Police Bhavan Kalaburagi

Police Bhavan Kalaburagi

Tuesday, June 16, 2020

Kalaburagi District Press Note for Recruitment


                                                                                                                  ಪೊಲೀಸ್ ಅಧೀಕ್ಷಕರವರ ಕಛೇರಿ,           
                                                                                                                   ಕಲಬುರಗಿ ಜಿಲ್ಲೆ.
                                                                                                                     ದಿನಾಂಕ: 16-06-2020
                                                                           ಪತ್ರಿಕಾ ಪ್ರಕಟಣೆ
               2020-21 ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅರ್ಜಿ ಆಹ್ವಾನಿಸಲಾಗಿದ್ದುಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ನಿಗಧಿಪಡಿಸಲಾಗಿದ್ದ ಅರ್ಜಿ ಆಹ್ವಾನದ ದಿನಾಂಕಗಳನ್ನು ಮಾತ್ರ ವಿಸ್ತರಿಸಲಾಗಿರುತ್ತದೆ. ವಿವರ ಈ ಕೆಳಕಂಡಂತಿದೆ. ಇನ್ನುಳಿದ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. (ವಯೋಮಿತಿ ಸೇರಿದಂತೆ)
                          
ಕ್ರಸಂ
ವೃಂದ
ಹುದ್ದೆಗಳ ಸಂಖ್ಯೆ
ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕ
ಶುಲ್ಕ ಪಾವತಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕ
ಅರ್ಜಿ ಸಲ್ಲಿಸಲು ಮರು ನಿಗದಿಪಡಿಸಲಾದ ಕೊನೆಯ ದಿನಾಂಕ
ಶುಲ್ಕ ಪಾವತಿಸಲು ಮರು ನಿಗದಿಪಡಿಸಲಾದ ಕೊನೆಯ ದಿನಾಂಕ
1
ಸಿ.ಪಿ.ಸಿ. (ಪುರುಷ ಮಹಿಳಾ) (ಕಲ್ಯಾಣ ಕರ್ನಾಟಕ)
558
22-06-2020
25-06-2020
09-07-2020
13-07-2020
2
ಎ.ಪಿ.ಸಿ. (ಪುರುಷ)   (ಸಿಎಆರ್/ಡಿಎಆರ್)
(ಕಲ್ಯಾಣ ಕರ್ನಾಟಕ)
444
22-06-2020
25-06-2020
09-07-2020
13-07-2020
3
ಸಿ.ಪಿ.ಸಿ. (ಪುರುಷ ಮಹಿಳಾ)
2007
22-06-2020
25-06-2020
13-06-2020
15-07-2020
4
ಸ್ಟೇ.ಆರ್.ಪಿ.ಸಿ. (ಪುರುಷ ಮಹಿಳಾ) (ಕೆಎಸ್.ಆರ್.ಪಿ ಐಆರ್.ಬಿ)
1005
22-06-2020
25-06-2020
13-06-2020
15-07-2020
5
ಸ್ಟೇ.ಆರ್.ಪಿ.ಸಿ. (ಪುರುಷ ಮಹಿಳಾ) (ಕೆಎಸ್.ಆರ್.ಪಿ ಐಆರ್.ಬಿ)
2420
15-06-2020
18-06-2020
06-07-2020
08-07-2020
6
ಸ್ಟೇ.ಆರ್.ಪಿ.ಸಿ. (ಪುರುಷ)  (ಬ್ಯಾಂಡ್ಸಮನ್) (ಕೆಎಸ್.ಆರ್.ಪಿ ಐಆರ್.ಬಿ)
252
                   

                                                                                                                            ಪೊಲೀಸ್ ಅಧೀಕ್ಷಕರು,
                                                                                                                                ಕಲಬುರಗಿ ಜಿಲ್ಲೆ,
                                                                                                                                   ಕಲಬುರಗಿ.

