Police Bhavan Kalaburagi

Police Bhavan Kalaburagi

Wednesday, May 31, 2017

BIDAR DISTRICT DAILY CRIME UPDATE 31-05-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 31-05-2017

ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 103/17 ಕಲಂ 457, 380 ಐಪಿಸಿ :-

ದಿನಾಂಕ: 30/05/2017 ರಂದು 1230 ಗಂಟೆಗೆ ಫಿರ್ಯಾದಿ ಶ್ರೀಮತಿ ಜಯಶ್ರೀ ಗಂಡ ಗುಣವಂತರಾವ ಟೋಕರೆ ಮುಖ್ಯಗುರುಗಳು ಎಮ್.ಪಿ.ಎಸ್ ಶಾಲೆ ಕಮಲನಗರ ರವರು ಠಾಣೆಗೆ ಹಾಜರಾಗಿ ತಮ್ಮ  ಲಿಖಿತ ದೂರು ಸಲ್ಲಿಸಿದರ  ಸಾರಂಶವೆನೆಂದರೆ  ಬೇಸಿಗೆ ರಜೆ ಪ್ರಯುಕ್ತ ದಿನಾಂಕ: 11/04/2017 ರಂದು 4:30 ಪಿ.ಎಮ್ ಗಂಟೆಗೆ ಮ್ಮ ಶಾಲೆಯ ಎಲ್ಲಾ 22 ಕೋಣೆಗಳಿಗೆ ಬೀಗ ಹಾಕಿ ರಜೆಯ ಮೇಲೆ ಹೋಗಿದ್ದು ಸದರಿ ಕೋಣೆಗಳ ಪೈಕಿ ಒಂದು ಕೋಣೆಯಲ್ಲಿ 7 ಕಂಪ್ಯುಟರಗಳು ಅಳವಡಿಸಿದ್ದು ಇದ್ದವು. ಹೀಗಿರುವಲ್ಲಿ ದಿನಾಂಕ: 29/05/2017 ರಂದು ಶಾಲೆಯ ಪ್ರಾರಂಭದವಾದ ಸಮಯದಲ್ಲಿ ಮುಂಜಾನೆ 10:00 ಗಂಟೆಗೆ ಶಾಲೆಗೆ ಬಂದು ಎಲ್ಲಾ ಕೋಣೆಗಳು ನೋಡಲಾಗಿ ಈ ಕೋಣೆಗಳ ಪೈಕಿ ಕಂಪ್ಯುಟರ ಅಳವಡಿಸಿದ ಕೋಣೆ ಬಾಗಿಲು ತೆಗೆದು ನೋಡಲು ಅದರಲ್ಲಿದ್ದ ಕಂಪ್ಯುಟಳ ಪೈಕಿ 7 ಮೋನಿಟರ್, 2 ಸಿಪಿಯು, 2 ಕಿ ಬೊರ್ಡ ಮತ್ತು 10 ಸ್ಪೀಕರಗಳು ಇರಲಿಲ್ಲ. ಸದರಿ ಕಂಪ್ಯುಟರ್ ಸಲಕರಣೆಗಳು ಅಂದಾಜು ಕಿ. 20,000/- ರೂ. ದಷ್ಟು ದಿನಾಂಕ: 11/04/2017 ರಿಂದ 29/05/2017 ಮುಂಜಾನೆ 10:00 ಗಂಟೆಯ ಅವಧಿಯಲ್ಲಿ ಕೋಣೆಯ ಹಿಂದಿನ ಬಾಗಿಲು ಮುರಿದು ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 104/17 ಕಲಂ 457, 380 ಐಪಿಸಿ :-

ದಿನಾಂಕ: 30/05/2017 ರಂದು 1330 ಗಂಟೆಗೆ ಫಿರ್ಯಾದಿ ಶ್ರೀ ದೇವೆಂದ್ರ ತಂದೆ ವೈಜಿನಾಥ ಪಾಟೀಲ, : 59 ವರ್ಷ, ಮುಖ್ಯಗುರುಗಳು ಪ್ರಜ್ಞಾಭವನ ಪ್ರೌಢಶಾಲೆ ಕಮಲನಗರ ರವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ಸಲ್ಲಿಸಿದರ ಸಾರಂಶವೆನೆಂದರೆ ಫಿರ್ಯಾದಿರವರು ಬೇಸಿಗೆ ರಜೆ ಪ್ರಯುಕ್ತ ದಿನಾಂಕ: 11/04/2017 ರಂದು 4:30 ಪಿ.ಎಮ್ ಗಂಟೆಗೆ ನಮ್ಮ ಶಾಲೆಯ ಎಲ್ಲಾ ಕೋಣೆಗಳಿಗೆ ಬೀಗ ಹಾಕಿ ಭದ್ರಪಡಿಸಿದ್ದು ಇರುತ್ತದೆ. ಸದರಿ ಕೋಣೆಗಳ ಪೈಕಿ ಒಂದು ಕೋಣೆಯಲ್ಲಿ 15 ಕಂಪ್ಯುಟರ್ ಬ್ಯಾಟರಿಗಳು ಇದ್ದವು. ಫಿರ್ಯಾದಿ ಹಾಗು ಶಾಲೆಯ ಸೇವಕ ರಮೇಶ ತಂದೆ ವೈಜಿನಾಥ ಭೈರೆ ಹಾಗು 2 ನೇ ದರ್ಜೆಯ ಸಹಾಯಕ ಬಾಲಾಜಿ ತಂದೆ ಗಂಗಾರಾಮ ಕಾಲೆಕರ ರವರು ದಿನಾಲು ಶಾಲೆಗೆ ಬಂದು ಕಛೇರಿಯ ಕೆಲಸಗಳನ್ನು ಮಾಡುತ್ತಿದ್ದರು ಹಿಗಿರುವಲ್ಲಿ ದಿನಾಂಕ: 25/05/2017 ರಂದು ಫಿರ್ಯಾದಿರವರು  ಖುದ್ದಾಗಿ ಕಂಪ್ಯುಟರ ಬ್ಯಾಟರಿಗಳಿದ್ದ ಕೋಣೆಯನ್ನು ನೋಡಲಾಗಿ ಸುರಕ್ಷಿತವಾಗಿರುತ್ತದೆ. ಆದರೆ ದಿನಾಂಕ: 29/05/2017 ರಂದು ಶಾಲೆಯ ಪ್ರಾರಂಭದವಾದ ಸಮಯದಲ್ಲಿ ಮುಂಜಾನೆ 09:00 ಗಂಟೆಗೆ ಶಾಲೆಗೆ ಬಂದು ಎಲ್ಲಾ ಕೋಣೆಗಳು ನೋಡಲಾಗಿ ಈ ಕೋಣೆಗಳ ಪೈಕಿ ಕಂಪ್ಯುಟರ ಬ್ಯಾಟರಿಗಳು ಇಟ್ಟಿದ್ದ ಕೋಣೆ ಬಾಗಿಲು ನೋಡಲು ಅದರ ಕೀಲಿ ಮುರಿದಿದ್ದು ತೆಗೆದು ನೋಡಲು ಅದರಲ್ಲಿದ್ದ 15 ಕಂಪ್ಯುಟರ್ ಬ್ಯಾಟರಿಗಳು ಇರಲಿಲ್ಲ. ಸದರಿ   ಬ್ಯಾಟರಿಗಳ ಅಂದಾಜು ಕಿ. 15,000/- ರೂ. ದಷ್ಟು ದಿನಾಂಕ: 25/05/2017 ರಿಂದ 29/05/2017 ಮುಂಜಾನೆ 10:00 ಗಂಟೆಯ ಅವಧಿಯಲ್ಲಿ ಕೋಣೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದು ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.

