Police Bhavan Kalaburagi

Police Bhavan Kalaburagi

Thursday, June 10, 2021

BIDAR DISTRICT DAILY CRIME UPDATE 10-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-06-2021

 

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 09-06-2021 ರಂದು ಫಿರ್ಯಾದಿ ಅಫ್ರಿನಾ ಬೆಗಂ ಗಂಡ ಅನ್ಸರ ಸಾ ಸಿರ್ಸಿ() ಗ್ರಾಮ ರವರ ಗಂಡನಾದ ಅನ್ಸರ ತಂದೆ ಇಬ್ರಾಹಿಂ ವಯ: 40 ವರ್ಷ, ಸಾ: ಸಿರ್ಸಿ() ರವರು ಹೊಲದಲ್ಲಿ ಮಾವಿನ ಮರದಿಂದ ಆಕಸ್ಮಿಕವಾಗಿ ಮೇಲಿಂದ ಕಾಲು ಜಾರಿ ಬಿದ್ದು ಪ್ರಯುಕ್ತ ಅವರಿಗೆ ಬಲಗಾಲಿನ ಮೊಳಕಾಲಿನ ಕೆಳಗೆ ತರಚಿದ ರಕ್ತಗಾಯ, ತಲೆಯ ಹಿಂಬದಿಯಲ್ಲಿ ಭಾರಿ ಗುಪ್ತಗಾಯವಾಗಿ ಬಾವು ಬಂದಿರುತ್ತದೆ ಹಾಗೂ ಎರಡು ಕಡೆ ಭಕಾಳಿ ಮತ್ತು ಎದೆಯಲ್ಲಿ ಗುಪ್ತಗಾಯಗಳು ಆಗಿದ್ದು ಇರುತ್ತದೆ, ನಂತರ ಅವರನ್ನು 108 ಅಂಬುಲೇನ್ಸ್ ನಲ್ಲಿ ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ಯಾವುದೇ ರೀತಿಯಾದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 65/2021, ಕಲಂ. 279, 304(ಎ) ಐಪಿಸಿ :-

ದಿನಾಂಕ 09-06-2021 ರಂದು ಫಿರ್ಯಾದಿ ಮುರಹರಿ ತಂದೆ ಝೆಟಿಂಗಾ ಗಾಯಕವಾಡ ಸಾ: ಶಿವಣಿ, ತಾ: ಭಾಲ್ಕಿ ರವರ ಮಗನಾದ ಸುನೀಲ ತಂದೆ ಮುರಹರಿ ಸಾ: ಶಿವಣಿ, ತಾ: ಭಾಲ್ಕಿ ಈತನು ರಾಜಕುಮಾರ ತಂದೆ ಭೀಮಣಾ ಇವರ ಮನೆಯ ಮುಂದಿನ ಕಲ್ಲುಗಳು ಟ್ರ್ಯಾಕ್ಟರದಲ್ಲಿ ತುಂಬಿ ಅವರ ಹೊಲದಲ್ಲಿ ಹಾಕುವದು ಇದೆ ಅಂತ ಟ್ರ್ಯಾಕ್ಟರ ನಂ. ಎಪಿ-36/ಎ.ಎಲ್-6971 ನೇದನ್ನು ತೆಗೆದುಕೊಂಡು ಟ್ರ್ಯಾಕ್ಟರ ಚಾಲನೆ ಮಾಡುವಾಗ ನಿಷ್ಕಾಳಜಿ ಮಾಡಿದ್ದರಿಂದ ಟ್ರ್ಯಾಕ್ಟರ ಪಲ್ಟಿ ಆಗಿ ಸ್ಟೇರಿಂಗ ದಬಾಯಿಸಿದ್ದರಿಂದ ಸುನೀಲ ಇತನ ಎದೆಗೆ ಗಾಯ, ಕುತ್ತಿಗೆಗೆ ಸ್ಟೆರಿಂಗ ಹುಕ್ಕಿರುತ್ತದೆ, ನಂತರ ಆತನಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ವೈದ್ಯರಿಗೆ ತೋರಿಸಿದಾಗ ವೈದ್ಯರು ನೋಡಿ ಮ್ರತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 45/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 09-06-2021 ರಂದು ಬೀದರ ನಗರದ ರಾವ ತಾಲೀಮ ಓಣಿಯಲ್ಲಿ ಬಾಗವಾನ ಗಲ್ಲಿ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ 1/- ರೂಪಾಯಿಗೆ 90/- ರೂಪಾಯಿ ಕೊಡುತ್ತೇನೆಂದು ಪ್ರಭಾಕರ ಪಾಟೀಲ್ ಪಿ.ಎಸ್. (ಕಾಸು) ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ರಾವ ತಾಲೀಮ ಓಣಿಯಲ್ಲಿ ಹೋಗಿ ಉಸ್ಮಾನಿಯಾ ಮಜೀದ ಹತ್ತಿರ ಮರೆಯಲ್ಲಿ ನಿಂತು ನೋಡಲು ಬಾಗವಾನ ಗಲ್ಲಿ ಕ್ರಾಸ ಹತ್ತಿರ ಆರೋಪಿ ಎಂ.ಡಿ ಆಬೀದ ತಂದೆ ಎಂ.ಡಿ ಶಿರಾಜ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ಬಾಗವಾನ ಗಲ್ಲಿ ಬೀದರ ಇತನು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಂದ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 1420/-ರೂ ಮತ್ತು ಒಂದು ಬಾಲ ಪೆನ್ನು ಮತ್ತು ಎರಡು ಮಟಕಾ ಚೀಟಿಗಳನ್ನು ಜಪ್ತಿ ಮಾಡಿಕೊಂಡು, ಸದರಿಯವನಿಗೆ ಹಣ ಮತ್ತು ಮಟಕಾ ಚೀಟಿಗಳು ಯಾರಿಗೆ ಕೊಡುತ್ತಿ ಅಂತ ವಿಚಾರಿಸಲು ರಾವ ತಾಲೀಮ ಓಣಿಯ ತಹಸೀನ್ ತಂದೆ ಖಾಜಾ ಮೈನೊದ್ದೀನ್ ರವರಿಗೆ ಕೊಡುವುದಾಗ ತಿಳಿಸಿದನು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 87/2021, ಕಲಂ. 379 ಐಪಿಸಿ :-