BIDAR DISTRICT DAILY CRIME UPDATE 16-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-06-2020

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 05/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಲಕ್ಷ್ಮಿಬಾಯಿ ಗಂಡ ಲಕ್ಷ್ಮಣ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, ಸಾ: ಭಗವಾನ ವಾಡಿ ರವರ ಗಂಡನಾದ ಲಕ್ಷ್ಮಣ ತಂದೆ ವೈಜಿನಾಥ ಬಿರಾದಾರ ವಯ: 45 ವರ್ಷ, ಜಾತಿ: ಮರಾಠಾ, ಸಾ: ಭಗವಾನ ವಾಡಿ ರವರು ಒಕ್ಕಲುತನ ಕೆಲಸಕ್ಕಾಗಿ ಮಾಡಿದ ಸಾಲ ತಿರಿಸಲಾಗದೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 15-06-2020 ರಂದು ತಮ್ಮ ಹೋಲದಲ್ಲಿ ಬಬಲಿ ಗೀಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 08/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಬಳಿರಾಮ ತಂದೆ ಮಾಧವರಾವ ಜಾಧವ ವಯ: 21 ವರ್ಷ, ಜಾತಿ: ಮರಾಠಾ, ಸಾ: ಚಂಡಕಾಪೂರ ರವರ ತಂದೆ ಮಾಧವರಾವ ಜಾಧವ ಇವರು ಹೊಲದಲ್ಲಿ ಬೆಳೆ ಬೆಳೆಯುವ ಸಲುವಾಗಿ ಮ್ಮೂರ ಸಿಂಡಿಕೇಟ್ ಬ್ಯಾಂಕನಲ್ಲಿ 5 ಲಕ್ಷ ರೂಪಾಯಿ ಕೃಷಿ ಸಾಲ ಮಾಡಿಕೊಂಡಿರುತ್ತಾರೆ, ಬ್ಯಾಂಕಿನಿಂದ ಮಾಡಿದ ಕೃಷಿ ಸಾಲ ಹೇಗೆ ತೀರಿಸಬೇಕು ಅಂತಾ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15-05-2020 ರಂದು ಮ್ಮ ಹೊಲ ಸರ್ವೆ ನಂ. 88 ರಲ್ಲಿನ ಬಂದರಿಯ ಮೇಲಿದ್ದ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತಮ್ಮ ತಂದೆಯ ಮರಣದಲ್ಲಿ ಯಾರ ಮೇಲೆ ಯಾವುದೇ ದೂರು ಸಂಶಯ ಇರುವುದಿಲ್ಲ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 10/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-
ದಿನಾಂಕ 15-06-2020 ರಂದು ಫಿರ್ಯಾದಿ ಲಕ್ಷ್ಮೀ ಗಂಡ ಶಿವರಾಜ ಸಾಗರ ಸಾ: ಜಾಂಪಾಡ ಗ್ರಾಮ, ತಾ: & ಜಿ: ಬೀದರ ರವರ ಗಂಡ ಶಿವರಾಜ ರವರು ತಮ್ಮ ಅಕ್ಕನ ಗಂಡ ಶಂಕರ ತಂದೆ ಘಾಳೆಪ್ಪಾ ಭೂತಾಳೆ ಮಲ್ಗಿ ಗ್ರಾಮ ಇವರ ಹತ್ತಿರ ಸುಮಾರು ಮೂರು ತಿಂಗಳ ಹಿಂದೆ 3000/- ರೂ. ಕೈಕಡಾ ರೂಪದಲ್ಲಿ ತೆಗೆದುಕೊಂಡಿರುತ್ತಾರೆ, ಈ ವರ್ಷ ಮಾಳೆಗಾಂವ ಗ್ರಾಮದಲ್ಲಿ ಫಿರ್ಯಾದಿಯವರ ತಂದೆ ಪಂಡಿತ ಭೂತಾಳೆ ರವರ ಹೊಲವನ್ನು ಪಾಲದಿಂದ ಮಾಡಿದ್ದು ದಿನಾಂಕ 13-06-2020 ರಂದು ಫಿರ್ಯಾದಿ ಮತ್ತು ಗಂಡ ಶಿವರಾಜ ರವರು ಮಾಳೆಗಾಂವ ಗ್ರಾಮದ ಪಾಲದಿಂದ ಮಾಡಿದ ತಮ್ಮ ತಂದೆಯವರ ಹೊಲಕ್ಕೆ ಹೊಗಿದ್ದು ಅಲ್ಲಿ ಭಾವ ಶಂಕರ ತಂದೆ ಘಾಳೆಪ್ಪಾ ಭೂತಾಳೆ ರವರು ಸಹ ಬಂದಿದ್ದು, ಗಂಡ ಮತ್ತು ಭಾವ ಶಂಕರ ರವರು ಕೊಡುವ ಹಣದ ಕುರಿತು ಬಾಯಿ ಮಾತಿನ ತಕರಾರು ಮಾಡಿಕೊಂಡಾಗ ನಂತರ ತಂದೆ ಪಂಡಿತ ರವರು ಇಬ್ಬರಿಗೂ ಸಮಾಧಾನ ಮಾಡಿ ಕಳುಹಿಸಿಕೊಟ್ಟಿರುತ್ತಾರೆ, ಹೀಗಿರುವಾಗ ದಿನಾಂಕ 15-06-2020 ರಂದು ಗಂಡ ಶಿವರಾಜ ರವರು ತಮ್ಮ ಮನೆಯಲ್ಲಿ ತಗಡದ ಕೆಳಗಿನ ಕಟ್ಟಿಗೆ ದಂಟೆಗೆ ಹಗ್ಗದಿಂದ ನೇಣು ಫಾಸಿ ಹಾಕಿಕೊಳ್ಳುತ್ತಿರುವಾಗ ನೋಡಿದ ಫಿರ್ಯಾದಿಯು ತನ್ನ ಗಂಡನಿಗೆ ಎಕೆ ನೇಣು ಹಾಕಿಕೊಳ್ಳುತ್ತಿದ್ದಿರಿ ಅಂತ ಬೈದು ಅವರಿಂದ ಹಗ್ಗವನ್ನು ಕಸಿದುಕೊಂಡಿದ್ದು, ನಂತರ ಗಂಡ ಮನೆಯಲ್ಲಿ ಮಲಗಿಕೊಂಡಾಗ ಫಿರ್ಯಾದಿಯು ಮನೆಯ ಅಂಗಳದಲ್ಲಿ ಕುಳಿತುಕೊಂಡಾಗ ಒಮ್ಮೇಲೆ ಮನೆಯಲ್ಲಿ ತಗಡದ ಶಬ್ದ ಬಂದಾಗ ಗಾಬರಿಗೊಂಡು ಫಿರ್ಯಾದಿಯು ಮನೆಯಲ್ಲಿ ಹೊಗಿ ನೋಡಲು ಗಂಡ ಶಿವರಾಜ ರವರು ಮನೆಯ ತಗಡದ ಕೆಳಗಡೆ ಇರುವ ಕಟ್ಟಿಗೆ ದಂಟೆಗೆ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು ತಕ್ಷಣ ಫಿರ್ಯಾದಿಯು ಕುಡಗೋಲಿನಿಂದ ನೇಣಿನ ಹಗ್ಗ ಕೋಯ್ದು ಕೆಳಗೆ ಇಳಿಸಿದಾಗ ಗಂಡನಿಗೆ ಇನ್ನು ಜೀವ ಇತ್ತು, ಫಿರ್ಯಾದಿಯು ಜೋರಾಗಿ ಚೀರಿದ್ದರಿಂದ ಪಕ್ಕದ ಮನೆ ಕಮಳಮ್ಮಾ ಗಂಡ ಶರಣಪ್ಪಾ ಸಾಗರ ರವರು ಬಂದು ಗಂಡನಿಗೆ ಜೀವ ಇದೆ ಅಂತಾ ತಿಳಿದು ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು ಎನ್ನುವದರಲ್ಲಿ ಗಂಡ ಶಿವರಾಜ ರವರು ಮೃತಪಟ್ಟಿರುತ್ತಾರೆ, ಫಿರ್ಯಾದಿಯವರ ಗಂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರು ಏಕೆ? ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಅಂತಾ ಗೊತ್ತಿಲ್ಲ, ತನ್ನ ಗಂಡನ ಸಾವಿನಲ್ಲಿ ನನಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 24/2020, ಕಲಂ. 302 ಐಪಿಸಿ :-
ದಿನಾಂಕ 14-06-2020 ರಂದು ಫಿರ್ಯಾದಿ ಶಿವರಾಜ ತಂದೆ ಮಾಪಣ್ಣಾ ಬಾಪುನೋರ ವಯ: 70 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನಂದಗಾಂವ, ಸದ್ಯ: ನಾಗೂರಾ ಗ್ರಾಮ ರವರ ಹಿರಿಯ ಮಗನಾದ ಧನರಾಜ ಇತನಿಗೆ ಫಿರ್ಯಾದಿಯವರ ಕಿರಿಯ ಮಗನಾದ ಆರೋಪಿ ಅನೀಲ ತಂದೆ ಶಿವರಾಜ ಬಾಪುನೋರೆ ವಯ: 33 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನಂದಗಾಂವ, ಸದ್ಯ: ನಾಗೂರಾ ಇತನು ಚಿಕ್ಕಂದಿನಿಂದ ಒಬ್ಬರಿಗೋಬ್ಬರು ಮಾತಾಡದೇ ಹಾಗೂ ಅಗಾಗ ಅನೀಲ ಈತನ ಹೆಂಡತಿಗೆ ಧನರಾಜ ಈತನು ಬೈಯುತ್ತಿದ್ದರಿಂದ ಅದೇ ಒಂದು ಹಳೆ ದ್ವೇಶದಿಂದ ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿ ಇದೇ ಸಮಯ ಸೂಕ್ತ ಅಂತಾ ತಿಳಿದು ಕೊಡ್ಲಿಯಿಂದ ಧನರಾಜ ಇತನ ಬಲಗಡೆ ಎದೆಯ ಹಾಗೂ ಬಲ ಕುತ್ತಿಗೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 15-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 38/2020, ಕಲಂ. 454, 457, 380 ಐಪಿಸಿ :-