©ÃzÀgÀ UÁæ«ÄÃt oÁuÉ UÀÄ£Éß £ÀA. 38/17 PÀ®A 87 PÉ.¦. PÁAiÉÄÝ :-

¢£ÁAPÀ 30/05/2017 gÀAzÀÄ 1300 UÀAmÉUÉ §Pï ZËr  UÁæªÀÄzÀ ºÀ£ÀĪÀiÁ£À ªÀÄA¢gÀ ºÀwÛgÀ RįÁè eÁUÉAiÀÄ°è CAzÀgÀ §ºÁgÀ JA§ £À²©£À dÆeÁl DqÀÄwÛzÁÝUÀ ¦J¸ïL gÀªÀgÀÄ ¹§âA¢UÉ ºÉÆÃV zÁ½ ªÀiÁr dÆeÁl DqÀÄwÛzÀÝ ªÀåQÛUÀ¼ÁzÀ 1) GªÉÄñÀ vÀAzÉ §¸ÀªÀgÁd ªÀÄqÀQ ªÀAiÀÄ 40 ªÀµÀð eÁåw °AUÁAiÀÄvÀ GB MPÀÌ®ÄvÀ£À ¸ÁB §PïZËr  FvÀ£À ºÀwÛgÀ 3 E¸Éàl J¯É ºÁUÀÆ  290/- gÀÆ¥Á¬Ä 2) ¸ÀAvÉÆõÀ vÀAzÉ ºÀtªÀÄAvÀ ©gÁzÁgÀ  ªÀAiÀÄ 35 ªÀµÀð eÁåw °AUÁAiÀÄvÀ GB PÀÆ° PÉ®¸À ¸ÁB §PïZËr  FvÀ£À ºÀwÛgÀ 3 E¸Éàl J¯É ºÁUÀÆ  350/- gÀÆ¥Á¬Ä 3) ªÀÄÄfèï vÀAzÉ gÀ¦üPï«ÄAiÀiÁå eÁVgÀzÁgÀ ªÀAiÀÄ 46 ªÀµÀð eÁåw ªÀÄĹèA GB PÀÆ° PÉ®¸À ¸ÁB §PïZËr UÁæªÀÄ FvÀ£À ºÀwÛgÀ 3 E¸Éàl J¯É ºÁUÀÆ  320/- gÀÆ¥Á¬Ä»ÃUÉ CAzÀgÀ §ºÁgÀ DqÀÄwÛzÀÝ F ªÉÄð£À 3 d£ÀjUÉ zÀ¸ÀÛVj ªÀiÁrPÉÆAqÀÄ £À²©£À dÆeÁl DqÀÄwÛzÀÝ ¸ÀܼÀ¢AzÀ ªÀÄvÀÄÛ 3 d£À DgÉÆævÀgÀ PÀqɬÄAzÀ 960/-Æ ºÁUÀÆ 9 E¸Éàl J¯ÉUÀ¼ÀÄ  J®ègÀ ªÀÄzsÀå¢AzÀ 270/-gÀÆ 43 E¸Éàl J¯ÉUÀ¼ÀÄ »ÃUÉ J¯Áè MlÄÖ 1230/-gÀÆ. ªÀÄvÀÄÛ 52 E¸ÉàÃlÄ J¯ÉUÀ¼ÀÄ d¦Û ªÀiÁr PÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.


ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಗುನ್ನೆ ನಂ. 70/17 ಕಲಂ 78(3) ಕೆ.ಪಿ. ಕಾಯ್ದೆ ;-

ದಿನಾಂಕ-30/05/2017 ರಂದು ಮುಂಜಾನೆ 0930 ಗಂಟೆಗೆ  ಪಿ.ಎಸ್. ರವರು ಠಾಣೆಯಲ್ಲಿದ್ದಾಗ   ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ದುಬಲಗುಂಡಿ ಗ್ರಾಮದ ಶ್ರೀ ವೀರಭದ್ರೇಶ್ವರ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ  ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಗುರುಸಿದ್ದಪ್ಪಾ ತಂದೆ ಬಸವಣಪ್ಪಾ ಎಳವಂತಗಿ ವಯ: 64 ವರ್ಷ ಜಾ: ಲಿಂಗಾಯತ : ಕೂಲಿ ಕೆಲಸ ಸಾ: ಅಂಬಲಗಾ ತಾ: ಆಳಂದ ಸದ್ಯ ದುಬಲಗುಂಡಿ ಅಂತ ತಿಳಿಸಿದನು. ನಂತರ ಪಂಚರ ಸಮಕ್ಷಮ ಅವನ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ಒಟ್ಟು 1000/- ರೂ ನಗದು ಹಣ, 2 ಮಟಕಾ ಚೀಟಿ ಹಾಗೂ 1 ಪೆನ್ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಗುನ್ನೆ ನಂ. 71/17 ಕಲಂ 87 ) ಕೆ.ಪಿ. ಕಾಯ್ದೆ:-

ದಿನಾಂಕ 30/05/2017 ರಂದು ಅಪರಾಹ್ನ ಸಮಯದಲ್ಲಿ ಹಳ್ಳಿಖೇಡ (ಬಿ) ಬಿ.ಎಸ್.ಎಸ್.ಕೆ ರೈಲ್ವೆ ಬ್ರಿಜ್ ಹತ್ತಿರ ಕೆಲವು ಜನರು ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ   ಪಿ.ಎಸ್.ಐ  ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ 1) ಶಂಕರ ತಂದೆ ಬಸವಣಪ್ಪಾ ಸಜ್ಜನ ವಯ: 60 ವರ್ಷ ಜಾ: ಘಾಣಿಗ ಉ: ಕೂಲಿ ಕೆಲಸ 2] ಸಿದ್ದಿಕಮಿಯ್ಯಾ ತಂದೆ ಹುಸ್ಸೈನಸಾಬ ಬೆಳಕೇರಿ ವಯ: 55 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ 3] ಶಫಿ ತಂದೆ ವಹೀದಸಾಬ ಬಾಗವಾನ ವಯ: 35 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ 4] ಮುನೀರ ತಂದೆ ಮೆಹಬೂಬಸಾಬ ಬಾಗವಾನ ವಯ: 37 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ 5] ಶರಣಪ್ಪಾ ತಂದೆ ಈರಪ್ಪಾ ಜೈನಾಪೂರೆ ವಯ: 50 ವರ್ಷ ಜಾ: ಲಿಂಗಾಯತ ಉ: ಕೂಲಿ ಕೆಲಸ 6] ಜಾಫರ ತಂದೆ ಸಿದ್ದಿಕ್ ಸೌದಾಗರ ವಯ: 48 ವರ್ಷ ಜಾ: ಮುಸ್ಲಿಂ ಉ: ಕೂಲಿ ಕೆಲಸ ಎಲ್ಲರು ಸಾ: ಹಳ್ಳಿಖೇಡ (ಬಿ) ಅಂತ ತಿಳಿಸಿದರು. ನಂತರ ಜೂಜಾಟಕ್ಕೆ ಸಂಬಂಧಪಟ್ಟ 3 ಜನರ ಮಧ್ಯದಲ್ಲಿ ಇದ್ದ ಒಟ್ಟು 1970/- ರೂ ನಗದು ಹಣ ಮತ್ತು 52 ಇಸ್ಟಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್. ನಂ. 06/17 ಕಲಂ 174 ಸಿಆರ್.ಪಿ.ಸಿ :-



ದಿನಾಂಕ-31/05/2017 ರಂದು ಮುಂಜಾನೆ 0900 ಗಂಟೆಗೆ ಫಿರ್ಯಾದಿ ಶ್ರೀಮತಿ ರಾಜೇಶ್ವರಿ ಗಂಡ ಸಂಜೀವಕುಮಾರ ಮೇತ್ರೆ ಸಾ|| ಬೂತಾಳಿ ಗಲ್ಲಿ ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ಮೌಖಿಕ ಹೇಳಿಕೆ ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿ ಗಂಡನಾದ ಸಂಜೀವಕುಮಾರ ವಯ-41 ವರ್ಷ ರವರು ಒಕ್ಕುಲತನ ಕೆಲಸ ಮಾಡಿಕೊಂಡಿದ್ದರು.  ತಮ್ಮ ಹೊಲದಲ್ಲಿ ಒಕ್ಕುಲತನ ಕೆಲಸ ಮಾಡಿಕೊಂಡು   ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಇತ್ತಿಚಿಗೆ ಮನೆಯ ಖರ್ಚು ಹೆಚ್ಚಾಗಿದ್ದು, ಮತ್ತು ಹೊಲದಲ್ಲಿ ಲಾಗೋಡಿ ಹಾಕಿದ ಪ್ರಕಾರ ಬೆಳೆ ಬೆಳೆಯಲಾರದೆ ಪಿ.ಕೆ.ಪಿ.ಎಸ್ ಚಿಟಗುಪ್ಪಾ ಬ್ಯಾಂಕನಲ್ಲಿ ಹೊಲದ ಮೇಲೆ ನಮ್ಮ ಅತ್ತೆಯ ಹೆಸರಿನಲ್ಲಿ 1,50,000/- ರೂ. ಲೋನ ಮಾಡಿಕೊಂಡಿದ್ದು ಇರುತ್ತದೆ. ಮತ್ತು ಚಿಟಗುಪ್ಪಾ ಪತ್ತಿನ ಸೌಂವರ್ದ ಸಹಕಾರಿ ನಿಯಮಿತ ಬ್ಯಾಂಕನಲ್ಲಿ ನನ್ನ ಗಂಡನು ಹೊಲದ ಲಾಗೋಡಿ ಮತ್ತು ಮನೆಯ ಖರ್ಚಿಗಾಗಿ ತನ್ನ ಹೆಸರಿನಲ್ಲಿ 50,000/- ಸಾವಿರ ರೂ. ಸಾಲ ತೆಗೆದುಕೊಂಡಿರುತ್ತಾರೆ. ಹಾಗೂ ಖಾಸಗಿ ಸಾಲ ಸಹ ಮಾಡಿರುತ್ತಾರೆ. ಆದರೆ ಯಾರ ಹತ್ತಿರ ಸಾಲ ಮಾಡಿರುತ್ತಾರೆ ಎಂಬ ಬಗ್ಗೆ ನಮಗೆ ಗೊತ್ತಿರುವುದಿಲ್ಲಾ. ಈಗ ಸುಮಾರು ದಿವಗಳಿಂದ ನನ್ನ ಗಂಡ ನಮ್ಮ ಮನೆಯಲ್ಲಿ ನನ್ನ ಮತ್ತು ನಮ್ಮ ಅತ್ತೆಯ ಮುಂದೆ ಬೇಜಾರದಿಂದ ಹೊಲದ ಲಾಗೋಡಿಗಾಗಿ ಬ್ಯಾಂಕ ಮತ್ತು ಇತರೆ ಖಾಸಗಿ ಸಾಲ ತೆಗೆದುಕೊಂಡಿದ್ದು, ಈ ವರ್ಷ ಹೊಲದಲ್ಲಿ ಬೆಳೆಯು ಸಹ ಚನ್ನಾಗಿ ಆಗಿರುವುದಿಲ್ಲಾ. ಹೀಗಾದರೆ ನಾವು ಮಾಡಿದ ಸಾಲ ಹೇಗೆ ತಿರಿಸಬೇಕೆಂಬ ಚಿಂತೆಯಲ್ಲಿ ಇಂದು ಮುಂಜಾನೆ 04:00 ಗಂಟೆಯಿಂದ 06:00 ಗಂಟೆಯ ಅವಧಿಯಲ್ಲಿ ಚಿಟಗುಪ್ಪಾ ಪಟ್ಟಣದ ಮಹಾದೇವ ಮಂದಿರದ ಹತ್ತಿರ ಇರುವ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Yadgir District Reported Crimes

