Police Bhavan Kalaburagi

Police Bhavan Kalaburagi

Thursday, May 16, 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಹಣ ಕಿತ್ತುಕೊಂಡು ಹೋದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ದೇವಿಂದ್ರಪ್ಪ ತಂದೆ ಯಂಕಪ್ಪ ಕಾಶಿರಾಜ್ ಸಾಃ ಹೋಸಕೇರಾ ತಾಃ ಶಹಾಪೂರ ಜಿಃ ಯಾದಗಿರ ರವರು  ದಿನಾಂಕ 15/05/2019 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ಪೂಜ್ಯ ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ನನ್ನ ಸಂದರ್ಶನ (ಇಂಟರವಿವ್ಯೂ) ಇದ್ದ ಪ್ರಯುಕ್ತ ನಾನು ಮತ್ತು ನನ್ನ ಗೆಳೆಯನಾದ ಸಿದ್ದಪ್ಪ ತಂದೆ ಪರಮಣ್ಣ ಕವಲ್ದಾರ ಸಾಃ ರಾಜಾಪೂರ(ಬಿ) ತಾಃ ಶಹಾಪೂರ ಇಬ್ಬರು ಕೂಡಿಕೊಂಡು ನನ್ನ ಗೆಳೆಯನ ಕಾರ ನಂ ಕೆಎ-36 ಎ-7140 ನೆದ್ದರಲ್ಲಿ ಮುಂಜಾನೆ 8.30 ಗಂಟೆಯ ಸುಮಾರಿಗೆ ನಮ್ಮೂರಿನಿಂದ ಹೊರಟಿದ್ದು, ನಾನು ಬರುವಾಗ ಸಂಗಡ ನಗದು ಹಣ 1,00,000/-ರೂಪಾಯಿ ಒಂದು ಬ್ಯಾಗಿನಲ್ಲಿ ಹಾಕಿ ಅದನ್ನು ಕಾರಿನ ಮುಂಭಾಗದ ಡಿಕ್ಕಿಯಲ್ಲಿಟ್ಟುಕೊಂಡು ಕಲಬುರಗಿ ಬಂದು ಕಲಬುರಗಿಯಲ್ಲಿ ಇಂಟರವಿವ್ಯೂ ಕೊಟ್ಟು ನಂತರ ಅದೇ ಕಾರಿನಲ್ಲಿ ಕಲಬುರಗಿಯಿಂದ ನಮ್ಮೂರಿಗೆ ಹೊರಟಿದ್ದು, ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೇದ್ದಾರಿ 218ರ ಕೆಂದ್ರ ಕಾರಾಗೃಹದ ಎದುರುಗಡೆ ಇರುವ ದಾಬಾದಲ್ಲಿ ಊಟಕ್ಕೆಂದು ರೈಸ್ ಪಾರ್ಸಲ್ ಕಟ್ಟಿಸಿಕೊಂಡು ನಂತರ ಅಲ್ಲಿಂದ ಅಂದಾಜು 2.00  ಕಿ.