Police Bhavan Kalaburagi

Police Bhavan Kalaburagi

Monday, May 4, 2020

BIDAR DISTRICT DAILY CRIME UPDATE 04-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 04-05-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 60/2020 ಕಲಂ 32, 34 ಕರ್ನಾಟಕ  ಅಬಕಾರಿ ಕಾಯ್ದೆ :-

ದಿನಾಂಕ:03/05/2020 ರಂದು 10;30 ಗಂಟೆಗೆ  ನಾನು ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಭಾತ್ಮಿದಾರರಿಂದ ಪೋನ್ ಮುಖಾಂತರ ಖಚಿತ ಭಾತ್ಮಿ ತಿಳಿದುಬಂದಿದ್ದೆನೆಂದರೆ ಬಸವಕಲ್ಯಾಣ ನಗರದ ಪರತಾಪೂರ ರಸ್ತೆಯ ಬದಿಯಲ್ಲಿರುವ ರೆಡ್ಡಿ ಧಾಭಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು  ತಮ್ಮ  ಹತ್ತಿರ ಕಳ್ಳಭಟ್ಟಿ ಸರಾಯಿವುಳ್ಳ ಬಿಳಿ ಬಣ್ಣದ ಕ್ಯಾನ್ ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಬಂದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಇಬ್ಬರನ್ನು ಹಿಡಿದು ವಿಚಾರಿಸಲು  1]ಮಹ್ಮದ ಶಬ್ಬಿರ ತಂದೆ ಮಹ್ಮದ ಯುಸುಫ್ ತಾಂಬೊಲೆವಾಲೆ ವಯಸ್ಸು:39 ವರ್ಷ ಜಾತಿ:ಮುಸ್ಲಿಂ  2] ರಾಜು ತಂದೆ ರೋಪಹಿದಾಸ ಗಾಯಕವಾಡ ವಯಸ್ಸು:35 ವರ್ಷ ಜಾತಿ: ಎಸ್.ಸಿ ದಲಿತ  ಇವರುಗಳಿಂದ  05 ಲೀಟರ   ಕಳ್ಳಭಟ್ಟಿ ಸರಾಯಿ   ಅಂದಾಜು ಕಿಮ್ಮತ್ತು 1500/-ರೂ ನೇದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬಸವಕಲ್ಯಾಣ ಗ್ರಾಮೀಣ ಪೊಲೀಸ್  ಠಾಣೆ ಯು.ಡಿ.ಆರ್. ಸಂಖ್ಯೆ 05/2020 ಕಲಂ 174 ಸಿಆರ್ಪಿಸಿ :-

ದಿನಾಂಕ 03-05-2020 ರಂದು 1900 ಗಂಟೆಗೆ ಫಿರ್ಯಾದಿ ಅಸ್ಮಾ ಬೇಗಂ ಗಂಡ ಮಹ್ಮದ ಅಜರೋದ್ದಿನ ಮೋಮಿನ ವಯ 28 ವರ್ಷ ಉದ್ಯೋಗ ಮನೆ ಕೆಲಸ ಸಾ: ರಾಜೇಶ್ವರ ಗ್ರಾಮ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನಿಡಿದರ ಸಾರಾಂಶವೆನೆಂದರೆ   ಇವರ ಗಂಡ ಮಹ್ಮದ ಅಜರೋದ್ದಿನ ಇವರು ಹುಮನಾಬಾದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಅಟೆಂಡರ ಕೆಲಸ ಮಾಡುತ್ತಾರೆ.  ದಿನಾಂಕ 03-05-2020 ರಂದು ಸಾಯಾಂಕಾಲ 1700 ಗಂಟೆಗೆ ಇವರ ಪತಿ ಮಹ್ಮದ ಅಜರೋದ್ದಿನ ಇವರು ಮನೆಯ ಅಂಗಳದಲ್ಲಿ ನಿಂತಿದರು ಇದೆ ವೇಳಗೆ ಗಾಳಿ ದೂಳು ಬಂದಿದ್ದರಿಂದ ಅಂಗಳದಲ್ಲಿ ಹಾಕಿದ ಕರೆಂಟ ವೈರ ಅಕಷ್ಮಿಕವಾಗಿ ಕಟ್ ಆಗಿ ಅಜರೋದ್ದಿನ ಇವರ ಎಡಗೈ   ಮೇಲೆ ಬಿದ್ದರಿಂದ ಇವರಿಗೆ ಕರೆಂಟ ಹತ್ತಿ ಅಲ್ಲೆ ಅಂಗಳದಲ್ಲಿ ಬಿದ್ದಾಗ ಚಿಕಿತ್ಸೆ ಕುರಿತು ಬಸವಕಲ್ಯಾಣ ಪಟ್ಟಣ ನ್ಯೂ ರೀಫಾ ಖಾಸಗಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಫಿರ್ಯಾದಿ ಪತಿ ಮಹ್ಮದ ಅಜರೋದ್ದಿನ ವಯ: 35 ವರ್ಷ  ಇವರು   ದಿನಾಂಕ 03-05-2020 ರಂದು 1800 ಗಂಟೆಗೆ ನ್ಯೂ ರೀಫಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.