                                                      Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 88/2017 ಕಲಂ ಮನುಷ್ಯ ಕಾಣೆಯಾದ ಬಗ್ಗೆ;- ದಿನಾಂಕ 30/05/2017 ರಂದು 7 ಪಿಎಂಕ್ಕೆ ಪಿರ್ಯಾದಿ ಶ್ರೀಮತಿ ಅನ್ನಪೂರ್ಣ ಗಂ. ಅಂಬ್ರೇಶ ಆಂದೇಲಿ  ನಗರ ಸಭೆ ಸದಸ್ಯರು  ಯಾದಗಿರಿ ಸಾ: ಪಟೇಲ ವಾಡಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಕೊಟ್ಟಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ನಾನು ಮತ್ತು ನನ್ನ ಗಂಡನಾದ ಅಂಬ್ರೇಶ ತಂ. ಶಿವಣ್ಣ ಆಂದೇಲಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿರುತ್ತೇವೆ. ಹಿಗಿದ್ದು ದಿನಾಂಕ 26/05/2017 ಶುಕ್ರುವಾರ ಮುಂಜಾನೆ 11-30 ಗಂಟೆಗೆ ನನ್ನ ಗಂಡನು ನಗರ ಸಭೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು ಇರುತ್ತದೆ. ಸದರಿ ನನ್ನ ಗಂಡನ ಬಳಿ ಮೋಬೈಲ್ ಪೊನ ಇರುವುದಿಲ್ಲಾ. ಸದರಿ ದಿನಾಂಕ ಮತ್ತು ಸಮಯದಿಂದ ನನ್ನ ಗಂಡನು ನಾಪತ್ತೇಯಾಗಿದ್ದು ಇರುತ್ತದೆ. ಸದರಿ ನನ್ನ ಗಂಡನ ಬಗ್ಗೆ ನಾವು ನಮ್ಮ ಎಲ್ಲಾ ಸಂಭಂದಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದ್ದು ಮತ್ತು ನಾವು ಕೂಡಾ ಎಲ್ಲಾ ಕಡೆ ಹುಡುಕಾಡಿದ್ದು ಇರುತ್ತದೆ. ಆದರೆ ಅವರ ಸುಳಿವು ಸಿಕ್ಕಿರುವುದಿಲ್ಲಾ. ಆದ್ದರಿಂದ ಇಂದು ತಡವಾಗಿ ಬಂದು ಪಿರ್ಯಾದಿ ಸಲ್ಲಿಸುತ್ತಿದ್ದು ನಾಪತ್ತೆಯಾದ ನನ್ನ ಗಂಡನಾದ ಅಂಬ್ರೇಶ ತಂದೆ ಶಿವಣ್ಣ ಆಂದೇಲಿ ಇವರನ್ನು ಹುಡುಕಿಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.88/2017 ಕಲಂ. ಮನುಷ್ಯ ಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 27/2017 ಕಲಂ 279,337,338, IPC ಸಂ 187 ಐ.ಎಮ್.ವಿ ಆಕ್ಟ್ ;- ದಿನಾಂಕ 30/05/2017 ರಂದು 12-20  ಪಿ.ಎಂ.ಕ್ಕೆ ಫಿಯರ್ಾದಿ ತನ್ನ ಟಿ.ವಿ.ಎಸ್. ಸ್ಟಾರ್ ಸಿಟಿ ಮೊಟಾರು ಸೈಕಲ್ ನಂ.ಕೆಎ-33, ಕೆ-7046 ನೇದ್ದನ್ನು ತೆಗೆದುಕೊಂಡು ತಮ್ಮೂರಿನಿಂದ ಯಾದಗಿರಿಗೆ ಬಂದು ತನ್ನ ಮಗಳಿಗೆ ಹಾಸ್ಟೆಲ್ನಿಂದ ಕರೆದುಕೊಂಡು ನ್ಯೂ ಕನ್ನಡ ಕಾಲೇಜಿಗೆ ಅಡ್ಮಿಷನ್ ಮಾಡಿಸಿ ತಾನು ತನ್ನ ಮಗಳು ಕವಿತಾ ಕೂಡಿಕೊಂಡು ಮರಳಿ ಹಾಸ್ಟಲಗೆ ಹೊರಟಾಗ ಮಾರ್ಗ ಮದ್ಯೆ ಬಿ.ಎಸ್.ಎನ್.ಎಲ್. ಕಚೇರಿ ಹತ್ತಿರ ಇರುವ ಹಾಸ್ಟೆಲ್ ಕ್ರಾಸ್ನಲ್ಲಿ ಮೋಟಾರು ಸೈಕಲ್ನ್ನು ಬಲಗಡೆ ಟರ್ನ ಮಾಡುತ್ತಿದ್ದಾಗ ಆರೋಪಿತನು ತನ್ನ ಮೋಟಾರು ಸೈಕಲ್ ನಂ.ಕೆಎ-33, ಜೆ-9013 ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಪಿಯರ್ಾದಿಗೆ ಬಲಗಾಲು ಮುರಿದಂತಾಗಿ ಭಾರಿ ರಕ್ತಗಾಯವಾಗಿದ ಬಗ್ಗೆ ಅಪರಾಧ

