Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 184/2017 ಕಲಂ 379 ಐಪಿಸಿ;- ದಿನಾಂಕ 24/09/2017 ರಂದು ಮಧ್ಯಾಹ್ನ 04-00 ಗಂಟೆಗೆ ಫಿಯರ್ಾದಿ ಶ್ರೀ ಬಾಲಕೃಷ್ಣ ತಂದೆ ರಾಘವೇಂದ್ರ ದೊರೆಗಳು ವಯಾ 24 ವರ್ಷ, ಜಾ|| ಬೇಡರ ಉ|| ಫೈನಾನ್ಸ್ದಲ್ಲಿ ಕೆಲಸ ಸಾ|| ನಾಗಡದಿನ್ನಿ ತಾ|| ದೇವದುಗರ್ಾ ಜಿ|| ರಾಯಚೂರ, ಹಾ|| ವ|| ಅಂಬೇಡ್ಕರ ನಗರ ಚಿತ್ತಾಪೂರ ಜಿ|| ಕಲಬುರಗಿ ಇವರು ಠಾಣೆಗೆ ಬಂದು ಒಂದು ಗಣಕೀಖರಣ ಮಾಡಿದ ದೂರು ನೀಡಿದ್ದರ ಸಾರಾಂಶವೇನೆಂದರೆ, ನಾನು ಸುಮಾರು 9 ತಿಂಗಳಿಂದ ಚಿತ್ತಾಪೂರದಲ್ಲಿ ಇರುವ ಗ್ರಾಮೀಣ ಕೂಟ ಫೈನಾನ್ಸ್ದಲ್ಲಿ ಕೇಂದ್ರ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡು ಇದ್ದೇನೆ. ನನ್ನ ತಂದೆಯಾದ ರಾಘವೇಂದ್ರ ತಂದೆ ಹಣಮಂತರಾಯ ದೊರೆಗಳು ಇವರ ಹೆಸರಿನ ಮೇಲೆ ಬ್ಲಾಕ್ ಬಜಾಜ್ ಪ್ಲಾಟಿನಂ ಮೋಟರ್ ಸೈಕಲ್ ನಂ ಏಂ 36 ಇಐ 1025, ಅದರ ಇಂಜಿನ್ ನಂ-ಕಈಚಘಉಈ30587, ಚೆಸ್ಸಿ ನಂ-ಒಆ2ಂ76ಂಚ9ಉಘಈ09024, ಅಂತಾ ಇದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 40,000/- ರೂ||ಗಳು. ಈ ಮೋಟರ್ ಸೈಕಲ್ಅನ್ನು ನಾನು ನನ್ನ ಕೆಲಸಕೆಂದು ಉಪಯೋಗಿಸುತ್ತಿದ್ದೆನು. ಹೀಗಿದ್ದು ದಿನಾಂಕ 21/08/2017 ರಂದು ನಾನು ನನ್ನ ಮೋಟರ್ ಸೈಕಲ್ ತೆಗೆದುಕೊಂಡು ಯಾದಗಿರಿಯ ಲಕ್ಷ್ಮೀ ನಗರದಲ್ಲಿ ಇರುವ ನಮ್ಮ ಬ್ರ್ಯಾಂಚ್ಗೆ ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಬಂದು, ಕೆಲಸ ಮುಗಿಸಿಕೊಂಡು ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ನಾನು ಮತ್ತು ಯಾದಗಿರಿಯಲ್ಲಿ ಇರುವ ನಮ್ಮ ಗೆಳೆಯನಾದ ಸಚಿದಾನಂದ ತಂದೆ ಮಲ್ಲಿಕಾಜರ್ುನ ನಾಯಕ ಇಬ್ಬರು ಕೂಡಿ ಊಟ ಮಾಡೋಣ ಅಂತಾ ಚಿತ್ತಾಪೂರ ರ್ತಸೆಯಲ್ಲಿ ಇರುವ ಚಾಲುಕ್ಯ ಹೊಟೇಲ್ ಹತ್ತಿರ ನಮ್ಮ ಮೋಟರ್ ಸೈಕಲ್ ನಿಲ್ಲಿಸಿ ನಾವು ಊಟ ಮಾಡಲು ಹೋದೆವು. ಅರ್ದ ಗಂಟೆಯ ನಂತರ ಮರಳಿ ಬಂದು ನೋಡಿದಾಗ ನಾವು ನಿಲ್ಲಿಸಿದ ಸ್ಥಳದಲ್ಲಿ ನಮ್ಮ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ಮತ್ತು ನಮ್ಮ ಗೆಳೆಯ ಸಚಿದಾನಂದ ಇಬ್ಬರು ಕೂಡಿ ಯಾದಗಿರಿಯ ನಗರದ ವಿವಿಧ ಕಡೆಗಳಲ್ಲಿ ಹುಡುಕಾಡಿದರು ನಮ್ಮ ಮೋಟರ್ ಸೈಕಲ್ ಸಿಗಲಿಲ್ಲ. ನಮ್ಮ ಮೋಟರ್ ಸೈಕಲ್ ನಂ ಏಂ 36 ಇಐ 1025 ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ಅಲ್ಲಿ ಇಲ್ಲಿ ಹುಡುಕಾಡಿದರು ನಮ್ಮ ಮೋಟರ್ ಸೈಕಲ್ ಸಿಗದೇ ಇದ್ದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಮಾನ್ಯರವರು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 184/2017 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 185/2017 ಕಲಂ 78(3) ಕೆ.ಪಿ ಎಕ್ಟ್ 1963 ;- ದಿನಾಂಕ: 23/09/2017 ರಂದು 03-00 ಪಿಎಮ್ ಕ್ಕೆ ಶ್ರೀ ವಿಜಯ ಮುರಗುಂಡಿ (ಪಿ.ಐ) ಡಿ.ಸಿ.ಬಿ ಘಟಕ ಯಾದಗಿರಿ ರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರ ಹಾಜರಪಡಿಸಿದ್ದು, ಸದರಿ ಜಪ್ತಿ ಪಂಚನಾಮೆ ಸಾರಾಂಶವೇನಂದರೆ, ಇಂದು ದಿನಾಂಕ: 23/09/2017 ರಂದು ಯಾದಗಿರಿ ನಗರದ ಯಾಕುಬ ಬುಕಾರಿ ದಗರ್ಾ ಹತ್ತಿರ ರಸ್ತೆಯ ಮೇಲೆ ಯಾರೋ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸದರಿ ಪಂಚರು ಮತ್ತು ಶ್ರೀ ವಿಜಯ ಮುರುಗುಂಡಿ ಪಿಐ ಡಿ.ಸಿ.ಬಿ ಘಟಕ ಯಾದಗಿರಿ ಮತ್ತು ಸಿಬ್ಬಂದಿಯಾದ ರವಿ ರಾಠೋಡ ಪಿ.ಸಿ 269 ಹಾಗೂ ಡಿ.ಸಿ.ಬಿ ಘಟಕದ ಸಿಬ್ಬಂದಿಯವರಾದ ಸೈಯದ ಸುಫೀಯುದ್ದೀನ್ ಹೆಚ್.ಸಿ ನಂ 97, ಗುಂಡಪ್ಪ ಹೆಚ್.ಸಿ 115, ಹರಿನಾಥರೆಡ್ಡಿ ಪಿಸಿ 267, ರವರಿಗೆ ಹಾಗೂ ಪಂಚರಿಗೆ ದಾಳಿ ಮಾಡುವ ಬಗ್ಗೆ ವಿಷಯ ತಿಳಿಸಿ ನಾನು ಎಲ್ಲರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 65 ನೇದ್ದರಲ್ಲಿ ದಾಳಿ ಕುರಿತು ಹೊರಟು 01-00 ಪಿಎಮ್ ಕ್ಕೆ ಸ್ಥಳಕ್ಕೆ ಹೋಗಿ ಯಾಕುಬ ಬುಕಾರಿ ದಗರ್ಾ ಹತ್ತಿರ ಹೋಗಿ ರಸ್ತೆಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಿದಾಗ ಅಲ್ಲಿ ಒಬ್ಬ ವ್ಯಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಮಟ್ಕಾ ಆಡಿರಿ ಎಂದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಸದರಿಯವನಿಗೆ ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಹ್ಮದ್ ಖಾಸಿಫ್ ತಂದೆ ಶಾಜೀದ್ ಖಾನ್ ವಯಾ 42 ವರ್ಷ, ಜಾ|| ಮುಸ್ಲಿಂ ಉ|| ಬಟ್ಟೆ ವ್ಯಾಪಾರ ಮತ್ತು ಮಟ್ಕಾ ಬರೆದುಕೊಳ್ಳುವುದು ಸಾ|| ಆಸರ ಮೊಹಲ್ಲಾ ಯಾದಗಿರಿ ಅಂತಾ ಹೇಳಿದ್ದು, ಸದರಿಯವನಿಂದ ಮಟ್ಕಾ ಜೂಜಾಟದ 2000=00 ರೂ. ನಗದು ಹಣ, ಮಟ್ಕಾ ನಂಬರಗಳನ್ನು ಬರೆದ 1 ಚೀಟಿ ಮತ್ತು ಒಂದು ಬಾಲಪೆನ ಹಾಗೂ 01 ವಿವೊ ಕಂಪನಿಯ ಮೊಬೈಲ್ ಅ:ಕಿ: 1000=00 ರೂ. ಹಾಗೂ ಪಿ ಇ ಎಲ್ ಕಂಪನಿಯ ಮತ್ತೊಂದು ಮೊಬೈಲ್ ಅ;ಕಿ 200 ಹೀಗೆ ಒಟ್ಟು 3200=00 ರೂ ಇವುಗಳನ್ನು ಜಪ್ತಿ ಮಾಡಿಕೊಂಡು 01-30 ಪಿಎಮ್ ದಿಂದ 02-30 ಪಿಎಮ್ ದ ವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡು ಆರೋಪಿ ಮುದ್ದೆಮಾಲು ಜಪ್ತಿ ಪಂಚಾನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿ ಈ ಅಪರಾಧವು ಅಸಂಜ್ಞೆಯ ಸ್ವರೂಪದ್ದಾಗಿರುವುದರಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಲಯದಿಂದ ಅನುಮತಿ ಪಡೆದುಕೊಂಡು ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಸೂಚಿಸಿ ಕಾರಣ ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಈ ಬಗ್ಗೆ ಇಂದು ದಿನಾಂಕ.24/09/2017 ರಂದು 5 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ನಂ.185/2017 ಕಲಂ. 78(3) ಕೆ.ಪಿ.ಆ್ಯಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 186/2017 ಕಲಂ 379 ಐಪಿಸಿ;- ದಿನಾಂಕ 24/09/2017 ರಂದು ಸಾಯಂಕಾಲ 07-00 ಗಂಟೆಗೆ ಫಿಯರ್ಾಧಿ ಶ್ರೀ ಮಲ್ಲಿಕಾಜರ್ುನ ತಂದೆ ನಾಗಪ್ಪ ಹೂಗಾರ ವಯಾ 35 ವರ್ಷ, ಜಾ|| ಹೂಗಾರ ಉ|| ಕಿರಾಣಿ ವ್ಯಾಪಾರ ಸಾ|| ಸಗರ ತಾ|| ಶಹಾಪೂರ ಜಿ|| ಯಾದಗಿರಿ ಇವರ ಠಾಣೆಗೆ ಬಂದು ಹೇಳಿಕೆಯ ದೂರು ನೀಡಿದ್ದರ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತೇನೆ. ನನ್ನದೊಂದು ಸ್ವಂತ ಸುಜುಕಿ ಸ್ವಿಸ್ ಸ್ಕೂಟಿ ಇದ್ದು, ಮೋಟರ್ ಸೈಕಲ್ ನಂ ಏಂ 33 ಕಿ 3726 ಅಂತಾ ಇರುತ್ತದೆ. ಅದರ ಇಂಜಿನ್ ನಂ ಈ4862285945, ಚೆಸ್ಸಿ ನಂ-ಒಃ8ಅಈ4ಅಃಆಆ8173352, ಅಂತಾ ಇದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 35,000=00 ರೂಪಾಯಿಗಳು. ಹೀಗಿದ್ದು ದಿನಾಂಕ 02/09/2017 ರಂದು ಬೆಳಿಗ್ಗೆ 11 ಗಂಟೆಗೆ ನಾನು ಮತ್ತು ನಮ್ಮ ಪರಿಚಯದವರಾದ ಅಶಪಾಕ ತಂದೆ ಅಬ್ದುಲ್ ಮಜೀದ್ ಸಾ|| ದಿಗ್ಗಿ ಬೇಸ್ ಶಹಾಪೂರ ಇಬ್ಬರು ಕೂಡಿ ಬಟ್ಟೆ ಖರೀದಿ ಮಾಡಿದರಾಯಿತು