ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-11-2019
ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 27/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 14-11-2019
ರಂದು ಗಂಗೂಬಾಯಿ ಗಂಡ ರಾಮಚಂದ್ರ ಮಡಿವಾಳ ಸಾ: ನವಲಾಸಪೂರ ಗ್ರಾಮ, ತಾ: ಜಿ: ಬೀದರ ರವರ ಗಂಡನಾದ ರಾಮಚಂದ್ರ ಮಡಿವಾಳ ರವರು ಕಳೆದ 3 ವರ್ಷಗಳಿಂದ ಹೊಟ್ಟೆ ಬೇನೆಯಿಂದ ನರಳುತ್ತಿದ್ದು, ಆಸ್ಪತ್ರೆಗೆ ತೋರಿಸಿದರು ಸಹ ಕಡಿಮೆ ಆಗಿರುವುದಿಲ್ಲ, ಹೊಟ್ಟೆಬೇನೆ ಎದ್ದಾಗಲೆಲ್ಲ ಈ ಬೇನೆ ನನಗೆ ಬಿಡುವುದಿಲ್ಲ ಸಾಯುವುದೆ ಉತ್ತಮ ಅಂತಾ ಹೇಳುತ್ತಿದ್ದರು ಹೀಗಿರುವಾಗ ದಿನಾಂಕ 13-11-2019
ರಂದು ಫಿರ್ಯಾದಿ ಹಾಗೂ ಫಿರ್ಯಾದಿಯವರ ಅತ್ತೆ, ಮಾವ ರವರು ಊಟ ಮಾಡಿಕೊಂಡು ಪಡಸಾಲೆಯಲ್ಲಿ ಮಲಗಿಕೊಂಡಾಗ ಗಂಡ ರಾಮಚಂದ್ರ ದೇವರ ಮನೆಯಲ್ಲಿ ಮಲಗಿಕೊಂಡಿದ್ದು,
ನಂತರ ದಿನಾಂಕ
14-11-2019 ರಂದು ಫಿರ್ಯಾದಿಯು ಮೂತ್ರ ವಿಸರ್ಜೆನೆಗಾಗಿ ಎದ್ದಾಗ ಗಂಡ ದೇವರ ಮನೆಯ ತಗಡದ ಕೆಳಗಡೆ ಇರುವ ಕಟ್ಟಿಗೆಯ ಅಡ್ಡದಂಟೆಗೆ ಓಡಿನಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಅವರ ಮೃತದೇಹ ನೇಣಿಗೆ ಜೋತಾಡುತ್ತಿತ್ತು, ಗಂಡ ರಾಮಚಂದ್ರ ಮಡಿವಾಳ ರವರು ಹೊಟ್ಟೆಬೇನೆ ನೋವು ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 28/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಪಂಡಿತ ತಂದೆ ನಾಗಪ್ಪಾ ಕಾಳೆ ಸಾ: ಕಪಲಾಪೂರ (ಜೆ) ಗ್ರಾಮ, ತಾ: ಜಿ: ಬೀದರ ರವರಿಗೆ ಕಪಲಾಪೂರ (ಜೆ) ಗ್ರಾಮ ಶಿವಾರದಲ್ಲಿ ಹೊಲ ಸರ್ವೆ ನಂ. 14 ನೇದರಲ್ಲಿ 2 ಎಕರೆ 39 ಗುಂಟೆ ಜಮೀನು ಇದ್ದು ಸದರಿ ಜಮೀನು ತಾಯಿ ಚಂದ್ರಮ್ಮಾ ಕಾಳೆ ರವರ ಹೆಸರಿನಲ್ಲಿ ಇರುತ್ತದೆ, ಸದರಿ ಜಮೀನಿನ ಮೇಲೆ ತಾಯಿಯವರು ಮಾಳೆಗಾಂವ ಪಿಕೆಪಿಎಸ್ ನಲ್ಲಿ
50,000/- ರೂ ಗಳಷ್ಟು ಬೇಳೆ ಸಾಲ ಪಡೆದಿರುತ್ತಾರೆ, ಕಳೆದ 3-4 ವರ್ಷಗಳಿಂದ ಮಳೆ ಸರಿಯಾಗಿ ಆಗದೆ ಹೊಲದಲ್ಲಿ ಬೇಳೆ ಸಹ ಚೆನ್ನಾಗಿ ಬೆಳೆದಿರುವುದಿಲ್ಲ, ಪ್ರತಿ ವರ್ಷ ಹೊಲದಲ್ಲಿ ಬೆಳೆ ಕೈಕೊಟ್ಟಿದ್ದರಿಂದ ಬೆಸತ್ತು ದಿನಾಂಕ 14-11-2019
ರಂದು ತಾಯಿ ಚಂದ್ರಮ್ಮಾ ರವರು ತಮ್ಮ ಮನೆಯ ಹಿತ್ತಲ್ಲಲ್ಲಿ ತೋಗತಿ ಬೇಳೆಗೆ ಹೊಡೆಯಲು ತಂದಿಟ್ಟಿದ್ದ ಕೀಟನಾಶಕ ಔಷಧಿಯನ್ನ ಸೇವಿಸಿ ಮನೆಯಲ್ಲಿ ಬಂದು ಚಕ್ಕರ ಬಂದು ಬಿದ್ದು ಚಡಪಡಿಸುತ್ತಿದ್ದಾಗ ತಮ್ಮ ತಾಯಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಅವೆರಿಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ,
ಅವರ ಸಾವಿನಲ್ಲಿ
ಯಾರ ಮೇಲೆಯು ಯಾವುದೆ ತರಹದ
ಸಂಶಯ ವಗೈರೆ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ
ಸಂ. 159/2019, ಕಲಂ. 505(1) ಐಪಿಸಿ :-
ದಿನಾಂಕ 26-10-2019 ರಂದು ರಾಣಿ ಚೆನ್ನಮ್ಮಾ ಕರ್ತವ್ಯಕ್ಕೆ ಫಿರ್ಯಾದಿ
ಗುಂಡಪ್ಪಾ ಎಹೆಚಸಿ-422, ಡಿ.ಎ.ಆರ್ ಬೀದರ ಉ: ಕೆಎ-38/ಜಿ-900 ನೇದರ ಚಾಲಕ ರವರು ಹಾಗೂ ಮಧ್ಯಾಹ್ನದ
ಶೀಫ್ಟಗೆ ಬೀದರ ಮಹಿಳಾ ಪೊಲೀಸ್ ಠಾಣೆಯ ಮಲ್ಲಮ್ಮಾ ಎ.ಎಸ್.ಐ ಮತ್ತು ಸಿಬ್ಬಂದಿಯವರಾದ ಶ್ರೀದೇವಿ ಮಪಿಸಿ, ಮನ್ನಳ್ಳಿ
ಪೊಲೀಸ್ ಠಾಣೆ,
ಶಕುಂತಲಾ ಮಹೆಚಸಿ ಬೀದರ ನಗರ ಠಾಣೆ ಮತ್ತು ಸಿದ್ದಮ್ಮಾ ಮಪಿಸಿ ಮಾರ್ಕೇಟ್ ಠಾಣೆ
ರವರುಗಳು ಕರ್ತವ್ಯದ ಮೇಲಿದ್ದರು, ಎಲ್ಲರೂ
ಬೀದರ
ಅಂಬೇಡ್ಕರ ಸರ್ಕಲ ಹತ್ತಿರ ಬಂದಾಗ ಅಲ್ಲಿ ಬೀದರ ಮಾರ್ಕೇಟ್ ಪೊಲೀಸ್ ಠಾಣೆಯ ಓಪಿಯ ಬಳಿ ಬಂದಾಗ ಫಿರ್ಯಾದಿಯವರ
ವಾಹನದ ಮುಂದೆ ಒಂದು ಫಾರ್ಚುನರ್ ಕಾರ್ ನಂ. ಕೆಎ-64/ಎಮ್-6000 ನೇದು ಹೋಗುತ್ತಿದ್ದು ಫಿರ್ಯಾದಿಯು ಅದರ ಹಿಂದೆ ತನ್ನ ವಾಹನವನ್ನು ಅದಕ್ಕೆ
ತಗುಲಿದಂತೆ ನಿಲ್ಲಿಸಿದಾಗ ಅದರ ಚಾಲಕನು ಕೆಳಗೆ ಇಳಿದು ನೋಡಿ ಅವನ ವಾಹನಕ್ಕೆ ಏನು ಆಗದ ಕಾರಣ ಫಿರ್ಯಾದಿಯೊಂದಿಗೆ
ಮಾತನಾಡಿ ನಿಂತ್ತಿದ್ದು, ಆಗ ಅಲ್ಲಿಗೆ
ಬಂದ ಆರೋಪಿ ಫರ್ನಾಂಡಿಸ್ ಹಿಪ್ಪಳಗಾಂವ ರವರು ಫಿರ್ಯಾದಿಯವರ ಬಳಿ ಬಂದು ಈ ಹಳೆಯ ಗುಜರಿಗೆ ಹಾಕುವ
ವಾಹನವನ್ನು ತೆಗೆದುಕೊಂಡು ಏಕೆ ದೊಡ್ಡ ದೊಡ್ಡ ಕಾರುಗಳ ಬಳಿ ನಿಲ್ಲಿಸುತ್ತಿದ್ದೀರಿ ಎಂದಾಗ ಇದು ಸರ್ಕಾರಿ
ವಾಹನ ಇದೆ ಆ ತರಹ ಮಾತನಾಡಬೇಡಿ ಎಂದಾಗ ಅವನು ಫಿರ್ಯಾದಿಯ ಮಾತನ್ನು ಕೇಳದೇ ನಿಮ್ಮ ವಾಹನ ತುಂಬಾ
ಹಳೆಯದಾಗಿದ್ದು ಇದನ್ನು ತೆಗೆದುಕೊಂಡು ಹೋಗಿ ಗುಜರಿಗೆ ಹಾಕಿ ಎಂದು
ಸಾರ್ವಜನಿಕ ಕಿಡಗೇಡಿತನಕ್ಕೆ ಕಾರಣವಾಗುವ ರೀತಿಯಲ್ಲಿ ಮಾತನಾಡಿದ್ದು, ಘಟನೆಯನ್ನು ರಾಣಿ ಚೆನ್ನಮ್ಮಾ
ವಾಹನದಲ್ಲಿದ್ದ ಅಧಿಕರಿ ಹಾಗೂ ಸಿಬ್ಬಂದಿಯವರು ಸಹ ನೋಡಿದ್ದು, ಸದರಿ ಆರೋಪಿಯು ಪೊಲೀಸ್ ಇಲಾಖಾ ವಾಹನದ
ಮತ್ತು ಫಾರ್ಚುನರ್ ವಾಹನದ ಫೊಟೋವನ್ನು ತೆಗೆದುಕೊಂಡಿದ್ದು ಇರುತ್ತದೆ, ನಂತರ ಫಿರ್ಯಾದಿಯು ಬೀದರ
ಗಡಿ ಕನ್ನಡ ದಿನಪತ್ರಿಕೆಯನ್ನು ನೋಡಲಾಗಿ ಅಂದು ನಡೆದ ಘಟನೆಯ ಬಗ್ಗೆ ಫೋಟೋ ತೆಗೆದುಕೊಂಡಿದ್ದ
ಬೀದರ ಗಡಿಕನ್ನಡ ದಿನಪತ್ರಿಕೆಯ ಗೌರವ ಸಂಪಾದಕರಾದ ಫರ್ನಾಂಡಿಸ್ ಹಿಪ್ಪಳಗಾಂವ ರವರು ಅಂದಿನ
ಘಟನೆಯನ್ನು ಉಲ್ಲೇಖಿಸಿ ಪೊಲೀಸ್ ಇಲಾಖೆಯ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿ ಜನರಲ್ಲಿ ಭಯದ
ವಾತಾವರಣ ನಿರ್ಮಾಣ ಮಾಡಿ ಸಾರ್ವಜನಿಕ ಕಿಡಗೇಡಿತನಕ್ಕೆ ಕಾರಣವಾಗುವ ರೀತಿಯಲ್ಲಿ ಸುದ್ದಿ
ಪ್ರಕಟಿಸಿರುವುದನ್ನು ದಿನಪತ್ರಿಕೆಯನ್ನು ಓದಿ
ತಿಳಿದುಕೊಂಡಿದ್ದು, ನಂತರ ಫಿರ್ಯಾದಿಯು ಈ ವಿಷಯದ ಬಗ್ಗೆ ತಮ್ಮ ಮೇಲಾಧೀಕಾರಿಗಳ ಗಮನಕ್ಕೆ ತಂದಾಗ
ಅವರು ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಸೂಚಿಸಿದ್ದು ಕಾರಣ ಸದರಿ ಬೀದರ