ಮೀ ದೂರು ಬಂದು ಅಂದರೆ ಪಾಣೆಗಾಂವ ಕ್ರಾಸ ಎದುರುಗಡೆ ರೋಡಿನ ಪಕ್ಕದಲ್ಲಿರುವ ಒಂದು ಹೊಲದಲ್ಲಿನ ಬೇವಿನ ಮರದಡಿ ಕುಳಿತು ಊಟ ಮಾಡಿದರಾಯಿತ್ತು ಅಂತಾ ಅಂದುಕೊಂಡು ಬೇವಿನ ಮರದಡಿ ಕಾರ ನಿಲ್ಲಿಸಿ ನಾನು ಮತ್ತು ನನ್ನ ಗೆಳೆಯನಾದ ಸಿದ್ದಪ್ಪ ತಂದೆ ಪರಮಣ್ಣ ಇಬ್ಬರು ಕುಳಿತು ಊಟ ಮಾಡುತ್ತಿದ್ದಾಗ ಸಮಯ ಸುಮಾರು 1.30 ಪಿ.ಎಮದ ಸುಮಾರಿಗೆ ಯಾರೋ ಇಬ್ಬರು ಅಪರಿಚಿತರು ಒಂದು ಕಪ್ಪು ಬಣ್ಣದ ಪಲ್ಸರ ಮೋಟಾರ ಸೈಕಲ ಮೇಲೆ ತಮ್ಮ ಮುಖಕ್ಕೆ ದಸ್ತಿ (ಕರಚೀಫ್) ಕಟ್ಟಿಕೊಂಡು ನಾವಿದ್ದಲ್ಲಿಗೆ ಬಂದು ನಮಗೆ ನೀವು ಯಾರು ಇಲ್ಲಿ ಯಾಕೆ ಕುಳಿತ್ತಿದ್ದಿರಿ ಏನು ಮಾಡುತ್ತಿದ್ದಿರಿ ಅಂತಾ ಕೇಳಿದಾಗ ನಾವು ಅವರಿಗೆ ಊಟ ಮಾಡುತ್ತಿದ್ದೇವೆ ಅಂತಾ ಹೇಳಿದೇವು ನಂತರ ಅವರು ತಮ್ಮ ಹತ್ತಿರ ಇದ್ದ ಚಾಕು ತೋರಿಸಿ ನಿಮ್ಮ ಕಿಸೆಯಲ್ಲಿ ಏನೇನು ಇದೆ ತೆಗೆರಿ ಅಂತಾ ಹೇಳಿದರು ನಾವು ನಮ್ಮ ಹತ್ತಿರ ಏನು ಇಲ್ಲ ಅಂತಾ ಹೇಳಿದಾಗ ಅವರು ನಮ್ಮ ಕಿಸೆಯಲ್ಲಿ ಜಬರದಸ್ತಿಯಿಂದ ಕೈ ಹಾಕಿ ಚೆಕ್ಕ ಮಾಡಿದರು. ಅವರಲ್ಲೊಬ್ಬನು ಸಿದ್ದಪ್ಪನ ಹತ್ತಿರ ಇದ್ದ ನಗದು ಹಣ 400/-ರೂ ಜಬರದಸ್ತಿಯಿಂದ ಕಿತ್ತಿಕೊಂಡನು. ನಂತರ ಇನ್ನೋಬ್ಬನು ನನ್ನ ಕಿಸೆಯಲ್ಲಿದ್ದ ನಗದು ಹಣ 600/-ರೂ ಜಬರದಸ್ತಿಯಿಂದ ಕಿತ್ತಿಕೊಂಡನು. ನಂತರ ಕಾರಿನ ಡೋರ್ ತೆಗಿರಿ ಅಂತಾ ಹೇಳಿ ಅವರು ನಮ್ಮ ಕಾರಿನ ಡೋರ್ ತೆಗೆದರು ಕಾರಿನ ಮುಂಭಾದ ಡಿಕ್ಕಿಯಲ್ಲಿದ್ದ ಹಣದ ಬ್ಯಾಗ ತೆಗೆದುಕೊಳ್ಳಲು ಹೊದಾಗ ನಾನು ಹಣವಿದ್ದ ಬ್ಯಾಗನು ಕಸಿದುಕೊಳ್ಳಲು ಹೊದಾಗ ಅವರು 1,00,000/-ರೂಪಾಯಿ ಹಣವಿದ್ದ ಬ್ಯಾಗನ್ನು ನನ್ನಿಂದ ಜಬರದಸ್ತಿಯಿಂದ ಕಿತ್ತಿಕೊಂಡರು, ನಂತರ ಅವರು ನನ್ನ ಕೈ ಬೆರಳಲ್ಲಿದ್ದ  ಬಂಗಾರ ಉಂಗುರು ಕೊಡು ಅಂತಾ ಜಬರದಸ್ತಯಿಂದ ಕಿತ್ತಿಕೊಳ್ಳಲು ಬಂದಾಗ ನಾನು ತಡೆದು ಉಂಗುರು ಕೊಡುವುದಿಲ್ಲ ಅಂದಿದ್ದಕ್ಕೆ ಅವರುಗಳು ಅಲ್ಲೆ ಬಿದಿದ್ದ ಕಲ್ಲುಗಳು ತೆಗೆದುಕೊಂಡು ನನ್ನ ಬೆನ್ನಿಗೆ, ಕಾಲಿಗೆ, ಭುಜಕ್ಕೆ ಹೊಡೆದರು. ನಂತರ ಅವರು ಅದೇ ಪಲ್ಸರ ಮೋಟಾರ ಸೈಕಲ ಮೇಲೆ ಹೊಲದಲ್ಲಿನ ಕಾಲು ದಾರಿಯಿಂದ ಹೊದರು. ಗಾಬರಿಯಲ್ಲಿ ಮೋಟಾರ ಸೈಕಲ ನಂಬರ ನೋಡಿರುವುದಿಲ್ಲ. ಅವರು ಕನ್ನಡ ಮಾತಾಡುತ್ತಿದ್ದು, ಸದೃಡವಾಗಿದ್ದು, ಅಂದಾಜು ವಯಾ 25-35 ವಯಸ್ಸಿನವರಿರಬಹುದು ನಾವು ಅವರಿಗೆ ನೋಡಿದ್ದಲ್ಲಿ ಗುರ್ತಿಸುತ್ತೇವೆ. ನನಗೆ ಅಷ್ಟೇನು ಪೆಟ್ಟಾಗದ ಕಾರಣ ಆಸ್ಪತ್ರೆಗೆ ಹೊಗುವುದಿಲ್ಲ. ದಿನಾಂಕ 15/05/2019 ರಂದು 1.30 ಪಿ.ಎಮಕ್ಕೆ ರಾಷ್ಟ್ರೀಯ ಹೆದ್ದಾರಿ 218ರ ಪಾಣೆಗಾಂವ ಕ್ರಾಸ ಎದುರುಗಡೆ ಇರುವ ಹೊಲದಲ್ಲಿನ ಬೇವಿನ ಮರದಡಿ ನಾವು ಊಟ ಮಾಡಲು ಕುಳಿತಾಗ ಇಬ್ಬರು ಅಪರಿಚಿತರು ಮೋಟಾರ ಸೈಕಲ ಮೇಲೆ  ಬಂದು ನಮಗೆ ಹೊಡೆ ಬಡೆ ಮಾಡಿ ನಮ್ಮಿಂದ ನಗದು ಹಣ 1,01,000/-ರೂ ಜಬರದಸ್ತಿಯಿಂದ ಕಿತ್ತಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ದತ್ತು  ರವರು .ರಾಜು ತಂದೆ ಗೋಪಾಲ ಜಮಾದಾರ ಸಾ:ಮಡಕಿತಾಂಡ ಇವರ ಹೊಲವನ್ನು ನಾನು ಕಡತಿ ಹಾಕಿಕೊಂಡಿದ್ದು ಸದರಿ ಹೊಲದಲ್ಲಿ ಕಬ್ಬು ಖಾಕಿರುತ್ತೇನೆ. ಇದರ ಬಾಜು ಹಣಮಂತ ತಂದೆ ಗುಂಡಪ್ಪಾ ಧನಗರ ಸಾ:ದಮ್ಮೂರ ಇವರ ಹೊಲ ಇರುತ್ತದೆ, ಸದರಿ ಹೊಲ ನಮ್ಮ ಅಣ್ಣನಾದ ಬಳಿರಾಮ್ ತಂದೆ ಧನಸಿಂಗ್ ಚವ್ಹಾಣ್ ಕಡತಿ ಹಾಕಿಕೊಂಡಿದ್ದು ಹೊಲದಲ್ಲಿ ಅಲಸಂದಿ ಬೆಳೆ ಹಾಕಿರುತ್ತಾರೆ.  