ಅಪಘಾತ ಪ್ರಕರಣ :
ಫರತಾಬಾದ
ಠಾಣೆ : ದಿನಾಂಕ: 20/12/2015 ರಂದು ಬೆಳಗ್ಗೆ ನಾನು ಮತ್ತು ನಮ್ಮ ಶಿಕ್ಷಕರಾದ ಕೆ.ನಾರಾಯಣ ಮತ್ತು ವಿಜಯಕುಮಾರ
ಸರ್ ನಾನು ೩ ಜನರು ಕೂಡಿಕೊಂಡು ನಮ್ಮ ಶಾಲೆಯ 29
ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ಟೆಂಪೋ ನಂ (ಮನಿ ಬಸ್) ಕೆಎ-06 ಬಿ-6157 ನೆದ್ದರಲ್ಲಿ ಹೊರಟಿರುತ್ತೆವೆ. ಸದ್ರಿ ಬಸನಲ್ಲಿ 29 ವಿದ್ಯಾರ್ಥಿಗಳಲ್ಲಿ
ಪಪು ಚಹ್ವಾಣ,ಮಾರುತಿ ರಾಠೋಡ ,ಲಕ್ಕನ ರಾಠೋಡ ,ಶಿವಾಜಿ ರಾಠೋಡ, ಪೂಜಾ ಚಹ್ವಾಣ, ಕರಿಶ್ಮಾ ಚಹ್ವಾಣ ,ಪ್ರಕಾಶ ರಾಠೋಡ,
ಸಚೀನ ರಾಠೋಡ , ರೀತಾ ರಾಠೋಡ,
ರಾಜಕುಮಾರ ರಾಠೋಡ, ಸೋಮು ರಾಠೋಡ,
ಅರುಣ ರಾಠೋಡ,
ವಿಶಾಲ ರಾಠೋಡ,
ಪೂಜಾ ರಾಠೋಡ ಸಾವನ ಪವಾರ, ಸುರೇಶ ಚಹ್ವಾಣ,
ರಾಜಕುಮಾರ ಚಹ್ವಾಣ, ಸಾವನ ರಾಠೋಡ, ರಾಜು
ರಾಠೋಡ, ನೀಲಭಾಯಿ
ರಾಠೋಡ, ಉಮೇಶ ರಾಠೋಡ,
ಸೋಮು ರಾಠೋಡ, ಏಮನಾಥ ಚಹ್ವಾಣ, ಕರಣ ಜಾಧವ, ಪ್ರವೀಣ ರಾಠೋಡ,
ನಿರ್ಮಲಾ ರಾಠೋಡ, ಸಂಜು ರಾಠೋಡ,
ಉಷಾ ತಂದೆ ಹಣಮಂತ, ನಿಕೇಶ ಜಾಧವ ಹೀಗೆ ಇವರನ್ನು ಕರೆದುಕೊಂಡು ಹೋಗಿರುತ್ತೆವೆ, ಸದ್ರಿ ಬಸನಲ್ಲಿ ಪ್ರಶಾಂತ ಅಂತಾ ಒಬ್ಬ ಕ್ಲೀನರ ಕಮ್ ವಾಹನ ಮಾಲೀಕನಾಗಿದ್ದು, ಬಸವರಾಜ ಮತ್ತು ಚಂದ್ರಕಾಂತ ಅಂತಾ ಇಬ್ಬರೂ ಚಾಲಕರಿರುತ್ತಾರೆ. ನಾವು ದಿನಾಂಕ 20/12/2015 ರಂದು ಮೊದಲು
ಸುರಪೂರಕ್ಕೆ ಹೋಗಿ ಅಲ್ಲಿ ಕೋಟೆ ನೋಡಿಕೊಂಡು, ಅಲ್ಲಿಂದ
ನಾರಾಯಣಪೂರ ಡ್ಯಾಂ ಗೆ ಹೋಗಿ ಅಲ್ಲಿ ನೋಡಿಕೊಂಡು ಅಲ್ಲಿ ನೋಡಿ ಕೊಂಡು, ಅಲ್ಲಿಂದ ಹಂಪಿಗೆ ಹೋಗಿ ಅಲ್ಲಿ ರಾತ್ರಿ ವಸತಿ ಮಾಡಿರುತ್ತೆವೆ. ದಿನಾಂಕ 21/12/2015
