Police Bhavan Kalaburagi

Police Bhavan Kalaburagi

Saturday, June 19, 2021

BIDAR DISTRICT DAILY CRIME UPDATE 19-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-06-2021

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 55/2021, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 17-06-2021 ರಂದು ಫಿರ್ಯಾದಿ ಸಂತೋಷ ತಂದೆ ಶಿವರಾಮ ಅಮಣ್ಣ ವಯ: 45 ವರ್ಷ, ಜಾತಿ: ಕೋಮಟಿ, ಸಾ: ನ್ಯೂ ಆದರ್ಶ ಕಾಲೋನಿ ಬೀದರ ರವರು ಮನೆಯಲ್ಲಿರುವಾಗ ಅವರ ಸಂಬಂಧಿಕರಾದ ಶಶಿಕಾಂತ ತಂದೆ ಮಾಣಿಕಯ್ಯಾ ಕಲವೇಟಿ ವಯ: 53 ವರ್ಷ, ಜಾತಿ: ಕೋಮಟಿ, ಸಾ: ಬಗದಲ್ ಇವರು ಕರೆ ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ತಂದೆಯಾದ ಶಿವರಾಮ ತಂದೆ ಗೋವಿಂದಪ್ಪಾ ಅಮಣ್ಣ ವಯ: 73 ವರ್ಷ ಜಾತಿ: ಕೋಮಟಿ, ಸಾ: ನ್ಯೂ ಆದರ್ಶ ಕಾಲೋನಿ ಬೀದರ ಇವರಿಗೆ ಅಪಘಾತವಾದ ಬಗ್ಗೆ ತನಗೆ ಕರೆ ಬಂದಿದ್ದು ನೀನು ಬೇಗನೆ ಚಿದ್ರಿ ರಿಂಗ್ ರೋಡ್ ಏರಫೋರ್ಸ ಕ್ರಾಸ್ ಹತ್ತಿರ ಹೋಗು ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿಯು ಹೋಗಿ ನೋಡಲು ತನ್ನ ತಂದೆಗೆ ತಲೆಗೆ ಭಾರಿ ಗುಪ್ತಗಾಯವಾಗಿ ಬಾಯಿ, ಮೂಗು, ಕಿವಿಯಿಂದ ರಕ್ತ ಬಂದಿರುತ್ತದೆ, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ತಂದೆಯವರು  ಶಶಿಕಾಂತ ಇವರ ಹತ್ತಿರ ಬಗದಲಗೆ ಹೋಗಿ ಮರಳಿ ಮನೆಗೆ ಬರಲು ಚಿದ್ರಿ ರಿಂಗ್ ರೋಡ್ ಮುಖಾಂತರ ನಡೆದುಕೊಂಡು ಚಿದ್ರಿ ರಿಂಗ್ ರೋಡ್ ಏರಫೋರ್ಸ ಕ್ರಾಸ್ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಚಿದ್ರಿ ರಿಂಗ್ ರೋಡ್ ಕಡೆಯಿಂದ ಯಾವುದೋ ಅಪರಿಚಿತ ಮೋಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿನತದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಗಾಯಗೊಂಡ ತಂದೆಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೇಗೆ ತಂದು ದಾಖಲಿಸಿ ನಂತರ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಫಿರ್ಯಾದಿಯು ತನ್ನ ತಂದೆಗೆ ಹೈದ್ರಾಬಾದ ಯಶೋಧ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 18-06-2021 ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 68/2021, ಕಲಂ. 379 ಐಪಿಸಿ :-

ಫಿರ್ಯಾದಿ ಸಲೀಮ ತಂದೆ ರಜಾಕ ಸಾಬ ನದಾಫ ಸಾ: ಬುತ್ತಿ ಬಸವಣ್ಣ ಮಂದಿರ ಹತ್ತಿರ ಚಿದ್ರಿ ಬೀದರ ರವರು ಸರಕಾರಿ ಆಸ್ಪತ್ರೆಯ ಮುಂದೆ ನಿಲ್ಲಿಸಿದ ತನ್ನ ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಬೀದರ ಮೋಟಾರ್ ಸೈಕಲ ನಂ. KA-38/K-4604, Chassis No. MBLHA10EJ9HK36615 , Engine No. HA10EA9HK85688, Model 2009, Colour Black, ಅ.ಕಿ 15,000/- ರೂ. ನೇದನ್ನು ದಿನಾಂಕ 03-05-2021 ರಂದು 2100 ಗಂಟೆಯಿಂ ದಿನಾಂಕ 04-05-2021 ರಂದು 0630 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 18-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 39/2021, ಕಲಂ. 3, 7 ಇ.ಸಿ ಕಾಯ್ದೆ :-

ದಿನಾಂಕ 18-06-2021 ರಂದು ಉದಗೀರನಿಂದ ಔರಾದ ಮಾರ್ಗವಾಗಿ ಬೀದರ ಕಡೆಗೆ ಅಶೋಕ್ ಲಿಲ್ಯಾಂಡ್ ಲಾರಿಯಲ್ಲಿ ಸರಕಾರವು ಪಡಿತರ ಚಿಟಿದಾರರಿಗೆ ಹಂಚುವ ರೆಶನ್ ಗೋಧಿಯನ್ನು ಅಕ್ರಮವಾಗಿ ಸಾಗಣಿಕೆ ಮಾಡುತ್ತಿದ್ದಾರೆಂದು ವಿಶ್ವನಾಥ ಪಿಎಸ್ಐ (.ವಿ) ಪಿ.ಎಸ್. ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬೀದರ ಔರಾದ ರೋಡಿನ ಜನವಾಡಾ ಗ್ರಾಮದ ಹಳೆ ಗುರುದ್ವಾರ ಕಮಾನ ಹತ್ತಿರ ಔರಾದ ಕಡೆಯಿಂದ ಬರುತ್ತಿದ್ದ ಲಾರಿ ನಂ. ಎಮ್ಹೆಚ್-14/ಡಿಎಮ್-4857 ನೇದರ ಮೇಲೆ ದಾಳಿ ಮಾಡಿ ಸ್ಥಳಕ್ಕೆ ಅರುಣಕುಮಾರ ಆಹಾರ ನಿರೀಕ್ಷಕರು ತಹಸೀಲ್ ಕಛೇರಿ ಬೀದರ ರವರಿಗೆ ಬರಮಾಡಿಕೊಂಡು ಆರೋಪಿತನಾದ ಅಲ್ತಾಪ್ ತಂದೆ ಮುಬಾರಕ್ ಮುಂಜೆವರ ವಯ: 32 ವರ್ಷ, ಸಾ: ದೆವುಳವಾಡಿ ಗ್ರಾಮ, ತಾ: ಉದಗೀರ, ಜಿ: ಲಾತೂರ ಮಹಾರಾಷ್ಟ್ರ ಈತನಿಗೆ ದಸ್ತಗಿರಿ ಮಾಡಿಕೊಂಡು, ಗೋಧಿ ಸಾಗಾಟ ಮಾಡುತ್ತಿದ್ದ ಲಾರಿ ಮಾಲಿಕ ಮತ್ತು ಗೋಧಿ ಮಾಲಿಕನ ಬಗ್ಗೆ ವಿಚಾರಿಸಲು ಪಿಂಟು ಹುಡೆ ಉದಗೀರ ರವರಿದ್ದು, ಲಾರಿ ಮಾಲಿಕನಾಗಿ ಸಚೀನ ತಂದೆ ಮನೋಹರ ಹೈಬತಪುರೆ ಲೋಹಾರ ಗ್ರಾಮ ರವರಿರುತ್ತಾರೆ ಅಂತಾ ತಿಳಿಸಿದನು, ನಂತರ ಸದರಿ ಲಾರಿಯಲ್ಲಿದ್ದ ಒಟ್ಟು 230 ಗೋಣಿ ಚೀಲಗಳಲ್ಲಿ ಒಟ್ಟು 23 ಟನ್ ಗೋಧಿ ಅ.ಕಿ 4,83,000/- ರೂ. ದಷ್ಟು ಮತ್ತು ಅಶೋಕ ಲಿಲ್ಯಾಂಡ್ ಲಾರಿ ಅ.ಕಿ 7,00,000/- ರೂ. ದಷ್ಟು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 46/2021, ಕಲಂ. 78 ಕೆ.ಪಿ ಕಾಯ್ದೆ :-

