Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 111/2017 ಕಲಂ: 279, 304(ಎ) ಐಪಿಸಿ ಮತ್ತು ಕಲಂ: 134(ಎ),(ಬಿ) ಐ.ಎಮ್.ವಿ ಆಕ್ಟ್ ;- ದಿನಾಂಕ 09/05/2017 ರಂದು ಬೆಳಿಗ್ಗೆ 9-30 ಎ.ಎಮ್ಕ್ಕೆ ಸಮುದಾಯ ಆರೋಗ್ಯ ಕೇಂದ್ರ ಗುರುಮಠಕಲ್ಗೆ ಭೇಟಿ ನೀಡಿ ಮೃತ ಕಾತರ್ಿಕನ ತಂದೆ ಮಲ್ಲಪ್ಪ ತಂದೆ ಶರಣಪ್ಪ ಗಣಪೂರ ವ||40 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ||ರಾಮಸಮುದ್ರ ಹಾ||ವ||ಪಸಪುಲ್ ತಾ||ಜಿ||ಯಾದಗಿರಿ ಈತನು ಕೊಟ್ಟ ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೇಂದರೆ, ನಾನು ಈ ಮೇಲ್ಕಂಡ ಹೆಸರು ಮತ್ತು ವಿಳಾಸದವನಿದ್ದು ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಹೆಂಡತಿಯ ತವರೂರು ಪಸಪುಲ್ ಗ್ರಾಮವಿದ್ದು ಹೀಗೆ 6 ತಿಂಗಳುಗಳ ಹಿಂದೆ ನಾವು ಗಂಡ ಹೆಂಡತಿ ಮತ್ತು ನನ್ನ ಒಬ್ಬನೇ ಮಗನಾದ 6 ವರ್ಷದ ಕಾತರ್ಿಕನೊಂದಿಗೆ ನನ್ನ ಹೆಂಡಯಿಯ ತವರೂರಾದ ಪಸಪುಲ್ ಗ್ರಾಮದಲ್ಲಿ ಬಂದು ನೆಲೆಸಿದೆವು. ನಾವು ಸುಮಾರು ದಿನಗಳಿಂದ ಗುಂಜನೂರು ಗ್ರಾಮದ ಅಬ್ಬಾಸಲ್ಲಿ ಮಸೀದಿಗೆ ನಡೆದುಕೊಳ್ಳುತ್ತೇವೆ. ಹೀಗಿದ್ದು ದಿನಾಂಕ 08/05/2017 ರಂದು ನಾನು ಮತ್ತು ನನ್ನ ಹೆಂಡತಿ ಹೊನ್ನಮ್ಮ ಹಾಗೂ ಮಗ ಕಾತರ್ಿಕ ಮೂರು ಜನ ಕೂಡಿ ಗುಂಜನೂರು ಗ್ರಾಮದ ಅಬ್ಬಾಸಲಿ ಮಸೀದಿಗೆ ಹೋಗಿ ರಾತ್ರಿ ದೇವರ ದರ್ಶನ ಪಡೆದುಕೊಂಡು ಅಲ್ಲಿಯೇ ಮಲಗಿಕೊಂಡಿದ್ದೇವು. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಎದ್ದು ಪಸಪುಲ್ ಗ್ರಾಮಕ್ಕೆ ಬರಲು ಗುಂಜನೂರು ಗೇಟ್ ಹತ್ತಿರ ಬಂದು ನಿಂತಿದ್ದೇವು. ನಾರಾಯಣಪೇಠ ಕಡೆಯಿಂದ ಒಂದು ಖಾಸಗಿ ವಾಹನ ಬಂತು ಅದರಲ್ಲಿ ನಾವು ಮೂರು ಜನ ಕುಳಿತು ಪಸಪುಲ್ ಗೇಟ್ಗೆ ಬಂದು ಇಳಿದೆವು. ರೋಡಿ ಎಡಬದಿಯಿಂದ ರೋಡಿನ ಬಲಗಡೆ ಇರುವ ಪಸಪುಲ ಗ್ರಾಮದ ಕಡೆಗೆ ಹೋಗಲು ನಾವು ರೋಡ್ ದಾಟುತ್ತಿದ್ದೇವು. ನಾವು ರೋಡ್ ದಾಟುವ ಕಾಲಕ್ಕೆ ಇಂದು ದಿನಾಂಕ 09/05/2017 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಯಾದಗಿರಿ ಕಡೆಯಿಂದ ಬಂದ ತೆಲಂಗಾಣ ರಾಜ್ಯದ ಸಾರಿಗೆ ಬಸ್ ನಂ: ಎಪಿ-21-ಜೆಡ್-0407 ನೇದ್ದರ ಬಸ್ ಚಾಲಕನಾದ ನರಸಿಂಹಲು ತಂದೆ ಬಾಲಯ್ಯ ಈತನು ತನ್ನ ಬಸ್ನ್ನು ಒಂದೇ ಸಮನೆ ಜೋರಾಗಿ ಓಡಿಸಿಕೊಂಡು ಬಂದು ಬಸ್ನ ಹಾನರ್್ ಹೊಡೆಯದೇ ಮತ್ತು ರಸ್ತೆ ದಾಟುತ್ತಿರುವ ನಮ್ಮನ್ನು ಲೆಕ್ಕಿಸದೇ ಅಲಕ್ಷತದಿಂದ ನಡೆಸಿ ನನ್ನ ಕೈ ಹಿಡಿದು ಕೊನೆಯ ರೋಡ್ ದಾಟುತ್ತಿರುವ ನನ್ನ ಮಗನಾದ ಕಾತರ್ಿಕಗೆ ಬಸ್ ಡಿಕ್ಕಿಪಡಿಸಿತು. ಆಗ ನನ್ನ ಮಗ ಬಸ್ ಡಿಕ್ಕಿಯ ರಭಸಕ್ಕೆ ಪುಟಿದು ರೋಡಿನ ಮೇಲೆ ಬಿದ್ದನು. ಅವನ ಹಣೆಗೆ ಮತ್ತು ತುಟಿಗೆ ಗುಪ್ತಗಾಯ ಮತ್ತು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟನು. ನನಗೆ ಮತ್ತು ನನ್ನ ಹೆಂಡತಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ರಾಜ್ಯ ಹೆದ್ದಾರಿ ಸಂಖ್ಯೆ 16 ಸಿಂದಗಿ-ಕೊಡಂಗಲ್ ಮುಖ್ಯ ರಸ್ತೆಯ ಪಸಪುಲ್ ಗೇಟ್ ಸಮೀಪ ರೋಡ್ ದಾಟುತ್ತಿರುವ ನನ್ನ ಮಗನಿಗೆ ಬಸ್ ನಂ: ಎಪಿ-21-ಜೆಡ್-0407 ನೇದ್ದರ ಚಾಲಕ ತನ್ನ ಬಸ್ನ್ನು ಅತಿವೇಗ ಮತ್ತು ಅಲಕ್ಷತದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿರುತ್ತಾನೆ. ಅಲ್ಲದೇ ತನ್ನ ಬಸ್ನ್ನು ನಿಲ್ಲಿಸದೇ ಕಂದಕೂರ ಗೇಟ್ನ ವರೆಗೆ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ. ಕಾರಣ ಸದರಿ ಬಸ್ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ. ನಾನು ಹೇಳಿದನ್ನು ಗುರುಮಠಕಲ್ ವೃತ್ತ ಕಛೇರಿಯ ನೂರಂದ ಪಿಸಿ-368 ರವರು ಬರೆದು ಪುನಃ ನನಗೆ ಓದಿ ಹೇಳಿದರು. ಅದು ನಾನು ಹೇಳಿದಂತೆ ಸರಿ ಇರುತ್ತದೆ ಅಂತಾ ಹೇಳಿ ಬರೆಯಿಸಿದ ಹೇಳಿಕೆ ಪಡೆದುಕೊಂಡು ನಂತರ ಪೊಲೀಸ್ ಠಾಣೆಗೆ 11-00 ಎ.