Police Bhavan Kalaburagi

Police Bhavan Kalaburagi

Friday, October 19, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಕಮಲಾಶಪೂರ ಠಾಣೆ : ಶ್ರೀಮತಿ ಬಿಕ್ಕುಬಾಯಿ ಗಂಡ ಪೋಮು ಜಾಧವ ಸಾ:ಮರಮಂಚಿ ತಾಂಡಾ ತಾ:ಜಿ:ಕಲಬುರಗಿ ರವರ ಗಂಡ ಪೋಮು ಜಾಧವ ಹಾಗೂ ನನ್ನ ಮಗ ಶಂಕರ ಜಾಧವ ಕೂಡಿ ಮೋನ್ನೆ ಪಟವಾದ ತಾಂಡಾಕ್ಕೆ ಬಂದಿದ್ದೇವು. ಇಂದು ದಿನಾಂಕ:18-10-2018 ರಂದು ಮುಂಜಾನೆ ವೇಳೆಯಲ್ಲಿ ನನ್ನ ಗಂಡ ಮರಮಂಚಿ ತಾಂಡಾದ ನಮ್ಮ ಮನೆಯಲ್ಲಿ ಇರುವ ದನಕರುಗಳಿಗೆ ಮೇವು ಹಾಕಿ ಹೆಂಡಿಕಸ ಮಾಡಿಕೊಂಡು ಬರುತ್ತೇನೆ ಅಂತಾ ನನ್ನ ಅಳಿಯ ಕಿರಣ ರಾಠೋಡ ಇವನಿಗೆ ಹೇಳಿದ್ದರಿಂದ ಕಿರಣ ರಾಠೋಡ ತನ್ನ ರಾಯಲ ಎನಫಿಲ್ಡ ಮೋ.ಸೈಕಲ ನಂ. ಎಮ.ಹೆಚ್-03 ಸಿ.ವೈ-7399 ಮೇಲೆ ನನ್ನ ಗಂಡ ಪೋಮು ಜಾಧವ ಇವರಿಗೆ ಕೂಡಿಸಿಕೊಂಡು ಹೋಗಿದ್ದನು. ಮುಂಜಾನೆ 07.00 ಗಂಟೆಯ ಸೂಮಾರಿಗೆ ಪಟವಾದ ಗ್ರಾಮದ ವೀರುಪಾಕ್ಷಿ ತಡೋಳಗಿ ಇವನು ಗಾಬರಿಯಲ್ಲಿ ಪಟವಾದ ತಾಂಡಾಕ್ಕೆ ನನ್ನ ಹತ್ತೀರ ಬಂದು ತಿಳಿಸಿದ್ದೆನಂದರೆ. ಪಟವಾದ ರೋಡಿನ ತಾಂಡಾದ ಹಳ್ಳದ ಹತ್ತಿರ ತಿರುವಿನಲ್ಲಿ ನಿನ್ನ ಗಂಡ ಮೋಟರ ಸೈಕಲ ಮೇಲಿಂದ ಬಿದ್ದು ಅಪಘಾತವಾಗಿರುತ್ತದೆ ಅಂತಾ ಹೇಳಿದ್ದು. ನಾನು ಗಾಬರಿಗೊಂಡು ಸದರಿ ವಿಷಯ ನನ್ನ ಅಣ್ಣನಾದ ಸುಭಾಷ ರಾಠೋಡ, ತಮ್ಮ ಮೋಹನ ರಾಠೋಡ ಹಾಗೂ ಮಗ ಶಂಕರ ಜಾಧವ ಇವರಿಗೆ ತಿಳಿಸಿ ನಾವೇಲ್ಲರೂ ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲು ವೀರುಪಾಕ್ಷಿ ಇವನು ಹೇಳಿದಂತೆ ನನ್ನ ಗಂಡನಿಗೆ ಅಪಘಾತವಾದ ವಿಷಯ ನಿಜ ಇದ್ದು. ನನ್ನ ಗಂಡನಿಗೆ ನೋಡಲು ಅವರ ಮುಗಿನ ಮೇಲೆ ಭಾರಿ ರಕ್ತ ಗಾಯವಾಗಿ ಮುಗಿನಿಂದ ರಕ್ತ ಬರುತ್ತಿದ್ದು ಎಡಗಡೆ ಭುಜಕ್ಕೆ ತರಚಿದ ಗುಪ್ತಗಾಯವಾದಂತೆ ಕಂಡು ಬಂದಿದ್ದು. ಅಲ್ಲದೆ ನನ್ನ ಗಂಡನು ತನ್ನ ಎದೆಗೆ ಭಾರಿ ಒಳ ಪೆಟ್ಟು ಆಗಿದ್ದು ತ್ರಾಸ ಆಗುತ್ತಿದೆ ಅಂತಾ ಹೇಳಿದನು. ನಂತರ ಘಟನೆಯ ಬಗ್ಗೆ ನನ್ನ ಗಂಡನಿಗೆ ವಿಚಾರ ಮಾಡಲು ಅವರು ತಿಳಿಸಿದ್ದೆನಂದರೆ. ಮುಂಜಾನೆ ಕಿರಣ ರಾಠೋಡ ಇವನು ತಾನು ನಡೆಸುತ್ತಿದ್ದ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಹಳ್ಳದ ಹತ್ತೀರ ರೋಡಿನ ಮೇಲೆ ಮೋ.