ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-12-2019
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 109/2019, ಕಲಂ. 279, 338 ಐಪಿಸಿ & 187 ಐಎಂವಿ ಕಾಯ್ದೆ :-
ದಿನಾಂಕ 15-12-2019 ರಂದು ಫಿರ್ಯಾದಿ ಸೈಯದ್ ಫಯಾಜ ಅಹಮದ ತಂದೆ ಸೈಯದ ಯುನುಸ ಸಾ: ಪನ್ಸಾಲ್ ತಾಲೀಮ ಬೀದರ ರವರು ತನ್ನ ಗೆಳೆಯನಾದ ಸೈಯದ್ ಶಾ ಅಬು ಸೈಯದ್ ಖಾದ್ರಿ ತಂದೆ ಸೈಯದ್ ಖುತಬೋದ್ದಿನ್ ಖಾದ್ರಿ ಸಾ: ವಿಸ್ಡಮ್ ಶಾಲೆ ಹತ್ತಿರ ನಯಾಕಮಾನ, ಬೀದರ ರವರೊಂದಿಗೆ ಸೈಯದ್ ಶಾ ಅಬು ರವರ ಮೋಟಾರ್ ಸೈಕಲ್ ನಂ. ಕೆಎ-38/ಕ್ಯೂ-4235 ನೇದರ ಮೇಲೆ ಮಲ್ಕಾಪುರ ರಿಂಗರೋಡ ಕಡೆಯಿಂದ ದೇವದೇವ ವನದ ರಿಂಗ್ರೋಡ ಮುಂದೆ ಬಂದಾಗ ಟ್ರ್ಯಾಕ್ಟ್ರ್ ವಾಹನ ಸಂ. ಕೆಎ-38/ಟಿ-4382 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಗೆ ಎಡಗಾಲು ಮೊಳಕಾಲಿನ ಕೆಳಗೆ ಕಾಲು ಮುರಿದು ಭಾರಿ ರಕ್ತಗಾಯ, ಬಲಗೈ ಮೊಳಕೈಗೆ ತರಚಿದ ರಕ್ತಗಾಯ, ಬಲಗೈ ಮುಂಗೈಗೆ ತರಚಿದ ರಕ್ತಗಾಯ, ಬಲಗಾಲಿನ ಮೊಳಕಾಲಿಗೆ ತರಚಿತ ರಕ್ತಗಾಯ ಮತ್ತು
ಎಡಗಾಲಿನ ಹೆಬ್ಬೆಟ್ಟಿಗೆ ತರಚಿದ ರಕ್ತಗಾಯವಾಗಿರುತ್ತದೆ, ಆರೋಪಿತನು ತನ್ನ ಟ್ರಾಕ್ಟರನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ.
190/2019, ಕಲಂ. 379
ಐಪಿಸಿ :-
ದಿನಾಂಕ 15-12-2019
ರಂದು ಮನಿಷಾ ಗಂಡ ಅಶೋಕ ಸಾ: ಪಟಲೂರ, ಮಂಡಲ: ಮರಪಲ್ಲಿ ಮನಿಷಾ ಗಂಡ ಅಶೋಕ ವಯ: 23 ವರ್ಷ, ಜಾತಿ: ಯಾದವ,
ಸಾ: ಪಟಲೂರು, ಮಂಡಲ: ಮರಪಲ್ಲಿ, ಜಿಲ್ಲಾ: ವಿಕಾರಾಬಾದ ರವರು ತಮ್ಮ ಕುಟುಂಬದ ಜೊತೆಯಲ್ಲಿ ಮೈಲಾರ
ಮಲ್ಲಣ್ಣನ ಜಾತ್ರೆಗೆ ತಮ್ಮ ಕಾರಿನಲ್ಲಿ ಬಂದು ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ
ಎಲ್ಲರು ಖಾನಾಪೂರದ ಮೈಲಾರ ಮಲ್ಲಣ್ಣನ ದರ್ಶನ ಪಡೆಯುವು ಕುರಿತು ಗುಂಡಿಯ ಹತ್ತಿರ ದರ್ಶನಕ್ಕೆ
ಇದ್ದ ಲೈನದಲ್ಲಿ ನಿಂತಿದ್ದು, ದರ್ಶನದ ಲೈನಿನಲ್ಲಿ ನೂಕು ನೂಗ್ಗಲು ಬಹಾಃ ಇದ್ದು, ಸದರಿ ನೂಕು
ನೂಗ್ಗಲಿನಲ್ಲಿ ಫಿರ್ಯಾದಿಯವರ ಕೊರಳಲ್ಲಿ ತಾಳಿಯ ಜೊತೆಯಲ್ಲಿದ್ದ 3 ತೊಲೆ 6 ಗ್ರಾಮ ಬಂಗಾರದ ತಾಳಿ
ಇದ್ದ ಚೈನನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ, ಸದರಿ ಬಂಗಾರದ ತಾಳಿ ಅ.ಕಿ 1,20,000/- ರೂ.
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳಲಾಗಿದೆ.