Police Bhavan Kalaburagi

Police Bhavan Kalaburagi

Wednesday, August 3, 2016

Kalaburagi District Reported Crimes

ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ನಂದುಕುಮಾರ ತಂದೆ ರಂಗಣ್ಣ ಗುತ್ತೆದಾರ ಸಾ: ಶಾಸ್ತ್ರಿ ನಗರ ಎಸ್.ಬಿ.ಎಚ್ ಬ್ಯಾಂಕ ಹತ್ತಿರ ಜೇವರ್ಗಿ ಹಾ.ವ: ಮನೆ ನಂ. 1/889/26/ಎಫ್/7, ಪ್ಲಾಟ ನಂ. 268 ರಾಜಶೇಖರ ಯರಗೋಳ ರವರ ಮನೆಯಲ್ಲಿ ಬಾಡಿಗೆ ವಾಸ ಮಾಹಾವೀರ ನಗರ ಕಲಬುರಗಿ ಇವರು ದಿನಾಂಕ 30/07/2016 ರಂದು ತಮ್ಮ ಮನೆ ಕೀಲಿ ಹಾಕಿಕೊಂಡು ತುಳಜಾಪೂರ ಮತ್ತು ಪಂಢರಾಪೂರಕ್ಕೆ ಹೋಗಿದ್ದು ದಿನಾಂಕ 01/08/2016 ರಂದು ನಮ್ಮ ಮನೆಯ ಮಾಲಿಕರಾದ ರಾಜಶೇಖರ ಯರಗೋಳ ಇವರು ಪೋನ ಮಾಡಿ ಮನೆಯ ಬಾಗಿಲ ಕೀಲಿ ಮುರಿದಿದೆ ಅಂತಾ ತಿಳಿಸಿದರು. ನಾವು 2 ಪಿ.ಎಂ.ಕ್ಕೆ ಬಂದು ನೋಡಲಾಗಿ ಮನೆಯ ಬಾಗಿಲು ಕೀಲಿ ಮುರಿದಿದ್ದು ಒಳಗಡೆ ಹೋಗಿ ಪರಿಶೀಲಿಸಿ ನೋಡಲಾಗಿ ಮನೆಯಲ್ಲಿಯ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದು ಬಟ್ಟೆಯ ಬ್ಯಾಗನಲ್ಲಿ ಇಟ್ಟಿದ್ದ  ಬಂಗಾರದ ಆಭರಣಗಳು  ಒಟ್ಟು 75.5 ಗ್ರಾಂ ಬಂಗಾರ ಅ.ಕಿ. 1,90,000/- ರೂ ನೇದ್ದವುಗಳನ್ನು  ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಘಾತ ಪ್ರಕರಣಗಳು :
ಮುಧೋಳ ಠಾಣೆ : ದಿನಾಂಕ: 02.08.2016 ರಂದು ಬೆಳಗ್ಗೆ ನನ್ನ ಮಗ ಅನಂತಪ್ಪ ಇತನು ರಿಬ್ಬನಪಲ್ಲಿಯ ಸುರೇಂದ್ರ ರೆಡ್ಡಿ ಇವರ ಕವಳಿ ಗದ್ದೆ ಹೊಲದಲ್ಲಿ ಸಾಗುವಳಿ ಮಾಡಲು ಟ್ಯಾಕ್ಟರ ತೆಗೆದುಕೊಂಡು ಹೋಗಿದ್ದು, ಸದರಿ ಟ್ಯಾಕ್ಟರದಲ್ಲಿ ಡಿಜೆಲ ಮುಗಿದ್ದರಿಂದ ಇಂದು ದಿನಾಂಕ: 02.08.2016 ರಂದು ಮಧ್ಯಾಹ್ನ 1230 ಗಂಟೆ ಸುಮಾರಿಗೆ ನನ್ನ ಮಗ ರಿಬ್ಬನಪಲ್ಲಿ ಗ್ರಾಮದ ಹೊಲದಿಂದ  ರಿಬ್ಬನಪಲ್ಲಿ ಗೇಟ ಹತ್ತಿರ ರಸ್ತೆಯ ಪಕ್ಕದಲ್ಲಿರುವ ನಮ್ಮ ಹೋಟೆಲಕ್ಕೆ ಡಿಜೆಲ್ ತರುವದಕ್ಕೆ ನನ್ನ ಹತ್ತಿರ ಹಣ ತೆಗೆದುಕೊಂಡು ಹೋಗುವದಕ್ಕೆ ತನ್ನ ಮೊಟಕ ಸೈಕಲ ನಂ ಟಿಎಸ್-07-ಈಪಿ-3911 ನೇದ್ದರ ಮೇಲೆ ರಿಬ್ಬನಪಲ್ಲಿ ಗೇಟ ಹತ್ತಿರ ರಸ್ತೆಯ ಎಡಬದಿಯಿಂದ ಬುರುತ್ತಿದ್ದಾಗ ಹಿಂದುಗಡೆಯಿಂದ ಅಂದರೆ ಕೊಡಂಗಲ ಕಡೆಯಿಂದ ಸೇಡಂ ಕಡೆಗೆ ಬರುತ್ತಿದ್ದ ಒಂದು ಡಿಸಿಎಮ್ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜೀತನಿಂದ ನಡೆಯಿಸಿಕೊಂಡು ಬಂದು ರಸ್ತೆ ಎಡಬದಿಯಿಂದ ಬರುತ್ತಿದ್ದ ನನ್ನ ಮಗನ ಮೊಟರ ಸೈಕಲಗೆ ಹಿಂದುಗಡೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದು ಆಗ ನನ್ನ ಮಗ ಮೊಟಾರ ಸೈಕಲ ಮೇಲಿಂದ ಕೆಳಗೆ ರಸ್ತೆಯ ಮೇಲೆ ಬಿದ್ದು ತೆಲೆಗೆ ಭಾರಿ ಗಾಯವಾಗಿ ಒದ್ದಾಡುತ್ತಿದ್ದಾಗ ಇದನ್ನು ನೋಡಿ ನಾನು ಹಾಗು ನಮ್ಮ ಹೋಟಲದಲ್ಲಿದ್ದ ನನ್ನ ಮಗಳಾದ ಸಾವಿತ್ರ ಗಂಡ ದಸ್ತಪ್ಪ ಉಪ್ಪಾರ ಸಾ: ಪರಸಾಪೂರ ತಾ: ಕೊಡಂಗಲ್ ಓಡುತ್ತಾ ಬಂದು ಕೆಳಗೆ ರಸ್ತೆಯಲ್ಲಿ ಬಿದ್ದ ನನ್ನ ಮಗನಾದ ಅನಂತಪ್ಪ ಇತನಿಗೆ ಏಬ್ಬಸಿ ನೋಡಲಾಗಿ ಇತನ ತಲೆಗೆ ಹಿಂದುಗಡೆ ಭಾರಿ ರಕ್ತಗಾಯವಾಗಿ ತಲೆಯಿಂದ ಮೇದುಳು ಹೊರಗೆ ಬಂದು ನನ್ನ ಮಗನು ಅಲ್ಲೆ ಸ್ಥಳದಲ್ಲೆ ಮೃತ ಪಟ್ಟಿದ್ದು ಸದರಿ ಡಿ.ಸಿ.ಎಂ ವಾಹನ ಚಾಲಕನು ಅಪಘಾತ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗುತ್ತಿದ್ದಾಗ ಅಲ್ಲಿದ್ದ ಬಸವಂತ ತಂದೆ ಬಾಲಪ್ಪ ಗುಲಬರ್ಗಾ ಮತ್ತು ಮಲ್ಲೇಶ ತಂದೆ ಮಾಣಿಕಪ್ಪ ಮಡೇಪಲ್ಲಿ ಇವರು ಸದರಿ ಡಿಸಿಎಂ ವಾಹನ ಹಿಡಿಯುವದಕ್ಕೆ ಮೊಟಾರ ಸೈಕಲನ್ನು ತೆಗೆದುಕೊಂಡು ಹಿಂದೆ ಬೆನ್ನು ಹತ್ತಿದ್ದಾಗ ಸದರಿ ಡಿಸಿಎಮ್ ವಾಹನ ಚಾಲಕನು ಸ್ವಲ್ಪ ಮುಂದೆ ಹೋಗಿ ಡಿಸಿಎಮ್ ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಸದರಿ ಡಿಸಿಎಮ್ ವಾಹನ ನಂಬರ ನೋಡಲಾಗಿ ಅದರ ನಂಬರ ಎಮ್.ಹೆಚ 13-ಎಎಕ್ಸ-4737 ಅಂತಾ ಇದ್ದು ಸದರಿ ವಾಹನದ ಚಾಲಕನ ಹೆಸರು ಗೋತ್ತಿರುವದಿಲ್ಲಾ. ಆತನಿಗೆ ನೋಡಿದರೆ ಗುರುತಿಸುತ್ತೇನೆ.  