ಅಂತಾ ಯಾದಗಿರಿಗೆ ಬಂದು, ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ ಯಾದಗಿರಿ ನಗರದ ರೈಲ್ವೆ ನಿಲ್ದಾಣದ ರೋಡದಲ್ಲಿ ಬರುವ ಕಾವೇರಿ ಬಟ್ಟೆ ಅಂಗಡಿಯ ಹತ್ತಿನ ನಮ್ಮ ಮೋಟರ್ ಸೈಕಲ್ ನಿಲ್ಲಿಸಿ ಒಳಗೆ ಹೋಗಿ ಬಟ್ಟೆ ಖರೀದಿ ಮಾಡಿಕೊಂಡು ಮರಳಿ 02-00 ಗಂಟೆಯ ಸುಮಾರಿಗೆ ಬಂದು ನೋಡಿದಾಗ ನಮ್ಮ ಮೋಟರ್ ಸೈಕಲ್ ನಾವು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ನಂತರ ನಾನು ಮತ್ತು ಅಶಪಾಕ ತಂದೆ ಅಬ್ದುಲ್ ಮಜೀದ್ ಇಬ್ಬರು ಅಲ್ಲಿ ಅಕ್ಕ ಪಕ್ಕ ಮತ್ತು ಯಾದಗಿರಿ ನಗರದ ವಿವಿಧ ಕಡೆಗಳಲ್ಲಿ ಹುಡುಕಾಡಿದರು ನಮ್ಮ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ನಮ್ಮ ಮೋಟರ್ ಸೈಕಲ್ ನಂ ಏಂ 33 ಕಿ 3726 ನೇದ್ದು, ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ಅಲ್ಲಿ ಇಲ್ಲಿ ಹುಡುಕಾಡಿದರು ನಮ್ಮ ಮೋಟರ್ ಸೈಕಲ್ ಸಿಗದೇ ಇದ್ದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಮಾನ್ಯರವರು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 186/2017 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 229/2017 ಕಲಂ 32, 34 ಕೆ.ಇ. ಆ್ಯಕ್ಟ;- ದಿನಾಂಕ 24/09/2017 ರಂದು 8-15 ಎ.ಎಮ್ ಕ್ಕೆ ಆರೋಪಿತನು ತನ್ನ ಅಂಗಡಿಯಲ್ಲಿ ಅನದೀಕ್ರತವಾಗಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳನ್ನು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 24 ಓಲ್ಡ ಟವರಿನ 180 ಎಮ್.ಎಲ್. ನ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಅ.ಕಿ. 1645/ರೂ, 30 ಓರಿಜನಲ್ ಚೌಯಿಸ್ 90 ಎಮ್.ಎಲ್.ದ ಪ್ರೇಶರ ಶೀಲ್ಡ ಪಾಕೇಟಗಳು ಅ.ಕಿ. 843/ರೂ, 16 ಕೆ.ಎಫ್. ಸ್ಟ್ರಾಂಗ ಬಿಯರ 330 ಎಮ್.ಎಲ್. ಬಾಟಲಿಗಳು 1080/ರೂ, ಒಟ್ಟು 3,569/ರೂ ಕಿಮ್ಮತ್ತಿನ ಮಧ್ಯದ ಬಾಟಲಿಗಳನ್ನು ಮಾಲು ಜಪ್ತಿ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 135/2017 ಕಲಂ: 32,34 ಕೆ.ಇ ಎಕ್ಟ್ 1965;- ದಿನಾಂಕ: 24/09/2017 ರಂದು 4-30 ಪಿಎಮ್ ಕ್ಕೆ ಮಾನ್ಯ ಸಿ.ಪಿ.ಐ ಯಾದಗಿರಿ ವೃತ್ತ ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 24/09/2017 ರಂದು ಮದ್ಯಾಹ್ನ ನಾನು ಮತ್ತು ಸಂಗಡ ಸೈಯದ ಅಲಿ ಹೆಚ್.ಸಿ 191, ಅಂಬ್ರೇಶ ಎಪಿಸಿ 114 ರವರೊಂದಿಗೆ ಪೆಟ್ರೋಲಿಂಗ ಮಾಡುತ್ತಾ 2 ಪಿಎಮ ಕ್ಕೆ ವಡಗೇರಾ ಪೊಲೀಸ್ ಠಾಣೆಗೆ ಬಂದಾಗ ಅನಕಸೂಗೂರು ಗ್ರಾಮದಲ್ಲಿ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಕ್ವಾಟರ ಬಾಟ್ಲಿಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ಹಾಗೂ ಗಂಗಾಧರ ಪಾಟಿಲ್ ಎ.ಎಸ್.ಐ, ಪ್ರಕಾಶ ಹೆಚ್.ಸಿ 18 ವಡಗೇರಾ ಠಾಣೆ ರವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0161 ನೇದ್ದರಲ್ಲಿ ಕರೆದುಕೊಂಡು ಹೊರಟು 2-30 ಪಿಎಮ್ ಕ್ಕೆ ಅನಕಸೂಗುರು ಗ್ರಾಮದ ಹೊರಗಡೆ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಅನಕಸುಗೂರು ಗ್ರಾಮದಲ್ಲಿ ಐಕೂರು-ಅನಕಸೂಗೂರು ರೋಡ ಬಸಪ್ಪನ ಮನೆ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ 80 ರೂ. ಗೆ ಒಂದು ಪೌಚ ಬ್ರಾಂಡಿ ಸೆರೆ ಕುಡಿಯಿರಿ ಎಂದು ಕೂಗಿ ಕರೆದು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಸಿ.ಪಿ.ಐ ಸಾಹೇಬರು ಮತ್ತು ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಳ್ಳಬೇಕು ಎನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅಲ್ಲಿದ್ದ ಸಾಕ್ಷೀದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಹಣಮಂತ ತಂದೆ ಸಿದ್ದಲಿಂಗಪ್ಪ ಕಡಿಮನಿ, ವ:35, ಜಾ:ಹೊಲೆಯ, ಉ:ಕೂಲಿ ಸಾ:ಅನಕಸೂಗುರು ಎಂದು ಹೇಳಿದರು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ರಟ್ಟಿನ ಕಾಟನ ಬಾಕ್ಸದಲ್ಲಿ ಓಲ್ಡ್ ಟವರೆನ (ಓಟಿ) 180 ಎಮ್.ಎಲ್ ದ ಪೌಚುಗಳಿದ್ದು, ಎಣಿಕೆ ಮಾಡಿ ನೋಡಲಾಗಿ ಒಟ್ಟು 28 ಪೌಚುಗಳು ಇದ್ದವು. ಒಟ್ಟು ಮದ್ಯ 180*28=5 ಲೀಟರ್ 40 ಎಮ್.ಎಲ್ ಆಗುತ್ತಿದ್ದು, ಸದರಿ ಪೌಚುಗಳ ಮೇಲೆ ಎಮ್.ಆರ್.ಪಿ ಬೆಲೆ 68.56 ರೂ.ದಂತೆ ಒಟ್ಟು 1919.68 ರೂ.