ನಾನು ದಿನಾಂಕ: 15/05/2019 ರಂದು ಬೆಳಿಗ್ಗೆ 0830ರ ಸುಮಾರಿಗೆ ನಾನು ಕಡತಿಹಾಕಿಕೊಂಡ ರಾಜು ಇವರ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಹಣಮಂತನ ಹೊಲದಲ್ಲಿ ನಮ್ಮ ತಾಂಡಾದ 1)ತುಕಾರಾಮ್ ತಂದೆ ಧನಸಿಂಗ್ ಚವ್ಹಾಣ್ ಹಾಗೂ ಆತನ ಹೆಂಡತಿ 2)ಪುತಳಾಬಾಯಿ ಗಂಡ ತುಕಾರಾಮ್ ಚವ್ಹಾಣ್,  ಇವರು ತಮ್ಮ ಕುರಿದನಗಳನ್ನು ಬಿಟ್ಟಿದ್ದು, ನಾನು ನೋಡಿ ಅಲ್ಲಿಗೆ ಅವರಿಗೆ ಹೀಗೆ ಬೆಳೆಯಲ್ಲಿ ಕುರಿ ದನ ಬಿಡುವುದು ಸರಿಯಲ್ಲ ಅಂತಾ ಹೇಳಿದಕ್ಕೆ ಅವರಿಬ್ಬರು ನನ್ನ ಸಂಗಡ ಬಾಯಿ ಬಡೆದು, ನನ್ನೊಂದಿಗೆ ಜಗಳ ಮಾಡಿ ತುಕಾರಾಮ್ ನನಗೆ ರಂಡಿಮಗನೆ, ಭೋಸಡಿಮಗೆ ಅಂತಾ ಬೈದು ತಲೆಯ ಮೇಲಿನ ಕುದಲು ಹಿಡಿದು ಒಂದು ಕಲ್ಲು ತಗೆದುಕೊಂಡು ತನ್ನ ಕೈಯಲ್ಲಿ ಹಿಡಿದು ನಿನಗೆ ಬಿಡಂಗಿಲ್ಲ ಸೂಳೆ ಮಗನೆ ಅಂತಾ ಬೈಯುತ್ತ ನನ್ನ ಹೊಟ್ಟೆಯ ಮೇಲೆ ಜೋರಾಗಿ ಗುದ್ದಿ ಗುದ್ದಿ ಭಾರಿ ಗುಪ್ತಗಾಯ ಪಡಿಸಿದನು. ಆಗ ಆತನ ಹೆಂಡತಿ ಪುತಳಬಾಯಿ ಇವಳು ಈ ಹಟ್ಯಾ ಭಾಡಕೋಗಾ ಭಹಳ ಸೊಕ್ಕು ಬಂದಾದ ಅಂತಾ ಬೈದು ಕಲ್ಲಿನಿಂದ ಬೆನ್ನಮೇಲೆ ಜೋರಾಗಿ 2-3 ಸಲ ಗುದ್ದಿದಳು ನನಗೆ ಹೊಟ್ಟೆ ಬೆನ್ನಿಗೆ ಭಾರಿ ಒಳಪೆಟ್ಟಾಗಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ, ಅದೇ ವೇಳೆಗೆ ನನ್ನ ಅಣ್ಣ ಬಳಿರಾಮ ಹಾಗೂ ಆತನ ಮಗ ಯುವರಾಜ್, ಇಬ್ಬರು ಹೊಲಕ್ಕೆ ಬಂದಿದ್ದು, ಅವರೂ ಕೂಡ ಈ ಘಟನೆಯನ್ನು ಸ್ವಲ್ಪ ಧೂರದಿಂದ ನೋಡಿ ನಮ್ಮ ಕಡೆ ಬರುವುದನ್ನು ನೋಡಿ ತುಕಾರಾಮ್ ಹಾಗೂ ಪುತಳಬಾಯಿ ಇವರು ನನಗೆ ಹೊಡೆಬಡೆ ಮಾಡುವುದನ್ನು ಬಿಟ್ಟು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.