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 75/2017 ಕಲಂ: 494,323,504,506 ಸಂ 149 ಐಪಿಸಿ;- ದಿನಾಂಕ: 30/05/2017 ರಂದು 3-30 ಪಿಎಮ್ ಕ್ಕೆ ನಮ್ಮ ಠಾಣೆಯ ಕೋರ್ಟ ಕರ್ತವ್ಯದ ಹೆಚ್.ಸಿ 57 ಭೋಜು ರವರು ಮಾನ್ಯ ಜೆಎಮ್ಎಫ್ಸಿ ನ್ಯಾಯಲಯ ಶಹಾಪೂರ ರವರ ಖಾಸಗಿ ಫಿರ್ಯಾಧಿ ಸಂ. 13/2017 ನೇದ್ದನ್ನು ತಂದು ಹಾಜರಪಡಿಸಿದ್ದು, ಸದರಿ ಖಾಸಗಿ ಫಿರ್ಯಾಧಿಯ ಸಂಕ್ಷೀಪ್ತ ಸಾರಾಂಶವೇನಂದರೆ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಿಕಾಜರ್ುನ ವ:27, ಉ:ಮನೆಕೆಲಸ ಸಾ:ಕಾಡಂಗೇರಾ (ಬಿ) ಇವರಿಗೆ ಈಗ ಸುಮಾರು 8 ವರ್ಷಗಳ ಹಿಂದೆ ಮಲ್ಲಿಕಾಜರ್ುನನೊಂದಿಗೆ ಕಾಡಂಗೇರಾದ ಪಡಸಿದ್ದೇಶ್ವರ ದೇವಸ್ಥಾನದಲ್ಲಿ ಗುರು-ಹಿರಿಯರ ಸಮಕ್ಷಮ ಹಿಂದೂ ಸಂಪ್ರದಾಯದ ಪ್ರಕಾರ ಲಗ್ನವಾಗಿದ್ದು ಇರುತ್ತದೆ. ಮದುವೆಯಾದಾಗಿನಿಂದ ಸುಮಾರು 3-4 ವರ್ಷಗಳ ಕಾಲ ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಜೀವನ ಕಳೆದಿದ್ದು, ಅವರಿಗೆ ಒಂದು ಹೆಣ್ಣು ಮಗು ಕೂಡ ಆಗಿರುತ್ತದೆ. ನಂತರ ಫಿರ್ಯಾಧಿದಾರಳ ಗಂಡ ಮಲ್ಲಿಕಾಜರ್ುನ, ಮಾವ ಸಿದ್ದಲಿಂಗಪ್ಪ, ಅತ್ತೆ ದೇವಿಂದ್ರಮ್ಮ ಮತ್ತು ಮೈದುನ ಶಿವರಾಜ ಇವರು ಸೇರಿಕೊಂಡು ಮೋಟರ್ ಸೈಕಲ ಖರೀದಿ ಮಾಡಲು 50 ಸಾವಿರ ರೂ ಹಣವನ್ನು ತನ್ನ ತವರು ಮನೆಯಿಂದ ತರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡಲಾರಂಭಿಸಿದರು. ಹಿರಿಯರು ಮತ್ತು ಸಂಬಂಧಿಕರು ಕೂಡಿಸಿಕೊಂಡು ಈ ರೀತಿ ಮಾಡುವುದು ಸರಿ ಅಲ್ಲ ಎಂದು ಬುದ್ದಿ ಮಾತು ಹೇಳಿದರು ಕೇಳದೆ ಅವಳಿಗೆ ಅದೇ ರೀತಿ ಕಿರುಕುಳ ಕೊಡುತ್ತಾ ಬರುತ್ತಿದ್ದರು. ದಿನಾಂಕ: 20/01/2017 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಫಿರ್ಯಾಧಿದಾರಳ ಗಂಡ ಮಲ್ಲಿಕಾಜರ್ುನನು ತನ್ನ ತಂದೆ, ತಾಯಿ ಮತ್ತು ತಮ್ಮ ಶಿವರಾಜ ಇವರೊಂದಿಗೆ ಬಂದು ಗಭರ್ೀಣಿ ಇರುವ ಫಿರ್ಯಾಧಿದಾರಳಿಗೆ ಹೊಡೆದು ಅವಾಚ್ಯ ಬೈದು ನಾವು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇವೆ ಎಂದು ಮನೆಯಿಂದ ಹೊರಗಡೆ ಹಾಕಿರುತ್ತಾರೆ. ಆಗ ಫಿರ್ಯಾಧಿದಾರಳು ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟ ಮೇರೆಗೆ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 09/2017 ಕಲಂ: 323,498(ಎ),504 ಸಂ 34 ಐಪಿಸಿ ಮತ್ತು 3 & 4 ಡಿಪಿ ಎಕ್ಟ್ ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ. ಆಗಿನಿಂದ ಫಿರ್ಯಾಧಿದಾರಳು ತವರು ಮನೆ ಕಾಡಂಗೇರಾ (ಬಿ) ಗ್ರಾಮದಲ್ಲಿ ವಾಸ ಇರುತ್ತಾಳೆ. ದಿನಾಂಕ: 09/04/2017 ರಂದು ಮದ್ಯಾಹ್ನ 12-30 ಪಿಎಮ್ ಸುಮಾರಿಗೆ ಸಾಕ್ಷೀದಾರರಾದ 1) ಭೀಮಪ್ಪ ತಂದೆ ಹಣಮಂತ ಹಿರೆನೂರ, 2) ಶರಣಪ್ಪ ತಂದೆ ಬಸವರಾಜ ಪೊಲೀಸ್ ಪಾಟಿಲ್ ಇಬ್ಬರೂ ಸಾ:ಕಾಡಂಗೇರಾ ಇವರು ಶ್ರೀರಂಗಪೂರದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಮಾಡಲು ಹೋದಾಗ ಅಲ್ಲಿ ಮದುವೆ ತಯಾರಿ ನಡೆದಿದ್ದು, ನೋಡಿ ಸಮೀಪ ಹೋದಾಗ ಫಿರ್ಯಾಧಿದಾರಳ ಗಂಡ ಮಲ್ಲಿಕಾಜರ್ುನನು ಲಕ್ಷ್ಮೀ ಎಂಬುವಳೊಂದಿಗೆ ಎರಡನೆ ಮದುವೆ ಮಾಡಿಕೊಳ್ಳುತ್ತಿದ್ದು, ಅದರ ಅಕ್ಕಿಕಾಳನ್ನು ಇವರಿಗೆ ಕೊಟ್ಟರು. ಫಿರ್ಯಾಧಿ ಮಲ್ಲಮ್ಮಳ ಅತ್ತೆ, ಮಾವ, ಮತ್ತು ಮೈದುನ ಹಾಗೂ ಮೈದುನನ ಹೆಂಡತಿ ಮಲ್ಲಮ್ಮ ಮತ್ತು ಲಕ್ಷ್ಮೀ ಇವಳ ತಂದೆ ಬುಗ್ಗಪ್ಪ ಹಾಗೂ ಅಣ್ಣ ಶರಣಪ್ಪ ಇವರೆಲ್ಲರೂ ಇದ್ದು, ಮದುವೆ ಏಪರ್ಾಡು ಮಾಡಿ ಕಾರ್ಯಕ್ರಮದಲ್ಲಿ ಓಡಾಡುತ್ತಿದ್ದರು. ಆಗ ಭೀಮಪ್ಪ ಮತ್ತು ಶರಣಪ್ಪ ಇಬ್ಬರೂ ಅವರಿಗೆ ಈಗಾಗಲೇ ಮಲ್ಲಿಕಾಜರ್ುನನಿಗೆ ಮಲ್ಲಮ್ಮಳೊಂದಿಗೆ ಮದುವೆಯಾಗಿದೆ ಮತ್ತೆಕೆ ಎರಡನೆ ಮದುವೆ ಮಾಡುತ್ತಿದ್ದಿರಿ ಇದು ಸರಿ ಅಲ್ಲ ಎಂದು ಹೇಳಿದರೆ ಅವರು ಕಿವಿ ಮೇಲೆ ಹಾಕಿಕೊಳ್ಳದೆ ತಿರಸ್ಕರಿಸಿದರು. ಲಕ್ಷ್ಮೀ ಇವಳ ತಂದೆ ಮತ್ತು ಅಣ್ಣನಿಗೂ ಕೂಡ ಹೇಳಿದರು ಕೇಳದೆ ಎಲ್ಲರೂ ಸೇರಿ ಭೀಮಪ್ಪ ಮತ್ತು ಶರಣಪ್ಪ ಇಬ್ಬರಿಗೆ ಅವಾಚ್ಯ ಬೈದು ಕೈಯಿಂದ ಹೊಡೆದು ದೇವಸ್ಥಾನದಿಂದ ಹೊರಗಡೆ ಹಾಕಿ ಈ ವಿಷಯ ಪೊಲೀಸ್ ಠಾಣೆ ಅಥವಾ ಯಾರಿಗಾದರೂ ಹೇಳಿದರೆ ನಿಮಗೆ ಬಿಡುವುದಿಲ್ಲ ಎಂದು ಧಮಕಿ ಹಾಕಿ ಕಳಿಸಿರುತ್ತಾರೆ. ನಂತರ ಸಾಕ್ಷೀದಾರರು ಗ್ರಾಮಕ್ಕೆ ಬಂದು ನಡೆದ ಸಂಗತಿಯನ್ನು ಫಿರ್ಯಾಧಿದಾರಳಿಗೆ ತಿಳಿಸಿದಾಗ ಫಿರ್ಯಾಧಿದಾರಳು ದಿನಾಂಕ: 14/04/2017 ರಂದು  ತನ್ನ ಸಂಬಂಧಿಕರು ಮತ್ತು ಸಾಕ್ಷೀದಾರೊಂದಿಗೆ ತನ್ನ ಗಂಡನ ಮನೆಗೆ ಕೇಳಲು ಹೋದಾಗ ಗಂಡ ಮಲ್ಲಿಕಾಜರ್ುನನು ಹೌದು ನಾನು ಲಕ್ಷ್ಮೀಯೊಂದಿಗೆ ಎರಡನೆ ಲಗ್ನ ಮಾಡಿಕೊಂಡಿದ್ದೇನೆ ನೀನೆನು ಮಾಡುತ್ತಿ ಎಂದು ಅವಾಚ್ಯ ಬೈದು ಗಂಡ, ಎರಡನೆ ಹೆಂಡತಿ ಲಕ್ಷ್ಮೀ, ಅತ್ತೆ-ಮಾವ ಮತ್ತು ಮೈದುನ, ಮೈದುನನ ಹೆಂಡತಿ ಎಲ್ಲರೂ ಸೇರಿ ಕೈಯಿಂದ ಹೊಡೆದು ಅವಾಚ್ಯ ಬೈದು ಮನೆಯಿಂದ ಹೊರಗೆ ಹಾಕಿ ಪೊಲೀಸರಿಗೆ ಅಥವಾ ಯಾರಿಗಾದರೂ ಹೇಳಿದಲ್ಲಿ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಕಾರಣ ಈಗಾಗಲೇ ಫಿರ್ಯಾಧಿದಾರಳೊಂದಿಗೆ ಲಗ್ನವಾಗಿದ್ದರು, ಲಕ್ಷ್ಮೀ ಎಂಬುವಳೊಂದಿಗೆ ಎರಡನೆ ಲಗ್ನ ಮಾಡಿಕೊಂಡಿದ್ದಲ್ಲದೆ ಕೇಳಲು ಹೊದರೆ ಅವಾಚ್ಯ ಬೈದು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ನ್ಯಾಯಾಲಯದಲ್ಲಿ ಖಾಸಗಿ ಫಿರ್ಯಾಧಿ ಸಲ್ಲಿಸಿದ್ದು ಇರುತ್ತದೆ. ಸದರಿ ಖಾಸಗಿ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 75/2017 ಕಲಂ: 494,323,504,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 150/2017 ಕಲಂಃ 87 ಕೆ.ಪಿ ಆಕ್ಟ್ ;- ದಿನಾಂಕ: 30/05/2017 ರಂದು 1-30 ಪಿ.ಎಮ್ ಕ್ಕೆ ಶ್ರೀ ಆರ್. ಎಫ್ ದೇಸಾಯಿ ಪಿ.ಐ ಸಾಹೇಬರು 5ಜನ ಆರೋಪಿತರು, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು 10-30 ಎ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಶಾಂತಪೂರ ಗ್ರಾಮದ ಸೋಪಣ್ಣ ಮುತ್ಯಾ ದಗರ್ಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕಿಟ್ಟು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಹೆಚ್.ಸಿ.105, ಹೆಚ್.ಸಿ-170, ಪಿ.ಸಿ.142, ಪಿಸಿ-235, ಪಿಸಿ-376 ಹಾಗು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೀಟ ಜೂಜಾಟ ಆಡುತ್ತಿದ್ದ 5 ಜನ ಆರೋಪಿತರನ್ನು ಹಿಡಿದು, ಸದರಿಯವರಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 1740/-ರೂಪಾಯಿಗಳು ಮತ್ತು 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನಾ ನಂಬರ 150/2017 ಕಲಂ. 87 ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 50/2017 ಕಲಂ: 323, 324, 504, 506, 354,355, ಖ/ಘ 34  ಕಅ;- ದಿನಾಂಕ 31.05.2017 ರಂದು ಬೇಳಿಗ್ಗೆ 10:00 ಗಂಟೆಗೆ ಪಿಯರ್ಾದಿ ಶ್ರೀಮತಿ ಶ್ರೀದೇವಿ ಗಂಡ ಸಂಗಯ್ಯ ಮುತ್ತಗಿ ವ:36 ವರ್ಷ ಉ:ಮನೆ ಕೆಲಸ ಜಾ:ಹಿಂದು ಲಿಂಗಾಯತ ಸಾ:ಕೊಡೆಕಲ್ಲ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 24.05.2017 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಕೊಡೆಕಲ್ಲ ಗ್ರಾಮದ ಊರೊಳಗಿನ ಬಸವಣ್ಣ ದೇವರ ಗುಡಿಯ  ಹತ್ತಿರದಲ್ಲಿ ಇರುವ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಗಂಡ ಸಂಗಯ್ಯ ಅತ್ತೆ ನೀಲಮ್ಮ ಮೈದುನ ಕಪ್ಪಡಿ ಸಂಗಯ್ಯ ಮತ್ತು ಅವರ ಹೆಂಡತಿಯಾದ ನೀಲಮ್ಮನವರು ಎಲ್ಲರೂ ಮನೆಯಲ್ಲಿ ಟಿವಿನೋಡುತ್ತಾ ಕುಳಿತಿದ್ದು ಆ ವೇಳೆಗೆ ಯಾರೋ ನಮ್ಮ ಮನೆಯ ಬಾಗಿಲು ಪಡೆಯುಸ ಸಪ್ಪಳ ಕೇಳಿ ನನ್ನ ಮೈದುನ ಕಪ್ಪಡಿ ಸಂಗಯ್ಯನವರು ಹೋಗಿ ಬಾಗಿಲು ತೆರೆದು ನೋಡಲಾಗಿ ಅವರು ನಮ್ಮೂರ ರಮೇಶ ತಂದೆ ಹಣಮಂತ್ರಾಯಗೌಡ ದೋರಿ(ಹೊರಟ್ಟಿ) ಮತ್ತು ಪರಶುರಾಂ ತಂದೆ ಸಂಗಪ್ಪ ದೋರಿಗೋಳ(ಆರುಬಳ್ಳ) ರವರು ಇದ್ದು ಅವರಿಗೆ ನನ್ನ ಮೈದುನನು ಈ ವೇಳೆಯಲ್ಲಿ ಇಲ್ಲಿಗೆ ಯಾಕೆ ಬಂದು ನಮ್ಮ ಮನೆಯ ಬಾಗಿಲು ಬಡಿಯುತ್ತಿರಿ ಎಂದು ಕೇಳಿದ್ದಕ್ಕೆ ಅವರಿಬ್ಬರು ಏ ಬೋಸುಡಿ ಮಗನೇ ಕಪ್ಪಡಿ ಸಂಗ್ಯಾ ನಿನ್ನ ಹತ್ತಿರ ನನ್ನದೇನು ಕೆಲಸವಿರುತ್ತದೆ ನಿನ್ನ ತಂಗಿಯನ್ನು ಕರಿ ಅವಳಜೊತೆ ಮಾತನಾಡುವದಿದೆ ಅಂತಾ ಅಂದಿದ್ದು ಅದಕ್ಕೆ ನನ್ನ ಮೈದುನ ಮತ್ತು ನನ್ನ ಗಂಡ ಸಂಗಯ್ಯನವರು ನಮ್ಮ ತಂಗಿಯ ಹತ್ತಿರ ನಿನ್ನದೇನು ಕೆಲಸವಿರುತ್ತದೆ ಇಲ್ಲಿಂದ ಹೋಗಿರಿ ಅಂತಾ ಅಂದಾಗ ಏ ಬೋಸುಡಿ ಮಕ್ಕಳೆ ನಮಗೆ ಎದುರು ಮಾತನಾಡುತ್ತಿರೇನಲೇ ಅಂತಾ ಅಂದವರೇ ಮೈದುನ ಕಪ್ಪಡಿ ಸಂಗಯ್ಯನವರಿಗೆ ಪರಶುರಾಮನು ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಬಡಿಗೆಯಿಂದ ಬೆನ್ನಿನ ಮೇಲೆ ಮತ್ತು ಕಪಾಳದ ಮೇಲೆ ಹೊಡೆದಿದ್ದು ಇದರಿಂದ ಗುಪ್ತಪೆಟ್ಟುಗಳಾಗಿದ್ದು ನನ್ನ ಗಂಡ ಸಂಗಯ್ಯನವರಿಗೆ ಕೈಯಿಂದ ಎಡಗಡೆ ಬುಜದ ಮೇಲೆ ಬೆನ್ನಿನ ಮೇಲೆ ರಮೇಶನು ಹೊಡೆದಿದ್ದು ಪರಶುರಾಮನು ನನ್ನ ಗಂಡ ಮತ್ತು ಮೈದುನರಿಗೆ ಈ ಸುಳೆ ಮಕ್ಕಳದ್ದು ಬಹಳ ಆಗಿದೆ ಅಂತಾ ಬೈದು ನನ್ನ ಮೈದುನನಿಗೆ ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಹೊಡೆಯಲು ಬೀಸಿದ್ದು ಅದರಿಂದ ನನ್ನ ಮೈದುನನು ತಪ್ಪಿಸಿಕೊಂಡಿದ್ದು ನನ್ನ ಗಂಡ ಮತ್ತು ಮೈದುನರಿಗೆ ರಮೇಶ ಮತ್ತು ಪರಶುರಾಮ ರವರು ಹೊಡೆಯುವದನ್ನು ನೋಡಿ ನಾನು ಮತ್ತು ನನ್ನ ಅತ್ತೆ ಸಣ್ಣ ನೀಲಮ್ಮ ಮತ್ತು ಮೈದುನನ ಹೆಂಡತಿಯಾದ ನೀಲಮ್ಮ ರವರು ಬಿಡಿಸಲು ಹೋದಾಗ ನಮ್ಮೆಲ್ಲರಿಗೂ ರಮೇಶ ಮತ್ತು ಪರಶುರಾಮ ರವರು ಈ ಸುಳೇರದು ಬಹಳ ಆಗಿದೆ ಅಂತಾ ಬೈದು ನನಗೆ ಪರಶುರಾಮನು ನೂಕಿಕೊಟ್ಟಿದ್ದು ರಮೇಶನು ನನ್ನ ಕೈಹಿಡಿದು ಜಗ್ಗಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿ ಚಪ್ಪಲಿಯಿಂದ ನನ್ನ ಮುಖದ ಮೇಲೆ ಬೆನ್ನಿನ ಮೇಲೆ ಹೊಡೆದಿದ್ದು ಹಾಗೂ ನನ್ನ ಅತ್ತೆ ಸಣ್ಣ ನೀಲಮ್ಮನವರಿಗೂ ರಮೇಶನು ಕೈಹಿಂದ ಮುಖದ ಮೇಲೆ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯಪಡಿಸಿದ್ದು ನನ್ನ ನೆಗೇಣಿ ನೀಲಮ್ಮ ರವರಿಗೆ ಪರಶುರಾಮನು ಮೈಮೇಲಿನ ಬಟ್ಟೆಹಿಡಿದು ಜಗ್ಗಾಡಿ ಕೈಯಿಂದ ಕಪಾಳದ ಮೇಲೆ ಹೊಡೆದಿದ್ದು ಆಗ ನಾವು ಚೀರಾಡಲು ನಮ್ಮ ಪಕ್ಕದ ಮನೆಯ ಬಸವರಾಜ ತಂದೆ ವೀರಸಂಗಯ್ಯ ಕೊಡೆಕಲ್ಲಮಠ ಹಾಗೂ ಎದುರು ಮನೆಯ ದೇವಮ್ಮ ಗಂಡ ಶ್ರೀಕಾಂತ ಪತ್ತಾರ ರವರು ಬಂದು ನೋಡಿ ಬಿಡಿಸಿದ್ದು ಇವರು ಬಂದು ಬಿಡಿಸದಿದ್ದರೇ ರಮೇಶ ಮತ್ತು ಪರಶುರಾಮ ರವರು ನಮ್ಮೇಲ್ಲರಿಗೂ ಇನ್ನು ಹೊಡೆಬಡೆ ಮಾಡುತ್ತಿದ್ದರು ಹೋಗುವಾಗ ರಮೇಶ ಮತ್ತು ಪರಶುರಾಮ ರವರು ಸುಳಿಮಕ್ಕಳೆ ಈ ಬಗ್ಗೆ ನಿವೇನಾದರೂ ಪೊಲೀಸ್ ಠಾಣೆಗೆ ಹೋಗಿ ಕೇಸುಗಿಸು ಅಂತಾ ಮಾಡಿದರೇ ನಿಮಗೆ ಜೀವಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋಗಿದ್ದು ಇವರಿಬ್ಬರನ್ನು ನಾವು ಲೈಟಿನ ಬೇಳಕಿನಲ್ಲಿ ಗುತರ್ಿಸಿದ್ದು ನಮಗಾರಿಗೂ ಈ ಘಟನೆಯಲ್ಲಿ ಅಷ್ಟೇನು ಪೆಟ್ಟಾಗಿರುವದಿಲ್ಲ ಉಪಚಾರಕ್ಕೆ ಹೋಗುವದಿಲ್ಲ ನಾವು ರಮೇಶ ಮತ್ತು ಪರಶುರಾಮರವರಿಗೆ ಅಂಜಿ ಇಲ್ಲಿಯವರೆಗೂ ಮನೆಯಲ್ಲಿ ಇದ್ದು ಹಿರಿಯರೊಂದಿಗೆ ವಿಚಾರಿಸಿ ಈ ದಿವಸ ತಡವಾಗಿ ಬಂದು ಪಿಯರ್ಾದಿ ಕೊಡುತ್ತಿದ್ದು ವಿನಾಕಾರಣ ನಮ್ಮ ಮನೆಯವರೇಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ,ಚಪ್ಪಲಿಯಿಂದ ಹೊಡೆದು ಕೈಹಿಡಿದು ಬಟ್ಟೆಹಿಡಿದು ಎಳದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ ಇಬ್ಬರ ಮೇಲೂ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಾರಾಂಶ
   