ದಿನಾಂಕ 18-06-2021 ರಂದು ಬೀದರ ನಗರದ ಮುಸ್ಲಿಂ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ 01/- ರೂಪಾಯಿಗೆ 90/- ರೂ ಕೊಡುತ್ತೇನೆ ಅಂತ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದಾನೆಂದು ಪ್ರಭಾಕರ ಪಾಟೀಲ್ ಪಿ.ಎಸ್. (ಕಾಸು) ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮುಸ್ಲಿಂ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಮುಸ್ಲಿಂ ಚೌಕ್ ಹತ್ತಿರ ಆರೋಪಿ ಮೊಹ್ಮದ ಆರೀಫ್ ಅಹ್ಮದ ತಂದೆ ಅಬ್ದುಲ್ ಅಜೀಜ್ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಬಾರುಧ ಗಲ್ಲಿ ಬೀದರ ಇತನು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದು ಆತನಿಂದ ಮಟಕಾ ಜೂಜಾಟದಲ್ಲಿ ತೊಡಗಿಸಿದ 1) ನಗದು ಹಣ 1230/- ರೂ. 2) ಒಂದು ಬಾಲ ಪೆನ್ನು ಮತ್ತು 3) ಒಂದು ಮಟಕಾ ಚೀಟಿ ನೇದವುಗಳನ್ನು ಜಪ್ತಿ ಮಾಡಿಕೊಂಡು  ನಂತರ ಸದರಿಯವನಿಗೆ ಹಣ ಮತ್ತು ಮಟಕಾ ಚೀಟಿ ಯಾರಿಗೆ ಕೊಡುತ್ತಿ ಅಂತ ಕೇಳಿದಾಗ ದಿನದಯಾಳ ನಗರ (ಮಂಡಲನ) ಉಮೇಶ ತಂದೆ ಅಶೋಕ್ ಸೂರ್ಯನ್ ರವರಿಗೆ ಕೊಡುವುದಾಗ ತಿಳಿಸಿದನು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮ£Áಬಾದ ಪೊಲೀಸ್ ಠಾಣೆ ಅಪರಾಧ ಸಂ. 100/2021, ಕಲಂ. 323, 341, 498 (ಎ), 504, 506(2) ಜೊತೆ 149 ಐಪಿಸಿ ಮತ್ತು 3,4 ಡಿ.ಪಿ ಕಾಯ್ದೆ :-