ಎಮ್ಕ್ಕೆ ಬಂದು ಠಾಣೆ ಗುನ್ನೆ ನಂ: 111/2017 ಕಲಂ: 279, 304(ಎ) ಐಪಿಸಿ ಮತ್ತು ಕಲಂ: 134 (ಎ & ಬಿ) ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 149/2017 ಕಲಂ 279 337 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್;- ದಿನಾಂಕಃ 07/05/2017 ರಂದು 10-15 ಪಿ.ಎಮ್ ಕ್ಕೆ ಶಹಾಪೂರ ಸಕರ್ಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯ ಹೊಂದಿ ಉಪಚಾರ ಪಡೆಯುತ್ತಿದ್ದ ಫಿಯರ್ಾದಿಯ ಹೇಳಿಕೆ ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ಇಂದು ಗಂಗಾನಾಯಕ ತಾಂಡಾದಲ್ಲಿ ಮರೆಮ್ಮ ದೇವಿ ಜಾತ್ರೆಗೆ ಹೋಗಬೆಕೆಂದು ನಾನು ಮತ್ತು ನನ್ನ ಸ್ನೇಹಿತನಾದ ಪಪ್ಪು ತಂದೆ ಮಾನು ರಾಠೋಡ ಸಾ|| ಬಳಬಟ್ಟಿ ತಾಂಡಾ ಇಬ್ಬರೂ ರಾತ್ರಿ 8-30 ಗಂಟೆಯ ಸುಮಾರಿಗೆ ನಮ್ಮ ತಾಂಡಾದಿಂದ ಪಪ್ಪು ರಾಠೋಡ ಇತನ ಮೋಟರ ಸೈಕಲ್ ನಂಬರ ಒಊ12 ಉಆ 2059 ನೇದ್ದರ ಮೇಲೆ ಗಂಗಾನಾಯಕ ತಾಂಡಾಕ್ಕೆ ಹೊರಟಿದ್ದೇವು. ಮೋಟರ ಸೈಕಲ್ ಪಪ್ಪು ರಾಠೋಡ ಇತನು ನಡೆಸುತ್ತಿದ್ದು ನಾನು ಆತನ ಹಿಂದುಗಡೆ ಕುಳಿತಿದ್ದೇನು. ರಾತ್ರಿ 9-45 ಗಂಟೆಯ ಸುಮಾರಿಗೆ ಶಹಾಪೂರ ನಗರದ ಚರಬಸವೇಶ್ವರ ಕಮಾನ ಹತ್ತಿರ ಎದರುಗಡೆಯಿಂದ ಕಾರ ನಂಬರ ಏಂ36 ಓ 4789 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಮುಖ್ಯರಸ್ತೆಯ ಮೇಲೆ ಹೊರಟಿದ್ದ ನಮ್ಮ ಮೋ.ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾವಿಬ್ಬರೂ ಮೋಟರ ಸೈಕಲ್ ಸಮೇತವಾಗಿ ರಸ್ತೆಯ ಮೇಲೆ ಬಿದ್ದ ಪರಿಣಾಮ ನನಗೆ ರಕ್ತಗಾಯಗಳಾಗಿ ಮೈಯಲ್ಲಿ ಒಳಪೆಟ್ಟಾಗಿದ್ದು, ಪಪ್ಪು ಇತನಿಗೆ ಎಡಗಾಲು ಮೊಣಕಾಲಿನ ಕೆಳಗಡೆ ಮುರಿದು ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ಸಾದಾ ಹಾಗು ಭಾರಿ ರಕ್ತಗಾಯಗಳಾಗಿರುತ್ತವೆ. ಅಪಘಾತ ಪಡಿಸಿದ ಬಳಿಕ ಕಾರ ಚಾಲಕನು ಓಡಿ ಹೋಗಿರುತ್ತಾನೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 149/2017 ಕಲಂ 279 337 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 150/2017 ಕಲಂ 78(3) ಕೆ.