ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-08-2021
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 71/2021, ಕಲಂ. 279, 304(ಎ) ಐಪಿಸಿ :-
ದಿನಾಂಕ 05-08-2021 ರಂದು ಫಿರ್ಯಾದಿ ಉಮೇಶ ತಂದೆ ನರಸಿಂಗ ಗುಂಜಟ್ಟೆ ವಯ: 25 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಗಾಂಧಿನಗರ ಮಂಠಾಳ ರವರ ತಮ್ಮನಾದ ಮಹೇಶ ಇತನು ಆಳಂದ ತಾಲೂಕಿನ ಗುಳದ ಗ್ರಾಮದಲ್ಲಿರುವ ದೊಡ್ಡಪ್ಪನ ಮಗಳಾದ ಜಗದೇವಿ ಇವಳ ಹತ್ತಿರ ಹೋಗಿ ಬರುತ್ತೇನೆ ಅಂತಾ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-56/ಜೆ-4618 ನೇದರ ಮೇಲೆ ಹೋಗುವಾಗ ಮಹೇಶ ಇವನು ಮಂಠಾಳ ಶಿವಾರದಲ್ಲಿರುವ ಉರ್ಕಿ ಧರಿಯಲ್ಲಿ ರೋಡಿನ ಪಕ್ಕ ತಗ್ಗಿನಲ್ಲಿ ತಾನು ಚಲಾಯಿಸಿಕೊಂಡು ಹೋದ ಮೋಟಾರ್ ಸೈಕಲ ಸಮೇತ ಬಿದ್ದು ಮುಖದ ಬಲಗಡೆ ಗಲ್ಲಕ್ಕೆ ಭಾರಿ ರಕ್ತ ಮತ್ತು ಗುಪ್ತಗಾಯ ಹಾಗು ಬಲಗೈಗೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 107/2021, ಕಲಂ. 20(ಬಿ) ಎನ್.ಡಿ.ಪಿ.ಎಸ್ ಕಾಯ್ದೆ :-
ದಿನಾಂಕ 05-08-2021 ರಂದು ಬೀದರನ ಇರಾನಿ ಕಾಲೋನಿಯಲ್ಲಿ ಇಮಾಮ ಬಾಡಾ ಮಸ್ಜೀದ್ ಹತ್ತಿರ ಸಾದಕ್ ಅಲಿ ಎಂಬ ವ್ಯಕ್ತಿಯ ಮನೆಯ ಮುಂದೆ ಇರುವ ಸಾರ್ವಜನಿಕ ರೋಡಿನ ಮೇಲೆ ಒಬ್ಬ ಹೆಣ್ಣು ಮಗಳು ಅಕ್ರಮವಾಗಿ ಗಾಂಜಾ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿದ್ದಾಳೆಂದು ಮಲ್ಲಮ್ಮ ಆರ್ ಚೌಬೆ ಪೊಲೀಸ್ ನಿರೀಕ್ಷಕರು ಗಾಂಧಿಗಂಜ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು, ಪತ್ರಾಂಕಿತ ಅಧಿಕಾರಿ ರವರಿಗೆ ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮತ್ತು ತೂಕ ಮಾಡುವ ವ್ಯಕ್ತಿ ಎಲ್ಲರೂ ಸೇರಿ ದಾಳಿ ಮಾಡಿ ಆರೋಪಿ ಕುಮಾರಿ ಸೋಫಿಯಾ ಅಲಿ ತಂದೆ ಸಾದಕ ಅಲಿ ವಯ: 16 ವರ್ಷ, ಜಾತಿ: ಇರಾನಿ, ಸಾ: ಇರಾನಿ ಗಲ್ಲಿ ಚಿದ್ರಿ ರೋಡ ಬೀದರ ಹಿಡಿದು ಅವಳ ವಶದಲ್ಲಿದ್ದ ಒಟ್ಟು 4 ಕೆ.