ಗಳು ಆಗುತ್ತಿದ್ದು, ಸದರಿಯವುಗಳಲ್ಲಿಂದ ರಸಾಯನಿಕ ಪರೀಕ್ಷೆ ಕುರಿತು ಎರಡು ಪೌಚುಗಳನ್ನು ಪ್ರತ್ಯೇಕ ಪಡೆದುಕೊಂಡು ಒಂದೊಂದನ್ನು ಪಂಚರ ಸಮಕ್ಷಮ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಪಂಚರು ಮಾಡಿದ ಸಹಿಯುಳ್ಳ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿ ಪಡಿಸಿಕೊಂಡರು ಮತ್ತು ಉಳಿದ ಎಲ್ಲಾ ಪೌಚುಗಳನ್ನು ಕೂಡ ಕೇಸಿನ ಮುಂದಿನ ಪುರವೆ ಕುರಿತು ತಮ್ಮ ತಾಬಾಕ್ಕೆ ತೆಗೆದುಕೊಂಡು 2-45 ಪಿಎಮ್ ದಿಂದ 3-45 ಪಿಎಮ್ ದವರೆಗೆ ಜರುಗಿಸಿ, ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 135/2017 ಕಲಂ: 32,34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 371/2017 ಕಲಂ 229 (ಎ) ಐಪಿಸಿ;- ದಿನಾಂಕ 24/09/2017 ರಂದು 4 ಪಿಎಂಕ್ಕೆ ಶ್ರೀ ಸಿದ್ದವೀರ ಹೆಚ್.ಸಿ. 167 ಶಹಾಪೂರ ಪೊಲೀಸ್ ಠಾಣೆ ಇವರು ಆಣೆಗೆ ಹಾಜರಾಗಿ ಒಂದು ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ವೆನೆಂದರೆ ನಾನು ಶಹಾಪೂರ ಠಾಣೆಯಲ್ಲಿ ವಾರಂಟ ಕರ್ತವ್ಯ ನಿರ್ವಹಿಸುತ್ತಿದ್ದು ನಮ್ಮ ಠಾಣೆ ಗುನ್ನೆ ನಂ. 293/2016 ಸಿಸಿ ನಂ. 267/2017 ಪ್ರಕರಣದಲ್ಲಿ ಆರೋಪಿತನಾದ ತಿಪ್ಪಣ್ಣ @ ತಿಪ್ಯಾ ತಂದೆ ಚಂದ್ರಾಮ ರಾಠೋಡ ವ|| 31 ಜಾ|| ಲಂಬಾಣಿ ಸಾ|| ಜಾಪ್ಲಾ ನಾಯಕ ತಾಂಡ ಕನ್ಯಾಕೊಳ್ಳೂರ ಈತನನ್ನು ದಿನಾಂಕ 25/10/2016 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ತದ ನಂತರ ಸದರಿ ಆರೊಪಿತನು ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದು. ನಂತರ ಪ್ರಕರಣದ ವಿಚಾರಣೆಯಲ್ಲಿ ಮಾನ್ಯ ಮಾನ್ಯ ಪ್ರಧಾನ. ಜೆ.ಎಂ.ಎಫ್.ಸಿ. ನ್ಯಾಯಾಲಯ ಶಹಾಪೂರ ರವರು ದಿನಾಂಕ. 27/02/2017, 01/07/2017, ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಲು ವಾರಂಟ ಹೊರಡಿಸಿದ್ದು ಸದರಿ ವಾರಂಟ ವಿಚಾರಣೆಯು ದಿನಾಂಕ. 18/08/2017, ರಂದು ಇದ್ದು ಆರೋಪಿತನಿಗೆ ಮಾನ್ಯ ನ್ಯಾಯಾಲಯದ ಮುಂದೆ ಹಾಜರಾಗುವ ಮಾಹಿತಿ ಇದ್ದರೂ ಉದ್ದೇಶ ಪೂರ್ವಕವಾಗಿ ಸದರಿ ದಿನಾಂಕ ದಂದು ಆರೋಪಿತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದ್ದರಿಂದ ವಾರಂಟ ಬಜಾವಣೆ ಆಗಿರುವುದಿಲ್ಲಾ. ಕಾರಣ ಮೇಲ್ಕಂಡ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 371/2017 ಕಲಂ 229(ಎ) ನ್ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.