ದಿನಾಂಕ 04-06-2021 ರಂದು 1030 ಗಂಟೆಗೆ ಫಿರ್ಯಾದಿ ಫಿರ್ಯಾದಿ ಶಿವಪುತ್ರ ತಂದೆ ವೀರಶೆಟ್ಟಿ ಪಟ್ನೆ ವಯ: 20 ವರ್ಷ, ಜಾತಿ: ಲಿಂಗಾಯತ, ಸಾ: ಕೆ.ಎಸ.ಆರ.ಟಿ.ಸಿ ಕಾಲೋನಿ ನೌಬಾದ ಬೀದರ ರವರು ತನ್ನ ಹಿರೋ ಸ್ಪ್ಲೇಂಡರ ಪ್ಲಸ ಮೋಟಾರ್ ಸೈಕಲ್ ನಂ. ಕೆಎ-38/ಉ-2544, ಚಾಸಿಸ್ ನಂ. MBLHA10CGHHAA7544, ಇಂಜಿನ್ ನಂ. HA10ERHHA73240, ಮಾದರಿ 2017, ಬಣ್ಣ: ಕಪ್ಪು ಬಣ್ಣ ಹಾಗೂ ಅ.ಕಿ 38,000/- ರೂ. ನೇದನ್ನು ಅಗ್ರೀಕಲ್ಚರ ಕಾಲೋನಿ ಗುಂಪಾ ಬೀದರ ಲ್ಲಿ ಅಮ್ರುತ ರವರ ಮನೆಯ ಮುಂದೆ ನಿಲ್ಲಿಸಿ ಅಮ್ರುತ ರವರ ಜೋತೆ ಖಾಸಗಿ ಚಾಲಕ್ಕೆನೆಂದು ಭಾಲ್ಕಿ ನಗರಕ್ಕೆ ಹೋಗಿ ಮರಳಿ 1930 ಗಂಟೆಗೆ ಬಂದು ನೋಡಲು ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 100/2021, ಕಲಂ. 379 ಐಪಿಸಿ :-

ದಿನಾಂಕ 07-06-2021 ರಂದು 1130 ಗಂಟೆಯಿಂದ ದಿನಾಂಕ 08-06-2021 ರಂದು 0930 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಮೌನೇಶ್ವರ ಹಿ.ಪ್ರಾ.ಶಾಲೆ ಜನತಾ ಕಾಲೋನಿ ಭಾಲ್ಕಿ ನೇದರಲ್ಲಿನ 1) 30 ಕೆ.ಜಿ ಅಕ್ಕಿ ಅ.ಕಿ 300/- ರೂ., 2) ಒಂದು ತುಂಬಿದ ಸಿಲಿಂಡರ್ ಅ.ಕಿ 3000/- ರೂ. ಹಾಗೂ 3) ಒಂದು ಖಾಲಿ ಸಿಲಿಂಡರ್ ಅ.ಕಿ 2200/- ರೂ. ಹೀಗೆ ಒಟ್ಟು 5500/- ರೂ ದಷ್ಟು ಮೌಲ್ಯದ ಅಕ್ಕಿ ಮತ್ತು ಸಿಲಿಂಡರ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಅಶೋಕ ತಂದೆ ಅಡೆಪ್ಪಾ ತೆಗಂಪುರೆ ಮುಖ್ಯ ಗುರುಗಳು ಮೌನೇಶ್ವರ ಹಿ.ಪ್ರಾ.ಶಾಲೆ ಜನತಾ ಕಾಲೋನಿ ಭಾಲ್ಕಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.