ಅಂತಾ ಶ್ರೀಮತಿ ಲಕ್ಷ್ಮಮ್ಮ ಗಂಡ ದಿ|| ಪಾಪಣ್ಣಾ ಪರಸಾಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 01-08-16  ರಂದು ಮೃತ ಲಕ್ಷ್ಮೀಕಾಂತ ಇತನು ಹಿರೋ ಸ್ಪೆಂಡರ ಪ್ರೋ KA 33 R 3837 ಮೇಲೆ ಒಬ್ಬನೇ ಕುಳಿತುಕೊಂಡು ಸ್ಟೇಷನ ಗಾಣಗಾಪೂರಕ್ಕೆ ಹೋಗಿ ಅಲ್ಲಿಂದ ಸ್ವಗ್ರಾಮವಾದ ಕೋಗನೂರಕ್ಕೆ ಹೋಗಿ ತನ್ನ ತಂದೆ, ತಾಯಿಗೆ ಭೇಟ್ಟಿಯಾಗಿ ವಾಪಸ್ಸು ಕಲಬುರಗಿ ಕಡೆ ಹೊರಟಿದ್ದು ರಾತ್ರಿ 09-00  ಗಂಟೆ ಸುಮಾರಿಗೆ ಆಳಂದ ರೋಡಿನ ಕೆರಿಭೋಸಗಾ ಸೀಮಾಂತರದಲ್ಲಿ ಎಸ್.ಕೆ. ದಾಲ ಮಿಲ್ಲ್  ಹತ್ತಿರ ಬಂದಾಗ ಯಾವುದೋ ನಾಲ್ಕು ಚಕ್ರಗಳ ವಾಹನ ಚಾಲಕ ಕಲಬುರಗಿ ಕಡೆಯಿಂದ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದು ನಿನ್ನ ಗಂಡನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ, ಭಾರಿ ರಕ್ತಗಾಯಪಡಿಸಿ ಹಾಗೇ ವಾಹನ ಓಡಿಸಿಕೊಂಡು ಹೋಗಿದ್ದರಿಂದ ನಿನ್ನ ಗಂಡನ ತಲೆ ಹಿಂದೆ ಮತ್ತು ಎಡ ಭುಜದ ಮೇಲೆ ಹಾಗೂ ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಟ್ಟಿರುತ್ತಾನೆ. ಎಂದು ಅತ್ತೆ ಸುಮಿತ್ರಾಬಾಯಿ, ಮಾವ ಪೀರಪ್ಪ ಸಂಬಂಧಿ  ಹಣಮಂತ, ಮಾಲೀಕ ಶಿವಾಜಿ ಅವರ ಮಗ ಸಾಗರ ಇವರಿಂದ ಕೇಳಿ ಗೊತ್ತಾಗಿರುತ್ತದೆ, ಕಾರಣ ನನ್ನ ಗಂಡ ಲಕ್ಷ್ಮೀಕಾಂತ ತಂದೆ ಪೀರಪ್ಪ ಆಸಿಂಗಳ ಇತನಿಗೆ ಅಪಘಾತಪಡಿಸಿದ ಹಾಗೇ ಓಡಿಸಿಕೊಂಡು ಹೋದ ಯಾವುದೋ ನಾಲ್ಕು ಚಕ್ರ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀಮತಿ ಅಶ್ವೀನಿ ಗಂಡ ಲಕ್ಷ್ಮಿಕಾಂತ ಅಸಿಂಗಳ ಸಾ : ಕೊಗನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆತ್ಮಹತ್ಯೆ ಪ್ರಕರಣ :
