Police Bhavan Kalaburagi

Police Bhavan Kalaburagi

Thursday, December 4, 2014

Kalaburagi District Reported Crimes

ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ದ್ರೌಪತಿಬಾಯಿ ಗಂಡ ಶಾಮರಾವ ರಾಠೋಡ ಸಾ|| ಓಲಿಕೇಡಾ ತಾ|| ಅಂಬರ ಜಿ|| ಜಾಲನಾ (ಎಮ್.ಹೆಚ್) ರವರು ರೈತರ ಕಬ್ಬು ಕಟಾವು ಮಾಡಿ ಫ್ಯಾಕ್ಟ್ರಿಗೆ ಕಳುಹಿಸುವ ಸಂಭಂದ ನಾನು ಮತ್ತು ನನ್ನ ಗಂಡ ಹಾಗು ನಮ್ಮೋಂದಿಗೆ ಪಂಡಿತ ಪವಾರ, ಬಾಬು ಪವಾರ ಹಾಗು ಇನ್ನೀತರರು ಕೂಡಿಕೊಂಡು ಈಗ 1 ತಿಂಗಳ ಹಿಂದೆ ಗುಲಬರ್ಗಾ ಜಿಲ್ಲೆಯ ಅಫಜಲಪೂರ ತಾಲೂಕಿನ ಭೋಸಗಾ ಗ್ರಾಮಕ್ಕೆ ಬಂದಿರುತ್ತೆವೆ. ನನ್ನ ಗಂಡ ಶಾಮರಾವ ಈತನಿಗೆ ವಿಪರಿತ ಸರಾಯಿ ಕುಡಿಯುವ ಚಟವಿರುತ್ತದೆದಿನಾಂಕ 10-11-2014 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ನನಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ನಾನು ಮತ್ತು ನನ್ನ ಗಂಡ ಇಬ್ಬರು ಕರಜಗಿ ಗ್ರಾಮಕ್ಕೆ ಹೋಗಿ ಖಾಸಗಿ ದವಾಖಾನೆಯಲ್ಲಿ ಉಪಚಾರ ಮಾಡಿಕೊಂಡು ಮರಳಿ ನಮ್ಮ ಜೋಪಡಿಗೆ ಬರಬೇಕೆಂದಾಗ ನನ್ನ ಗಂಡ ನೀನು ಹೋಗು ನಾನು ಹಿಂದೆ ಬರುತ್ತೆನೆ ಅಂತಾ ಹೇಳಿ ಅಲ್ಲೆ ಉಳಿದುಕೊಂಡಿರುತ್ತಾನೆ, ನನ್ನ ಗಂಡನಿಗೆ ಸರಾಯಿ ಕುಡಿಯುವ ಚಟವಿದ್ದರಿಂದ ಸರಾಯಿ ಕುಡಿದು ಬರಬಹುದು ಎಂದುಕೊಂಡು ನಾನು ಮುಂದೆ ಬಂದಿರುತ್ತೆನೆ, ನನ್ನ ಗಂಡ ಸರಾಯಿ ಕುಡಿದು ನನ್ನ ಹಿಂದೆಯೆ ಬಂದು ದಾರಿ ಗೊತ್ತಾಗದೆ ಬೋಸಗಾ ಕ್ರಾಸಿನಲ್ಲಿ ಇಳಿಯದೆ, ದುದ್ದಣಗಿ ಕ್ರಾಸಿನಲ್ಲಿ ಇಳಿದು ನಡೆದುಕೊಂಡು ಹೋಗಿರುತ್ತಾನೆ. ನಂತರ ನಾನು ಮತ್ತು ಇತರರು ಕೂಡಿಕೊಂಡು ನನ್ನ ಗಂಡನಿಗೆ ಹುಡುಕಾಡಲಾಗಿ ಕೆಲವು ಜನ ದುದ್ದಣಗಿ ಗ್ರಾಮದ ಹೊಳೆಯ ಕಡೆಗೆ ಹೊಗುತ್ತಿದ್ದನು, ವಿಪರಿತ ಸಾರಾಯಿ ಕುಡಿದಿದ್ದನು ಅಂತಾ ತಿಳಿಸಿರುತ್ತಾರೆ, ನಂತರ ಮನೆಗೆ ಬರಬಹುದು ಎಂದು ನಾವು ಸುಮ್ಮನಿದ್ದಿರುತ್ತೆವೆ, ನಂತರ ನಾವು ನನ್ನ ಗಂಡ ಮಾಹಾರಾಷ್ಟ್ರದ ನಮ್ಮ ಊರಿಗೆ ಹೋಗಿರಬಹುದು ಎಂದು ನಾನು ನಮ್ಮ ಊರಿಗೆ ಹೋಗಿರುತ್ತೆನೆ, ಅಲ್ಲಿಯು ನನ್ನ ಗಂಡ ಇರಲಿಲ್ಲ.   ಹೀಗಿದ್ದು ದಿನಾಂಕ 02-12-2014 ರಂದು ಸಾಯಂಕಾಲ 5:00 ಗಂಟೆಗೆ ನಮ್ಮ ಟೋಳಿಯ ಮಕಾದಂ ಪಂಡಿತ ಪವಾರ ಈತನು ನಮಗೆ ಪೋನ ಮಾಡಿ ನಿನ್ನ ಗಂಡನ ಶವ ದುದ್ದಣಗಿ ಸಿಮಾಂತರ ಭೀಮಾನದಿಯ ಹೋಳೆಯಲ್ಲಿ ಬಿದ್ದಿದೆ ಎಂದು ತಿಳಿಸಿದ ಮೇರೆಗೆ ನಾನು ಇಂದು ದಿನಾಂಕ 03-12-2014 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗಿ ನನ್ನ ಗಂಡನ ಶವ ನೋಡಲಾಗಿ ನನ್ನ ಗಂಡ ಶವ ಕೊಳೆತ ಸ್ಥಿತಿಯಲ್ಲಿದ್ದು ನನ್ನ ಗಂಡನದೆ ಶವ ಎಂದು ಗುರುತು ಸಿಗುವ ಸ್ಥಥಿಯಲ್ಲಿತ್ತು. ನಂತರ ಠಾಣೆಗೆ ಬಂದಿರುತ್ತೆನೆ, ನನ್ನ ಗಂಡ ದಿನಾಂಕ 10-11-2014 ರಂದು ಸಾಯಂಕಾಲ 5:00 ಗಂಟೆಯಿಂದ ದಿನಾಂಕ 02-12-2014 ರಂದು ಬೆಳಿಗ್ಗೆ 10:00 ಗಂಟೆಯ ಮದ್ಯದ ಅವದಿಯಲ್ಲಿ ದುದ್ದಣಗಿ ಸೀಮಾಂತರ ದೆಶಪಾಂಡೆ ಇವರ ಹೊಲಕ್ಕೆ ಹೊಂದಿ ಭೀಮಾನದಿಯ ಹಿನ್ನಿರಿನಲ್ಲಿ ಸರಾಯಿ ಕುಡಿದ ಅಮಲಿನಲ್ಲಿ ದಾರಿ ಸಿಗದೆ ಹೋಗಿ ಬಿದ್ದು ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ-03/12/2014 ರಂದು 8 ಪಿ.ಎಮ್ ಕ್ಕೆ ನಮ್ಮ ಸಣ್ಣ ಮಾವನಾದ ಶರಣಪ್ಪಾ ಇತನು ನನಗೆ ಪೋನ್ ಮಾಡಿ ತಿಳಿಸಿದೇನೆಂದರೆ, ನಿಮ್ಮ ತಮ್ಮ ಸಂತೋಷ  ಮತ್ತು ನಾನು ತಂದ ಟ್ರಾಕ್ಟರ್ ನಂ ಕೆಎ-32 ಟಿಎ-1948 ಟ್ರಾಲಿ ನಂ ಕೆಎ-32ಟಿಎ-1949 ನೇದ್ದನ್ನು  ರೀಪೆರಿ ಮಾಡಿಕೊಂಡು ಬರುತ್ತೇನೆ ಅಂತಾ ಅದರ ಚಾಲಕನಾದ ಮಲ್ಲಪ್ಪಾ ತಂದೆ ದುರ್ಗಣ್ಣಾ ನಾಯಿಕೊಡಿ ಸಾ: ಬೆಣ್ಣೋರ [ಬಿ] ಈತನಿಗೆ ಕರೆದುಕೊಂಡು ಟ್ರಾಕ್ಟರ ಸದರಿ ಮಲ್ಲಪ್ಪಾ ನಡೆಸಿಕೊಂಡು ಭಂಕೂರಕ್ಕೆ ಹೋಗಿ ರಿಪೇರಿ ಮಾಡಿಕೊಂಡು ಮರಳಿ ಪೇಠಶಿರೂರಕ್ಕೆ ಬರುವಾಗ ಸಂತೋಷ ಇತನು ಟ್ರಾಕ್ಟರ ಇಂಜಿನದ ಚಾಲಕನ ಮಗ್ಗಲಲ್ಲಿ ಕುಳಿತು ಟ್ರಾಕ್ಟರನ್ನು ಸದರಿ ಚಾಲಕ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಮುಗುಳನಾಗಾವ ಕ್ರಾಸ್ ದಿಂದ ಪೇಠಶಿರೂರ ಗ್ರಾಮಕ್ಕೆ ಹೋಗುವ ರೊಡಿನ ಬ್ರಿಜಿನ ಮೇಲಿಂದ ಪಲ್ಟಿ ಮಾಡಿದ ಪರಿಣಾಮ ಸಂತೋಷ ಈತನಿಗೆ ತೆಲೆಗೆ ಎಡಗೈಗೆ ಭಾರಿ ರಕ್ತಗಾಯವಾಗಿದ್ದು ಆಗ ಟ್ರಾಕ್ಟರ ಚಾಲಕ ಟ್ರಾಕ್ಟರ ಅಲ್ಲೆ ಬಿಟ್ಟು ಓಡಿ ಹೋಗಿದ್ದು ಸಂತೋಷನಿಗೆ ಉಪಚಾರ ಕುರಿತು ಜಿಜಿಹೆಚ್ ಗುಲಬರ್ಗಾಕ್ಕೆ ಹೋಗುವಾಗ ಮಾರ್ಗಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಸಾಬಣ್ಣಾ ತಂದೆ ಸಿದ್ದಪ್ಪಾ ಸಾ: ನಾಲವಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ : ದಿನಾಂಕ 04-12-2014 ರಂದು 12-00 ಪಿ.ಎಮ್ ಕ್ಕೆ ಎಮ್.ಎ.ಟಿ ಕ್ರಾಸ ದಿಂದ ಸಂತ್ರಾಸವಾಡಿ ಕಡೆ ಹೋಗುವ ರೋಡಿನಲ್ಲಿ ಬರುವ ಮಿಲನ ಟ್ರಾನ್ಸಪೋರ್ಟ ಆಫೀಸ ಎದರುಗಡೆ ರೋಡಿನ ಮೇಲೆ ಲಾರಿ ನಂ. ಕೆ.ಎ 32 1750 ನೇದ್ದನ್ನು ಹಿಂದೆ ಮುಂದೆ ನೋಡದೆ ಒಮ್ಮೆಲೆ ನಿರ್ಲಕ್ಷತನದಿಂದ ಹಿಂದಕ್ಕೆ ಚಲಾಯಿಸಿ ಶ್ರೀ ಯಲ್ಲಾಲಿಂಗ ತಂದೆ ರೇವಣಸಿದ್ದಪ್ಪಾ ಪೂಜಾರಿ, ಸಾಃ 2 ನೇ ಕ್ರಾಸ್ ಎಮ್.ಬಿ ನಗರ ಗುಲಬರ್ಗಾ ರವರು  ನಿಲ್ಲಿಸಿದ ಇಂಡಿಕಾ ಕಾರ ನಂ. ಕೆ.ಎ 32 ಎಮ್. 5506 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರಿನ ಮುಂದೆ ಭಾಗಕ್ಕೆ ಹಾನಿಗೊಳಿಸಿ ತನ್ನ ಲಾರಿಯನ್ನು ಅಲ್ಲಿಯೆ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.