ಪಿ ಆಕ್ಟ್;- ದಿನಾಂಕಃ 08/05/2017 ರಂದು 5-30 ಪಿ.ಎಮ್ ಕ್ಕೆ ಶ್ರೀ ಸೋಮಲಿಂಗಪ್ಪ ಎ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಶಹಾಪೂರ ಪಟ್ಟಣದ ಮೋಟಗಿ ಲಾಡ್ಜ್ ಮುಂಭಾಗದ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ವಿಷಯ ತಿಳಿಸಿ, ಸಿಬ್ಬಂದಿಯವರಾದ ಪಿಸಿ 141, 189, 180 ರವರು ಹಾಗು ಪಂಚರೊಂದಿಗೆ ಠಾಣೆಯ ಜೀಪಿನಲ್ಲಿ ಹೋಗಿ ಮೋಟಗಿ ಲಾಡ್ಜ್ ಸಮೀಪದಲ್ಲಿ ಜೀಪ ನಿಲ್ಲಿಸಿ ಲಾಡ್ಜ್ ಕಂಪೌಂಡ ಗೋಡೆಗೆ ಮರೆಯಾಗಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಸಿಂಗಲ್ ಅಂಕಿಗೆ 1 ರೂಪಾಯಿಗೆ 8 ರೂಪಾಯಿ, ಹಾಗು ಜಾಯಿಂಟ್ ಅಂಕಿಗೆ 1 ರೂಪಾಯಿಗೆ 80/-ರೂಪಾಯಿ ಕೊಡುತ್ತೇನೆ ಎಂದು ಕೂಗಿ ಹೇಳುತ್ತ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು 4-00 ಪಿ.ಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಂದ 1) ನಗದು ಹಣ 18,500/- ರೂ.ಗಳು 2) ಒಂದು ಮಟಕಾ ನಂಬರ ಬರೆದ ಚೀಟಿ ಅ||ಕಿ||00=00 ರೂ.ಗಳು 3) ಒಂದು ಬಾಲ್ ಪೆನ್ ಅ||ಕಿ|| 00=00 ರೂ.ಗಳು, ಇವುಗಳನ್ನು ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಒಪ್ಪಿಸಿದ್ದರಿಂದ ಗುನ್ನೆ ನಂಬರ 150/2017 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 68/2017 ಕಲಂ: 420 ಐಪಿಸಿ;- ದಿನಾಂಕ: 08/05/2017 ರಂದು 5-30 ಪಿಎಮ್ ಕ್ಕೆ ಶ್ರೀಮತಿ ಸೈಯದ ಅಹಮದಿ ಬಾನು @ ಸೈಯದ ಅಹೆಮೆದಿನ್ನಿಸಾ ಬೇಗಂ ಗಂಡ ಲೇಟ್ ಸೈಯದ ಶಾ ನ್ಯಾಮತುಲ್ಲಾ ಖಾದ್ರಿ 45, ಜಾ:ಮುಸ್ಲಿಂ, ಸಾ:ಮನೆ ನಂ. 