ಫಿರ್ಯಾದಿ ಸುಧಾರಾಣಿ ಗಂಡ ಪವನಕುಮಾರ ಸಾ: ಹುಮನಾಬಾದ ರವರು ಮೂಲತಃ ಮುತ್ತಂಗಿ ಗ್ರಾಮದವರಾದ ಕರಬಸಪ್ಪಾ ಸದ್ಯ: ಹುಮನಾಬಾದ ರವರ ಮಗನಾದ ಪವನಕುಮಾರ ಜೋತೆಯಲ್ಲಿ ಸುಮಾರು 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಗಂಡನ ಮನೆಯಲ್ಲಿ ಫಿರ್ಯಾದಿಗೆ ಒಂದು ವರ್ಷ ಮಾತ್ರ ಸರಿಯಾಗಿ ನೊಡಿಕೊಂಡು, ನಂತರ ಮನೆಯಲ್ಲಿ ಪ್ರತಿ ನಿತ್ಯ ಅತ್ತೆ ಮತ್ತು ಗಂಡನ ಕಿರುಕುಳ ಪ್ರಾರಂಭವಾಯಿತು, ಅತ್ತೆ ಫಿರ್ಯಾದಿಗೆ ನೀನು ಓಡಿ ಬಂದಿ ನನ್ನ ಮಗನೊಂದಿಗೆ ಮದುವೆ ಮಾಡಿಕೊಂಡು ವರದಕ್ಷಿಣೆ, ಬಂಗಾರ ಏನು ತಂದಿಲ್ಲಾ, ನನ್ನ ಮಗನಿಗೆ ಬೇರೆ ಮದುವೆ ಮಾಡಿದರೆ ವರದಕ್ಷಿಣೆ, ಬಂಗಾರ ಸಿಗುತ್ತಿತ್ತು, ನೀನು ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ, 05 ತೋಲೆ ಬಂಗಾರ ತೆಗೆದುಕೊಂಡು ಬಾ ಆವಾಗ ಚೆನ್ನಾಗಿ ನೊಡಿಕೊಳ್ಳುತ್ತೆವೆ ಅಂತಾ ಕೂದಲು ಹಿಡಿದು ಹೊಡೆಯುವಾಗ ಗಂಡ ನೇಲಕ್ಕೆ ಹಾಕಿ ಕಾಲಿನಿಂದ ಕುತ್ತಿಗೆಯ ಮೇಲೆ ಒದ್ದಿರುತ್ತಾನೆ, ಹೀಗಿರುವಾಗ ದಿನಾಂಕ 29-05-2021 ರಂದು ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ಊಟ ಮಾಡುವಾಗ ಅತ್ತೆ ಶೋಭಾವತಿ ಇವಳು ಬಂದು ಅವಾಚ್ಯವಾಗಿ ನಿಮಗೆ ಕೂಳ ಹಾಕಬೇಕು ಎಮ್ಮೆ ತಿಂದಾಂಗ ತಿಂತಿರಿ ಅಂತಾ ಅಂದು ಕಾಲಿನಿಂದ ಒದ್ದಿರುತ್ತಾಳೆ, ಆವಾಗ ಮಕ್ಕಳು ಅಳುತ್ತಿರುವಾಗ ಗಂಡ ಪವನಕುಮಾರ ಬಂದು ಮಕ್ಕಳಿಗೆ ಬೆಡ್ ರೂಮಿನಲ್ಲಿ ಹಾಕಿ ಫಿರ್ಯಾದಿಯ ಕೂದಲು ಹಿಡಿದು ದರದರನೆ ಎಳೆದು ಬಾಗಿಲುವರೆಗೆ ತಂದು ಜೀವ ಸಹಿತ ಹೊಡೆದರೆ ಸಮಾಧಾನ ಆಗುವುದು ಅಂತಾ ಅಂದಾಗ ಫಿರ್ಯಾದಿಯು ಚಿರಾಡುವುದು, ಅಳುವುದು ಕೇಳಿ ಮನೆಯ ಮಾಲಿಕರು ಮತ್ತು ಅಕ್ಕ-ಪಕ್ಕದ ಮನೆಯವರು ಬಂದು ಜಗಳ ಬಿಡಿಸಿ ಸಮಾಧಾನ ಹೇಳಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 19/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 18-06-2021 ರಂದು ಫಿರ್ಯಾದಿ ಕೃಷ್ಣಾರೆಡ್ಡಿ ತಂದೆ ಭೂಮರೆಡ್ಡಿ ಚಿಂತಾಕೆ ಸಾ: ಚಿಂತಾಕಿ ರವರು ಕಿರಾಣಿ ಹಾಗು ಇತರೆ ಸಾಮಾನುಗಳು ತರಲು ಔರಾದಗೆ ಹೋಗಿ ಖರೀದಿ ಮಾಡಿಕೊಂಡು ತಮ್ಮೂರಿಗೆ ಬರುವ ಸಲುವಾಗಿ ಔರಾದ ಬಸ ನಿಲ್ದಾಣದ ಹತ್ತಿರ ತಮ್ಮೂರ ವಿಷ್ಣು ಪೂಜಾರಿ ರವರ ಕ್ರೂಜರ ಜೀಪ ನಂ. ಎಪಿ-26/ವಾಯ್-2470 ನೇದರಲ್ಲಿ ಕುಳಿತುಕೊಂಡು ಬೆಲ್ದಾಳ ಗ್ರಾಮ ದಾಟಿ ಚಿಂತಾಕಿ ಗ್ರಾಮದ ಸಮೀಪ ಮಾರುತಿ ತಂದೆ ಸಂಗಪ್ಪಾ ರವರ ಹೋಲದ ಪಕ್ಕದಲ್ಲಿ ಸದರಿ ಜೀಪನ ಚಾಲಕನಾದ ಆರೋಪಿ ವಿಷ್ಣು ತಂದೆ ಮಾರುತಿ ಪುಜಾರಿ ಸಾ: ಚಿಂತಾಕಿ, ತಾ: ಔರಾದ (ಬಿ) ಇತನು ಸದರಿ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಜೀಪ ನಿಯಂತ್ರಣ ತಪ್ಪಿ ರೋಡಿನ ಪಕ್ಕದಲ್ಲಿ ಬಿದ್ದಿರುವುದರಿಂದ ಫಿರ್ಯಾದಿಯ ಬಲಗಡೆಯ ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ರಕ್ತಗಾಯವಾಗಿರುವುದನ್ನು ನೋಡಿ ಫಿರ್ಯಾದಿಗೆ ಆಸ್ಪತ್ರೆಗೆ ಕರೆದೊಯ್ಯದೇ ತನ್ನ ಜೀಪನ್ನು ಬಿಟ್ಟು ಓಡಿ ಹೋಗಿರುತ್ತಾನೆ, ನನಗೆ ಯಾರೋ ಅಪರಿಚತರು ಜೀಪಿನಿಂದ ಮೇಲಕ್ಕೆ ಎತ್ತಿ ಚಿಂತಾಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.