ರಂದು ಹಂಪಿ ನೋಡಿಕೊಂಡು ಅಲ್ಲಿಂದ ಟಿ ಬಿ ಡ್ಯಾಂ ಗೆ ಬಂದು ಅಲ್ಲಿ ಡ್ಯಾಂ ನೋಡಿಕೊಂಡು ಅಲ್ಲಿಂದ 5
ಪಿಎಮ್ ಗೆ ಮರಳಿ ಊರಿಗೆ ಬರುತ್ತಿದ್ದೆವು. ಸದ್ರಿ ವಾಹನವನ್ನು ಚಂದ್ರಕಾಂತ ಈತನು
ಚಲಾಯಿಸುತ್ತಿದ್ದನು. ರಾತ್ರಿ 11:30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ
ಮೇಲೆ ಸರಡಗಿ(ಬಿ) ಖಣಿ ಹತ್ತಿರ ಕಲಬುರಗಿಗೆ ಕಡೆಗೆ ಬರುತ್ತಿರುವಾಗ ನಮ್ಮವಾಹನ ಚಾಲಕನಾದ
ಚಂದ್ರಕಾಂತ ಈತನು ತಾನು ಚಲಾಯಿಸುತ್ತಿದ್ದ ಟೆಂಪೋ ನಂಬರ (ಮನಿ ಬಸ್) ಕೆಎ-06 ಬಿ-6157
ನೆದ್ದನ್ನು ಅತೀವೇಗ ಮತ್ತು ಅಲಕ್ಷತನದಿಂಧ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಯಿಂದ ಬಲಗಡೆಗೆ
ಹೋಗಿ ಸೈಡಿನಲ್ಲಿದ್ದ ಗುಟ್ಟದ ಕಲ್ಲುಗಳಿಗೆ ಡಿಕ್ಕಿಪಡಿಸಿ ತನ್ನ ವಾಹನದ ವೇಗದ ನಿಯಂತ್ರಣತಪ್ಪಿ ರಸ್ತೆಯ
ಬಲಬದಿಗೆ ಪಲ್ಟಿಗೊಳಿಸಿ ಗಿಡಕ್ಕೆ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನಮ್ಮಗೆ ಸಾಧಾ ಮತ್ತು
ಗಂಬೀರ ಸ್ವರೂಪದ ಗಾಯಗಳಾಗಿದ್ದು, ಚಾಲಕ ಚಂದ್ರಕಾಂತ
ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯೆದಲ್ಲಿ ಮೃತ
ಪಟ್ಟಿರುತ್ತಾನೆ. ಅಂತಾ ಶರಣಮ್ಮ ತಂದೆ ಬಂಡಪ್ಪಾ ಹುಡಗಿ ವಯ:೨೪ ವರ್ಷ ಉ:ಅತಿಥಿ ಶಿಕ್ಷಕಿ ಜಾ:
ಲಿಂಗಾಯಿತ ಸಾ: ಅರಣಕಲ ತಾ: ಚಿತ್ತಾಪೂರ ಜಿ:ಕಲಬುರಗಿ
ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಸ್ತೂಲ ನಿಂದ ಪೈರ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ. ಗುಂಡು @ ಗುಂಡೇರಾವ
ತಂದೆ ಶೀಲವಂತೆ ಬಿಂಗೋಳಿ ಉ;ಜೆಸ್ಕಾಂ
ಲೈನಮ್ಯಾನ ಸಾ;ಹೀರೆಜೇವರಗಿ
ಹಾವ; ನಿಂಬೆತೋಟಾ ಅಫಜಲಪೂರ ಜಿ;ಕಲಬುರಗಿ.
