀಶೈಲ ತಂದೆ ಸುಭಾಷಚಂದ್ರ ಶೇಖರ ವಯ: 35 ವರ್ಷ, ಜಾತಿ: ಎಸದ್.ಸಿ ಹೊಲಿಯಾ, ಸಾ: ಬಬಲಾದ, ತಾ: ಕಮಲಾಪುರ, ಜಿಲ್ಲಾ: ಕಲಬುರ್ಗಿ ರವರ ಭಾವನಾದ ನಿತ್ಯಾನಂದ ರವರ ಮನೆಯ ಮುಂದೆ ಇದ್ದ ನಾಯಿಗೆ ನಿತ್ಯಾನಂದ ಇತನ ಅಣ್ಣ ಮಾಹಾದೇವ ಇವನು ತನ್ನ ಕೈಯಲ್ಲಿದ್ದ ಹತೋಡಿಯಿಂದ ಹೊಡೆದನು ಆಗ ಮನೆಯಲ್ಲಿದ್ದ ನಿತ್ಯಾನಂದ ಇತನ ತಂದೆ ರಮೇಶ ಇವರು ಮಾಹಾದೇವ ಇವನಿಗೆ ಏಕೆ ನಾಯಿಗೆ ಹೊಡೆದೆ? ಅಂತಾ ಕೇಳಿದಾಗ ಮಾಹಾದೇವ ಇವನು ಮನೆಯಲ್ಲಿ ಹೋಗಿ ತನ್ನ ತಂದೆಯಾದ ರಮೇಶ ಇವರಿಗೆ ನೀನು ಕುಡಿದು ನನ್ನ ಜೊತೆ ಗಲಾಟೆ ಮಾಡುತ್ತಿಯಾ ಅಂತಾ ತಕರಾರು ಮಾಡಿ ತನ್ನ ಕೈಯಲ್ಲಿದ್ದ ಹತೋಡಿಯಿಂದ ರಮೇಶ ಇವರ ತಲೆಗೆ ಬಲವಾಗಿ ಹೊಡೆದ ಪ್ರಯುಕ್ತ ತಂದೆಯವರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ತಂದೆ ಮೃತಪಟ್ಟಿದ್ದರಿಂದ ಅಣ್ಣನ ಮೇಲೆ ಪೊಲೀಸ ಕೆಸ ಆಗುತ್ತದೆ ಅಂತಾ ತಿಳಿದು ತನ್ನ ಅಣ್ಣ ಮಾಹಾದೇವ, ತಾಯಿ ಕಮಲಾಯಿ ಹಾಗೂ ಇತರರು ಸೇರಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಅವರ ತಂದೆ ರಮೇಶ ರವರ ಮೃತ ದೆಹವನ್ನು ನಸುಕಿನ ಜಾವ 0530 ಗಂಟೆ ಸುಮಾರಿಗೆ ತಮ್ಮೂರಿನ ನಮ್ಮ ಹೊಲದಲ್ಲಿ ಸುಟ್ಟಿದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 101/2020, ಕಲಂ. 363 ಜೊತೆ 149 ಐಪಿಸಿ :-

ದಿನಾಂಕ 26-08-2020 ರಂದು 1930 ಗಂಟೆ ಸುಮಾರಿಗೆ ಫಿರ್ಯಾದಿ ಧೂಳಪ್ಪಾ ತಂದೆ ಶರಣಪ್ಪಾ ಸಾ: ಮಲ್ಕಾಪುರ ವಾಡಿ ರವರ ಮಗಳಾದ ಭಾಗ್ಯವಂತಿ ಇವಳು ಮೂತ್ರ ವಿಸರ್ಜನೆಗೆ ಹೋಗಿ 2000 ಗಂಟೆಯಾದರು ಮನೆಗೆ ಹಿಂತಿರುಗಿ ಬರದೆ ಇರುವ ಕಾರಣದಿಂದ ಭಯಗೊಂಡು ಫಿರ್ಯಾದಿಯು ತನ್ನ ಕುಟಂಬದವರೊಂದಿಗೆ ಸೇರಿ ಊರಿನ ಎಲ್ಲಾ ಕಡೆ ಹುಡುಕಿ ವಿಚಾರಿಸಿದಾಗ ಆರೋಪಿತರಾದ 1) ಉಲ್ಲಾಸ ತಂದೆ ಬಸಪ್ಪಾ, 2) ಆಕಾಶ ತಂದೆ ಬಸಪ್ಪಾ, 3) ಲೊಕೇಶ ತಂದೆ ಬಸಪ್ಪಾ, 4) ರೇಖಾ ಗಂಡ ಬಸಪ್ಪಾ, 5) ಬಸಪ್ಪಾ ಹಾಗೂ ಇತರರು ಎಲ್ಲರು ಜಾತಿ: ಧೋಬಿ, ಸಾ: ಬೇನ ಚಿಂಚೋಳಿ ಇವರೆಲ್ಲರೂ ಫಿರ್ಯಾದಿಯವರ ಮಗಳಿಗೆ ಆಟೋದಲ್ಲಿ ಅಪಹರಿಸಿಕೊಂಡು ಹೋಗಿರುತ್ತಾರೆಂದು ತಿಳಿದು ಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ  30-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 42/2020, ಕಲಂ. ಮನುಷ್ಯ ಕಾಣೆ :-