ಸೈಕಲ ಸ್ಕಿಡ್ಡ ಮಾಡಿ ಕೆಡವಿರುತ್ತಾನೆ ಅಂತಾ ಹೇಳಿದ್ದು. ನನ್ನ ಗಂಡ ಹೇಳಿದ ವಿಷಯ ನಿಜ ಇರುತ್ತದೆ. ನಂತರ ನಾನು ನನ್ನ ಅಣ್ಣ ಸುಭಾಷ ರಾಠೋಡ ಹಾಗೂ ಮಗ ಶಂಕರ ಜಾಧವ ಕೂಡಿ ನನ್ನ ಗಂಡನಿಗೆ ಸೊಂತ ಖಾಸಗಿ ದವಾಖಾಗೆ ಉಪಚಾರ ಕುರಿತು ಕರೆದುಕೊಂಡು ಹೋಗಿದ್ದು. ಅಲ್ಲಿ ವೈಧ್ಯರು ನನ್ನ ಗಂಡನಿಗೆ ಕಲಬುರಗಿಗೆ ಕರೆದುಕೊಂಡು ಹೋಗುವಂತೆ ಹೇಳಿದ್ದು. ಇಂದು ತಾಂಡಾದಲ್ಲಿ ಪಲ್ಲಕ್ಕಿ ಮೇರವಣಿಗೆ ಇದ್ದರಿಂದ ಮೇರವಣಿಗೆ ಮುಗಿಸಿಕೊಂಡು ಹೋಗಬೇಕು ಅಂತಾ ತಾಂಡಾದಲ್ಲಿ ಉಳಿದುಕೊಂಡಿದ್ದು. ಸಾಯಂಕಾಲದ ವೇಳೆಯಲ್ಲಿ ನನ್ನ ಗಂಡ ತನಗೆ ಬಹಾಳ ಎದೆ ನೋವುತ್ತಿದೆ ಅಂತಾ ಹೇಳಿ ಒದ್ದಾಡುತ್ತಿದ್ದರಿಂದ ನಾನು ನನ್ನ ಮಗ ಶಂಕರ ಜಾಧವ ಕೂಡಿ ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಇಂದು ಸಾಯಂಕಾಲ ಕಲಬುರಗಿ ಸರಕಾರಿ ದವಾಖಾನೆಯ ಆವರಣದಲ್ಲಿ ತಂದಾಗ ನನ್ನ ಗಂಡ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂಋ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ದಿನಾಂಕ:18-10-2018 ರಂದು ಮದ್ಯಾಹ್ನದ ನಮ್ಮ ತಾಂಡಾದಿಂದ ಡೊಂಗರಗಾಂವ ಗ್ರಾಮಕ್ಕೆ ಹಬ್ಬ ಇದ್ದರಿಂದ ಕಿರಾಣಿ ಸಾಮಾನುಗಳು ತರಲು ಹೋಗಿದ್ದೇನು. ನಂತರ ನಾನು ಡೊಂಗರಗಾಂವನಲ್ಲಿ ಕಿರಾಣಿ ಸಾಮಾನುಗಳನ್ನು ಖರಿದಿ ಮಾಡಿದ್ದು. ಆಮೇಲೆ ಸಾಮಾನುಗಳು ಬಹಾಳ ಇದ್ದರಿಂದ ನಾನು ನನ್ನ ಮೋಮ್ಮಗ ಪವನ ಇವನಿಗೆ ಮೋಟರ ಸೈಕಲ ತೆಗೆದುಕೊಂಡು ಡೊಂಗರಗಾಂವಗೆ ಬರಲು ಹೇಳಿ ನಾನು ಸಾವುಕಾಸವಾಗಿ ನಡೆದುಕೊಂಡು ಡೊಂಗರಗಾಂವನಿಂದ ಬರುತ್ತಿದ್ದಾಗ ಕಾಳಮಂದರ್ಗಿ ಕಡೆಯಿಂದ ಒಂದು ಬಿಳಿ ಬಣ್ಣದ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನನ್ನ ಮುಂದಿನಿಂದ ಹೋದನು. ಇಂದು ಸಾಯಂಕಾಲ ಡೊಂಗರಗಾಂವನ ರೇವಣಸಿದ್ದಪ್ಪ ಹಿರೇಗೌಡ ಇವರ ಹೋಲದ ಹತ್ತೀರ ನನ್ನ ತಮ್ಮನ ಮಗ ಬಬ್ಲು ಇವನ ಹಿರೊಹೊಂಡಾ ಮೋ.ಸೈಕಲ ನಂ-ಕೆಎ-25 ಇ.