Police Bhavan Kalaburagi

Police Bhavan Kalaburagi

Thursday, October 4, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 02-10-2018 ರಂದು  ಗೌರ (ಬಿ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಗೌರ (ಬಿ) ಗ್ರಾಮಕ್ಕೆ ಹೋಗಿ, ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ನಾಗಪ್ಪ ತಂದೆ ಸೈಬಣ್ಣ ಬಡದಾಳ ಸಾ|| ಗೌರ (ಬಿ) ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1380/-  ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ದೊರೆತವು,  ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 01-10-2018 ರಂದು ರಾತ್ರಿ ಹವಳಗಾ ಗ್ರಾಮದ ಭೀಮಾ ನದಿಯಲ್ಲಿ ಅನದಿಕೃತವಾಗಿ ಟಿಪ್ಪರಗಳಲ್ಲಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದಿದೆ ದಾಳಿ ಮಾಡಿಕೊಂಡು ಬರಲು ಆದೇಶಿಸಿದ ಮೇರೆಗೆ, ನಾನು ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ ಮಾರ್ಗದರ್ಶನದಂತೆ ದಾಳಿ ಮಾಡುವ ಕುರಿತು ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹವಳಗಾ ಗ್ರಾಮದ ನದಿಯ ಕಡೆಗೆ ಹೋಗುತ್ತಿದ್ದಾಗ ಹವಳಗಾ ಗ್ರಾಮದ ಹೊರವಲಯದಲ್ಲಿರುವ ಬಸವಣ್ಣ ದೆವರ ಕಟ್ಟೆಯ ಹತ್ತಿರ ಎದುರುಗಡೆಯಿಂದ ವಾಹನಗಳು ಬರುತ್ತಿದ್ದು, ಸದರಿ ವಾಹನಗಳನ್ನು ನಿಲ್ಲಿಸುವಂತೆ ನಾವು ಕೈ ಸೂಚನೆ ಕೊಟ್ಟಾಗ ಎದುರುಗಡೆಯಿಂದ ಎರಡು ಟಿಪ್ಪರಗಳು ಬರುತ್ತಿದ್ದು, ಸದರಿ ಟಿಪ್ಪರಗಳ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ಟಿಪ್ಪರಗಳನ್ನು ನಿಲ್ಲಿಸಿ ಕತ್ತಲಲ್ಲಿ ಓಡಿ ಹೊದರು, ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳನ್ನು ಚೆಕ್ ಮಾಡಲಾಗಿ ಎರಡು ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದವು. ಸದರಿ ಟಿಪ್ಪರಗಳ ನಂ 1) ಟಿಪ್ಪರ ನಂ ಕೆಎ-32 ಸಿ-9010 ಟಿಪ್ಪರ ಅಕಿ 10,00,000/-ರೂ. ಸದರಿ ಟಿಪ್ಪರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 15,000/- ರೂ ಆಗಬಹುದು. 2) ಟಿಪ್ಪರ ನಂ ಕೆಎ-32 ಸಿ-7150 ಟಿಪ್ಪರ ಅಕಿ 10,00,000/-ರೂ. ಸದರಿ ಟಿಪ್ಪರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 15,000/- ರೂ ಆಗಬಹುದು. ನಂತರ ಸದರಿ ಟಿಪ್ಪರಗಳನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 12-09-2018 ರಂದು ರಾತ್ರಿ ನನ್ನ ಮಗನಾದ ಹೃಷಿಕೇಶ ಇತನು ಯಮಹಾ ಆರ ಎಕ್ಸ-100 ಮೋಟಾರ ಸೈಕಲ ನಂಬರ ಎಪಿ-09-ಇ-4940 ನೇದ್ದನ್ನು ಚಲಾಯಿಸಿಕೊಂಡು ಕೋಠಾರಿ ಭವನ ಸಿಟಿ ಬಸ್ಸ ನಿಲ್ದಾಣ ಕಡೆಯಿಂದ ವೆಂಕಟೇಶ್ವರ ನಗರ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರೋಡ ಎಡ ಬಲ ಕಟ್ ಹೊಡೆಯುತ್ತಾ ಹೋಗಿ ಎಸ ಕೋಠಾರಿ ಭವನದ ಹಿಂದುಗಡೆ ಬರುವ ಸೌಂಧರ್ಯ ಬ್ಯೂಟಿ ಪಾರ್ಲರ ಎದುರಿನ ರೋಡ ಮೇಲೆ ಒಮ್ಮಲೆ ಕಟ್ ಹೊಡೆದು ಬ್ರೇಕ ಹಾಕಿ ಮೋಟಾರ ಸೈಕಲ ಸ್ಕಿಡ್ ಮಾಡಿ ಅಪಘಾತ ಮಾಡಿ ಭಾರಿಗಾಯಹೊಂದಿದ್ದು ಹೃಷಿಕೇಶ ಇತನಿಗೆ ಸತ್ಯ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಸೋಲಾಪೂರದ ಬಲವಂತ ಇನ್ಸಟೂಟ ಆಫ್ ನ್ಯೂರೋ ಸರ್ಜರಿ ಇನಟೇನ್ಸಿವ ಟ್ರಾಮಾ ಕೇರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಡಾ|| ಮೋಹನರಾವ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 29/09/18 ರಂದು ರಾಷ್ಟ್ರೀಯ ಹೇದ್ದಾರಿ 218 ಫಿರೋಜಾಬಾದ ದರ್ಗಾ ಹತ್ತಿರ ನಮ್ಮ ಕಾರ ನಂ ಕೆಎ 28 ಎನ್ 6540 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿ ಕಡೆಗೆ ಹೋಗುವಾಗ  ಯಾವುದೋ ಒಂದು ಬಾರಿ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರಿನ ಹಿಂದೆ  ಡಿಕ್ಕಿಪಡಿಸಿದ್ದರಿಂದ ಸದರಿ ಕಾರು ಜಖಂಗೊಂಡಿರುತ್ತದೆ ಅಂತಾ ಶ್ರೀ ಸಮೀರ ತಂದೆ ಶ್ಯಾಮರಾವ ಕುಲಕರ್ಣಿ ಸಾ: ಮ ನಂ 20 ಪದ್ಮಾವತಿ ನಿವಾಸ ರಾಘವೇಂದ್ರ ಕಾಲನಿ ಬಾಗಲಕೋಟ ರಸ್ತೆ ವಿಜಯಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು ರಾತ್ರಿ 11:00 ಪಿ.ಎಮ್ ದಿಂದ ದಿ: 01-10-2018 ರಂದು 07:00 ಎ.ಎಮ್ ಮಧ್ಯದ ಅವಧಿಯಲ್ಲಿ ಕರಜಗಿ ಗ್ರಾಮ ಹತ್ತಿರ ಇರುವ ದಾಬಾದಲ್ಲಿ ಇರುವ ಒಂದು ಎಲ್.ಇ.ಡಿ. ಟಿ.ವಿ ಅಕಿ- 50,000/-, ಒಂದು ನೀರು ಎತ್ತುವ ಮೋಟಾರ ಅಕಿ-5000/- ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಹಾಗೂ ದಾಬಾದ ಹೊರಗಡೆ ಬಾಗಿಲು ಹತ್ತಿರ ಒಂದು ಮಚ್ಚು ಬಿದ್ದಿರುತ್ತದೆ. ನಾನೊಬ್ಬ ರಾಜಕೀಯ ಪಕ್ಷದ ಕಾರ್ಯಕರ್ತನಿದ್ದು ನಾಯಕನಾಗಿ ಗ್ರಾಮದಲ್ಲಿ ಭಾರಿ ಜನ ಬೆಂಬಪಡೆದು ಕೆಲವ ದಿನಗಳಲ್ಲಿ ಜನಮನ್ನಣೆ ಗಳೆಸಿರುತ್ತೇನೆ. ಎದುರಾಳಿಗಳು ಮತ್ತು ನನ್ನ ಏಳಿಗೆಯನ್ನು ಸಹಿಸದ ಕಿಡಿಗೇಡಿಗಳು ಈ ಕೃತ್ಯ ಮಾಡಿರುತ್ತಾರೋ ಹೇಗೊ ಎಂಬ ಬಗ್ಗೆ ಗೊತ್ತಾಗಿರುವುದಿಲ್ಲಾ ಈಗ ಎರಡು ವರ್ಷಗಳ ಹಿಂದ ನನ್ನ ಮೋಟಾರ ಸೈಕಲ ಸಹ ಕಳ್ಳತನವಾಗಿರುತ್ತದೆ. ಅಂತಾ ಶ್ರೀ ಬೀಮಾಶಂಕರ ತಂದೆ ಸಾಯಬಣ್ಣ ಹೊನಕೇರಿ ಸಾ: ಕರಜಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಹುಣಚಪ್ಪ ತಂದೆ ಮಹಾಂತಪ್ಪ ಪೂಜಾರಿ ಸಾ. ಫರಹತಾಬಾದ ತಾ: ಜಿ:  ಕಲಬುರಗಿ ರವರು  ದಿನಾಂಕ 01/10/18 ರಂದು ಬೆಳಿಗ್ಗೆ ಎತ್ತಿನ ಬಂಡಿ ತಗೆದುಕೊಂಡು ಹೊಲಕ್ಕೆ ಹೋಗಿ ನಮ್ಮ ಹೊಲದ ಬಂದಾರಿಯ ಮೇಲಿನ ಗಿಡ ತುಂಡು ಮಾಡಿ ಬಂಡಿಯಲ್ಲಿ ಹಾಕಿಕೊಂಡು ನಮ್ಮ ಹೊಲದ ಬಂದಾರಿಯ ಮುಖಾಂತರ ಮನೆಗೆ ಬರುವಾಗ ಪಕ್ಕದ ಹೊಲದ  1) ಶಿವಣ್ಣ ಪೂಜಾರಿ 2) ಯಲ್ಲಪ್ಪ,  3) ನಾಗಪ್ಪ, 4) ಮಲ್ಲೇಶಪ್ಪ, 5) ಭಾಗೇಶ,  6) ನೀಲಮ್ಮ, 7) ಸರುಬಾಯಿ, 8) ಪದ್ಮಾ, 9) ಶಾಂತಾಬಾಯಿ  ಸಾ: ಎಲ್ಲರೂ ಫರಹತಾಬಾದ ಗ್ರಾಮದವರು ಕೂಡಿಕೊಂಡು ಬಂದು ಈ ಸೂಳೆ ಮುಗನದು ಬಹಳ ನಡಿದಿದೆ ಇವನಿಗೆ ಮುಗಿಸಿ ಬಿಡೋಣ ಅಂತಾ ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಗಳಿಂದ ತಲೆಯ ಮೇಲೆ ಜೋರಾಗಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.