ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-07-2020
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ.
88/2020, ಕಲಂ. 457,
380 ಐಪಿಸಿ :-
ದಿನಾಂಕ 27-07-2020 ರಂದು
2100 ಗಂಟೆಯಿಂದ ದಿನಾಂಕ 28-07-2020 ರಂದು 1000 ಗಂಟೆಯ ಅವಧಿಯಲ್ಲಿ ಫಿರ್ಯಾದಿ ರಾಜಕುಮಾರ ತಂದೆ ಬಕ್ಕಪ್ಪ ಹೊಕ್ರಾಣೆ ವಯ: 32 ವರ್ಷ, ಜಾತಿ: ಕುರುಬ, ಸಾ: ಸಿಕಿಂದ್ರಾಪುರ, ತಾ: ಬೀದರ ರವರು ತಮ್ಮ ಬಸವ ದೃಷ್ಟ್ರಿ ಆಪ್ಟಿಕಲ್ಸ್ ಹೆಸರಿನ ಕನ್ನಡಕ ಅಂಗಡಿಯ ಶೆಟರಿನ ಕೀಲಿಯನ್ನು ಯಾರೋ ಅಪರಿಚಿತ ಕಳ್ಳರು ಒಡೆದು ಅಂಗಡಿಯಲ್ಲಿನ 1) ಒಂದು ಆಟೋ ರಿಫ್ಲ್ಯಾಕ್ಟೊಮೀಟರ ಮಶಿನ ಅ.ಕಿ 60,000/- ರೂ., 2) ಒಂದು ಏಸರ ಲ್ಯಾಪಟಾಪ ಅ.ಕಿ 15,000/- ರೂ., 3) ಕನ್ನಡಕದ ಫ್ರೇಮಗಳು ಅ.ಕಿ. 40,000/- ರೂ., ಹಾಗು 4) ಕ್ಯಾಶ ಕೌಂಟರನಲ್ಲಿದ್ದ ನಗದು ಹಣ 3500/- ರೂ. ಹೀಗೆ ಒಟ್ಟು 1,18,500 ರೂ. ಬೆಲೆವುಳ್ಳದ್ದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ.
116/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 04-07-2020 ರಂದು
1700 ಗಂಟೆಗೆ
ಫಿರ್ಯಾದಿ ಈಶ್ವರ ತಂದೆ ಝರೇಪ್ಪಾ ಕುದರೆ ವಯ:
28 ವರ್ಷ, ಜಾತಿ: ಪರಿಶಿಷ್ಟ, ಸಾ: ಹಳೆ ಮೈಲೂರ ಬೀದರ ರವರ ಮನೆಯಿಂದ
ಫಿರ್ಯಾದಿಯ ಅಕ್ಕ ಕವಿತಾ ಮತ್ತು
ಸೋದರಳಿಯ ಅರುಣ ಇಬ್ಬರು ಕೂಡಿ
ಹೋರಗೆ ಹೋಗಿ ಬರುತ್ತೆನೆಂದು
ಹೇಳಿ ಹೋರಗೆ ಹೋದವರು
ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾರೆ, ಫಿರ್ಯಾದಿಯವರು ಇಲ್ಲಿಯವರೆಗೆ ತನ್ನ ಸಂಬಂಧಿಕರಲ್ಲಿ ಹುಡುಕಾಡಲು ಮತ್ತು ಎಲ್ಲಾ ಕಡೆ ತಿರುಗಾಡಲು ಅವರಿಬ್ಬರ ಪತ್ತೆಯಾಗಿರುವುದಿಲ್ಲ, ಕಾಣೆಯಾದ ಅಕ್ಕ ಕವಿತಾ ಇವಳ ಚಹರೆ ಪಟ್ಟಿ 1) ಹೆಸರು & ವಿಳಾಸ: ಕವಿತಾ ಗಂಡ ಚೋಟೆಸಿಂಗ ವಯ: 40 ವರ್ಷ, ಸಾ: ಪಲಿಯಾ ಬುಜರ, ತಾ: ಜಿ: ಬದಾಯು, ತಹಸಿಲ ದಾತಾಗಂದ, ಯು.ಪಿ. ರಾಜ್ಯ, ಸದ್ಯ: ಹಳೆ ಮೈಲೂರ ಬೀದರ, 2) ಎತ್ತರ: 4 ಅಡಿ 6 ಇಂಚು, 3) ಮೈಬಣ್ಣ: ಬಿಳಿ ಬಣ್ಣ, 4) ಮೈಕಟ್ಟು: ಸಾಧಾರಣ, 5) ಭಾಷೆ: ಕನ್ನಡ, ಹಿಂದಿ ಮಾತನಾಡುತ್ತಾಳೆ, 6) ಬಟ್ಟೆ: ಕೆಂಪು, ಬಿಳಿ ನೂರಿ, ಕೆಂಪ್ಪು ಬಣ್ಣದ ಪೈಜಮಾ, ಕೆಂಪು ಬಣ್ಣದ ಓಡಣಿ ಧರಿಸಿರುತ್ತಾಳೆ, ಕಾಣೆಯಾದ ಅರುಣ ಇವನ ಚಹರೆ ಪಟ್ಟಿ 1) ಹೆಸರು & ವಿಳಾಸ : ಅರುಣ ತಂದೆ ಚೋಟೆಸಿಂಗ ವಯ: 10 ವರ್ಷ, ಸಾ: ಪಲಿಯಾ ಬುಜರ, ತಾ: ಜಿ: ಬದಾಯು, ತಹಸಿಲ: ದಾತಾಗಂದ, ಯು.ಪಿ ರಾಜ್ಯ, ಸದ್ಯ: ಹಳೆ ಮೈಲೂರ ಬೀದರ, 2) ಎತ್ತರ: 4 ಅಡಿ, 3) ಮೈಬಣ್ಣ: ಬಿಳಿ ಬಣ್ಣ, 4) ಭಾಷೆ: ಹಿಂದಿ, 5) ಬಟ್ಟೆ: ಹಸಿರು ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾನೆ, 6) ಮೈಕಟ್ಟು: ಸಾಧಾರಣ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 29-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 90/2020, ಕಲಂ. 498(ಎ), 323, 504, 506 ಜೊತೆ 34 ಐಪಿಸಿ :-
ದಿನಾಂಕ 29-07-2020 ರಂದು ಫಿರ್ಯಾದಿ ಶ್ರೀದೇವಿ ಗಂಡ ದೀಪಕ ಮುದಗೊಂಡ ಸಾ: ಹಿಪ್ಪರ್ಗಾ ರವರ ತವರು ಮನೆ ಹಿಪ್ಪರ್ಗಾ ಗ್ರಾಮ ಇರÄತ್ತದೆ, ರವರಿಗೆ ಹಿಪ್ಪರ್ಗಾ ಗ್ರಾಮದ ದೀಪಕ ತಂದೆ ಪ್ರಭು ಮುದಗೊಂಡ ರವರ ಜೊತೆ ಈಗ 3 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತಾರೆ, ಹಿಪ್ಪರ್ಗಾ ಗ್ರಾಮದ ತನ್ನ ಗಂಡನ ಮನೆಯಲ್ಲಿ ಫಿರ್ಯಾದಿಯು ತನ್ನ ಗಂಡ, ಮೈದುನ ಪವನ ಹಾಗೂ ಅತ್ತೆ ತುಕ್ಕಮ್ಮಾ ಎಲ್ಲರು ವಾಸವಾಗಿದ್ದು, ಮದುವೆಯಾದ 2-3 ತಿಂಗಳು ಆರೋಪಿತರಾದ ಗಂಡ ದೀಪಕ, ಅತ್ತ ತುಕ್ಕಮ್ಮಾ ಮತ್ತು ಮೈದುನ ಪವನ ಎಲ್ಲರು ಫಿರ್ಯಾದಿಯ ಜೊತೆ ಸರಿಯಾಗಿದ್ದು, ನಂತರ ಸದರಿ ಆರೋಪಿತರು ಫಿರ್ಯಾದಿಯ ಜೊತೆ ಮೇಲಿಂದ ಮೇಲೆ ವಿನಾಃ ಕಾರಣ ನೀನು ನಮ್ಮ ಮನೆಯಲ್ಲಿ ಇರಬೇಡ ನಿನಗೆ ನಮ್ಮ ಮನೆಯಲ್ಲಿ ಇರಲು ಹೊಂದಾಣಿಕೆ ಆಗುವುದಿಲ್ಲಾ ನೀನು ನಿನ್ನ ತವರು ಮನೆಗೆ ಹೋಗು ಅಲ್ಲಿಯೆ ಇದ್ದು ಸಾಯಿ ಹಾಗೇ ಹೀಗೆ ಅಂತ ಮೇಲಿಂದ ಮೇಲೆ ಜಗಳ ಮಾಡುತ್ತಾ ಬೈಯುತ್ತಾ ಬಂದಿರುತ್ತಾರೆ, ಮತ್ತು ಈ ಮೊದಲು ಒಂದೆರೆಡು ಸಲ ಜಗಳ ಮಾಡಿ ತವರು ಮನೆಗೆ ಕಳುಹಿಸಿಕೊಟ್ಟಿದ್ದು, ಇದೇ ರೀತಿ ಮೇಲಿಂದ ಮೇಲೆ ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡುತ್ತಾ ನೀನು ನಮ್ಮ ಮನೆಯಲ್ಲಿ ಇರಬೇಡ ನಿನ್ನ ತವರು ಮನೆಗೆ ಹೋಗು ಒಂದು ವೇಳೆ ನೀನು ನಮ್ಮ ಮನೆಯಲ್ಲಿ ಇದ್ದರೆ ನಿನಗೆ ಜೀವಂತ ಬಿಡುವುದಿಲ್ಲಾ ಕೊಂದು ಹಾಕುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಕಿರಕುಳ ನೀಡುತ್ತಾ ಬಂದಿರುತ್ತಾರೆ, ಹೀಗಿರುವಾಗ ದಿನಾಂಕ 28-07-2020 ರಂದು ಸದರಿ ಆರೋಪಿತರು ಫಿರ್ಯಾದಿಗೆ ನಮ್ಮ ಮನೆಯಲ್ಲಿ ಇರಬೇಡ ಅಂತ ಹೇಳಿದರು ನೀನು ನಮ್ಮ ಮನೆಯಲ್ಲಿ ಏಕೆ ಇದ್ದಿ ನೀನು ನಿನ್ನ ತವರು ಮನೆಗೆ ಹೋಗು ಅಲ್ಲಿಯೆ ಬಿದ್ದು ಸಾಯಿ ಅಂತ ಬೈಯುವಾಗ ತನ್ನ ಗಂಡನಿಗೆ ನೀವು ನನ್ನ ಜೊತೆ ಮದುವೆ ಮಾಡಿಕೊಂಡಿದ್ದಿರಿ ನಾನು ನಿಮ್ಮ ಜೊತೆ ನಿಮ್ಮ ಮನೆಯಲ್ಲಿಯೇ ಇರುತ್ತೇನೆ ನಾನು ಇಲ್ಲಿಂದ ಹೋಗುವುದಿಲ್ಲಾ ಅಂತ ಅಂದಾಗ ಗಂಡ ನನಗೆ ಎದರು ಮಾತಾಡುತ್ತಿಯಾ ಅಂತ ಅಂದವನೆ ಕಾಲಿನಿಂದ ಹೊಟ್ಟೆಯಲ್ಲಿ ಒದ್ದಿರುತ್ತಾನೆ, ಮೈದುನ ಇತನು ನಿನ್ನ ಗಂಡನಿಗೆ ಎದುರು ಮಾತಾಡುತ್ತಿಯಾ ಅಂತ ಅಂದವನೆ ಕೈಯಿಂದ ಕಪಾಳಕ್ಕೆ ಹೊಡೆದಿರುತ್ತಾನೆ, ಅತ್ತೆ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತ ಹೇಳಿದರು ಇಲ್ಲೆ ಇದ್ದಿಯಾ ಅಂತ ಅಂದವಳೆ ಕೂದಲು ಹಿಡಿದು ಜಿಂಜಾ ಮುಷ್ಠಿ ಮಾಡಿರುತ್ತಾಳೆ, ನಂತರ
ಎಲ್ಲರು ನೀನು ನಮ್ಮ ಮನೆಯಲ್ಲಿ ಇದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಕೊಂದು ಹಾಕುತ್ತೇವೆ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ, ಆಗ ಜಗಳದ ಗುಲ್ಲು ಕೇಳಿ ಬಂದ ತಮ್ಮೂರ ರಾಜಶೇಖರ ತಂದೆ ಅರ್ಜುನ ಉಡಬಾಳ, ಪ್ರದೀಪ ತಂದೆ ವಿಠಲ ಉಡಬಾಳ ಹಾಗೂ ಹಿರಗಪ್ಪಾ ತಂದೆ ಸುಭಾಷ ಉಡಬಾಳ ಮತ್ತು ವಿಷಯ ತಿಳಿದು ಬಂದ ತಂದೆಯಾದ ಪ್ರಭು ತಂದೆ ಅರ್ಜುನ ಉಡಬಾಳ ಹಾಗೂ ತಾಯಿ ರಾಜಮ್ಮಾ ಗಂಡ ಪ್ರಭು ಉಡಬಾಳ ಎಲ್ಲರು ಜಗಳವನ್ನು ನೋಡಿ ಬಿಡಿಸಿಕೊಂಡಿರುತ್ತಾರೆ, ನಂತರ ತಂದೆ ಪ್ರಭು ಫಿರ್ಯಾದಿಗೆ 108 ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ
ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 57/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ
:-
ದಿನಾಂಕ 29-07-2020 ರಂದು ಫಿರ್ಯಾದಿ ಈಶ್ವರ ತಂದೆ ಸಿದ್ದಪ್ಪಾ ಕಾಂಬ್ಳೆ
ವಯ: 40 ವರ್ಷ, ಜಾತಿ: ಎಸ್.ಸಿ (ಹೆಚ್), ಸಾ: ಉಡಬಾಳ, ತಾ: ಚಿಟಗುಪ್ಪಾ ರವರು ತನ್ನ ಖಾಸಗಿ ಕೆಲಸದ
ಪ್ರಯುಕ್ತ ತನ್ನ ಮೋಟಾರ್ ಸೈಕಲ್ ನಂ. ಕೆಎ-39/ಆರ್-1553 ನೇದ್ದನ್ನು ಚಲಾಯಿಸಿಕೊಂಡು ಚಿಟಗುಪ್ಪಾ
ಮಾರ್ಗವಾಗಿ ಹುಮನಾಬಾದಕ್ಕೆ ಹೋಗುತ್ತಿರುವಾಗ ಇಂದಿರಾ ನಗರ ಹುಡಗಿ ಹತ್ತಿರ ಬಂದಾಗ ಎದುರಿನಿಂದ
ಅಂದರೆ ಚಿಟಗುಪ್ಪಾ ಕ್ರಾಸ್ ಕಡೆಯಿಂದ ಮೋಟಾರ್ ಸೈಕಲ್ ನಂ. ಕೆಎ-32/ಇ.ಎಂ-2815 ನೇದ್ದರ ಚಾಲಕನಾದ
ಆರೋಪಿಯು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ರಾಂಗ್
ಸೈಡನಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಮೋಟಾರ್ ಸೈಕಲನ್ನು
ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಬಲಗಾಲ ಮೊಣಕಾಲಗೆ
ರಕ್ತಗಾಯ ಹಾಗೂ ಪಾದಕ್ಕೆ ಹಾಗೂ ಬೆರಳುಗಳಿಗೆ ಭಾರಿ ರಕ್ತಗಾಯ ಮತ್ತು ಎಡಗಾಲಿನ ಪಾದದ ಹತ್ತಿರ
ತರಚಿದ ಗಾಯ ಮತ್ತು ತಲೆಗೆ ಗುಪ್ತಗಾಯಗಳು ಆಗಿರುತ್ತವೆ, ನಂತರ ದಾರಿ ಹೋಕರು ಫಿರ್ಯಾದಿಗೆ ಚಿಕಿತ್ಸೆ
ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಟಗುಪ್ಪಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ.