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 51/2017  ಕಲಂ 376,504, ಸಂಗಡ 34 ಐಪಿಸಿ ಮತ್ತು ಕಲಂ 4 ಪೋಕ್ಸೊ ಕಾಯ್ದೆ ಸಂಗಡ 3(1), (R), (S), (w). SC/ST PA Act 1989;- ದಿನಾಂಕ 31.05.2017 ರಂದು 14:30 ಗಂಟೆಗೆ ಪಿಯರ್ಾದಿ ಕುಮಾರಿ ವಿಜಯಲಕ್ಷ್ಮಿ ತಂದೆ ಪರಸಪ್ಪ ಬಿರಾದಾರ ವ:17 ವರ್ಷ ಉ:ವಿದ್ಯಾಥರ್ಿ ಜಾ:ಹಿಂದು ಬೇಡರ (ಎಸ್ ಟಿ)ಸಾ:ಕಡದರಾಳ ಹಾ:ವ:ಬೂದಿಹಾಳ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಸ್ವಂತ ಊರು ಕಡದರಾಳ ಆಗಿದ್ದು ನನ್ನ ಅಜ್ಜಿಯಾದ ಶಿವಬಸಮ್ಮ ಗಂಡ ಗದ್ದೆಪ್ಪ ನಾಟಿಕಾರ ಸಾ:ಬೂದಿಹಾಳ (ನನ್ನ ತಾಯಿಯ ತಾಯಿ)ಇವರ ಮನೆಯಲ್ಲಿ ನಾನು ನಾಲ್ಕು ವರ್ಷವದಳಿದ್ದಾಗಿನಿಂದಲೇ ವಾಸವಾಗಿದ್ದು 1 ರಿಂದ 7 ನೇ ತರಗತಿವರೆಗೆ ಬೂದಿಹಾಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅಬ್ಯಾಸಮಾಡಿದ್ದೇನೆ 8 ನೇ ತರಗತಿಯನ್ನು ಕೊಡೆಕಲ್ಲದ ಸರಕಾರಿ ಪ್ರೌಡಶಾಲೆಯಲ್ಲಿ 9 ರಿಂದ 10 ನೇ ತರಗತಿಯನ್ನು ಮುದ್ದೆಬಿಹಾಳದ ವಿ.ಬಿ.ಸಿ ಪ್ರೌಡಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದ್ದೇನೆ. ದಿನಾಂಕ 18.05.2017 ಗುರುವಾರ ಬೆಳಗಿನ 10-30 ರ ಸುಮಾರಿಗೆ ಕೊಡೆಕಲ್ಲಗೆ ಬಟ್ಟೆಖರಿದಿಗೆಂದು ಬಂದಿದ್ದೆ ಮರಳಿ ಬೂದಿಹಾಳಕ್ಕೆ ಹೋಗುವಾಗ ಸಮಯ ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಕೊಡೆಕಲ್ಲ ಗ್ರಾಮದ ಶ್ರೀ ಗದ್ದೆಮ್ಮ ದೇವಿಕಟ್ಟೆಯ ಕ್ರಾಸಗೆ ವಾಹನ ವಿಲ್ಲದ ಕಾರಣ ಅಲ್ಲಿ ನಿಂತು ಕಾಯುತ್ತಿದ್ದಾಗ ಅದೇ ಸಮಯಕ್ಕೆ ಯಲ್ಲಾಲಿಂಗ ತಂದೆ ಜೆಟ್ಟೆಪ್ಪ ಪೂಜಾರಿ ಸಾ:ಬೂದಿಹಾಳ ಜಾ:ಹಿಂದು ಕುರಬರ ಎಂಬಾತನು ನಾನು ವಾಹನ ಕಾಯುತ್ತಿರುವ ಸ್ಥಳಕ್ಕೆ ಬೈಕಿನಲ್ಲಿ ನನ್ನ ಹತ್ತಿರಕ್ಕೆ ಬಂದು ಎಲ್ಲಿಗೆ ಹೋಗುತ್ತಿದ್ದಿಯಾ ಎಂದು ಕೇಳಿದ ಆಗ ನಾನು ಬೂದಿಹಾಳಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದೆ ಅದಕ್ಕವನು ನಾನು ಬೂದಿಹಾಳಕ್ಕೆ ಹೋರಟ್ಟಿದ್ದೇನೆ ಎಂದು ಹೇಳಿದ ಆತನು ನನ್ನ ಬೈಕಿನಲ್ಲಿ ಬನ್ನಿ ಎಂದು ಕೇಳಿದ ವಾಹನಕ್ಕಾಗಿ ಕಾದು ಕುಳಿತ ನಾನು ಬೇಸರವಾಗಿದ್ದು ಅವನ ಗಾಡಿಯಲ್ಲಿ ಹೋಗಲು ನಿರ್ದರಿಸಿದೆ ಅವನ ಜೋತೆ ಬೈಕಿನಲ್ಲಿ ಹೊರಟೆ ಮುಂದೆ ದಾರಿಯಲ್ಲಿ ಹೋಗುತ್ತಿರುವಾಗ ಹೋಗಬೇಕಾದ ದಾರಿಗೆ ಹೋಗದೆ ಕೊಡೆಕಲ್ಲಿನ ಶ್ರೀ ಶರಣಮ್ಮನವರ ಮಠದಿಂದ ಮುಖ್ಯ ಕಾಲುವೆಗೆ ಹೋಗುವ ಮಾರ್ಗಕ್ಕೆ ಗಾಡಿಯನ್ನು ತಿರುಗಿಸಿದಾಗ ನಾನು ಗಾಬರಿಗೊಂಡು ಈ ಕಡೆ ಯಾಕೆ ಹೋಗುತ್ತಿದ್ದಾರಾ ಎಂದು ಕೇಳಿದ ಗಾಡಿಯನ್ನು ನಿಲ್ಲಿಸು ಎಂದು ತರಾಟೆಗೆ ತಗೆದುಕೊಂಡು ಅದಕ್ಕವನು ನನ್ನ ಮಾತನ್ನು ಲೆಕ್ಕಿಸದೇ ವೇಗವಾಗಿ ಬೈಕನ್ನು ಹೋಡಿಸುತ್ತಾ ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಬೈಕನ್ನು ನಿಲ್ಲಿಸಿದ ಇಲ್ಲಿ ಯಾಕೆ ಗಾಡಿಯನ್ನು ನಿಲ್ಲಿಸಿದೇ ಎಂದು ಕೇಳಿದಾಗ ಆತನು ನಿನ್ನಮೇಲೆ ಸುಮಾರು ದಿನಗಳಿಂದ ಮೋಹಿಸುತ್ತಿದ್ದೇನೆ ಈಗ ನೀನು ನನ್ನ ಲೈಂಗಿಕ ಆಸೆಯನ್ನು ಈಡೇರಿಸದರೇ ಮಾತ್ರ ನಿನ್ನನ್ನು ಬಿಡುತ್ತೇನೆ ಇಲ್ಲದಿದ್ದರೇ ಬಿಡಲ್ಲ ಎಂದನು ಆಗ ನಾನು ಭಯಗೊಂಡು ಅಳುತ್ತಾ ನಮ್ಮ ಮನೆಯಲ್ಲಿ ಹೇಳುತ್ತೇನೆ ಎಂದು ಅಳುತ್ತಾ ಪರಪರಿಯಾಗಿಕೇಳಿಕೊಂಡರೂ ಸಹ ಒತ್ತಾಯ ಪೂರ್ವಕವಾಗಿ ನನ್ನ ಕೈಯನ್ನು ಹಿಡಿದು ಎಳೆದುಕೊಂಡು ಹೋಗಲು ಪ್ರಯತ್ನಿಸಿದಾಗ ನಾನು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದೆ ಆದರೂ ನನ್ನನ್ನು ಬಿಗಿದಪ್ಪಿ ಹಿಡಿದು ಯಾರು ಇಲ್ಲದ ಹೊಲದಲ್ಲಿ ಎಳದೋಯ್ದು  ಬಲತ್ಕಾರದಿಂದ ನನ್ನ ಬಟ್ಟೆ ಬಿಚ್ಚಿ ಎಷ್ಟೆ ಅಳುತ್ತಿದ್ದರೂ ಕೇಳದೆ ನನ್ನ ಜೊತೆಗೆ ಸಂಬೋಗಮಾಡಿ ಏನು ಮಾಡುತ್ತಿಯಾ ಮಾಡು ನಿನ್ನ ಮಾವರನ್ನು ನೋಡಿದ್ದೇನೆ ನಿಮ್ಮ ಬೇಡರ ಜಾತಿಯನ್ನು ನೋಡಿದ್ದೇನೆ ನನ್ನ ಶೆಂಟ ಅರಕ್ಕೊಂತಾರ ಅರಕ್ಕೊಳಿ ಅಂತಾಅಂದು ಜಾತಿ ಎತ್ತಿ ಹಿಯಾಳಿಸಿ ಬೈದನು ಈ ಕೃತ್ಯವನ್ನು ಎಸಗಿದ ಆತನು ನನ್ನನ್ನು ಅಲ್ಲಿಯೇ ಬಿಟ್ಟು ಹೊರಟು ಹೋದ ಆಗ ನಾನು ಒಬ್ಬಳೆ ಘಟನೆ ನಡೆದ ಸ್ಥಳದಿಂದ ನಡೆದುಕೊಂಡು ಮನೆಗೆ ಹೊದವಳೆ ನನ್ನ ಅಜ್ಜಿಗೆ ಮತ್ತು ಮಾವನಾದ ಶರಣಪ್ಪನಿಗೆ ಈ ವಿಷಯವನ್ನು ತಿಳಿಸಿದೇನು ಆಗ ಅಜ್ಜಿ ಮತ್ತು ಮಾವ ನನ್ನ ಮೇಲೆ ಅತ್ಯಾಚಾರ ವೆಸಗಿದವನ ತಂದೆಯಾದ ಜೆಟ್ಟೆಪ್ಪ ತಂದೆ ನೀಲಪ್ಪ ಪೂಜಾರಿ ಇವರನ್ನು ಕರೆಯಿಸಿ ವಿಚಾರಿಸಿದಾಗ ಈ ವಿಷಯವನ್ನು ತಿಳಿಸಿದಾಗ ಆತನು ನನ್ನಮಗ ಮಾಡಿದರೂ ಮಾಡಿರಬಹುದು ಈಗ ಏನು ಮಾಡುತ್ತಿರಿ ಕೇಸು ಮಾಡತಿರಾ ಮಾಡಿ ಏನ ಕಿತ್ತೊಗಿಂತಿರಿ ಎಂದು ಅವನು ಮತ್ತು ಅವಳ ಅಳಿಯನಾದ ಬಸವರಾಜ ವಜ್ಜಲ ಸಾ:ಬೂದಿಹಾಳ ಇವರಿಬ್ಬರು ಕೂಡಿ ಬಾಯಿಗೆ ಬಂದ ಆಗೆ ಅವಾಚ್ಯ ಶಬ್ದಗಳಿಂದ ಬೈದು ಹೋದರು ನಮಗೆ ಏನು ಮಾಡಬೇಕೆಂದು ದಿಕ್ಕು ತೋಚದೆ ಕೇಸು ಮಾಡಲು ನಿರ್ದರಿಸಿದ್ದು ಆದಕಾರಣ ತಾವು ನನ್ನ ದೂರನ್ನು ಗಂಬಿರವಾಗಿ ಪರಿಗಣಿಸಿ ಅನ್ಯಾಯವಾಗಿರುವ ನನಗೆ ನ್ಯಾಯಕೊಡಿಸಬೇಕು ಅತ್ಯಾಚಾರವೆಸಗಿದವನ ವಿರುದ್ದ ಹಾಗೂ ಅವನ ತಂದೆ ಮತ್ತು ಬಸವರಾಜ ವಜ್ಜಲ ರವರ ಮೇಲೆ ಕಾನೂನು ರೀತಿ ಕ್ರಮ  ಕೈಕೊಳ್ಳಬೇಕೆಂದು ಈ ದಿವಸ ತಡವಾಗಿ ಬಂದಿರುವೇನು ಅಂತಾ ಸಾರಾಂಶ 
 