ದಿನಾಂಕ 14-06-2020 ರಂದು 1000 ಗಂಟೆಯಿಂದ 15-06-2020 ರಂದು 0930 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಶೆಶಿಕಾಂತ ರಾಠೋಡ್ ವಯ: 38 ವರ್ಷ, : ಸಿಎಚಸಿ-844 ಗ್ರಾಮೀಣ ವೃತ್ತ ಕಛೇರಿ ಬೀದರ, ಸಾ: ಪೊಲೀಸ್ ವಸತಿ ಗೃಹ ಅಬ್ದುಲ ಫೈಜ ದರ್ಗಾ ಹತ್ತಿರ ಬೀದರ ರವರು ವಾಸವಿರುವ ಪೊಲೀಸ್ ವಸತಿ ಗೃಹದಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಹಿಂದಿನ ಬಾಗಲಿನಿಂದ ಒಳಗೆ ಪ್ರವೇಶಿಸಿ ಮನೆಯಲ್ಲಿಟ್ಟಿರುವ ಒಟ್ಟು 55 ಗ್ರಾಂ. ಬಂಗಾರದ ಅಭರಣಗಳು ಒಟ್ಟು .ಕಿ 2,64,000/- ರೂ. ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 72/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 15-06-2020 ರಂದು ಬೀದರ ನಗರದ ಬಾಗವಾನ ಗಲ್ಲಿ ಕ್ರಾಸ ಹತ್ತಿರ ರಾವ ತಾಲೀಮ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೊಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ ಒಂದು ರೂಪಾಯಿಗೆ 80/- ರೂ. ಕೊಡುತ್ತೇನೆ ಅಂತ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾನೆ ಅಂತ ಸಿದ್ದಲಿಂಗ ಪಿ.ಎಸ್. (ಕಾಸು) ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಗವಾನ ಗಲ್ಲಿ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ಸಂಗಪ್ಪಾ ತಂದೆ ಭದ್ರಪ್ಪಾ ಬಿರಾದಾರ ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಮಲ್ಕಾಪೂರ ಗ್ರಾಮ ಇತನು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನನಿಂದ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 1250/- ರೂ ಮತ್ತು ಒಂದು ಬಾಲ ಪೆನ್ನು, ಎರಡು ಮಟಕಾ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 78/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 15-06-2020 ರಂದು ಬಸವಕಲ್ಯಾಣ ನಗರದ ರೇಣಾ ಗಲ್ಲಿಯಲ್ಲಿರುವ ವಾಟರ ಟ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಕರೆ ಮುಖಾಂತರ ಸುನೀಲ್ ಕುಮಾರ ಪಿ.ಎಸ. [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ತಿಳಿದು ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು  ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ತ್ರಿಪೂರಾಂತ .ಬಿ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ರೇಣಾ ಗಲ್ಲಿಯಲ್ಲಿರುವ ವಾಟರ ಟ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನೂರ ತಂದೆ ಇಬ್ರಾಹಿಂ ಶೇಖ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ರೇಣಾ ಗಲ್ಲಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಆರೋಪಿತನಿಗೆ ಹಿಡಿದುಕೊಂಡು ಆತನಿಂದ ನಗದು ಹಣ 1050/- ರೂ. ಮತ್ತು 01 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ನೇದ್ದವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 44/2020, ಕಲಂ. 279, 337, 338 ಐಪಿಸಿ :-
ದಿನಾಂಕ 15-06-2020 ರಂದು ಫಿರ್ಯಾದಿ ಸಂಜೀವಕುಮಾರ ತಂದೆ ಕಮಲಾಕರ ಖಜೂರೆ ಸಾ: ದುಬಲಗುಂಡಿ, ತಾ: ಹುಮನಾಬಾದ ರವರು ತಮ್ಮೂರ ಸುಧಾಕರ ತಂದೆ ಶರಣಪ್ಪಾ ಗೋಖಲೆ ಇತನ ಮೋಟಾರ್ ಸೈಕಲ್ ನಂ. ಕೆಎ-38/ಡಬ್ಲು-8609 ನೇದರ ಮೇಲೆ ಹುಮನಾಬಾದಗೆ ಬಂದು ಹೆಚ್.ಪಿ ಗ್ಯಾಸ್ ಅಂಗಡಿಯಲ್ಲಿ ಪೇಪರಗಳನ್ನು ಕೊಟ್ಟು ಮರಳಿ ಮನೆಗೆ ಹೋಗುತ್ತಿರುವಾಗ ಸುಧಾಕರ ಇವನು ತನ್ನ ಮೋಟಾರ್ ಸೈಕಲನ್ನು ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಜಲಸಂಗಿ ಶಿವಾರದ ರಿಲೈಯನ್ಸ್ ಗ್ಯಾಸ್ ಕಂಪನಿ ಹತ್ತಿರ ಹೋದಾಗ ಅದೇ ಸಮಯಕ್ಕೆ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಕಾರ್ ನಂ. ಕೆಎ-14/ಝಡ್-4720 ನೇದರ ಚಾಲಕನಾದ ಆರೋಪಿ ವೀರಶೆಟ್ಟಿ ತಂದೆ ಮಾರುತಿ ಸಾ: ಮರಕಲ ಇವನು ತನ್ನ ಕಾರನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಫಿರ್ಯಾದಿಯವರ ಹತ್ತಿರ ಬಂದು ತನ್ನ ಕಾರನ್ನು ಓವರಟೆಕ್ ಮಾಡಿಕೊಂಡು ಹೋಗುತ್ತಿರುವಾಗ ಕಾರಿನ ಎಡಗಡೆಯ ಮೀರರ್ ಮೋಟಾರ್ ಸೈಕಲಗೆ ತಾಗಿದ್ದರಿಂದ ಇಬ್ಬರು ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿ ಪ್ರಯುಕ್ತ ಫಿರ್ಯಾದಿಯ ಬಲಗೈ ಅಂಗೈ, ಬಲಗಾಲ ಮೊಣಕಾಲಿಗೆ ತರಚಿದ ಗಾಯಗಳು ಆಗಿರುತ್ತವೆ, ಸುಧಾಕರ ಇವನಿಗೆ ನೋಡಲಾಗಿ ತಲೆಗೆ ತೀವ್ರ ಗುಪ್ತಗಾಯ, ಬಲಗಡೆ ಕಣ್ಣಿನ ಹತ್ತಿರ ರಕ್ತಗಾಯ, ಮುಖಕ್ಕೆ, ಎರಡು ಕೈಗಳಿಗೆ, ಎರಡು ಮೊಣಕಾಲಗಳಿಗೆ ತರಚಿದ ಗಾಯಗಳು ಆಗಿರುತ್ತವೆ, ನಂತರ ಆರೋಪಿಯು ಕಾರಿನಿಂದ ಕೆಳಗಿಳಿದು ಅಪಘಾತದಲ್ಲಿ ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕುರಿತು ತಮ್ಮ ಕಾರಿನಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರು ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.