ಇವರು ದಿನಾಂಕ 21-12-2015 ರಂದು ಮದ್ಯಾನ 1-00 ಗಂಟೆಯ ಸುಮಾರಿಗೆ ತಾನು ಕಲಬುರಗಿಯ
ನ್ಯಾಯಾಲಯದಲ್ಲಿ ತಾನು ಆರೋಪಿತನಾಗಿರುವ ಕೇಸಿನ ಪೇಶಿ ಮುಗಿಸಿಕೊಂಡು ಮರಳಿ ಅಂಕಲಗಿಗೆ ಹೋಗುವ
ಕುರಿತು ಹೀರಾಪೂರದ ವೇರ ಹೌಸ ರೈಲ್ವೇ ಗೇಟ ದಾಟಿ ಮುಂದೆ ಒಂದು ಇಟ್ಟಂಗಿ ಭಟ್ಟಿ ಹತ್ತಿರ ಹೋಗಿ ತಾನು ನಡೆಯಿಸುತ್ತಿರುವ ಮೋಟಾರ ಸೈಕಲ
ನಂ.ಕೆ.ಎ.32ಎಸ್. 1434 ರೋಡಿನ ಬದಿಗೆ ನಿಲ್ಲಿಸಿ ಬೈಲಕಡೆಗೆ ಹೋಗುತ್ತಿರುವಾಗ ಅದೇವೇಳಗೆ ಆತನ
ಹಿಂದನಿಂದ ಫೈರಿಂಗ ಮಾಡಿದ ಶಬ್ದ ಕೇಳಿಬಂದಾಗ ತಾನು ಹಿಂತಿರುಗಿ ನೋಡಲು ಈ ಮೋದಲು ಕೇಸು ಮಾಡಿದ
ನಾಗೇಶ ಚವ್ಹಾಣ ಇತನ ಸಹೋದರ ಅಮೀತ ಚವ್ಹಾಣ ಇದ್ದು
ಅವನ ಕೈಯಲ್ಲಿ ಪಿಸ್ತೂಲ ಇದ್ದು ಇನ್ನೊಂದು ಸಲ ಫೈರಿಂಗ ಮಾಡುವಾಗ ಆತನು
ತಪ್ಪಿಸಿಕೊಳ್ಳುವಾಗ ಗುಂಡು @ ಗುಂಡೇರಾವ ಬಿಂಗೋಳಿ ಇತನ ಎಡಗೈ ರಟ್ಟೆಗೆ ಗುಂಡು ತಗಲಿದ್ದರಿಂದ
ರಕ್ತಸ್ರಾವ ವಾಗುತ್ತಿದ್ದಾಗ ಇಟ್ಟಂಗಿ ಬಟ್ಟಿ ಮತ್ತು ರೋಡಿಗೆ ಹೋಗುವವರು ಬರುವಷ್ಟರಲ್ಲಿ ಅಮೀತ
ಚವ್ಹಾಣ ಮತ್ತು ಆತನ ಸಂಗಡ ಬಂದ ರಾಜು ಹಾಗೂ ಲಕ್ಷ್ಮಣ ಮತ್ತು ಹರಿಶ್ಚಂದ್ರ ಸಾ;ಎಲ್ಲರೂ ಬಳ್ಳುರಗಿ ತಾಂಡಾ ತಾ;ಅಫಜಲಪೂರ ಇವರು ತಮ್ಮ ಎರಡು ಮೋಟಾರ ಸೈಕಲಗಳ ಮೇಲೆ ಓಡಿಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರ್ರಕರಣ :
ರೇವೂರ
ಠಾಣೆ : ಶ್ರೀ ನಾಗೇಂದ್ರಪ್ಪಾ
ತಂದೆ ಮಲ್ಲೇಶಪ್ಪಾ ಟೆಂಗಳಿ ಕೆಲಸ ಸಾ:ಹೇರುರ (ಕೆ) ತಾ:ಚಿತ್ತಾಪೂರ ಜಿ:ಕಲಬುರಗಿ ಇವರ ಮಗಳಾದ ಚಂದ್ರಕಲಾ
ಇವಳಿಗೆ ಸುಮಾರು 20 ವರ್ಷಗಳ ಹಿಂದೆ ಅಫಜಲಪೂರ ತಾಲೂಕಿನ ಮದರಾ (ಕೆ) ಗ್ರಾಮದ ಸಿದ್ರಾಮಪ್ಪ ಮುಲಗೆ