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುಣವಂತ ತಂದೆ ಶಂಕರ ಬಿಸೆ ಸಾ: ಮಣೂರ ಇವರು ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜಾರಿಕೆ ಸೇವೆ ಮಾಡುತ್ತಿದ್ದು  ನಮ್ಮಂತೆ ನಮ್ಮೂರಿನ ತಮ್ಮಣ್ಣ ತಂದೆ ಶಿವಪ್ಪ ಪೂಜಾರಿ ಇವರ ಕುಟುಂಬಕ್ಕು ಸಹ ಪೂಜಾರಿಕೆಯ ಪಾಲು ಇರುತ್ತದೆ, ಈಗ ಕೆಲವು ವರ್ಷಗಳಿಂದ ಸದರಿ ತಮ್ಮಣ್ಣ ಪೂಜಾರಿ ಮತ್ತು ಅವನ ಕಡೆಯವರು ನಮಗೆ ಶ್ರೀ ಯಲ್ಲಮ್ಮ ದೇವಸ್ಥಾನದ ಪೂಜಾರಿಕೆ ಪೂರ್ತಿ ನಮ್ಮದು ಇರುತ್ತದೆ ನೀವು ಇನ್ನುಮುಂದೆ ಪೂಜಾರಿಕೆ ಮಾಡಬೇಡಿ ಅಂತಾ ಹೇಳಿದ್ದರಿಂದ ನಮಗೂ ಅವರಿಗೂ ತಕರಾರು ಆಗಿರುತ್ತದೆ. ಅಂದಿನಿಂದ ಸದರಿ ತಮ್ಮಣ್ಣ ಪೂಜಾರಿ ಮತ್ತು ಅವನ ಕಡೆಯವರು ನಮ್ಮ ಮೇಲೆ ದ್ವೇಷ ಸಾದಿಸುತ್ತಾ ಬಂದಿರುತ್ತಾರೆ, ದಿನಾಂಕ 30-05-2017 ರಂದು ಸದರಿ ಶ್ರೀ ಯಲ್ಲಮ್ಮ ದೇವಸ್ಥಾನದ ಪೂಜಾರಿಕೆ ವಿಷಯವಾಗಿ ಇದ್ದ ತಕಾರಿನ ಬಗ್ಗೆ ನ್ಯಾಯ ಪಂಚಾಯತಿ ಮಾಡಿ ಬಗೆ ಹರಿಸಿಕೊಳ್ಳೊಣ ಎಂದು ಗ್ರಾಮದ ಮುಖಂಡರು ಹೇಳಿದ ಮೇರೆಗೆ ಇಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ಭೀಮಾ ನದಿಯ ಹತ್ತಿರ ಇರುವ ಶ್ರೀ ಅಂಬಾ ಭವಾನಿ ಗುಡಿಯ ಹತ್ತಿರ ಎಲ್ಲರಿಗೂ ಬರಲು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಸಮಾಜದ ಎಲ್ಲಾ ಮುಖಂಡರು ಕೂಡಿಕೊಂಡು ಶ್ರೀ ಅಂಬಾ ಭವಾನಿ ಗುಡಿಯ ಹತ್ತಿರ ಹೋಗಿ ಮಾತುಕತೆ ಮಾಡುತ್ತಿದ್ದಾಗ ನಮ್ಮೂರಿನ 1)  ಬಸಪ್ಪ ತಂದೆ ಮಾಹಾದೇವಪ್ಪ ಕರೂಟಿ 2) ಬಸು ಅಳ್ಳಗಿ  3) ಯಶವಂತ ಕರೂಟಿ 4) ಚನ್ನು ಕರೂಟಿ 5) ಮಾಹಾದೇವ ಸಾಲುಟಗಿ 6) ಮಾಹಾದೇವ ಅಲ್ಲಾಪೂರ 7) ಮಾಹಾದೇವ ಜಾನಕರ್ 8) ಧಾನು ಧಾನಶೇಟ್ಟಿ ಮತ್ತು ಇವರ ಕಡೆಯವರು 9) ಭೀಮಣ್ಣ ಹತ್ತರಕಿ 10) ಮುದಕಪ್ಪ ತಂದೆ ಬಸಪ್ಪ ಹಿರೋಳ್ಳಿ 11) ಶಿರಕೂ ಕರೂಟಿ 12) ತಮ್ಮಣ್ಣ ತಂದೆ ಶಿವಪ್ಪ ಪೂಜಾರಿ 13) ಭಿಮಾಶಂಕರ ತಂದೆ ಗಡ್ಡೆಪ್ಪ ಪೂಜಾರಿ 14) ಶೇಖರ ತಂದೆ ತಮ್ಮಣ್ಣ ಪೂಜಾರಿ 15) ಧಾನಪ್ಪ ತಂದೆ ತಮ್ಮಣ್ಣ ಪೂಜಾರಿ 16) ಶಿವಪ್ಪ ತಂದೆ ಗಡ್ಡೆಪ್ಪ ಪೂಜಾರಿ 17) ಪ್ರಕಾಶ ತಂಣದೆ ಗಡ್ಡೆಪ್ಪ ಪೂಜಾರಿ 18) ಮಲ್ಲು ತಂದೆ ಗಡ್ಡೆಪ್ಪ ಪೂಜಾರಿ 19) ಶಿವಪ್ಪ ತಂದೆ ಪರಮೇಶ್ವರಪೂಜಾರಿ 20) ಬಸವರಾಜ ತಂದೆ ಪರಮೇಶ್ವರ ಪೂಜಾರಿ 21) ಸಚಿನ ತಂದೆ ಸಿದ್ದಪ್ಪ ಪೂಜಾರಿ 22) ರಾಹುಲ್ ತಂದೆ ಶಾಂತಪ್ಪ ಪೂಜಾರಿ ಹಾಗೂ ಇತರರೂ ಕೂಡಿಕೊಂಡು ಒಳಸಂಚು ಮಾಡಿ ಬಸಪ್ಪ ತಂದೆ ಮಾಹಾದೇವಪ್ಪ ಕರೂಟಿ ಇವರ ಕಾರ ನಂ ಎಮ್.ಹೆಚ್-13 9555 ಕಾರಿನಲ್ಲಿದ್ದ ಬಡಿಗೆಗಳನ್ನು ಹಾಗೂ ಕಲ್ಲುಗಳನ್ನು ಮತ್ತು ತಲವಾರನ್ನು ತಗೆದುಕೊಂಡು ಬಂದು ಏಕಾ ಏಕಿ ನನಗೆ ಮತ್ತು ನನ್ನ ಮಕ್ಕಳಾದ ಆಕಾಶ ತಂದೆ ಗುಣವಂತ ಬಿಸೆ (ಗೊಂದಳಿ), ಲಕನ್ ತಂದೆ ಗುಣವಂತ ಬಿಸೆ (ಗೊಂದಳಿ), ನನ್ನ ಹೆಂಡತಿ ಇಂದುಬಾಯಿ ಗಂಡ ಗುಣವಂತ ಬಿಸೆ (ಗೊಂದಳಿ), ಹಾಗೂ ನಮ್ಮ ಅಣ್ಣ ತಮ್ಮಕಿಯ ಕಿರಣ ತಂದೆ ಸಹದೇವ ಬಿಸೆ (ಗೊಂದಳಿ), ಮಹಾದೇವ ತಂದೆ ಮೋತಿರಾಮ ಬಿಸೆ (ಗೊಂದಳಿ), ವಿಷ್ಣು ತಂದೆ ಶಂಕರ ಬಿಸೆ (ಗೊಂದಳಿ), ಅಂಬಾದಾಸ್ ತಂದೆ ಅರ್ಜುನ ಬಿಸೆ (ಗೊಂದಳಿ), ವಿಜಯ ತಂದೆ ಗುಂಡಪ್ಪ ಬಿಸೆ (ಗೊಂದಳಿ), ಮನೋಹರ್ ತಂದೆ ದೊಂಡಿಬಾ ಪಾಚಂಗೆ ನಮಗೆಲ್ಲರಿಗೂ ಮಾರಕಾಸ್ತ್ರಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ, ಸದರಿಯವರು ನಮಗೆ ಹಲ್ಲೆ ಮಾಡುತ್ತಿದ್ದಾಗ ನ್ಯಾಯ ಪಂಚಾಯತಿಗೆ ಬಂದವರು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಸದರಿಯವರು ಹೊಡೆದರಿಂದ ನಮಗೆಲ್ಲರಿಗೂ ಬಾರಿ ರಕ್ತಗಾಯಗಳು ಮತ್ತು ಒಳಪೆಟ್ಟುಗಳು ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ದೇವಿಂದ್ರ ತಂದೆ ತಿಪ್ಪಣ್ಣ ಜಾನ ಸಾಃ ಜೀವಣಗಿ ತಾಃ ಜಿಃ ಕಲಬುರಗಿ ಹಾಃವಃ ಗಂಗಾಮಯಿ ಮಠ ಹತ್ತಿರ ಜೇವರಗಿ ಇವರು ಜೇವರಗಿ ಪಟ್ಟಣದ ಗಂಗಾಮಯಿ ಮಠದ ಹತ್ತಿರ ಸ್ವಂತ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನಮ್ಮ ಮನೆಯ ಎರಡು ಕೊಣೆಗಳು ಪರಸಪ್ಪ ತಂದೆ  ಯಲ್ಲಪ್ಪ ಮಾದರ  ಶಿಕ್ಷಕರಿಗೆ ಬಾಡಿಗೆ ಕೊಟ್ಟಿದ್ದು ಅವರು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ.  ದಿನಾಂಕ 28.05.2017 ರಂದು ರಾತ್ರಿ ಮನೆಯಲ್ಲಿ  ಎಲ್ಲರೂ ಊಟಮಾಡಿಕೊಂಡು ರಾತ್ರಿ 10.00 ಗಂಟೆಯ ಸುಮಾರಿಗೆ ನಮ್ಮ ಮನೆಯ ಬಾಗೀಲ ಮುಚ್ಚಿ ಕೀಲಿ ಹಾಕಿ ನಾವು ಮನೆಯವರೆಲ್ಲರೂ ಮತ್ತು ಪರಸಪ್ಪ ಮಾದರ ಎಲ್ಲರೂ ನಮ್ಮ ಮನೆಯ ಛತ್ತಿನ ಮೇಲೆ ಹೋಗಿ ಮಲಗಿಕೊಂಡಿರುತ್ತೆವೆ. ದಿ. 29.05.2017 ರಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ಪರಸಪ್ಪ ಮಾದರ ಇವರು ಎದ್ದು ಕೇಳಗೆ ಬಂದು ನಮ್ಮ ಮನೆಯ ಬಾಗೀಲ ತೆರೆದಿದ್ದು ನೋಡಿ ಬಂದು ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆಯ ಮೇಲಿಂದ ಎದ್ದು ಬಂದು ನೋಡಲಾಗಿ ನಮ್ಮ ಮನೆಯ ಬಾಗೀಲ ಕೀಲಿ ಮುರಿದಿದ್ದು ಮತ್ತು ಬಾಗೀಲ ತೆರೆದಿದ್ದು ಇತ್ತು ಅಲ್ಲದೆ ಬಾಡಿಗೆ ಇದ್ದ ಪರಸಪ್ಪ ಇವರ ಮನೆಯ  ಬಾಗೀಲ ಸಹ ತೆರೆದಿದ್ದು ಇತ್ತು. ನಂತರ ನಾವು ನಮ್ಮ ಮನೆಯೊಳಗೆ ಹೋಗಿ ನೋಡಲಾಗಿ ನಮ್ಮ ಮನೆಯಲ್ಲಿ ಸಾಮಾನುಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ನಮ್ಮ ಮನೆಯೊಳಗಿನ ಕಬ್ಬಿಣದ ಕಪಾಟ ತೆರದು ನೋಡಲು ಅರದಲ್ಲಿ ಇಟ್ಟ ಬಂಗಾರದ ಆಭರಣಗಳು  83 ಗ್ರಾಂ ಬಂಗಾರದ ಆಭರಣಗಳು ಅ.ಕಿ. 2,34,000/- ರೂ ಕಿಮ್ಮತ್ತಿನವು ಕಳ್ಳತನವಾಗಿದ್ದವು ನಂತರ ನಮ್ಮ ಮನೆಯಲ್ಲಿ ಬಾಡಿಗೆ ಇದ್ದ ಪರಸಪ್ಪ ಮಾದರ ಇವರ ಮನೆಯ ಬಾಗಿಲ ಕೀಲಿ ಮುರಿದು ಅವರ ಮನೆಯಲ್ಲಿನ 1) ನಗದು ಗಣ 24,200/- ರೂ 2) 5 ಗ್ರಾಂ ಬೆಳ್ಳಿಯ ಒಂದು ಜೊತೆ ಕಾಲು ಚೈನಗಳು ಅ.ಕಿ. 3,000/- ರೂ ಕಿಮ್ಮತ್ತಿನವು ಕಳುವಾದ ಬಗ್ಗೆ ಮತ್ತು ಅವರ ಎಸ್.ಬಿ.ಹೆಚ್. ಬ್ಯಾಂಕ ಜೇವರಗಿಯಲ್ಲಿ ಡಿಪೊಜೀಟ್ ಇಟ್ಟ ಹಣ ಬಾಂಡ್ ಕಳುವಾಗಿರುತ್ತದೆ ಒಟ್ಟು 83 ಗ್ರಾಂ ಬಂಗಾರದ ಅಭರಣಗಳು 5 ಗ್ರಾಂ ಬೆಳ್ಳಿಯ ಆಭರಣಗಳು & ನಗದು ಹಣ ಸೇರಿ ಒಟ್ಟು 2,61,200/- ರೂಪಾಯಿ ಕಿಮ್ಮತ್ತಿನಷ್ಟು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.