ಡಬ್ಲು-0505 ನೇದ್ದು ರೋಡಿನ ಮೇಲೆ ಬಿದ್ದಿದ್ದು. ಅದನ್ನು ನೋಡಿ ನಾನು ಗಾಬರಿಗೊಂಡು ಸಮೀಪ ಹೋಗಿ ನೋಡಲು ರೋಡಿನ ಕೆಳಗಡೆ ನನ್ನ ಮೋಮ್ಮಗ ಪವನ ಜಾಧವ ಇವನು ಬಿದ್ದಿದ್ದು. ಅವನ ಹತ್ತೀರ ಹೋಗಿ ನೋಡಲು ಪವನ ಇವನ ಬಲಗಡೆ ಮಗ್ಗಲಿಗೆ ತರಚಿದ ರಕ್ತಗಾಯವಾಗಿದ್ದು. ಅಲ್ಲದೆ ಅವನ ಬಲಗಡೆ ಮೇಲಕಿನ ಮೇಲ್ಭಾಗದಲ್ಲಿ ಭಾರಿ ರಕ್ತಗಾಯವಾಗಿ ಕಿವಿಗಳು ಮತ್ತು ಮುಗಿನಿಂದ ರಕ್ತ ಬಂದು ಸತ್ತಿದ್ದನು. ಆಗ ನಾನು ಗಾಬರಿಗೊಂಡು ಪವನ ಸತ್ತಿರುವ ಸುದ್ದಿ ನಮ್ಮ ತಾಂಡಾದ ಉಮೇಶ ರಾಠೋಡ ಇವನ ಮೂಲಕ ನನ್ನ ಹೆಂಡತಿ ಮಿಠಾಬಾಯಿ ಮತ್ತು ಸಂಜು ರಾಠೋಡ ಮತ್ತು ಏಮನಾಥ ಜಾಧವ ಇವರಿಗೆ ತಿಳಿಸಿದ್ದು ಸ್ವಲ್ಪ ಹೋತ್ತಿನಲ್ಲಿ ಅವರೆಲ್ಲರೂ ಘಟನಾ ಸ್ಥಳಕ್ಕೆ ಬಂದಿರುತಾರೆ. ನನ್ನ ಮೋಮ್ಮಗ ಪವನ ಜಾಧವ ಇವನಿಗೆ ನಾನು ಡೊಂಗರಗಾಂವ ಗ್ರಾಮದಿಂದ ನಡೆದುಕೊಂಡು ಬರುವಾಗ ನನ್ನ ಎದರುನಿಂದ ಬಂದ ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಸಾಯಂಕಾಲ 04.25 ಗಂಟೆಯ ಸೂಮಾರಿಗೆ ನನ್ನ ಮೋಮ್ಮಗನು ನಡೆಸಿಕೊಂಡು ಬರುತ್ತಿದ್ದ ಮೇಲೆ ಹೇಳಿದ ಮೋಟರ ಸೈಕಲಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿ ಓಡಿ ಹೋಗಿದ್ದರಿಂದ ಪವನ ಇವನು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಸೋಮ್ಲಾ ತಂದೆ ಬಿಕ್ಕು ಜಾಧವ ಮು:ಕಾಳಮಂದರ್ಗಿ  ಗುತ್ತಿ ತಾಂಡಾ ತಾ:ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಪ್ರತೀಮಾ ಗಂಡ ರಾಜಶೇಖರ ಗೂಡುರ  ಸಾ: ದೇವನ  ತೆಗನೂರ ತಾ: ಚಿತ್ತಾಪೂರ ಹಾ.ವ. ಪಿಡಬ್ಲೂಡಿ  ಕ್ವಾಟರ್ಸ ಹಳೆ ಜೇವರಗಿ  ರೋಡ ಕಲಬುರಗಿ ರವರ ಗಂಡ  ದಿನಾಂಕ 17.10.2018 ರಂದು ರಾತ್ರಿ ತನ್ನ ಮೋ/ಸೈಕಲ್ ನಂ: ಕೆಎ-32/ಇಎಮ್-1639 ನೇದ್ದನ್ನು ರಾಜಾಪೂರ ಕಡೆಯಿಂದ ಆರಟಿಓ ಕ್ರಾಸ ರೋಡ ಕಡೆಗೆ ಹೋಗುವ ಕುರಿತು ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ಅಪ್ಪಾ ವೀಲ್ಸ ಎದುರು ರೋಡ ಮೇಲೆ ಒಮ್ಮೇಲೆ ಬ್ರೇಕ್ ಹಾಕಿ ಸ್ಕಿಡ್ ಮಾಡಿ ಅಪಘಾತ ಹೊಂದಿ ತನ್ಜಿಂದ ತಾನೆ ಬಿದ್ದು ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಎಡಗಡೆ ಕಿವಿಯಿಂದ ರಕ್ತ ಬಂದು ಬಲಗೈ ಮುಂಗೈ ಹತ್ತೀರ ತರಚಿದಗಾಯವಾಗಿ ಉಪಚಾರ ಕುರಿತು ಅಂಬುಲೇನ್ಸ ವಾಹನದಲ್ಲಿ ಉಪಚಾರ ಕುರಿತು ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯ ಅಂಬುಲೇನ್ಸ ವಾಹನದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಮಾಹಾಗಾಂವ ಠಾಣೆ : ದಿನಾಂಕ 16/10/2018 ರಂದು ಬೆಳಗ್ಗೆ ನನ್ನ ಮಗ ರಾಯಪ್ಪ ಈತನು ನಾನು ಮಹಾಗಾಂವ ಕ್ರಾಸಿಗೆ ಹೊಗಿ ಕಾಯಿಪಲ್ಲೆ ತರುತ್ತೇನೆ ಅಂತ ಮನೆಯಲ್ಲಿ ನನಗೆ ನನ್ನ ಹೆಂಡತಿಗೆ ಹೇಳಿ ಹೊಗಿದ್ದು ಸುಮಾರು 08.15 ಎ.ಎಂ ಗಂಟೆಗೆ ನಮ್ಮ ತಮ್ಮನ ಮಗ ರವಿ ತೊಂಡಕಲ್ ಈತನು ಫೊನ ಮಾಡಿ ನಮಗೆ ವಿಷಯ ತಿಳಿಸಿದೆನಂದರೆ, ನಾನು ನಮ್ಮ ಗ್ರಾಮದ ಬಸ್ಟಾಂಡ ಹತ್ತಿರ ಕಲಬುರಗಿಗೆ ಹೊಗುವ ಸಲುವಾಗಿ ನನ್ನ ಮೊಟಾರ ಸೈಕಲ್ ತೆಗೆದುಕೊಂಡು ನಿಂತಿದ್ದು ಅಷ್ಟಕ್ಕೆ ನಿಮ್ಮ ಮಗ ರಾಯಪ್ಪ ಮತ್ತು ನಮ್ಮೂರಿನ ಕೃಷ್ಣಪ್ಪ ಜಮಾದಾರ ಇಬ್ಬರು ನಿಮ್ಮ ಮಗನ ಮೊಟಾರ ಸೈಕಲ್ ನಂ ಕೆ.ಎ-32 ಇಸಿ-6934 ನೇದ್ದು ತೆಗೆದುಕೊಂಡು ಬಂದಿದ್ದು ಸದರ ಮೊಟಾರ ಸೈಕಲ್ ಕೃಷ್ಣಪ್ಪ ಇತನು ಚಲಾಯಿಸುತ್ತಿದ್ದು ನಾವು ಮಹಾಗಾಂವ ಕ್ರಾಸಿಗೆ ಹೊಗಿ ಕಾಯಿಪಲ್ಲೆ ತೆಗೆದುಕೊಂಡು ಬರುತ್ತೇವೆ ಅಂತ ಮುಂದೆ ಹೊದರು ನಂತರ ನಾವು ಅವರ ಹಿಂದೆ ಹೊಗುತ್ತಿದ್ದಾಗ ಮುಂದೆ ಹೊಗುತ್ತಿದ್ದ ರಾಯಪ್ಪನ ಮೊಟಾರ ಸೈಕಲ್ ಕೃಷ್ಣಪ್ಪ ಈತನು ಅತೀ ವೇಗ ಮತ್ತು ಅಲಕ್ಷತನದಿಂದ ಅಡಾತಿಡ್ಡಿಯಾಗಿ ಹೊಗುತ್ತಿದ್ದು ಬಬಲಾದ ಐ.ಕೆ ಗ್ರಾಮದಿಂದ ಸಿರಗಾಪೂರ ಗ್ರಾಮಕ್ಕೆ ಹೊಗುವ ರಸ್ತೆ ಮಧ್ಯ ರಮೇಶ ಎ.ಇಇ ಇವರ ಹೊಲದ ಹತ್ತಿರ ನನ್ನ ಮುಂದೆ ಇದ್ದ ಕೃಷ್ಣಪ್ಪ ಈತನು ನಡೆಸುತ್ತಿರುವ ಮೊಟಾರ ಸೈಕಲ್ ಒಮ್ಮೆಲೆ ಕಟ್ ಹೊಡೆದ ಪ್ರಯುಕ್ತ ಮೊಟಾರ ಸೈಕಲ್ ಸ್ಲಿಪ್ ಆಗಿ ಆ ಮೊಟಾರ ಸೈಕಲ್ ಮೇಲೆ ಹೊಗುತ್ತಿದ್ದ ಇಬ್ಬರು ರೋಡಿನ ಮೇಲೆ ಬಿದ್ದಿದ್ದು ನಾನು ಹೊಗಿ ಅವರಿಗೆ ಎಬ್ಬಿಸಿ ನೊಡುತ್ತಿದ್ದಂತೆ ರಾಯಪ್ಪನ ಮುಖಕ್ಕೆ ಬಾಯಿಗೆ, ತಲೆಗೆ, ಮತ್ತು ಕಪಾಳಕ್ಕೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು. ಕೃಷ್ಣಪ್ಪನಿಗೆ ನೊಡಲಾಗಿ ಆತನ ತಲೆಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಅಲಲ್ಲಿ ತರಚಿದ ಗಾಯವಾಗಿರುತ್ತವೆ.  