ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-07-2020
ಭಾಲ್ಕಿ ನಗರ
ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/2020 ಕಲಂ 174 ಸಿ.ಆರ್.ಪಿ.ಸಿ. :-
ದಿನಾಂಕ 15/07/2020 ರಂದು 1100 ಗಂಟೆಗೆ ಫಿರ್ಯಾದಿ ಶ್ರಿಮತಿ
ನಾಗೂಬಾಯಿ ಗಂಡ ತಾತೆರಾವ ಮಾನಕಾರಿ ವಯ: 75 ವéರ್ಷ ಸಾ:ನೇಲವಾಡ ಸದ್ಯ
ಲೆಕ್ಚರ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶ ವೆನೆಂಶದರೆ ಇವರ ಪತಿಯು
ಶಿಕ್ಷಕರಾಗಿದ್ದರು 2003 ರಲ್ಲಿ ನಿವೃತ್ತ ಹೋಂದಿದರು ದಿನಾಂಕ 14/07/2020 ರಂದು ಬೆಳಿಗ್ಗೆ
10 ಗಂಟೆ
ಸುಮಾರಿಗೆ ಇವರ ಪತಿಯು ಕೈಕಾಲು ಮತ್ತು ಬೆನ್ನು ಹಾಗೂ ಎದೆನೋವು ಆಗುತ್ತಿದೆ ಅಂತಾ ತಿಳಿಸಿದರಿಂದ
ಕೂಡಲೆ ವಿಜಯಕುಮಾರ ತಡಪಳ್ಳೆ ರವರ ಆಸ್ಪತ್ರೆಗೆ ಒಯ್ದು ಉಪಚಾರ ಮಾಡಿಸಿಕೊಂಡು ಮರಳಿ ಸ್ವಂತೂರಾದ
ನೇಲವಾಡ ಗ್ರಾಮಕ್ಕೆ ಹೋಗಿದ್ದು ಬೆಳಿಗ್ಗೆ 5 ಗಂಟೆಗೆ ಪುನಃ ಎದೆ ನೋವು
ಆಗುತ್ತಿದೆ ಅಂತಾ ತಿಳಿಸಿದರಿಂದ ಉಪಚಾರ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ
ಮಾಡಿದಾಗ ವೈಧ್ಯರು ಪರೀಕ್ಷೆ ಮಾಡಿ ಈಗಾಗಲೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದರು.
ಆಸ್ಪತ್ರೆಗೆ ತರುವಾಗ ಅಂದಾಜು 6:30 ಗಂಟೆ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಮೃತ
ಪಟ್ಟಿರುತ್ತಾರೆ. ನನ್ನ ಗಂಡ ತಾತೆರಾವ ಹೃದಯಘಾತದಿಂದ ಮೃತ ಪಟ್ಟಿದ್ದು ಅವರ ಸಾವಿನ ಬಗ್ಗೆ
ನನ್ನದು ಯಾರ ಮೇಲೆ ಯಾವುದೆ ತರಹದ ದೂರು ಅಥವಾ ಸಂಶಯ ಇರುವದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ
ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂತಪುರ
ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/2020 ಕಲಂ 174
ಸಿಆರ್.ಪಿ.ಸಿ.:-
ದಿನಾಂಕ 14/07/2020 ರಂದು ಶ್ರೀಮತಿ ದೀಪಿಕಾ ಗಂಡ ರವಿ@ಬಂಬಗೊಂಡ ವ/ 26 ವರ್ಷ ಜಾ/ ಎಸ್,ಟಿ ಗೊಂಡ ಸಾ/ ಕೌಠಾ(ಬಿ) ರವರು ತಮ್ಮ ಹೋಲದಲ್ಲಿ ಕೇಲಸ
ಮುಗಿಸಿಕೊಂಡು ಮನೆಗೆ ಬರುವಾಗ ಅವರ ಹೋಲದಲ್ಲಿ ಬಲಗಾಲ ಹೆಬ್ಬಟಿನ ಹತ್ತಿರ ಹಾವು ಕಚ್ಚಿದ್ದರಿಂದ
ಚಿಕಿತ್ಸೆ ಕುರಿತು ಅವಳಿಗೆ ಬೀದರ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು ದಿನಾಂಕ 15/07/2020 ರಂದು 01.55 ಗಂಟೆಗೆ ದೀಪಿಕಾ ಇವಳು ಚಿಕಿತ್ಸೆ
ಕಾಲಕ್ಕೆ ಗುಣ ಮುಖವಾಗದೆ ಮೃತ ಪಟ್ಟಿರುತ್ತಾಳೆ ಅಂತಾ ಮೃತಳ ತಾಯಿ ಶ್ರೀದೇವಿ ಗಂಡ ತಿಪ್ಪಣ್ಣಾ
ಸಾ/ಗೋಡಂಪಳ್ಳಿ ರವರು ನೀಡಿದ ದೂರಿನ ಮೇರೆಗೆ ಯು.ಡಿ.ಆರ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.