ರವರ ಮಗನಾದ ಸುಭಾಷ ಮುಲಗೆ ರವರಿಗೆ ಕೊಟ್ಟು ಮದುವೆ ಮಾಡಿರುತ್ತೆವೆ. ಈಗ ನನ್ನ ಮಗಳಿಗೆ ಲಕ್ಷ್ಮಿಕಾಂತ 18 ವರ್ಷ, ಪ್ರೀಯಂಕಾ 16 ವರ್ಷ, ಅವ್ವಮ್ಮ 15 ವರ್ಷ, ರೇಣುಕಾ 12 ವರ್ಷ, ಗಣೇಶ 8 ವರ್ಷ, ಅಂತಾ ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು
ಒಟ್ಟು ಐದು ಜನ ಮಕ್ಕಳಿರುತ್ತಾರೆ.ನನ್ನ ಅಳಿಯನಿಗೆ ಸುಸಲಾಬಾಯಿ, ಮಹಾದೇವಿ, ಶಿವಕಾಂತ ಅಂತಾ ಮೂರು ಜನ
ಅಕ್ಕದಿಂರಿದ್ದು ಸುಸಲಾಬಾಯಿಗೆ ಕಲಬುರಗಿಗೆ ಕೊಟ್ಟು ಮದುವೆ ಮಾಡಿದ್ದು ಆಕೆಯ ಗಂಡ
ತಿರಿಕೊಂಡಿದ್ದು ಆಕೆಯು ಹೆಚ್ಚಾಗಿ ಮದರಾ (ಕೆ) ಗ್ರಾಮದಲ್ಲಿಯೇ ಇರುತ್ತಾಳೆ. ಮಹಾದೇವಿ ಇವಳಿಗೆ
ಮದರಾ (ಕೆ) ಗ್ರಾಮದ ಸಿದ್ದಪ್ಪ ಭೂಸನೂರ ರವರಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಶಿವಕಾಂತಾ
ರವರಿಗೆ ಸುಂಟನೂರ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿರುತ್ತಾರೆ. ನನ್ನ ಅಳೆಯನ ಹೆಸರಿಗೆ ಒಟ್ಟು 40
ಎಕರೆ ಜಮೀನು ಇರುತ್ತದೆ. ಮದುವೆಯಾದ 2 ವರ್ಷದವರೆಗೆ ಚನ್ನಾಗಿದ್ದು ನಂತರ ನನ್ನ ಅಳೆಯ
ಕುಡಿತ್ತಕ್ಕೆ, ಇಸ್ಪಿಟಕ್ಕೆ ಹೆಚ್ಚಾಗಿ ಕಾಲ ಕಳೆದು ಕೆಲಸ ಮಾಡದೆ
ಮನೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿ ಹಾಳು ಮಾಡಿರುತ್ತಾನೆ ಹಾಗೂ ಕುಡಿತಕ್ಕಾಗಿ ಮತ್ತು
ಇಸ್ಪಿಟಗಾಗಿ ಲಕ್ಷಾಂತರ ರೂಪಾಯಿ ಸಾಲವನ್ನು ಕೂಡ ಮಾಡಿರುತ್ತಾನೆ. ಅದಕ್ಕೆ ನನ್ನ ಮಗಳು ಹೊಲದಿಂದ
ಬೆಳೆಯ ಮೂಲಕ ಬಂದ ಹಣದಲ್ಲಿ ಸಾಲತಿರಿಸುತ್ತಾ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ಸಾಗಿಸುತ್ತಾ
ಬಂದಿರುತ್ತಾಳೆ ನನ್ನ ಮಗಳು ಕುಡಿಯಬೆಡ ಇಸ್ಪಿಟ ಆಟವಾಡಿ ಹಣ ಹಾಳು ಮಾಡಬೆಡ ಅಂತಾ ಹೇಳಿದಕ್ಕೆ
ದಿನಾಲು ಅವಳಿಗೆ ಬೈಯುವುದು, ಹೊಡೆಯುದು ಮಾಡುತ್ತಾ ಅವಳಿಗೆ ದೈಹಿಕ ಮತ್ತು