24/76 ಮೊದಲನೆ ಮಹಡಿ ದರಗಾ ರೆಹಮಾನಿಯಾ ಮಳಖೇಡ ತಾ: ಸೇಡಂ ಜಿ:ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿದ ಅಜರ್ಿ ಹಾಜರಪಡಿಸಿದ್ದೇನಂದರೆ ನಮ್ಮ ಯಜಮಾನರು ಜೀವಂತ ಇದ್ದಾಗ ಶಹಾಪೂರ ತಾಲೂಕಿನ ಹೈಯ್ಯಾಳ (ಬಿ) ಸೀಮಾಂತರದಲ್ಲಿ ಸವರ್ೆ ನಂ. 147/ಈ ವಿಸ್ತಿರ್ಣ 3 ಎಕರೆ 33 ಗುಂಟೆ ಸ್ವಯಾಜರ್ಿತ ಕೃಷಿ ಜಮೀನು ಹೊಂದಿರುತ್ತಾರೆ. ಅದರಂತೆ ಬೇರೆ ಬೇರೆ ಊರುಗಳಲ್ಲಿ ಕೃಷಿ ಜಮೀನು ಮತ್ತು ಇತರ ಆಸ್ತಿಗಳನ್ನು ಹೊಂದಿದ್ದು ಇರುತ್ತದೆ. ನಮ್ಮ ಯಜಮಾನರ ಮೊದಲನೆ ಹೆಂಡತಿ ಸೈಯದಾ ಹಾಫಿಜಾ ಜಮಾಲ ಇವರು ತೀರಿಕೊಂಡಿದ್ದು, ಇವರಿಗೆ ಕೂಡಾ ಮಕ್ಕಳು ಇರುವುದಿಲ್ಲ. ದಿನಾಂಕ: 06/06/2005 ರಂದು ನಮ್ಮ ಯಜಮಾನರು ತೀರಿಕೊಂಡಿರುತ್ತಾರೆ. ನಮಗೂ ಮಕ್ಕಳು ಇರುವುದಿಲ್ಲ. ನಮ್ಮ ಯಜಮಾನರಿಗೆ ಖಾಸ ಅಣ್ಣತಮ್ಮಂದಿರು ಕೂಡಾ ಯಾರು ಇರುವುದಿಲ್ಲ. ಅವರ ಆಸ್ತಿಗೆ ನಾನೊಬ್ಬಳೆ ವಾರಸುದಾರಳು ಇರುತ್ತೇನೆ. ನಮ್ಮ ಯಜಮಾನರು ಜೀವಂತ ಇರುವವರೆಗೆ ಈ ಜಮೀನು ನಮ್ಮ ಸ್ವಾಧಿನದಲ್ಲಿ ಇದ್ದು, ತದನಂತರ ನಾನು ನನ್ನ ವೈಯಕ್ತಿಕ ಕಾರಣಗಳಿಂದ ಈ ಆಸ್ತಿಯ ಕಡೆ ಗಮನ ಹರಿಸದೆ ಇರುವುದನ್ನು ಸದುಪಯೋಗ ಪಡಿಸಿಕೊಂಡ ನಮಗೆ ಅಥವಾ ನಮ್ಮ ಕುಟುಂಬಕ್ಕೆ ಯಾವುದೇ ರೀತಿಯ ರಕ್ತ ಸಂಬಂಧ ಇರದ ಸೈಯದ ಶಾ ಮುಸ್ತಾಫ ಖಾದ್ರಿ ತಂದೆ ಸೈಯದ ಮುತರ್ುಜಾ ಖಾದ್ರಿ ಇವರು ದಿನಾಂಕ: 02/04/2007 ರಂದು ಮಾನ್ಯ ವಿಶೇಷ ತಹಶೀಲ್ದಾರರು ವಡಗೇರಾ ರವರಲ್ಲಿ ನಮ್ಮ ದೊಡ್ಡಪ್ಪನವರಾದ ಸೈಯದ ಶಾ ನ್ಯಾಮತುಲ್ಲಾ ಖಾದ್ರಿ ಸಾಹೇಬರು ಮಳಖೇಡ ಇವರು ಮೃತಪಟ್ಟಿರುತ್ತಾರೆ. ಮೃತನಿಗೆ ನಾನೇ ವಾರಸುದಾರನಿರುತ್ತೇನೆ. ಅವರಿಗೆ ಯಾವ ಸಂತಾನ ಇರುವುದಿಲ್ಲ ಮತ್ತು ಇವರ ಹೆಂಡತಿಯು ತೀರಿಹೋಗಿರುತ್ತಾಳೆ (ದೊಡ್ಡಮ್ಮನವರು) ಕಾರಣ ಮೃತರ ಹೆಸರು ಕಡಿಮೆ ಮಾಡಿ ನನ್ನ ಹೆಸರಿನಿಂದ ವಿರಾಸತ ಮಾಡಲು ಕೋರಿಕೆ ಎಂದು ನಾನು ಜೀವಂತ ಇದ್ದವಳಿಗೆ ಮೃತಪಟ್ಟಿರುತ್ತಾಳೆ ಎಂದು ಪತ್ರದಲ್ಲಿ ತೋರಿಸಿ, ಸುಳ್ಳು ಪತ್ರ ಸಲ್ಲಿಸಿ, ಯಾವುದೇ ಅವಶ್ಯ ದಾಖಲೆಗಳಾದ ವಂಶಾವಳಿ ಪತ್ರ ಮತ್ತು ಸೂಕ್ತ ಪಂಚನಾಮೆ ಇಲ್ಲದೆ ಜಮೀನನ್ನು ತನ್ನ ಹೆಸರಿನಿಂದ (ಮುಟೇಷನ) ವಗರ್ಾವಣೆ ಮಾಡಿಸಿಕೊಂಡು ಈ ಜಮೀನನ್ನು ತದ ನಂತರ ಶ್ರೀ ವ್ಹಿ. ಲೀಲಾಜೀರಾವ ತಂದೆ ವೆಂಕಟರಾವ ಎಂಬುವರಿಗೆ ಮಾರಾಟ ಮಾಡಿ ಹಣವನ್ನು ಪಡೆದುಕೊಂಡು ನಮಗೆ ಮೋಸ ಮಾಡಿರುತ್ತಾನೆ. ಕಾರಣ ನಾನು ಬದುಕಿರುವಾಗಲೇ ನನ್ನ ಗಂಡನಿಗೆ ಯಾರೂ ವಾರಸುದಾರರು ಇರುವುದಿಲ್ಲ ಮೃತಪಟ್ಟಿರುತ್ತಾರೆ. ಮೃತರಿಗೆ ನಾನೇ ವಾರಸುದಾರನಿರುತ್ತೇನೆ ಎಂದು ಸುಳ್ಳು ಪತ್ರವನ್ನು ಸಲ್ಲಿಸಿ, ನನ್ನ ಗಂಡನ ಆಸ್ತಿಯನ್ನು ತನ್ನ ಹೆಸರಿಗೆ ವಗರ್ಾವಣೆ ಮಾಡಿಸಿಕೊಂಡು ನಂತರ ಸದರಿ ಜಮೀನನ್ನು ತನ್ನ ವೈಯಕ್ತಿಕ ಲಾಭಕ್ಕಾಗಿ ಭಾರಿ ಮೊತ್ತಕ್ಕೆ ಮಾರಿಕೊಂಡು ನನಗೆ ಮೋಸ ಮಾಡಿರುತ್ತಾನೆ. ಆದ್ದರಿಂದ ನನಗೆ ಮೋಸ ಮಾಡಿರುವ ಸೈಯದ ಶಾ ಮುಸ್ತಾಫ ಖಾದ್ರಿ ತಂದೆ ಸೈಯದ ಮುತರ್ುಜಾ ಖಾದ್ರಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಜರ್ಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 68/2017 ಕಲಂ: 420 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 137/2017 ಕಲಂ:143.147.148.341.323.324.504.506.ಸಂ.149 ಐಪಿಸಿ ದಿನಾಂಕ:07-05-2017 ರಂದು 5:00 ಪಿ.ಎಮ್.ಕ್ಕೆ ಫಿಯರ್ಾದಿ ಶ್ರೀ ದೇವಪ್ಪ ತಂದೆ ಭೀಮಣ್ಣ ಕೊಡವಿಬೋವಿ ವಯ|| 50 ವರ್ಷ ಉ|| ಒಕ್ಕಲತನ ಜಾ|| ಕಬ್ಬಲಿಗ ಸಾ|| ದೇವಿಕೇರಾ ತಾ|| ಶೊರಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದರ ಸಆರಾಂಶವೇನಂದರೆ ನಮ್ಮ ಅಳಿಯನಾದ ಹಣಮಂತ ತಂದೆ ಭಿಮಣ್ಣ ಬುಡ್ಡಕಾಯಿ ಇವನು ಒಂದು ಟಂ,ಟಂ ಅಟೋ ಬಾಡಿಗೆ ಹೋಡೆದು ಉಪಜಿವನ ಮಾಡುತ್ತಿರುತ್ತಾನೆ. ಸದರಿ ಅಟೋವನ್ನು ದೇವಿಕೇರಾದಿಂದ ರಂಗಂಪೇಟಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವದು