Police Bhavan Kalaburagi

Police Bhavan Kalaburagi

Tuesday, February 9, 2021

BIDAR DISTRICT DAILY CRIME UPDATE 09-02-2021

 ದಿನಂಪ್ರತಿ ಅಪರಾಧಗಳ ಮಾಹಿತ ದಿನಾಂಕ 09-02-2021

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 153, 504, 505(1ಬಿ), 506 ಐಪಿಸಿ :-

ದಿನಾಂಕ 06-02-2021 ರಂದು 1000 ಗಂಟೆಗೆ ಫಿರ್ಯಾದಿ ಘಾಳೆಪ್ಪಾ ತಂದೆ ಚೆನ್ನಮಲ್ಲಪ್ಪ ಸಾ: ಚಟನಳ್ಳಿ, ತಾ: & ಜಿ: ಬೀದರ ರವರು ತಮ್ಮ ಮನೆಯಲ್ಲಿ ನ್ನ ಮೋಬೈಲ ನಲ್ಲಿ ತನ್ನ ಫೇಸಬುಕ್ ಅಕೌಂಟ್ ನೋಡುತ್ತಿರುವಾಗ ರಾಮಶೆಟ್ಟಿ ಬಿರಾದಾರ ಅನ್ನುವ ವ್ಯಕ್ತಿ ಫಿರ್ಯಾದಿಯವರ ಫೇಸಬುಕ್ ಗೆಳೆಯರಾಗಿದ್ದು ಅವರು ಒಂದು ಪೋಸ್ಟ ಶೇರ ಮಾಡಿದ್ದು ಅದರಲ್ಲಿ “PUBLIC TV” Facebook account ನಲ್ಲಿ ಯಡಿಯೂರಪ್ಪ ನವರ ಕುರಿತಾಗಿಮೋದಿ, ಅಮಿತ ಶಾ, ರಾಜ್ಯದ ಜನತೆ ಆಶಿರ್ವಾದ ಇರುವರೆಗೆ ಸಿ.ಎಮ್ ಸ್ಥಾನದಿಂದ ಕೆಳಗಿಳಿಸಲು ಸಾಧ್ಯಾವಿಲ್ಲಎಂಬ News ಪೊಸ್ಟ್ ಗೆ https;//www.facebook.com/basavaraj.nagaral.3990 ಖಾತೆ ಹೊಂದಿರುವ ಆರೋಪಿ ಬಸವರಾಜ ತಂದೆ ಈರಣ್ಣಾ ನಾಗರಾಳ ಸಾ: ಹಗರಟಗಿ, ತಾ: ಹುಣಸಗಿ, ಜಿ: ಯಾದಗೀರ ಈತನು ತನ್ನ ಫೇಸಬುಕ್ ಖಾತೆಯಿಂದವೋಟು ಕೇಳುವಾಗ ಶಾ, ಮೋದಿ ಬರಲಿಲ್ಲಾ ಅಂತ ಅವಾಚ್ಯವಾಗಿ ಬೈದು ನೀನು 2 ಮಿಸಲಾತಿ ಕೊಡದಿದ್ದರೆ ರಾಜಿನಾಮೆ ಕೊಡು ಇಲ್ಲವಾದರೆ 20 ನೇ ತಾರೀಖು ನಿನ್ನ ಸಾವು ಖಚಿತಾ ಅಂತಾ ಕಮೆಂಟ್ ಮಾಡಿದ್ದು ಇದನ್ನು ಫೇಸಬುಕ್ ನಲ್ಲಿ ನೋಡಿದ ಜಗದೀಶ ಜಗದೀಶ ಎನ್ನುವ ಫೇಸಬುಕ್ ಖಾತೆದಾರರು ಬಿಎಸ್ ವೈ ಫ್ಯಾನ್ಸ್ ಫೇಸ್ಬುಕ್ ಖಾತೆಗೆ ಹಾಕಿದ್ದು ಅದನ್ನು ಗೆಳೆಯ ರಾಮಶೆಟ್ಟಿ ಬಿರಾದಾರ ಪುನಃ ಫೇಸಬುಕ್ ಖಾತೆಯಲ್ಲಿ ಹಂಚಿಕೊಂಡಿರುತ್ತಾರೆ, ಆದ್ದರಿಂದ ಹಗರಟಗಿ ನಿವಾಸಿ ಬಸವರಾಜ ತಂದೆ ಈರಣ್ಣಾ ನಾಗರಾಳ ವಯ: 27 ವರ್ಷ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಕೋರಿದೆ ಅಂತಾ ಫಿರ್ಯಾದಿಯವರ ದೂರು ಅರ್ಜಿ ಸಾರಾಂಶದ ಮೇರೆಗೆ ದಿನಾಂಖ 08-02-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೆಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 16/2021, ಕಲಂ. 279, 337, 338, 304 () ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-

ದಿನಾಂಕ 08-02-2021 ರಂದು ಫಿರ್ಯಾದಿ ಕಲಾವತಿ ಗಂಡ ಅರ್ಜುನ ಕಾಂಬಳೆ ವಯ: 55 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಗೊಗ್ಗಾ, ತಾ: ಬಸವಕಲ್ಯಾಣ ರವರ ಮಗಳಾದ ಶ್ರೀದೇವಿ ಇವಳಿಗೆ ಆರಾಮ ಇಲ್ಲದ ಕಾರಣ ಚಿಟ್ಟಗುಪ್ಪಾದಲ್ಲಿ ಖಾಸಗಿ ಆಸ್ಪತ್ರೆಗೆ ತೋರಿಸಲು ಫಿರ್ಯಾದಿಯು ತನ್ನ ತಂಗಿ ಮಹಾದೇವಿ ಇಬ್ಬರು ಮನ್ನಾಎಖೇಳ್ಳಿಯಿಂದ ಚಿಟ್ಟಗುಪ್ಪಾಗೆ ಹೋಗಿ ನ್ನ ಮಗಳಿಗೆ ಆಸ್ಪತ್ರೆಯಲ್ಲಿ ತೊರಿಸಿಕೊಂಡು ಮೂರು ಜನರು ಚಿಟ್ಟಗುಪ್ಪದಿಂದ ಪ್ರಯಾಣಿಕರನ್ನು ಸಾಗಿಸುವ ಆಟೊ ನಂ. ಕೆಎ-32/ಬಿ-9801 ನೇರಲ್ಲಿ ಪ್ರಯಾಣಿಕರ ಜೊತೆ ಕುಳಿತುಕೊಂಡು ಚಿಟ್ಟಗುಪ್ಪದಿಂದ ಶಮತಾಬಾದ ಮಾರ್ಗಾವಾಗಿ ಬರುತ್ತಿರುವಾಗ ಶಮತಾಬಾದ ಗ್ರಾಮದ ಹತ್ತಿರ ಹಂಪ್ಸ ಹತ್ತಿರ ಸದರಿ ಟೋ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸುತ್ತಾ ಬಂದು ತನ್ನ ವಾಹನ ರೋಡಿನ ಮೇಲೆ ಪಲ್ಟಿ ಮಾಡಿದ್ದು ಇರುತ್ತದೆ, ಸದರಿ ಆಟೊ ಪಲ್ಟಿಯಿಂದ ಫಿರ್ಯಾದಿಯ ತಂಗಿತಲೆಯ ಹಿಂದೆ ಒಡೆದು ಭಾರಿ ರಕ್ತಗಾಯ, ಎಡ ಭಕಾಳಿಗೆ ಭಾರಿ ರಕ್ತಗಾಯ ಮತ್ತು ಭಾರಿ ಗುಪ್ತಗಾಯ, ಮುಖದ ಬಲಗಡೆ ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಹಾಗೂ ಫಿರ್ಯಾದಿಯ ತಲೆಯ ಹಿಂದೆ ಗುಪ್ತಗಾಯ, ಬೆನ್ನಿಗೆ ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಯವರ ಜೋತೆ ಆಟೋದಲ್ಲಿ ಕುಳಿತ ಮಗಳು ಶ್ರೀದೇವಿ ಗಂಡ ರಾಮಚಂದ್ರ ವಗ್ಗೆ ವಯ: 38 ವರ್ಷ, ಸಾ: ತಡೊಳಾ ಗ್ರಾಮ ಇವಮೂಗಿಗೆ ರಕ್ತಗಾಯ, ಎಡಭುಜಕ್ಕೆ ಗುಪ್ತಗಾಯ, ಎಡ ಮೊಳಕಾಲಿಗೆ ಗುಪ್ತಗಾಯ ಹಾಗು ಇತರೆ ಪ್ರಯಾಣಿಕರಾದ ಕಮಳಮ್ಮಾ ಗಂಡ ಧೂಳಪ್ಪ ಉಪ್ಪಾರ ಸಾ: ಐನಾಪೂರ ಇವಎಡ ತಲೆಗೆ ತರಚಿದ ರಕ್ತಗಾಯ, ಎಡಮೇಲಕಿಗೆ ರಕ್ತಗಾಯ, ಎಡ ಮುಂಗೈಗೆ ಭಾರಿ ಗುಪ್ತಗಾಯ ಮತ್ತು ರಜಿಯಾ ಬೇಗಂ ಗಂಡ ಮುನ್ನುಮಿಯ್ಯಾ ಸಾ: ತಾಳಮಡಗಿ ಇವಳಿಗೆ ಎಡಗಾಲ ಮೊಳಕಾಲ ಕೆಳಗೆ ತರಚಿದ ರಕ್ತಗಾಯ ಹಾಗು ಪಾದಕ್ಕೆ ತರಚಿ ಗುಪ್ತಗಾಯವಾಗಿರುತ್ತದೆ, ಆರೋಪಿಯು ವಾಹನ ಪಲ್ಟಿಯಾದ ಕೂಡಲೆ ತನ್ನ ಟೋ ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ನಂತರ ಗಾಯಾಳು ಶ್ರೀದೇವಿ, ಕಮಳಮ್ಮಾ, ರಜಿಯಾ ಬೇಗಂ ಇವರಿಗೆ ಚಿಕಿತ್ಸೆ ಕುರಿತು 108 ವಾಹನದಲ್ಲಿ ಸರಕಾರಿ ಆಸ್ಪತ್ರೆ ಚಿಟ್ಟಗುಪ್ಪಾಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 19/2021, ಕಲಂ. 420, 464, 465, 468, 471  ಜೋತೆ 34 .ಪಿ.ಸಿ :-

ಆರೋಪಿತರಾದ 1) ಎಂ.ಡಿ ರಫೀಕ್ ತಂದೆ ಸೈಯದ ಖಾಜ ಮಿಯ್ಯಾ ಸಾ: ಅರ್ಫತ ಕಾಲೋನಿ ಬಸವಕಲ್ಯಾಣ, 2) ಹಬೀಬಸಾಬ ತಂದೆ ಉಸ್ಮಾನಸಾಬ ಮುಲ್ಲಾ ಸಾ: ಅರ್ಫತ ಕಾಲೋನಿ ಬಸವಕಲ್ಯಾಣ, 3) ಅಸ್ಲಂಖಾನ ತಂದೆ ಅಬ್ಬಾಸ ಖಾನ ಸಾ: ಯಾಕುಬಪೂರ ಬಸವಕಲ್ಯಾಣ ಮತ್ತು 4) ಎಂ.ಡಿ ಮೈನೋದ್ದಿನ್ ತಂದೆ ಲೇಟ ಎಂ.ಡಿ  ಜೈಹಿರೋದ್ದಿನ್ ಸಾ: ಪಾಶಪೂರಗಲ್ಲಿ ಬಸವಕಲ್ಯಾಣ ಇವರು ಹಾಗು ಇತರರು ಕೂಡಿಕೊಂಡು ಫಿರ್ಯಾದಿ ಗೌತಮಬುದ್ದ ಕಾಂಬಳೆ ಪೌರಾಯುಕ್ತರು ನಗರ ಸಭೆ ಬಸವಕಲ್ಯಾಣ ರವರಿಗೆ ಗೋತ್ತಿಲ್ಲದೆ ವಿದ್ಯೂತ್ ಜೋಡೆಣೆ  ಕುರಿತು ಕಛೇರಿಯಿಂದ ಕೋಡಬೇಕಾದ ಆಕ್ಷೇಪಣಾ ರಹಿತ ಪ್ರಮಾಣ ಪತ್ರವನ್ನು ನಕಲಿ ರಚಿಸಿ ಸದರಿ ಪತ್ರದ ಮೇಲೆ ಕಛೇರಿಯ ರೌಂಡ ಶೀಲು ಅಥವಾ ಮೋಹರು ಮತ್ತು ಪೌರಾಯುಕ್ತರು ನಗರ ಸಭೆ ಬಸವಕಲ್ಯಾಣ ಎಂಬ ಮೋಹರು ಅಥವಾ ಶೀಲು ಹಾಕಿ ಪೌರಾಯುಕ್ತರು ನಗರ ಸಭೆ ಬಸವಕಲ್ಯಾಣ ಎಂಬ ಮೋಹರಿನ ಮೇಲೆ ಫಿರ್ಯಾದಿಯವರ ನಕಲಿ ಸಹಿ ಮಾಡಿ ಅದುವೇ ನೀಜವೆಂದು ವಿದ್ಯೂತ್ ಜೋಡಣೆಗಾಗಿ ಬಸವಕಲ್ಯಾಣ ಜೆಸ್ಕಂ ಕಛೇರಿಯಲ್ಲಿ ಸಲ್ಲಿಸಿರುತ್ತಾರೆ, ಹೀಗಿರುವಾಗ ದಿನಾಂಕ 08-02-2021 ರಂದು ಬಸವಕಲ್ಯಾಣ ಜೆಸ್ಕಂ ಕಛೇರಿಗೆ ಭೇಟಿ ನೀಡಿದಾಗ ಅಲ್ಲಿಯ ಅಧಿಕಾರಿಯಾದ .. ಜೆಸ್ಕಂ ಕಛೇರಿ ಬಸವಕಲ್ಯಾಣ ರವರು ಆಕ್ಷೇಪಣಾ ರಹಿತ ಪ್ರಮಾಣ ಪತ್ರಗಳನ್ನು ತೋರಿಸಿ ತಮ್ಮ ಸಹಿಯಲ್ಲಿ ಬದಲಾವಣೆ ಕಂಡುಬರುತ್ತಿದೆ ಎಂದು ತಿಳಿಸಿ ಆಕ್ಷೇಪಣಾ ರಹಿತ ಪ್ರಮಾಣ ಪತ್ರಗಳನ್ನು ಹಾಜರು ಪಡಿಸಿದಾಗ ಫಿರ್ಯಾದಿಯವರು ಅವುಗಳನ್ನು ಪರಿಶೀಲಿಸಿ ನೋಡಲು ತಮ್ಮ ಕಛೇರಿಯಿಂದ ನೀಡಿದ ಆಕ್ಷೇಪಣಾ ರಹಿತ ಪ್ರಮಾಣ ಪತ್ರಗಳು ಇರುವುದಿಲ್ಲ ಮತ್ತು ಅವುಗಳ ಮೇಲೆ ಇದ್ದ ರುಜು ನಕಲಿ ಇದ್ದು ಮತ್ತು ಕಛೇರಿಯ ಮೋಹರು ಹಾಗು ಪೌರಾಯುಕ್ತರು ನಗರ ಸಭೆ ಬಸವಕಲ್ಯಾಣ ಎಂಬ ಹೆಸರಿನ ಮೋಹರು ಕೂಡ ನಕಲಿ ಇರುತ್ತದೆ, ಕಾರಣ ಸದರಿ ಆರೋಪಿತರು ಹಾಗು ಇತರರು ಕೂಡಿಕೊಂಡು ದಿನಾಂಕ 15-12-2020, ದಿನಾಂಕ 18-12-2020 ಮತ್ತು ದಿನಾಂಕ 27-01-2021 ರಂದು ನಕಲಿ ಅಥವಾ ಜಾಲಿ ಆಕ್ಷೇಪಣಾ ರಹಿತ ಪ್ರಮಾಣ ಪತ್ರ ರಚಿಸಿ ಕಛೇರಿಯ ನಕಲಿ ಮೋಹರು ಮತ್ತು ಫಿರ್ಯಾದಿಯವರ ನಕಲಿ ಸಹಿ ಮಾಡಿ ಸರ್ಕಾರಕ್ಕೆ ರ್ಥಿಕ ನಷ್ಟ ಉಂಟು ಮಾಡಿ ಫಿರ್ಯಾದಿಗೆ ಮತ್ತು ಇಲಾಖೆಗೆ ಮೋಸ, ವಂಚನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೋಂಡು ತನಿಖೆ ಕೈಗೊಳ್ಳಲಾಗಿದೆ.