ಮಾನಸಿಕ ಕಿರಕುಳ ನೀಡುತ್ತಾ ಬಂದಿರುತ್ತಾನೆ. ಇತಿಚ್ಚೆಗೆ 5-6 ವರ್ಷದಿಂದ ಹೊಲವನ್ನು ಮಾರುತ್ತೆನೆ
ಅಂತಾ ಅಂದಿದಕ್ಕೆ ನನ್ನ ಮಗಳು ಹೊಲವನ್ನು ಮಾರಿ ಹಣ ಹಾಳು ಮಾಡುತಿಯಾ ಹೋಲ ಮಾರ ಬೇಡ ಅಂತಾ
ಹೇಳಿದಕ್ಕೆ ಈ ವಿಷಯವಾಗಿ ದಿನಾಲು ಅವಳಿಗೆ ಹೊಡೆಬಡೆ ಮಾಡುತ್ತಾ ಬಂದಿರುತ್ತಾನೆ ಆತನ ಅಕ್ಕಂದಿರಾದ
ಸುಸಲಾಬಾಯಿ ಮತ್ತು ಮಹಾದೇವಿ ರವರು ನನ್ನ
ತಮ್ಮನಿಗೆ ಎದುರು ಮಾತನಾಡುತ್ತಿಯಾ ಹೋಲ
ಮಾರಿದರೆ ಮಾರಲಿ ಬೀಡು ನಿಮ್ಮ ಅಪ್ಪಂದು ಏನ್ ಗಂಟು ಹೋಗುತ್ತದೆ
ಅಂತಾ ಅವರು ಈ ಹಿಂದೆ 2-3 ಸಲ
ಹೊಡೆಬಡೆ ಮಾಡಿ ಕಿರುಕುಳ ನೀಡಿರುತ್ತಾರೆ. ಈ
ವಿಷಯವಾಗಿ ನಾವು 2 ಸಲ ಪಂಚಾಯತಿ
ಮಾಡಿ ತಿಳಿ ಹೇಳಿರುತ್ತೇವೆ.
ನನ್ನ ಮಗಳು ನಿನ್ನೆ
ದಿಃ19/12/2015 ರಂದು ರಾತ್ರಿ 11 ಪಿಎಮ್ ಕ್ಕೆ
ನನಗೆ ಫೊನ ಮಾಡಿ ನನ್ನ ಗಂಡ, ಮತ್ತು ನನ್ನ
ನಾಧಿನಿಯರಾದ ಮಹಾದೇವಿ ಮತ್ತು
ಸುಸಲಾಬಾಯಿ ರವರು ನನಗೆ ಹೊಡೆಬಡೆ ಮಾಡುತ್ತಿದ್ದಾರೆ. ಮತ್ತು ನಿನ್ನ ಅವಶ್ಯಕತೆ ನಮಗೆ ಇಲ್ಲ ಸತ್ತು ಹೋಗು
ಅಂತಾ ದೈಹಿಕವಾಗಿ ಮತ್ತು
ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಅಂತಾ ಹೇಳಿದಾಗ
ನೀನು ಸುಮ್ಮನೆ ಇರು
ನಾನು ನಾಳೆ ಬರುತ್ತೇನೆ ಅಂತಾ
ಹೇಳಿರುತ್ತೇನೆ. ಇಂದು ಮುಂಜಾನೆ 11-30
ಗಂಟೆ ಸುಮಾರಿಗೆ ನಾನು ನನ್ನ ಮಗಳ ಊರಿಗೆ
ಬರಲು ತಯಾರಾಗುತ್ತಿದ್ದಾಗ ನನ್ನ ಮಗಳ
ಮಗಳಾದ ಅವ್ವಮ್ಮ ಇವಳು ನನಗೆ
ಫೊನ ಮಾಡಿ ಈಗ 11-20
ಎಎಮ್ ಸುಮಾರಿಗೆ ಅಮ್ಮ ನಾನು ಮನೆಯಲ್ಲಿದ್ದಾಗ
ಅಮ್ಮ ದೇವರ ಕೋಣೆಯಲ್ಲಿ ಹಗ್ಗ
ತೆಗದುಕೊಂಡು ಹೋಗಿ ಒಳಗಿನ ಬಾಗಿಲು ಮುಚ್ಚಿಕೊಂಡಾಗ
ನನಗೆ ಹೆದರಿಕೆಯಾಗಿ ನಾನು
ಬಾಗಿಲು ಬಡಿದರು ಬಾಗಿಲು
