ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-03-2021
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 279, 337, 338 ಐ.ಪಿ.ಸಿ :-
ದಿನಾಂಕ 28-02-2021 ರಂದು ಫಿರ್ಯಾದಿ ರಫೀಯಾ
ಗಂಡ ಇಸ್ಮಾಯಿಲ್ ಶೇಖ್, ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಆಶ್ರಯ ಕಾಲೋನಿ, ಬಸವಕಲ್ಯಾಣ ರವರ
ಗಂಡ ಇಸ್ಮಾಯಿಲ್ ಶೇಖ್
ವಯ:
55 ವರ್ಷ
ರವರು ಮನೆಯಿಂದ ತನ್ನ ಟಿ.ವಿ.ಎಸ್ ಮೋಪೆಡ್ ನಂ. ಕೆಎ-56/ಜೆ-7041 ನೇದರ ಮೇಲೆ ಜೋಳ ಬೀಸಿಕೊಂಡು
ಬರಲು ಬಸ್ ನಿಲ್ದಾಣದ ಕಡೆಗೆ ಹೋಗುತ್ತಿರುವಾಗ ಖಡಿಝಂಡಾ ಹತ್ತಿರ ಎದುರಿನಿಂದ ಮೋಟಾರ್ ಸೈಕಲ ನಂ.
ಎಮ್.ಹೆಚ್-06/ಎ.ಟಿ-0212 ನೇದರ ಚಾಲಕನಾದ ಆರೋಪಿ ಎಂ.ಡಿ ಮೋಯಿಸ್ ತಂದೆ ಎಂ.ಡಿ ಮೆಹತಾಬ್ ಸಾಬ್
ಪಟಕೆವಾಲೆ, ವಯ: 23 ವರ್ಷ, ಸಾ: ಪೀರಪಾಷಾ ಬಂಗ್ಲಾ ಬಸವಕಲ್ಯಾಣ ಇತನು ತನ್ನ ಮೊಟಾರ ಸೈಕಲನ್ನು
ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗಂಡನ ವಾಹನಕ್ಕೆ
ಡಿಕ್ಕಿ ಮಾಡಿ ತಾನು ಸಹ ಮೋಟಾರ ಸೈಕಲ ಸಮೇತ ಬಿದ್ದಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ
ಗಂಡನ ತಲೆಯ ಹಿಂಭಾಗ ಭಾರಿ ರಕ್ತಗುಪ್ತಗಾಯವಾಗಿರುತ್ತದೆ ಹಾಗೂ ಆರೋಪಿಯ ಬಲಗಾಲು ಹೆಬ್ಬೆರಳಿಗೆ
ರಕ್ತಗಾಯ,
ತಲೆಯ
ಬಲಭಾಗ ಗುಪ್ತಗಾಯವಾಗಿರುತ್ತದೆ, ನಂತರ ಆರೋಪಿಯ ಸಂಬಂಧಿಕರು ಒಂದು ಖಾಸಗಿ
ವಾಹನದಲ್ಲಿ ಅಲ್ಲಿಂದ ತೆಗೆದುಕೊಂಡು ಹೋಗಿರುತ್ತಾರೆ ಹಾಗೂ ಫಿರ್ಯಾದಿಯು ಸಹ ತನ್ನ ಗಂಡನಿಗೆ
ಅಲ್ಲಿ ಸೇರಿದ ಜನರ ಸಹಾಯದಿಂದ ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ
ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.