ಮತ್ತು ತಂದು ಬಿಡುವದು ಮಾಡುತ್ತಿರುತ್ತಾನೆ. ಹಿಗಿದ್ದು ಮೋನ್ನೆ ದಿನಾಂಕ: 04/05/2017 ರಂದು ಮದ್ಯಾಗ್ನ 3.00 ಗಂಟೆಗೆ ನನ್ನ ಅಳಿಯ ಲಕ್ಷ್ಮಪೂರ ಕ್ರಾಸ ಹತ್ತಿರ ಮರೆಪ್ಪ ತಂದೆ ತಿಪ್ಪಣ್ಣ ಅಡ್ಡೆದವರ ಈತನು ನಮ್ಮ ಅಳಿಯನ ಅಟೋದಲ್ಲಿ ದೇವಿಕೇರಾಕ್ಕೆ ಹೋಗಲು ಕುಳಿತಿದ್ದನು. ಅದೆ ಸಮಯಕ್ಕೆ ಮೈಲಾರಪ್ಪ @ ಮೇಲ ತಂದೆ ಭಿಮಣ್ಣ ಅಡ್ಡೆದವರು ಈತನು ಬಂದು ಒಂದು ಸೈಕಲ ಮೋಟಾರ ಮೇಲೆ ಮರೆಪ್ಪನ್ನು ಕೂಡಿಸಿಕೊಂಡು ಹೋದನು. ಇದೆ ವಿಷಯಕ್ಕೆ ನಮ್ಮ ಅಳಿಯನಿಗು ಮತ್ತು ಮೈಲಾರಪ್ಪನಿಗೂ ಬಾಯಿ ಮಾತಿನ ತಕರಾರು ಆಗಿದ್ದು ಇರುತ್ತದೆ. ನಂತರ ಸದರಿ ಮೇಲೆ ಹೇಳಿರುವಂತೆ ವಿಷಯಕ್ಕೆ ಸಂಬಂದಿಸಿದಂತೆ ದಿನಾಂಕ: 05/05/2017 ರಂದು ಮದ್ಯಾಹ್ನ 1.30 ಪಿಎಂ ಕ್ಕೆ ನಮ್ಮ ಅಳಿಯನ ಟಂ ಟಂ ಅಟೋದಲ್ಲಿ ನಮ್ಮ ಅಳಿಯ ಮತ್ತು ಪರಷುರಾಮ ತಂದೆ ಹಣಮಂತ ಕೊಡವಿಬೋವಿ, ಅಯ್ಯಪ್ಪ ತಂದೆ ಭೀಮಣ್ಣ ಕೊಡವಿಬೋವಿ ಮೂವರು ಹಾಗು ನಾನು ಕೂಡಿ ದೇವಿಕೇರಾದಿಂದ ರಂಗಂ ಪೇಟ ಸಂತೆಗೆ ಬರುತ್ತಿರುವಾಗ ಮೈಲಾರಪ್ಪ ಈತನ ಮನೆಯ ಮುಂದೆ 1. ಮೈಲಾರಪ್ಪ @ ಮೇಲ ತಂದೆ ಭಿಮಣ್ಣ ಅಡ್ಡೆದವರ 2. ಯಲ್ಲಪ್ಪ ತಂದೆ ಭೀಮಣ್ಣ ಅಡ್ಡೆದವರ 3. ಮರೆಪ್ಪ ತಂದೆ ತಿಪ್ಪಣ್ಣ ಅಡ್ಡೆದವರ 4. ಹಣಮಂತ ತಂದೆ ಭೀಮಣ್ಣ ಅಡ್ಡೆದವರ 5. ಭೀಮಣ್ಣ ತಂದೆ ಕರೆಪ್ಪ 6. ಯಲ್ಲಪ್ಪ ತಂದೆ ದೇವಿಂದ್ರಪ್ಪ ಕಚಕನೂರ 7. ನಾಗಪ್ಪ ತಂದೆ ನಿಂಗಪ್ಪ ವಾಳದ 8. ಜಟ್ಟೆಪ್ಪ ತಂದೆ ದೇವಿಂದ್ರಪ್ಪ ಎಲ್ಲರೂ ಸಾ|| ರಂಗಂಪೇಟ ಹಾಗೂ 9. ಯಲ್ಲಪ್ಪ ತಂದೆ ಶಿವಪ್ಪ ಕಟ್ಟಿಗಲ 10. ದೇವಪ್ಪ ತಂದೆ ಶಿವಪ್ಪ ಕಟಿಗಲ್ಲ 11. ಅಯ್ಯಪ್ಪ ತಂದೆ ನಿಂಗಪ್ಪ ಕಟ್ಟಿಗಲ 12. ಲಕ್ಷ್ಮಣ ತಂದೆ ಯಲ್ಲಪ್ಪ ಆಡಿನ 13. ಯಲ್ಲಪ್ಪ ತಂದೆ ಹಯ್ಯಾಳಪ್ಪ ಕಟಿಗಲ ಸಾ|| ಎಲ್ಲರು ದೇವಿಕೇರಾ ತಾ|| ಶೋರಾಪೂರ ಎಲ್ಲರು ಬಂದು ನಮ್ಮ ಅಳಿಯನ ಅಟೋವನ್ನು ತಡೆದು ನಿಲ್ಲಿಸಿ ನಿನ್ನೆ ದಿನಾಂಕ 04/05/2017 