Police Bhavan Kalaburagi

Police Bhavan Kalaburagi

Tuesday, November 8, 2016

BIDAR DISTRICT DAILY CRIME UPDATE 08-11-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-11-2016

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 126/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 07-11-2016 ರಂದು ಫಿರ್ಯಾದಿ ಲಲಿತಾ ಗಂಡ ಶರಣಪ್ಪಾ ಕಾಳೆ ವಯ: 35 ವರ್ಷ, ಜಾತಿ: ಎಸ.ಸಿ (ಹೊಲಿಯ), ಸಾ: ಚಿದ್ರಿ ರೋಡ ಮುಗದುಮಜಿ ಕಾಲೋನಿ ಬೀದರ ರವರು ತಮ್ಮ ಪರಿಚಯದ ಅಬ್ದುಲ ಗಫಾರ ತಂದೆ ಅಬ್ದುಲ ಮಜಿದ ವಯ: 45 ವರ್ಷ, ಸಾ: ಗೋಲೆಖಾನಾ ಬೀದರ ರವರ ಮೋಟಾರ ಸೈಕಲ ನಂ. ಕೆಎ-36/ಕೆ-7395 ನೇದರ ಹಿಂದೆ ಫಿರ್ಯಾದಿಯು ತನ್ನ ತನ್ನ ಮಗಳಾದ ನಿಖಿತಾ ವಯ-12 ವರ್ಷ ಇಬ್ಬರು ಕುಳಿತುಕೊಂಡು ಬೀದರದಿಂದ  ಬಸವಕಲ್ಯಾಣಕ್ಕೆ ಹೋಗುತ್ತಿರುವಾಗ ರಾ.ಹೆ ನಂ. 09 ರ ಮೇಲೆ ಯರಭಾಗ ಕ್ರಾಸ ಸಮೀಪ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಬಸವಕಲ್ಯಾಣ ಕಡೆಗೆ ಹೋಗುತ್ತಿದ ಲಾರಿ ನಂ. ಕೆಎ-39/7435 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಫಿರ್ಯಾದಿ ಕುಳಿತುಕೊಂಡ ಮೋಟಾರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಡೆ ಕಾಲಿಗೆ ಗುಪ್ತಾಗಾಯ, ಮೂಗಿಗೆ ತರಚಿದ ಗಾಯವಾಗಿರುತ್ತದೆ ಮತ್ತು ಮಗಳಾದ ನಿಖಿತಾ ಇವಳ ಬಲಗಡೆ ಕಾಲಿಗೆ ಗುಪ್ತಗಾಯವಾಗಿರುತ್ತದೆ ಹಾಗೂ ಅಬ್ದುಲ ಗಫಾರ ರವರಿಗೆ ಬಲಮೋಣಕಾಲ ಕೆಳಗಡೆ ರಕ್ತಗಾವಾಗಿ ಕಾಲು ಮುರಿದಿರುತ್ತದೆ, ಅಪಘಾತ ಪಡಿಸಿದ ಆರೋಪಿಯು ತನ್ನ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಎಲ್ಲರೂ 108 ಅಂಬುಲೇನ್ಸದಲ್ಲಿ ಹುಮನಾಬಾದ ಸರಕಾರಿ ಆಸ್ಪತ್ರಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 135/2016, PÀ®A 32, 34 PÉ.E PÁAiÉÄÝ :-
ದಿನಾಂಕ 07-11-2016 ರಂದು ಸಿಂದಬಂದಗಿ ಗ್ರಾಮದ ಕಾರಂಜಾ ಪೇಪರ ಮಿಲ್ ಗೇಟ್ ಹತ್ತಿರ ಒಬ್ಬ ವ್ಯಕ್ತಿ ಅನಧೀಕೃತವಾಗಿ ಒಂದು ಚೀಲದಲ್ಲಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ದತ್ತಾತ್ರಿ ಕಾರ್ನಾಡ್ ಸಿಪಿಐ, ಹುಮನಾಬಾದ ವ್ರತ್ತ ಹುಮನಾಬಾದ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಸಿಬ್ಬಂದಿಯವರೊಡನೆ ಸಿಂದಬಂದಗಿ ಗ್ರಾಮದ ಕಾರಂಜಾ ಪೇಪರ ಮಿಲ್ ಗೇಟ್ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಆರೋಪಿ ರಮೇಶ ತಂದೆ ರಾಜಪ್ಪಾ ಸೇರಗಾರ ವಯ: 45 ವರ್ಷ, ಜಾತಿ: ಸೇರಗಾರ, ಸಾ: ಸಿಂದಬಂದಗಿ ಇತನು ಒಂದು ಬಿಳಿ ಬಣ್ಣದ ಚೀಲದಲ್ಲಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಎಲ್ಲರು ಒಮ್ಮೇಲೆ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನನ್ನು ಹಿಡಿದುಕೊಂಡು, ಸದರಿಯವನ ಹತ್ತಿರವಿದ್ದ ಚೀಲ ಚೆಕ್ ಮಾಡಿ ನೋಡಲು ಅದರಲ್ಲಿ ಒಟ್ಟು 90 ಎಂ.ಎಲ್ ವುಳ್ಳ 30 ಯು.ಎಸ್ ವಿಸ್ಕಿ ಸರಾಯಿ ತುಂಬಿದ ಬಾಟಲಗಳು ಅ.ಕಿ 796.2 ರೂ. ಬೆಲೆಬಾಳುವ ಸರಾಯಿ ಬಾಟಲಗಳು ಇರುತ್ತವೆ, ಸದರಿ ಆರೋಪಿಗೆ ಸರಾಯಿ ಮಾರಾಟ ಸಲುವಾಗಿ ತನ್ನ ಹತ್ತಿರ ಸರಕಾರದ ಯಾವುದಾದರು ಪರವಾನಿಗೆ ವಗೈರೆ ಇದೆಯೆ ಅಂತ ವಿಚಾರಿಸಲು ಅವನು ತನ್ನ ಹತ್ತಿರ ಯಾವುದೆ ಪರವಾನಿಗೆ ಇರುವುದಿಲ್ಲ ತಾನು ಸದರಿ ಸರಾಯಿ ಬಾಟಲಗಳು ಅನಧೀಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು, ನಂತರ ಸದರಿ ಸರಾಯಿ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.