ಗಡಿ ಕನ್ನಡ ದಿನಪತ್ರಿಕೆಯ ಗೌರವ ಸಂಪಾದಕರಾದ ಫರ್ನಾಂಡಿಸ್ ಹಿಪ್ಪಳಗಾಂವ ರವರ ವಿರುಧ್ಧ ಸೂಕ್ತ
ಕಾನೂನು ಕ್ರಮಕ್ಕಾಗಿ ಕೋರಿದ ಮೇರೆಗೆ ದಿನಾಂಕ 14-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 162/2019, ಕಲಂ. ಮಹಿಳೆ ಕಾಣೆ :-
ದಿನಾಂಕ 11-11-2019 ರಂದು ಫಿರ್ಯಾದಿ ವಿಲಾಸ ರಾಯಪಳ್ಳಿ ಸಾ: ಹುಣಸನಾಳ ರವರ ಸಂಬಂಧಿಕರಾದ ಸೊಂತ ಗ್ರಾಮದ ಸುಭಾಷ ಶೇಡೋಳೆ ರವರ ಮನೆಯ ವಾಸ್ತು ಕಾರ್ಯಕ್ರಮ ಇರುವುದರಿಂದ 1500 ಗಂಟೆಗೆ ಫಿರ್ಯಾದಿಯು ತನ್ನ ಮಗಳು ಶೀಲ್ಪಾ ಕೂಡಿಕೊಂಡು ತಮ್ಮೂರು ಹುಣಸನಾಳದಿಂದ ಹುಮನಾಬಾದ್ ಬಸ್ ನಿಲ್ದಾಣಕ್ಕೆ ಬಂದ್ದು ಸೊಂತ ಗ್ರಾಮಕ್ಕೆ ಹೋಗುವ ಬಸ್ಸಿನ ದಾರಿ ಕಾಯುತ್ತಾ ಕುಳಿತಿರುವಾಗ ಶೀಲ್ಪಾ ಇವಳು ನನಗೆ ಬಾಳೆ ಹಣ್ಣು ತರುವಂತೆ ಹೇಳಿದಾಗ ಫಿರ್ಯಾದಿಯು ಬಾಳೆ ಹಣ್ಣು ತರಲು ಬಸ್ ನಿಲ್ದಾಣದ ಹೊರಗೆ ಹೋಗಿ 1515 ಗಂಟೆಗೆ ಬಂದು ನೋಡಲಾಗಿ ಮಗಳು ಬಸ್ ನಿಲ್ದಾಣದಲ್ಲಿ ಕಾಣಲಿಲ್ಲ, ಎಲ್ಲಾ ಕಡೆ ಹುಡುಕಾಡಿ ನೋಡಲಾಗಿ ಮಗಳು ಕಾಣಲಿಲ್ಲ, ಸ್ವಲ್ಪ ಸಮಯದ ನಂತರ ಮಗಳು ಯಾರದೋ ಒಂದು ಮೊಬೈಲ್ ನಂ. 77388338164 ನೇದರಿಂದ ಫಿರ್ಯಾದಿಯ ಮೊಬೈಲ್ ನಂ. 8497817238 ನೇದಕ್ಕೆ ಕರೆ ಮಾಡಿ ನಾನು ಬಸ್ಸಿನಲ್ಲಿ ಕುತು ಸೊಂತ ಗ್ರಾಮಕ್ಕೆ ಹೋಗುತ್ತಿದ್ದು ನೀವು ಇನ್ನೊಂದು ಬಸ್ಸಿಗೆ ಬನ್ನಿ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿಯು ಇನ್ನೊಂದು ಬಸ್ಸಿನಲ್ಲಿ ಸೊಂತ ಗ್ರಾಮಕ್ಕೆ ಹೋಗಿ ನೋಡಲು ಮಗಳು ಅಲ್ಲಿಯು ಬಂದಿರುವುದಿಲ್ಲ, ನಂತರ ಫಿರ್ಯಾದಿಯು ಎಲ್ಲಾ ಕಡೆಗೆ ಹುಡಕಾಡಿ ಮತ್ತು ಎಲ್ಲಾ ಸಂಬಂಧಿಕರಿಗೆ ವಿಚಾರಿಸಿ ನೋಡಲು ಎಲ್ಲಿಯೂ ಪತ್ತೆಯಾಗಿರುವುದಿಲ್ಲ, ಕಾರಣ ಮಗಳಾದ ಶೀಲ್ಪಾ ಇವಳು ಹುಮನಾಬಾದ್ ಬಸ್ ನಿಲ್ದಾಣದಿಂದ ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ.
70/2019, ಕಲಂ. 279, 337, 338 ಐಪಿಸಿ
:-
ದಿನಾಂಕ 14-11-2019 ರಂದು ಫಿರ್ಯಾದಿ ವಿಕಾಸ ತಂದೆ ಸುಭಾಸ ಸೂರ್ಯವಂಶಿ ವಯ: 30 ವರ್ಷ, ಜಾತಿ: ಮಾದಿಗ, ಸಾ: ಸೋಲದಾಪಕಾ ರವರ ತಂಗಿಯಾದ ಸರಿತಾ ಇವಳು ತನ್ನ ಇಬ್ಬರು ಮಕ್ಕಳೊಂದಿಗೆ ಮ್ಯಾಕ್ಸಿ ವಾಹನದಿಂದ ಸೋಲದಾಪಕಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಇಳಿದು ಮಗನಾದ ಸಾಯಿರಾಜ ಇವನಿಗೆ ಎತ್ತಿಕೊಂಡು ಸೋನಪರಿಗೆ ಕರೆದುಕೊಂಡು ರಸ್ತೆ ದಾಟುವಾಗ ಹುಲಸೂರ ಕಡೆಯಿಂದ ಮಹಾರಾಷ್ಟ್ರದ ಸರಕಾರಿ ಬಸ ನಂ. ಎಮ್.ಹೆಚ್-40/ಎನ್-9272 ನೇದರ ಚಾಲಕನಾದ ಆರೋಪಿ ಮಹೇಶ ತಂದೆ ಪ್ರಲ್ಹಾದ ಜಗತಾಪ ಸಾ: ಬಿಬೇವಾಡಿ ಪುನಾ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸರಿತಾ ಮತ್ತು ಅವಳ ಇಬ್ಬರು ಮಕ್ಕಳಿಗೆ ಡಿಕ್ಕಿ ಮಾಡಿದ್ದರಿಂದ ತಂಗಿಯ ತಲೆಗೆ ಭಾರಿ ರಕ್ತಗಾಯ, ಮಕ್ಕಳಾದ ಸೋನಪರಿ ಇವಳಿಗೆ ಹಣೆಯ ಮೇಲೆ, ತಲೆ ಮತ್ತು ಬಾಯಿಯ ಹತ್ತಿರ ರಕ್ತಗಾಯ ಮತ್ತು ಸಾಯಿರಾಜ ಈತನಿಗೆ ತಲೆಗೆ ರಕ್ತಗಾಯ ಹಾಗು ಎಡಗಣ್ಣಿನ ಮೇಲೆ ಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಎಲ್ಲರಿಗೂ ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಹುಲಸೂರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಂತಪುರ ಪೊಲೀಸ್ ಠಾಣೆ ಅಪರಾಧ ಸಂ.
104/2019, ಕಲಂ. 78(3) ಕೆ.ಪಿ ಕಾಯ್ದೆ
:-
ದಿನಾಂಕ 14-11-2019
ರಂದು ಜಂಬಗಿ - ಸಂತಪುರ ರೋಡಿನ ಹತ್ತಿರ ಸಂತಪುರ ಗಾ್ರಮದ ಬಸವೆಶ್ವರ
ಚೌಕ ಹತ್ತಿರ ಪಿ.ಡಬ್ಲೂ.ಡಿ ಕಛೆರಿಯ
ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಜನರು
ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದಾರೆ ಅಂತ ಪ್ರಭಾಕರ್ ಪಾಟೀಲ್ ಪಿ.ಎಸ್.ಐ ಸಂತಪುರ
ಪೋಲಿಸ ಠಾಣೆ ರವರಿಗೆ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಸಂತಪುರ ಗ್ರಾಮದ ಬಸವೆಶ್ವರ ಚೌಕ ಹತ್ತಿರ ಮರೆಯಾಗಿ ನಿಂತು
ನೋಡಲಾಗಿ ಅಲ್ಲಿ ಆರೋಪಿತರಾದ 1) ಮೋಹನ ತಂದೆ
ಶರಣಪ್ಪಾ ವಯ: 36 ವರ್ಷ, ಜಾತಿ:
ಎಸ್.ಸಿ ಹೋಲಿಯ, ಸಾ:
ಜೋಜನಾ ಗ್ರಾಮ, 2) ಶಾಂತಕುಮಾರ ತಂದೆ ವೈಜಿನಥ ಬೆಲ್ದಾರ ವಯ:
35 ವರ್ಷ, ಜಾತಿ: ಎಸ್.ಸಿ ಹೋಲಿಯ,
ಸಾ: ಸಂತಪುರ ಇವರಿಬ್ಬರು 1
ರೂಪಾಯಿಗೆ 80/- ರೂ ಅಂತ ಕನ್ನಡ ಭಾಷೆಯಲ್ಲಿ ಕೂಗುವಾಗ ಪಿಎಸ್ಐ ರವರು
ಪಂಚರ ಸಮಕ್ಷಮ ಒಮ್ಮೇಲೆ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ
ಮಾಡಿ ಇಬ್ಬರಿಗೂ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ
2300/- ರೂ ಹಾಗು 2 ಮಟಕಾ ಚೀಟಿ
ಹಾಗು ಎರಡು ಬಾಲ ಪೆನ್ ಜಪ್ತಿ ಮಾಡಿಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.