166/2020, ಕಲಂ. 279, 337, 338 ಐಪಿಸಿ :-
ದಿನಾಂಕ 29-07-2020 ರಂದು
ಫಿರ್ಯಾದಿ ಅಮರ ತಂದೆ
ಅರವಿಂದ ನಾರೆ ಸಾ: ಡೊಣಗಾಪೂರ ರವರು
ತಮ್ಮ ಅಜ್ಜಿ ಕೇರಾಬಾಯಿ ಗಂಡ ಲಕ್ಷ್ಮಣ ನಾರೇ ವಯ: 68 ವರ್ಷ ರವರಿಗೆ ಮತ್ತು ಚಿಕ್ಕ ಅಜ್ಜಿ ಕಮಳಾಬಾಯಿ ಗಂಡ ಮಲ್ಲಪ್ಪಾ ನಾರೆ ವಯ: 60 ವರ್ಷ ಇಬ್ಬರಿಗೂ ಮೊಟರ ಸೈಕಲ ನಂ. ಕೆಎ-39/ಹೆಚ್-3651 ನೇದ್ದರ ಮೇಲೆ ಭಾಲ್ಕಿಗೆ ಕರೆದುಕೊಂಡು ಬರುತ್ತಿರುವಾಗ ಡೊಣಗಾಪೂರದಿಂದ ಭಾಲ್ಕಿ-ಅಂಬೆಸಾಂಗವಿ ರಸ್ತೆಯ ಮೇಲೆ ಭಾಲ್ಕಿ ಸಿದ್ದಾರ್ಥ ನಗರ ಕ್ರಾಸ್
ಹತ್ತಿರ ಎದುರುನಿಂದ ಟಿವಿಎಸ್ ಮೊಪೆಡ್ ನಂ. ಕೆಎ-39/ಕ್ಯೂ-1654 ನೇದ್ದರ ಸವಾರನಾದ ಆರೋಪಿ ಅಮೃತ ತಂದೆ ಬಾಳಪ್ಪಾ ರೆಡ್ಡಿ ಸಾ: ಮೇಥಿ ಮೇಳಕುಂದಾ, ತಾ:
ಭಾಲ್ಕಿ ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಫಿರ್ಯಾದಿಯ ಮೊಟರ
ಸೈಕಲಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಮೆಲ್ತುಟಿಗೆ ರಕ್ತಗಾಯ ಹಾಗು ಅಜ್ಜಿ ಕೇರಾಬಾಯಿಗೆ ಬಲಗಾಲ ಕಪಗಂಡದ ಹತ್ತಿರ ಹರಿದ ರಕ್ತಗಾಯ, ಕಮಳಾಬಾಯಿಗೆ ಎಡಮೊಣಕಾಲ ಡಬ್ಬಿಗೆ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಗೂ ಎಡಗಡೆ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ಆಗ ಯಾರೋ ಒಬ್ಬರು
108 ಅಂಬುಲೆನ್ಸಗೆ ಕರೆಸಿ ಎಲ್ಲರಿಗೂ ಅಂಬುಲೆನ್ಸ್ದಲ್ಲಿ ಕೂಡಿಸಿಕೊಂಡು ಉಪಚಾರಕ್ಕಾಗಿ ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ
ಅಪರಾಧ ಸಂ. 100/2020, ಕಲಂ. 269
ಐಪಿಸಿ ಜೊತೆ 87 ಕೆ.ಪಿ ಕಾಯ್ದೆ :-
ದಿನಾಂಕ 29-07-2020
ರಂದು ಬಸವಕಲ್ಯಾಣ ನಗರದ ತ್ರೀಪೂರಾಂತ ಕೆರೆ ಹತ್ತಿರ ಖುಲ್ಲಾ ಸ್ಥಳದಲ್ಲಿ ಕೊರೊನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಈ ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೊಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಕರೆ ಮುಖಾಂತರ ಸುನಿಲಕುಮಾರ ಪಿ.ಎಸ್.ಐ (ಕಾ
& ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ತ್ರೀಪೂರಾಂತ ಕೆರೆ ಹತ್ತಿರ ಖುಲ್ಲಾ ಸ್ಥಳದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ತ್ರೀಪೂರಾಂತ ಕೆರೆ ಹತ್ತಿರ ಖುಲ್ಲಾ ಸ್ಥಳದಲ್ಲಿ ಆರೋಪಿತರಾದ 1) ಸಂಗಮೇಶ ತಂದೆ ವಿಜಯಕುಮಾರ ಕಾರೆ ವಯ: 25 ವರ್ಷ, ಜಾತಿ: ಲಿಂಗಾಯತ, 2) ಬಲಭೀಮ ತಂದೆ ನರಸಿಂಗ ಜಮಾದಾರ ವಯ: 24 ವರ್ಷ, ಜಾತಿ: ಕಬ್ಬಲಿಗ, 3) ಗಣೇಶ ತಂದೆ ಭರತ ಬೋಕ್ಕೆ ವಯ: 23 ವರ್ಷ, ಜಾತಿ: ಕಬ್ಬಲಿಗ ಹಾಗೂ 4) ದತ್ತು ತಂದೆ ಜಗನ್ನಾಥ ಬೋಕ್ಕೆ ವಯ: 31 ವರ್ಷ, ಜಾತಿ: ಕಬ್ಬಲಿಗ ಎಲ್ಲರೂ ಸಾ: ತ್ರೀಪೂರಾಂತ ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತುಕೊಂಡು ಕೊರೋನಾ ಸೊಂಕು ಹರಡ ಬಹುದು ಎಂದು ಗೊತ್ತಿದ್ದರು ಮಾಸ್ಕ್ ಧರಿಸದೇ ಮತ್ತು ಸಮಾಜಿಕ ಅಂತರ ಕಾಪಾಡದೆ ಈ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ನಡೆದುಕೊಂಡು ಹೋಗಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಸದರಿ ಆರೋಪಿತರಿಗೆ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 20,100/- ರೂ. ಮತ್ತು 52 ಇಸ್ಪಿಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ
ಸಂ. 91/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 29-07-2020 ರಂದು ದುಬಲಗುಂಡಿ ಗ್ರಾಮದ ಶ್ರೀ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬಸವರಾಜ ತಂದೆ ತಿಪ್ಪಣ್ಣಾ
ಸುಣಗಾರ ವಯ:
52 ವರ್ಷ, ಜಾತಿ: ಕಬ್ಬಲಿಗ, ಸಾ: ದುಬಲಗುಂಡಿ ಮತ್ತು ರಾಮಣ್ಣಾ ತಂದೆ ಶಂಕ್ರೇಪ್ಪಾ ಮುಚಳಂಬ ವಯ: 52 ವರ್ಷ, ಜಾತಿ: ಕುರುಬ, ಸಾ: ದುಬಲಗುಂಡಿ ಇಬ್ಬರು ಸಾ: ದುಬಲಗುಂಡಿ ರವರು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಮಹಾಂತೇಶ ಲಂಬಿ ಪಿ.ಎಸ್.ಐ ಹಳ್ಳಿಖೇಡ[ಬಿ] ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು
ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ದುಬಲಗುಂಡಿ ಗ್ರಾಮದ ಶ್ರೀ ಬಸವೇಶ್ವರ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸದರಿ ಆರೋಪಿತರು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಲು ಮಟಕಾ ಚೀಟಿ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಮತ್ತು ಆರೋಪಿ ರಾಮಣ್ಣಾ ಓಡಿ
ಹೋಗಿರುತ್ತಾರೆ, ನಂತರ ಪಂಚರ ಸಮಕ್ಷಮ ಬಸವರಾಜ ಇತನ ಸದರಿ ವ್ಯಕ್ತಿಯ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ 12,000/- ರೂ. ನಗದು ಹಣ, 2 ಮಟಕಾ ಚೀಟಿ ಮತ್ತು 1 ಪೆನ್ ಸಿಕ್ಕಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ
ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.