ದಿನಾಂಕ 22-08-2020 ರಂದು ಫಿರ್ಯಾದಿ ಮೋಹನ ತಂದೆ ಪಾಂಡು ರಾಠೋಡ ವಯ: 56 ವರ್ಷ, ಜಾತಿ: ಲಂಬಾಣಿ, ಸಾ: ಅಲ್ಲಿಪೂರ ತಾಂಡಾ ರವರ ಮಗನಾದ ಸುಧಾಕರ ಇತನು ನಮ್ಮ ಮನೆಯಿಂದ ಯಾರಿಗೂ ಏನು ಹೇಳದೆ ಕೇಳದೆ ಮನೆಯಿಂದ ಹೋಗಿ ಮರಳಿ ಬಂದಿರುವುದಿಲ್ಲಾ, ಫಿರ್ಯಾದಿಯು ತನ್ನ ಮಗನ ಬಗ್ಗೆ ತಮ್ಮ ಸಂಬಂಧಿಕರ ಹತ್ತಿರ ಹೊಗಿರಬಹುದೆಂದು ತಿಳಿದು ನನ್ನ ಎಲ್ಲಾ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಲಾಗಿ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ ಮತ್ತು ಆತನ ಮೋಬೈಲಗೆ ಕರೆ ಮಾಡಿದರೆ ಅದು ಸ್ವಿಚ್ಡ್ ಆಫ್ ಅಂತಾ ಬರುತ್ತಿದೆ ಹಾಗೂ ಎಲ್ಲಾ ಕಡೆ ಹುಡುಕಾಡಿದರು ಸುಧಾಕರ ಇತನ ಬಗ್ಗೆ ಯಾವುದೆ ಸುಳಿವು ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 123/2020, ಕಲಂ. 32,. 34 ಕೆ.ಇ ಕಾಯ್ದೆ :-

ದಿನಾಂಕ 30-08-2020 ರಂದು ಹಾಲಹಳ್ಳಿ[ಕೆ] ಗ್ರಾಮದ ಹಾಲಿನ ಸೊಸೈಟಿ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆಂದು ಫಿರ್ಯಾದಿ ಚಿದಾನಂದ ಸೌದಿ ಪಿಎಸ್ಐ ಧನ್ನೂರ ಪೊಲೀಸ ಠಾಣೆ ರವರಿಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚತರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾಲಹಳ್ಳಿ [ಕೆ] ಗ್ರಾಮದ ಹಾಲಿನ ಸೊಸೈಟಿಯಿಂದ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೊಡಲು ಹಾಲಹಳ್ಳಿ[ಕೆ] ಹಾಲಿನ ಸೊಸೈಟಿಯ ಎದರುಗಡೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿ ರಾಜಕುಮಾರ ತಂದೆ ರಾಮಚಂದ್ರ ಈಡಗಾರ ವಯ: 32 ವರ್ಷ, ಜಾತಿ: ಈಡಗಾರ, ಸಾ: ಹಾಲಹಳ್ಳಿ[ಕೆ] ಇತನು ಸಾರಾಯಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದುಕೊಂಡಾಗ ಅಲ್ಲಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಪಂಚರ ಸಮಕ್ಷಮ ರಾಜಕುಮಾರ ಇತನಿಗೆ ಸಾರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡಲು ಸರ್ಕಾರದಿಂದ ಪರವಾನಿಗೆ ಪತ್ರ ಪಡೆದಿರುವ ಬಗ್ಗೆ ವಿಚಾರಣೆ ಮಾಡಲು ಆತನ ತನ್ನ ಹತ್ತಿರ ಯಾವುದೇ ಪರವಾನಿಗೆ ಪತ್ರ ಇರುವುದಿಲ್ಲ, ತಾನು ಸಾರಾಯಿ ಕುಡಿಯಲು ಅಂತ ಖರಿದಿ ಮಾಡಿಕೊಂಡು ಬಂದು ಹೆಚ್ಚಿನ ಬೇಲೆಗೆ ಅನಧಿಕ್ರತವಾಗಿ ಮಾರಾಟ ಮಾಡುತ್ತಿದ್ದೆನೆ ಅಂತ ತಿಳಿಸಿರುತ್ತಾನೆ, ನಂತರ ಆತನ ವಶದಲ್ಲಿದ್ದ ಸಾರಾಯಿ ಪರೀಶಿಲಿಸಿ ನೊಡಲು 650 ಎಂ.ಎಲ್ ವುಳ್ಳ ಕಿಂಗಫಿಷರ್ ಸ್ಟ್ರಾಂಗ್ ಬಿಯರ್ 29 ಬಾಟಲಗಳು ಅ.ಕಿ 4350/- ರೂ. ಸಿಕ್ಕಿದ್ದು, ನಂತರ ಸದರಿ ಬಿಯರ್ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.