ಇಬ್ಬರು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ನಿವು ಬೇಗನೆ ಬರಿ ಈ ವಿಷಯ ಕೃಷ್ಣಪ್ಪ ಈತನ ಮನೆಯವರಿಗೆ ತಿಳಿಸುತ್ತೇನೆ ಅಂತ ಹೇಳಿದ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ಸ್ಥಳಕ್ಕೆ ಹೊಗುತ್ತಿದಂತೆ ವಿಷಯ ಹೊತ್ತಾಗಿ ಕೃಷ್ಣಪ್ಪನ ಹೆಂಡತಿ ಸುರೇಖಾ ಜಮದಾರ ಮತ್ತು ಶಿವಪುತ್ರ ಜಮಾದಾರ ಇಬ್ಬರು ಕೂಡಿ ಬಂದಿದ್ದು ಎಲ್ಲರು ಕೂಡಿ ಅಂಬುಲೈನ್ಸ ನಲ್ಲಿ ಹಾಕಿಕೊಂಡು ಈ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಸಧ್ಯ ಇಬ್ಬರು ಮಾತನಾಡುತ್ತಿಲ್ಲಾ. ಕಾರಣ ದಿನಾಂಕ 16/10/2018 ರಂದು 08.00 ಎ.ಎಂ.ಕ್ಕೆ  ರಮೇಶ ಎ.ಇಇ ಇವರ ಹೊಲದ ಹತ್ತಿರ ನನ್ನ ಮಗನ ಮೊಟಾರ ಸೈಕಲ್ ಕೆ.ಎ-32 ಇಸಿ-6934 ನೇದ್ದು ಕೃಷ್ಣಪ್ಪ ಈತನು ಅತೀಬೇಗ ಮತ್ತು ಅಲಕ್ಷತನದಿಂದ ನಡೆಸಿ ಕಟ್ ಹೊಡೆಯಲು ಹೊಗಿ ಸ್ಲಿಪ್ ಆಗಿ ರೋಡಿನ ಮೇಲೆ ಬಿದ್ದಿದ್ದು ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ತಾನು ಭಾರಿಗಾಯ ಹೊಂದಿದ್ದು ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 18-10-2018 ರಂದು  ಶಿವಪೂರ ಗ್ರಾಮದ ಭೀಮಾನದಿಯಲ್ಲಿ ಲಾರಿಗಳಲ್ಲಿ   ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ, ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಅಫಜಲಪೂರಘತ್ತರಗಾ ರೋಡಿಗೆ ಇರುವ ಬನ್ನೇಟ್ಟಿ ಕ್ರಾಸ ಹೋಗುತ್ತಿದ್ದಾಗ ಶಿವಪೂರ ಕಡೆಯಿಂದ  ಎರಡು ಲಾರಿಗಳು ಬರುತ್ತಿದ್ದು ಸದರಿ ಲಾರಿಗಳನ್ನು ನಿಲ್ಲಿಸುವಂತೆ ಕೈ ಸೂಚನೆ ಕೊಟ್ಟಾಗ ಲಾರಿ ಚಾಲಕರು ಲಾರಿಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾರೆ. ನಂತರ ಪಂಚರ ಸಮಕ್ಷಮ ಸದರಿ ಲಾರಿಗಳನ್ನು ಚೆಕ್ ಮಾಡಲಾಗಿ, ಲಾರಿಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1) ಅಶೋಕ ಲೈಲೆಂಡ ಕಂಪನಿಯ ಲಾರಿ ನಂ ಕೆಎ-25 ಡಿ-4169 ಲಾರಿ ಅಕಿ-10,000,00/- ರೂ ಅದರಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 