ರಂದು ನಮ್ಮೋಂದಿಗೆ ತಕರಾರು ಮಾಡುತ್ತಿಯಾ ಸೂಳೆ ಮಗನೆ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು ಹಣಮಂತ ಈತನಿಗೆ ಮರೆಪ್ಪ ತಂದೆ ತಿಪ್ಪಣ್ಣ ಅಡ್ಡೆದವರ ಈತನು ಕಟ್ಟಿಗೆ , ಕಲ್ಲಿನಿಂದ ಹೋಡೆದು ಗುಪ್ತಗಾಯ ಪಡಿಸಿದನು ಪರಷುರಾಮನಿಗೆ ಮೈಲಾರಪ್ಪ ಮತ್ತು ಅಯ್ಯಪ್ಪ ತಂದೆ ನಿಂಗಪ್ಪ ಕಟ್ಟಿಗಲ ಇಬ್ಬರು ಕಟ್ಟಿಗೆಯಿಂದ ತಲೆಗೆ ಹೊಡೆದರು. ಅಯ್ಯಪ್ಪ ತಂದೆ ಭಿಮಣ್ಣ ಈತನಿಗೆ ಮೈಲಾರಪ್ಪ ತಂದೆ ಭೀಮಣ್ಣ ಅಡ್ಡೆದ ಮತ್ತು ಹಣಮಂತ ತಂದೆ ಭೀಮಣ್ಣ ಅಡ್ಡೆದವರು, ಜಟ್ಟೆಪ್ಪ ತಂದೆ ದೇವಿಂದ್ರಪ್ಪ ಕೂಡಿ ಕಟ್ಟಿಗೆ, ಕಲ್ಲಿನಿಂದ ತಲೆಗೆ ಹೋಡೆದು ರಕ್ತಗಾಯ ಮಾಡಿರುತ್ತಾರೆ, ಮತ್ತು ಈ ಮೇಲೆ ತೋರಿಸಿದ ಎಲ್ಲರು ಕೈಯಿಂದ ಕಟ್ಟಿಗೆಯಿಂದ ಮನ ಬಂದಂತೆ ಹೋಡೆದರು. ಅದೆ ಸಮಯಕ್ಕೆ ಸಂತೆ ಮಾಡಿಕೊಂಡು ದೇವಿಕೆರಾಕ್ಕೆ ಹೋಗುತ್ತಿದ್ದ 1. ಯಂಕಪ್ಪ ತಂದೆ ಭೀಮಣ್ಣ ಕೊಡವಿಬೋವಿ 2. ಬಸಪ್ಪ ತಂದೆ ಹಣಮಂತ ಕೊಡವಿಬೋವಿ ಸಾ|| ಇಬ್ಬರು ದೇವಿಕೇರಾ ಜಗಳ ನೋಡಿ ಜಗಳ ಬಿಡಿಸಿದರು. ನಂತರ ಎಲ್ಲರೂ ಸೂಳೆ ಮಕ್ಕಳೆ ನಿವು ಈಗ ಉಳದಿದ್ದಿರಿ ಇನ್ನೋಮ್ಮೆ ನಮ್ಮಗೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು.ಈ ಬಗ್ಗೆ ನಾನು ನಮ್ಮ ಅಳಿಯ ಹಣಮಂತನನ್ನು ಮತ್ತು ಪರಷುರಾಮ ತಂದೆ ಹಣಮಂತ ಕೊಡವಿಬೋವಿ. ಅಯ್ಯಪ್ಪ ತಂದೆ ಭಿಮಣ್ಣ ಕೊಡವಿ ಬೋವಿ ಮೂರು ಜನರನ್ನು ಸಕರ್ಾರಿ ಆಸ್ಪತ್ರೆ ಶೊರಾಪೂರಕ್ಕೆ ಉಪಚಾರಕ್ಕಾಗಿ ಸೇರಿಕೆ ಮಾಡಿ ಅಲ್ಲಿ ವೈದ್ಯರ ಸಲಹೆ ಮೇರೆಗೆ ಸಕರ್ಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿ ಅಲ್ಲಿ ಉಪಚಾರ ಕೊಡಿಸಿ ಇಂದು ದಿನಾಂಕ 07/05/2017 ರಂದು ತಡವಾಗಿ ಠಾಣೆಗೆ ಬಂದು ಈ ಅಜರ್ಿಯನ್ನು ಕೊಟ್ಟಿದ್ದು ನಮ್ಮ ಅಳಿಯ ಹಣಮಂತ ಮತ್ತು ಪರಷುರಾಮ, ಅಯ್ಯಪ್ಪ ಇವರಿಗೆ ಹೋಡೆ ಬಡೆ ಮಾಡಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