ತೆಗೆದಿರುವುದಿಲ್ಲಾ ನಾನು ಚಿರಾಡುವ
ಶಬ್ದ ಕೇಳಿ ಹೋರಗಿನಿಂದ
ಬಂದ ನಮ್ಮೂರಿನ ಲಕ್ಷ್ಮಣ
ಹೊಸಮನಿ ಮತ್ತು ಬಸವಂತರಾಯ ತಾತಾರವರು ಮತ್ತು
ಇತರು ಬಂದು ಬಾಗಿಲು ತೆರೆಯಲು ಪ್ರಯತ್ನಿಸಿದರು
ಬಾಗಿಲು ತೆರೆಯದಿದ್ದಾಗ ಅವರು ಮನೆಯ
ಮಾಳಿಗೆಯ ಮೇಲೆ ಹೋಗಿ
ಹಾರಿಯಿಂದ ಮಾಳಿಗೆಯಲ್ಲಿನ ಮಣ್ಣು ಕೇದರಿ
ನೋಡಿದಾಗ ನಮ್ಮ ಅಮ್ಮ ಹಗ್ಗದಿಂದ
ಜಂತಿಗೆ ನೇಣು ಹಾಕಿಕೊಂಡು
ಬಡದಾಡುತ್ತಿದ್ದಳು ಆಗ ಅವರು
ಮೇಲಿನ ಹಗ್ಗ ಕಡಿದು
ಮಾಳಿಗೆಯ ಮೂಲಕ ಮನೆಯಲ್ಲಿ
ನಮ್ಮ ಅಮ್ಮಳಿಗೆ ಬಾಗಿಲು ತೆರೆದು ಹೋರಗೆ ತಂದಿರುತ್ತಾರೆ. ಆದರೆ ಹೋರಗೆ
ತಂದು ಸ್ವಲ್ಪ ಬಾಯಿಯಲ್ಲಿ ನೀರು
ಹಾಕಿದ ತಕ್ಷಣ ಸತ್ತು
ಹೋಗಿರುತ್ತಾಳೆ ಅಂತಾ ತಿಳಿಸಿದಾಗ ನಾನು
ನನ್ನ ಹೆಂಡತಿ ನನ್ನ ಮಗ
ಶ್ರೀಧರ ಮತ್ತು ಗ್ರಾಮಸ್ಥರು
ಬಂದು ನೋಡಲು ನನ್ನ ಮಗಳು
ನೇಣು ಹಾಕಿಕೊಂಡಿದ್ದು ನಿಜವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 17.12.2015 ರಂದು ಮುಂಜಾನೆ
8.00 ಗಂಟೆಗೆ ಮಲ್ಲಾ (ಕೆ) ಗ್ರಾಮದಲ್ಲಿ ಶ್ರೀ ಬಸಪ್ಪ ತಂದೆ
ಶರಣಪ್ಪ ದೋರಿ ಜಾತಿ: ಬೇಡರ ಸಾ: ಮಲ್ಲಾ (ಕೆ) ತಾ: ಜೇವರಗಿ ರವರಿಗೆ ಆಂದ್ರ ರೆಡ್ಡಿ ಜನರಿಗೆ ನೀರು ಬಿಡುವ ವಿಷಯದಲ್ಲಿ.
ಸಂಗಣಗೌಡ ತಂದೆ ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಸಾ: ಮಲ್ಲಾ (ಕೆ) ಇತನು ಫಿರ್ಯಾದಿದಾರನಿಗೆ ಬಸ್ಯಾ
ಬ್ಯಾಡ ಜಾತಿಯವನೆ ನಿನಗೆ 15 ದಿವಸಗಳಲ್ಲಿ ಕೊಲೆ ಮಾಡುತ್ತೇನೆ ಅದ್ಕಕಾಗಿ ಎಲ್ಲಾ ತಯ್ಯಾರಿ ಮಾಡಿದಿನಿ
ಏನು ತಿಳಿದಿ ಊರಲ್ಲಿ ನಾನು ಗೌಡ ಹೇಳಿದ ಹಾಗೆ ಕೇಳಬೇಕು ಅಂತ ಜೀವದ ಭಯ ಹಾಕಿ ಜಾತಿ ನಿಂದನೆ ಮಾಡಿರುತ್ತಾನೆ
ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.