10,000/- ರೂ 2) ಅಶೋಕ ಲೈಲೆಂಡ ಕಂಪನಿಯ ಲಾರಿ ನಂ ಕೆಎ-25 ಡಿ-4163 ಲಾರಿ ಅಕಿ-10,000,00/- ರೂ ಅದರಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 10,000/- ರೂ. ನಂತರ ಸದರಿ ಮರಳು ತುಂಬಿದ ಲಾರಿಗಳನ್ನು ಪಂಚರ ಸಮಕ್ಷಮ ಜಪ್ತಿ  ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಭೀಮಾಶಂಕರ ತಂದೆ ಸಾಯಿಬಣ್ಣ ಹೊನ್ನಕೇರಿ ಸಾ||ಕರಜಕಗಿ ರವರದು ಕರಜಗಿ ಗ್ರಾಮದ ಬಸ್ಯ್ಟಾಂಡ ಹತ್ತಿರ ಗಂಗೋತ್ರಿ ಹೆಸರಿನ ನಮ್ಮ ಹೊಟೇಲ ಇರುತ್ತದೆ. ಕೆಲಸಗಾರರು ಇಲ್ಲದಿರುವುದರಿಂದ ನಮ್ಮ ಹೋಟೆಲ ಈಗ ಒಂದು ತಿಂಗಳಿಂದ ಬಂದ ಇರುತ್ತದೆ ನಮ್ಮ ಹೊಟೇಲದಲ್ಲಿ ಹೋಟೆಲ ಬಳಕೆ ಸಾಮಾನುಗಳು ಇರುತ್ತವೆ. ನಾನು ದಿನಾಲು ರಾತ್ರಿ ನಮ್ಮ ಹೊಟೇಲ ಮೇಲಿನ ಕೋಣೆಯಲ್ಲಿ ಮಲಗುತ್ತೇನೆ. ದಿನಾಂಕ 15/10/2018 ರಂದು ರಾತ್ರಿ 10.30 ಗಂಟೆ ಸುಮಾರಿಗೆ ಊಟ ಮಾಡಿ ನಮ್ಮ ಹೋಟೆಲ ಸೆಟರಗಳ ಚಾವಿ ಹಾಕಿದ ಬಗ್ಗೆ ಚಕ್ ಮಾಡಿ ನಾನು ಹಾಗು ನಮ್ಮ ಗ್ರಾಮದ ಶರಣಪ್ಪ ತಂದೆ ಪುಂಡಾ ನಾಯ್ಕೊಡಿ ಇಬ್ಬರು ಹೊಟೇಲ ಮೇಲಿನ ರೂಮುನಲ್ಲಿ ಮಲಗಿರುತ್ತೇವೆ. ದಿನಾಂಕ 16/10/2018 ರಂದು ಬೆಳಿಗ್ಗೆ 5.00 ಗಂಟೆ ಸುಮಾರಿಗೆ ನಾನು ಹಾಗು ಶರಣಪ್ಪ ಇಬ್ಬರು ಎದ್ದು ಕೆಳಗೆ ಬಂದಾಗ ನಮ್ಮ ಹೊಟೇಲ ಸೆಟರ ಬೆಂಡ್ ಆಗಿ ಅರ್ಧಾ ತೆರೆದಿತ್ತು ನಾವು ಒಳಗೆ ಹೋಗಿ ನೋಡಲಾಗಿ ನಮ್ಮ ಹೋಟೆಲದಲಿದ್ದ ಎಲ್ ಜಿ ಕಂಪನಿ ಎಲ್ ಇ ಡಿ ಟಿ ವ್ಹಿ  ಅಂದಾಜ 16,500/-ರೂಪಾಯಿ ಕಿಮ್ಮತ್ತಿದ್ದು, ಕುಕ್ಕರ & ಮಿಕ್ಸರ ಅಂದಾಜ 6000/-ರೂಪಾಯಿ ಕಿಮ್ಮತ್ತಿದ್ದು, ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಹಾಸಮ ಅಲಿ ತಂದೆ ಮಸ್ತಾನಸಾಬ ದರ್ಜಿ ಸಾ: ಮಹಾಗಾಂವ ಕ್ರಾಸ ಇವರು ಈಗ 10-11 ವರ್ಷಗಳಿಂದ ಟೇಲರಿಂಗ ಕೆಲಸ ಮಾಡಿಕೊಂಡು ಇರುತ್ತನೇ. ಅದಕ್ಕಾಗಿ ಮಹಾಗಾಂವ ಕ್ರಾಸನಲ್ಲಿ ಹೆಚ್.ಎಂ ಟೇಲರ ಅಂತಾ ಹೆಸರು ಇಟ್ಟುಕೊಂಡು ಗಂಡಸರ ಬಟ್ಟೆ ಹೊಲೆಯುವ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ:13/10/2018 ರಂದು ಎಂದಿನಂತೆ ಬೆಳಿಗ್ಗೆ 6-00 ಗಂಟೆಗೆ ಅಂಗಡಿ ಬಾಗಿಲ ತೆರೆದು ಒಳಗೆ ಹೋಗಿ ನೋಡಲಾಗಿ, ಮೇಲ್ಗಡೆಯಿಂದ ಬೆಳಕು ಕಂಡಿತು ಮೇಲೆ ನೋಡಲಾಗಿ ಫತ್ರಾವನ್ನು ಯಾರೋ ಕಿಡಿಗೇಡಿಗಳು ಯಾವುದೋ ಉದ್ದೇಶದಿಂದ ಸುಮಾರು 2 ಫೀಟ್ ವರೆಗೆ ಓಪನ್ ಮಾಡಿರುತ್ತಾರೆ. ಒಳಗಡೆ ಎನಾದರು ಸಾಮಾನು ಹೋಗಿದ್ದಾವೆ ಅಂತಾ ನೋಡಲು 2 ಜೊತೆ ಬಟ್ಟಿ ಬ್ಯಾಗ ತೆಗೆದುಕೊಂಡು ಹೋಗಿರುತ್ತಾರೆ. ಅದರಿಂದ ನನ್ನ ಹೆಚ್.ಎಂ ಟೇಲರ ಅಂಗಡಿಯ ಮೇಲಿನ ಫತ್ರಾ ದಿನಾಂಕ: 12/10/2018 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 13/10/2018 ರ ಬೆಳಿಗ್ಗೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ 1200-00 ರೂ. ಬೆಲೆ ಬಾಳುವ ಬಟ್ಟೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 16/10/2018 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ನಮ್ಮೂರಿನ ಕ್ರಾಸ ಹತ್ತಿರ ನಮ್ಮ ಹರಿಜನರ ಜನಾಂಗದವರು ನನ್ನ ಗಂಡನಿಗೆ ಹೊಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದು ನಾನು ಅಲ್ಲಿಗೆ ಹೊಗಿ ನೋಡಲಾಗಿ ಅಲ್ಲಿ ನನ್ನ ಗಂಡ ಹಾಗೂ ನಮ್ಮ ಸಂಬಂಧಿಕರಾದ ಬಸಪ್ಪ ತಂದೆ ಈರಪ್ಪ ಹೊನ್ನಗುಂಟಿ, ಸಿದ್ದಪ್ಪಾ ತಂದೆ ಶಂಕರ ನಾಟಿಕರ್ ಇವರೆಲ್ಲರೂ ಇದ್ದು, ಅಲ್ಲಿ ನಮ್ಮ ಗ್ರಾಮದ ಹರಿಜನ ಜನಾಂಗದವರಾದ ಶಿವಕುಮಾರ @ ಶಿವರಾಜ ತಂದೆ ಶ್ರೀಮಂತ ನಡುವಿನಕೇರಿ, ಆತನ ತಮ್ಮನಾದ ಅಶೋಕ ತಂದೆ ಶ್ರೀಮಂತ ಹಾಗೂ ಸೂರ್ಯಕಾಂತ ತಂದೆ ದೇವಿಂದ್ರಪ್ಪಾ, ಶಿವಶರಣ ತಂದೆ ನಿಂಗಪ್ಪ, ಮಾಳಮ್ಮ ಗಂಡ ಶ್ರೀಮಂತ, ಸಾಯಿಬಣ್ಣ ತಂದೆ ಶಿವಪ್ಪ ದೊಡ್ಡಮನಿ, ರಮೇಶ ತಂದೆ ಶರಣಪ್ಪ ದೊಡ್ಡಮನಿ, ಸುಧಾಕರ ತಂದೆ ಶ್ರೀಮಂತ ನಡುವಿನಕೇರಿ, ವಿಜಯಕುಮಾರ ತಂದೆ ಶ್ರೀಮಂತ, ಚಂದ್ರಕಾಂತ ತಂದೆ ನಿಂಗಪ್ಪಾ ಮಾಂಗ, ಶಾಂತಪ್ಪ ತಂದೆ ಶಿವಪ್ಪ, ಕೈಲಾಸ ತಂದೆ ಮಲ್ಲಪ್ಪ ದೊಡ್ಡಮನಿ, ಅನೂಕೂಲ ತಂದೆ ಕಾಂತಪ್ಪ ದೊಡ್ಡಮನಿ. ಸಾಲಿವಾನ ತಂದೆ ಅಂಬರಾಯ, ಬಾಬುರಾವ ತಂದೆ ಅಂಬರಾಯ, ದೇವಿಂದ್ರ ತಂದೆ ಸಾಯಿಬಣ್ಣ ದೊಡ್ಡಮನಿ, ಶರಣಪ್ಪ ತಂದೆ ಸಾಯಿಬಣ್ಣ ದೊಡ್ಡಮನಿ, ನಾಗಪ್ಪ ತಂದೆ ಶರಣಪ್ಪ ದೊಡ್ಡಮನಿ ಇವರೆಲ್ಲರೂ ಇದ್ದು, ನನ್ನ ಗಂಡ ಹಾಗೂ ನಮ್ಮ ಸಂಬಂಧಿಕರಾದ ಬಸಪ್ಪ ತಂದೆ ಈರಪ್ಪ ಹೊನ್ನಗುಂಟಿ, ಸಿದ್ದಪ್ಪ ತಂದೆ ಶಂಕರ ನಾಟಿಕರ ಇವರಿಗೆ ಬೋಸಡಿ ಮಕ್ಕಳೇ ಚೌಕದಲ್ಲಿದ್ದ ನಿಮ್ಮ ಬೋರ್ಡ ನಾವೇ ಕಿತ್ತು ಹಾಕಿರುತ್ತೇವೆ ಏನೂ ಮಾಡಿಕೊತ್ತಿರಿ ಮಾಡಿಕೋ ರಂಡಿ ಮಕ್ಕಳೇ ನಿಮದು ಊರಿನಲ್ಲಿ ಬಹಳ ಆಗಿದೆ ನಿಮಗೆ ದಿಮಾಕು ಬಂದಿದೆ ನಿಮ್ಮ ಕೋಲಿ ಸಮಾಜದವರಿಗೆ ಸುಟ್ಟು ಹಾಕುತ್ತೇವೆ ಅಂತಾ ಹಳೇ ದ್ವೇಷ ಸಾಧಿಸಿಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಅಶೋಕ ತಂದೆ ಶ್ರಿಮಂತ ಹಾಗೂ ಆತನ ಅಣ್ಣ ಶಿವರಾಜ ಇವರು ತಮ್ಮ  ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಗಂಡನ ತೆಲೆಗೆ ಹೊಡೆದು ಮಾರಾಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆಗ ಜಗಳ ಬೀಡಸಲು ಬಂದ ಸಿದ್ದಪ್ಪ ಹಾಗೂ ಬಸಪ್ಪ ಇವರಿಗೆ ಸೂರ್ಯಕಾಂತ ತಂದೆ ದೇವಿಂದ್ರಪ್ಪಾ,  ಶಿವಶರಣ ತಂದೆ ನಿಂಗಪ್ಪ, ಸಾಯಿಬಣ್ಣ ತಂದೆ ಶಿವಪ್ಪ ದೊಡ್ಡಮನಿ, ರಮೇಶ ತಂದೆ ಶರಣಪ್ಪ ದೊಡ್ಡಮನಿ, ಸುಧಾಕರ ತಂದೆ ಶ್ರೀಮಂತ ನಡುವಿನಕೇರಿ, ಇವರು ಒತ್ತಿ ಹಿಡಿದಾಗ ವಿಜಯಕುಮಾರ ತಂದೆ ಶ್ರೀಮಂತ, ಚಂದ್ರಕಾಂತ ತಂದೆ ನಿಂಗಪ್ಪಾ ಮಾಂಗ, ಶಾಂತಪ್ಪ ತಂದೆ ಶಿವಪ್ಪ, ಕೈಲಾಸ ತಂದೆ ಮಲ್ಲಪ್ಪ ದೊಡ್ಡಮನಿ, ಇವರು ಕೈಯಗಳಿಂದ ಮತ್ತು ಬೆಲಿಗೆ ಹಚ್ಚಿದ ಮುಳ್ಳು ಕಂಠಿಯಿಂದ ಹೊಡೆದು ಕರ್ತಗಾಯಪಡಿಸಿರುತ್ತಾರೆ. ನಾನು ಹಾಗು ಅಲ್ಲೆ ಇದ್ದ ನಮ್ಮುರಿನ ಮಲ್ಲಪ್ಪ ತಂದೆ ಹಯ್ಯಾಳಪ್ಪ ನಾಟಿಕರ್ ಬಸವರಾಜ ತಂದೆ ಚಂದಪ್ಪ ಹಳ್ಳಿ ಕೂಡಿ ಬೀಡಿಸಿಕೊಳ್ಳಲು ಹೊದಾಗ, ನನಗೆ ಶಿವರಾಜ ತಂದೆ ಶ್ರೀಮಂತ, ಅಶೋಕ ತಂದೆ ಶ್ರೀಮಂತ, ಮಾಳಮ್ಮ ಗಂಡ ಶ್ರೀಮಂತ ಹಾಗೂ ದೇವಿಂದ್ರ ತಂದೆ ಸಾಯಿಬಣ್ಣ ದೊಡ್ಡಮನಿ, ಇವರುಗಳು ನನಗೆ ಏ ಬೋಸಡಿ ಮಗಳೇ ನೀನಗೂ ಸಹ ಬೀಡುವುದಿಲ್ಲ ಅಂತಾ ನನ್ನ ತಲೆಗೆ ಕೂದಲು ಮತ್ತು ಸೀರೆಯ ಸೇರಗು ಹಿಡಿದು ಎಳೆದಾಡಿ ಅವಮಾನ ಮಾಡಿ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ಶ್ರೀಮತಿ ಆರತಿ ಗಂಡ ಗಂಗಪ್ಪಾ ಹಳ್ಳಿ ಸಾಃ ಮಿಣಜಗಿ ಗ್ರಾಮ ತಾ.ಜಿಃ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.