Police Bhavan Kalaburagi

Police Bhavan Kalaburagi

Saturday, June 12, 2021

BIDAR DISTRICT DAILY CRIME UPDATE 12-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-06-2021

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ದೇವಿಲಾಲ ತಂದೆ ಸಗನಜೀ ಜಾಟ ವಯ: 38 ವರ್ಷ, ಜಾತಿ: ಜಾಟ, ಉ: ಐಸಕ್ರಿಂ ಬಂಡಿ, ಸಾ: ಗುರುಜನಿಯ್ಯ (ರಾಜ್ಯಸ್ಥಾನ), ಸದ್ಯ: ನೌಬಾದ ಬೀದರ ರವರು ನೌಬಾದನಲ್ಲಿ ಐಸಕ್ರಿಂ ಬಂಡಿ ಇಟ್ಟುಕೊಂಡು  ವ್ಯಾಪಾರ ಮಾಡಿಕೊಂಡಿದ್ದು, ಫಿರ್ಯಾದಿಯಂತೆ ಸಾವರಮಲ್ ತಂದೆ ಮಾಧವಲಾಲಜಿ ಜಾಟ ವಯ: 45 ವರ್ಷ, ಜಾತಿ: ಜಾಟ, ಉ: ಐಸಕ್ರಿಂ ಬಂಡಿ, ಸಾ: ಲಾಲಡಿಯಾ (ರಾಜ್ಯಸ್ಥಾನ), ಸದ್ಯ: ಅಯಾಸಪೂರ ರವರು ಆಯಾಸಪೂರ ಕ್ರಾಸ ಹತ್ತಿರ ಐಸಕ್ರಿಂ ಬಂಡಿ ಇಟ್ಟಿಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 11-06-2021 ರಂದು ಫಿರ್ಯಾದಿಯವರಗೆಳೆಯ ಮುಖೇಸ ರಾಜ್ಯಸ್ಥಾನ ಇತನು ಕರೆ ಮಾಡಿ ಸಾವರಮಲಗೆ ಏನಾಗಿದೆ ಹೋಗಿ ನೋಡಿ ಅಂತ ಹೇಳಿದಾಗ ಫಿರ್ಯಾದಿಯು ಕೂಡಲೇ ಸಾವರಮಲ್ ಇತನು ಇರುವ ಆಯಾಸಪೂರದ ಬಾಡಿಗೆ ಮನೆಗೆ ಹೋಗಿ ನೊಡಲು ಅಲ್ಲಿ ಸಾವರಮಲ್ ಇತನು ಬಂಡಿಗೆ ಚಾರ್ಜ ಹಚ್ಚಲು ಹೋದಾಗ ಕೈಯಲ್ಲಿ ವಿದ್ಯೂರ್ ಸಂಪರ್ಕ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಸದರಿ ಘಟನೆ ಆಕಸ್ಮೀಕವಾಗಿದ್ದು ಆತನ ಸಾವಿನಲ್ಲಿ ಯಾರ ಮೇಲೆ ದೂರು ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 66/2021, ಕಲಂ. 304(ಎ) ಐಪಿಸಿ :-

ಫಿರ್ಯಾದಿ ಸವೀತಾ ಗಂಡ ದೇವಿದಾಸ ಭದಾಡೆ ಸಾ: ಶಿವಣಿ, ತಾ: ಭಾಲ್ಕಿ ರವರ ಗಂಡನಾದ ದೇವಿದಾಸ ತಂದೆ ಗೋಪಾಳರಾವ ಇವರು ಗ್ರಾಮದಲ್ಲಿ 10 ವರ್ಷದಿಂದ ಲೈನ ಮ್ಯಾನ ಕೆಳಗೆ ಎಲೇಕ್ಟ್ರಿಶನ ಕೆಲಸ ಮಾಡಿಕೊಂಡಿರುತ್ತಾರೆ, ಹಿಗಿರುವಾಗ ದಿನಾಂಕ 11-06-2021 ರಂದು ತಮ್ಮೂರ ಅನೀಲ ಲೈನಮ್ಯಾನ ರವರು ಫಿರ್ಯಾದಿಯವರ ಮನೆಗೆ ಬಂದು ಕರೆಂಟ ಕಂಬದ ಮೇಲೆ ಕೆಲಸ ವಿದೆ ನಿನಗೆ ಕೂಲಿ ಹಣ ಕೊಡುತ್ತೇನೆ ಅಂತ ಹೇಳಿ ಮನೆಯಿಂದ ಕೆಲಸಕ್ಕೆ ಕರೆದುಕೊಂಡು ಹೋಗಿರುತ್ತಾರೆ, ನಂತರ ಅನೀಲ ಲೈನಮ್ಯಾನ ರವರು ಮನೆಗೆ ಬಂದು ತಿಳಿಸಿದ್ದೇನೆಂದರೆ ದೇವಿದಾಸ ಇವರು ತಮ್ಮೂರ ಶಿವಾರದ ಶನಿಮಹಾತ್ಮಾ ದೇವಸ್ಥಾನ ಹತ್ತಿರ ವಿದ್ಯೂತ ಕಂಬದ ಮೇಲೆ ಎರಿ ಕರೆಂಟ ಕೆಲಸ ಮಾಡುವಾಗ ಗಂಡನಿಗೆ ಕರೆಂಟ ಹತ್ತಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ, ನಂತರ ಫಿರ್ಯಾದಿಯು ತನ್ನ ಮಗ ಸಂದೀಪ ಮತ್ತು ಅಭಂಗ ಭದಾಡೆ, ಹನೀಫ ಪಟೇಲ ರವರೆಲ್ಲರೂ ಕೂಡಿ ಸ್ಥಳಕ್ಕೆ ಹೋಗಿ ನೋಡಲು ಗಂಡನಿಗೆ ಕರೆಂಟ ಹತ್ತಿ ಕಂಬದ ಹತ್ತಿರ ಬಿದ್ದು ಮೃತಪಟ್ಟಿರುತ್ತಾರೆ, ತನ್ನ ಗಂಡನಿಗೆ ಕರೆಂಟ ಹತ್ತಿದ್ದರಿಂದ ಹಣೆಯ ಮೇಲೆ, ಮುಖದ ಮೇಲೆ, ಕುತ್ತಿಗೆಯ ಸುತ್ತಲು, ಎದೆಯ ಮೇಲೆ, ಬಲಗಾಲ ಮೋಳಕಾಲ ಮೇಲೆ ಸುಟ್ಟಿದ ಗಾಯಗಳು ಆಗಿರುತ್ತವೆ, ಕಾರಣ ಗಂಡ ದೇವಿದಾಸ ಇವರಿಗೆ ಅನೀಲ ಲೈನಮ್ಯಾನ ಹಾಗೂ ಮಹೇಬೂಬ ಜೆ.ಇ. ರವರು ಯಾವುದೇ ಸುರಕ್ಷಿತ ತಿಳಿಸದೇ, ಮುಂಜಾಗ್ರತೆ ಕ್ರಮ ಕೈಗೊಳ್ಳದೇ ನಿಷ್ಕಾಳಜಿಯಿಂದ ವಿದ್ಯೂತ ಕಂಬದ ಮೇಲೆ ಎರಲು ಹೇಳಿ ಕೆಲಸ ಮಾಡಲು ತಿಳಿಸಿದ್ದರಿಂದ ಗಂಡನಿಗೆ ಕರೆಂಟ ಹತ್ತಿ ಮೃತಪಟ್ಟಿರುತ್ತಾರೆ, ಈ ಬಗ್ಗೆ ಅನೀಲ ಲೈನಮ್ಯಾನ ಮತ್ತು ಮಹೇಬೂಬ ಜೆ.ಇ. ರವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 65/2021, ಕಲಂ. 379 ಐಪಿಸಿ :-

ದಿನಾಂಕ 15-05-2021 ರಂದು ರಾತ್ರಿ 0015 ಗಂಟೆ¬0 0400 ಗಂಟೆಯ ಅವಧಿಯಲ್ಲಿ ಸಾಯಿನಗರ ನೌಬಾದನಲ್ಲಿರುವ ಫಿರ್ಯಾದಿ ಜಗದೀಶ ತಂದೆ ಕಾಶಿನಾಥ ವಯ: 33 ವರ್ಷ, ಜಾತಿ: ಲಿಂಗಾಯತ, ಸಾ: ಸಾಯಿನಗರ ನೌಬಾದ ಬೀದರ ರವರು ತನ್ನ ಮನೆಯ ಮುಂದೆ  ನಿಲ್ಲಿಸಿದ ನ್ನ ಬಜಾಜ ಲ್ಸರ್ ಮೋಟಾರ್ ಸೈಕಲ  ನಂ. ಕೆಎ-38/ಎಸ್-6524, ಚಾಸಿಸ್ ನಂ. MD2A11CZ3GWA00144, ಇಂಜಿನ್ ನಂ. DHZWGA07277 , ಮಾಡಲ್ 2016, ಬಣ್ಣ: ಕೆಂಪು ಮತ್ತು ಕರಿ ಮಿಶ್ರಿತ ಬಣ್ಣ, ಅ.ಕಿ 27,000/- ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 11-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 89/2021, ಕಲಂ. 380 ಐಪಿಸಿ :-

ಫಿರ್ಯಾದಿ ವಿಶಾಲ ಕುಲಕರ್ಣಿ ತಂದೆ ವಿಜಯಕುಮಾರ ವಯ: 24 ವರ್ಷ, ಜಾತಿ: ಬ್ರಾಹ್ಮಣ, ಸಾ: pflAqf ನಂ. 15 ರಾಮಪೂರೆ ಬ್ಯಾಂಕ ಕಾಲೋನಿ ಬೀದರ ರವರು ತಮ್ಮ ಮನೆಯ ಕಿಟಕಿಯಲ್ಲಿ ಇಟ್ಟಿದ್ದ 1) APPLE MACBOOK AIR M1 LAPTOP SERIAL NO. SC02FMBVUQ6L4 ಅ.ಕಿ 86,000/- ರೂ., 2) ASUS ROG MOBILE PHONE IMEI NO. 358298100383379 ಅ.ಕಿ 30,000/- ರೂ. ಹಾಗೂ 3) ನಗದು ಹಣ 5000/- ರೂ. ಹೀಗೆ ಒಟ್ಟು 1,21,00/- ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ದಿನಾಂಕ 11-06-2021 ರಂದು 0200 ಗಂಟೆಯಿಂದ 0600 ಗಂಟೆಯ ಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.