ಆಳಂದ ಠಾಣೆ : ಶ್ರೀ.ಸಿದ್ರಾಮಪ್ಪಾ ತಂದೆ ಚೆನ್ನಬಸಪ್ಪಾ ಕೋರೆ ಮು: ಮಮದಾಪೂರ ತಾ: ಆಳಂದರವರ ಹೆಸರಿನಲ್ಲಿ ಸರ್ವೆ ನಂ: 11 ರಲ್ಲಿ 4 ಎಕರೆ 30 ಗುಂಟೆ ಜಮೀನು ಇರುತ್ತದೆ. ನನ್ನ ಎರಡನೇ ಮಗನಾದ ಧರ್ಮರಾಜ ಇತನು ಹೊಲ-ಮನೆಯ ಜವಾಬ್ದಾರಿ ಅವನೇ ನೋಡಿಕೊಳ್ಳುತ್ತಾ ಬಂದಿರುತ್ತಾನೆ. ಸದರಿ ಜಮೀನಿನ ಮೇಲೆ ಪ್ರಗತಿ ಕೃಷ್ಣಾ ಬ್ಯಾಂಕ ತಡಕಲದಲ್ಲಿ 1,00,000/- (ಒಂದು ಲಕ್ಷ) ರೂಪಾಯಿ, V.S.S. ಬ್ಯಾಂಕ ಹಳ್ಳಿ ಸಲಗರದಲ್ಲಿ 10,000/- (ಹತ್ತು ಸಾವಿರ) ರೂಪಾಯಿ ಹಾಗೂ ಕೈಗಡವಾಗಿ 4,00,000/- (ನಾಲ್ಕು ಲಕ್ಷ) ರೂಪಾಯಿ ಸಾಲ ತಗೆದಿದ್ದು ಕಳೆದ ವರ್ಷ ಬರಗಾಲ ಬಿದ್ದು ಮಳೆ ಬೆಳೆ ಆಗದಿದ್ದರಿಂದ ಹೊಲಗಳಿಗೆ ಗೊಬ್ಬರ , ಬೀಜ ಹಾಗೂ ಹೊಲ ಕಡಿದು ಹಾಕಿಕೊಂಡು ಮಾಲಕರಿಗೆ ದುಡ್ಡು ಕೊಟ್ಟು ನನ್ನ ಮಗನಿಗೆ 04-05 ಲಕ್ಷ ರೂಪಾಯಿ  ಸಾಲವಾಗಿದ್ದು  ಅದನ್ನು ತಿರಿಸುವುದು ಹೇಗೆ ಅಂತಾ ಚಿಂತಿಸುತ್ತಾ ಮನೆಯಲ್ಲಿ ಒಬ್ಬನೆ ಒಬ್ಬಂಟಿಗನಾಗಿ ಇರುತ್ತಾ ಕುಡುತ್ತಿದ್ದು ನಾನು ಹಾಗೂ ನನ್ನ ಹೆಂಡತಿ ಅಂಬವ್ವಾ ಹಾಗು ನನ್ನ ಸೊಸೆ ಜಯಶ್ರೀ ಎಲ್ಲರೂ ಕೂಡಿ ಧೈರ್ಯ ಹೇಳುತ್ತಾ ಹೇಗಾದರೂ ಮಾಡಿ ಸಾಲ ತಿರಿಸಿದರಾಯಿತು ಚಿಂತಿಸ ಬೇಡ ಅಂತಾ ಹೇಳುತ್ತಾ ಬಂದಿದ್ದು ದಿನಾಂಕ:02/08/2016 ರಂದು ಮನೆಯಿಂದ ಹಗ್ಗ ತಗೆದುಕೊಂಡು ಹೊಲಕ್ಕೆ ಹೋಗಿ ಹುಲ್ಲು ತರುತ್ತೇನೆ ಅಂತಾ ಹೋದವನು ಸುಮಾರು ಹೊತ್ತು ಮನೆಗೆ ಬರದೇ ಇದ್ದರಿಂದ ನಾನು ಹೊಲಕ್ಕೆ 08:00 ಗಂಟೆಗೆ ಹೋದಾಗ ನಮ್ಮ ಹೊಲದ ಹುಣಸೆ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಜೊತ್ತು ಬಿದ್ದಿರುವುದನ್ನು ನೋಡಿ ಗಾಬರಿಗೊಂಡು ಚೀರಾಡುತ್ತಿದ್ದಾಗ ಅಲ್ಲೆ ಇದ್ದ ಪ್ರಶಾಂತ ತಂದೆ   ಮಲ್ಲಪ್ಪಾ ಕಾಪಸೆ, ಬಸೀರ ತಂದೆ ದಸ್ತಗೀರ ಸಿದ್ದಿಕಿ , ಪ್ರಕಾಶ ತಂದೆ ಕಲ್ಲಪ್ಪಾ ಕಾಪಸೆ ಕೂಡಿಕೊಂಡು ಜೀವಂತ ಇರುವುದನ್ನು ನೋಡಿ ಮರದಿಂದ ಇಳಿಸಿ ಕುತ್ತಿಗೆಯ ಹಗ್ಗ ಬಿಚ್ಚಿದ್ದಾಗ ಇನ್ನೂ ಜೀವಂತ ಇರುವುದನ್ನು ಕಂಡು ಆಸ್ಪತ್ರೆಗೆ ತಗೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.