ಜಿ 500 ಗ್ರಾಂ. ಗಾಂಜಾ ಅ.ಕಿ 9,000/- ರೂ. ನೇದನ್ನು ತಾಬೆಗೆ ತೆಗೆದುಕೊಂಡು ಸದರಿ ಆರೋಪಿತಳ ವಿರುದ್ಧ ದಿನಾಂಕ 06-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 33/2021, ಕಲಂ. 498(ಎ), 323, 504 ಜೊತೆ 34 ಐಪಿಸಿ :-
ಫಿರ್ಯಾದಿ ಸನಾಬೆಗಂ ಗಂಡ ಮಹ್ಮದ ಮೊಹಿಯುದ್ದಿನ್ ಖಾಲೀದ ವಯ: 22 ವರ್ಷ, ಜಾತಿ: ಮುಸ್ಲಿಂ, ಸಾ: ಮುರಾದ ನಗರ ಹೈದ್ರಾಬಾದ, ಸದ್ಯ: ಕಮಠಾಣಾ ಗ್ರಾಮ, ತಾ: ಬೀದರ ಮದುವೆಯು ದಿನಾಂಕ 08-07-2021 ರಂದು ಮುರಾದ ನಗರ ಹೈದ್ರಾಬಾದನ ಮಹ್ಮದ ಜಹಿರೂದ್ದಿನ್ ರವರ ಮಗನಾದ ಮಹ್ಮದ ಮೊಹಿಯುದ್ದಿನ್ ಖಾಲೀದ ಇತನ ಜೊತೆಯಲ್ಲಿ ತಮ್ಮ ಧರ್ಮದ ಪ್ರಕಾರ ತಂದೆ, ತಾಯಿಯವರು ಮಾಡಿರುತ್ತಾರೆ, ಮದುವೆಯಾದ ನಂತರ ಫಿರ್ಯಾದಿಯು 7-8 ದಿವಸ ಮಾತ್ರ ಚೆನ್ನಾಗಿ ನೋಡಿಕೊಂಡು ನಂತರ ತಂದೆ ತಾಯಿಯವರು ತವರು ಮನೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 26-07-2021 ರಂದು ಆರೋಪಿತರಾದ ಫಿರ್ಯಾದಿಯ ಗಂಡ ಮಹ್ಮದ ಮೊಹಿಯುದ್ದಿನ್ ಖಾಲೀದ, ಅತ್ತೆ ಮುಮತಾಜ ಬೆಗಂ, ಭಾವ ಮಹ್ಮದ ನಸಿರೋದ್ದಿನ್ ಮತ್ತು ಮಹ್ಮದ ಯುಸುಫೋದ್ದಿನ್ ರವರೆಲ್ಲರೂ ಕೂಡಿಕೊಂಡು ಕಮಠಾಣಾದಲ್ಲಿರುವ ಫಿರ್ಯಾದಿಯವರ ತವರು ಮನೆಗೆ ಬಂದು ಸದರಿ ಆರೋಪಿತರೆಲ್ಲರೂ ಅವಾಚ್ಯವಾಗಿ ಬೈದು ತು ಅಬಿ ತಕ್ ಯಹಾಂಚ್ ಹೈ ತು, ಹೈದ್ರಾಬಾದಕೂ ನಹಿ ಆತಿ ಕ್ಯಾ ಅಂತ ತಲೆಯ ಕೂದಲು ಹಿಡಿದು ಕೈಯಿಂದ ಬೆನ್ನಿನ ಮೇಲೆ, ಕಪಾಳದ ಮೇಲೆ ಹೊಡೆದು ತಲೆಯನ್ನು ಗೊಡೆಗೆ ಹೋಡೆ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾರೆ, ಆಗ ಮನೆಯಲ್ಲಿದ್ದ ಫಿರ್ಯಾದಿಯ ಅಣ್ಣನಾದ ಮಹ್ಮದ ಆಸೀಫ್, ಅಕ್ಕಳಾದ ಆಫ್ರೀನ್, ತಾಯಿಯಾದ ನಸ್ರೀನ್, ತಂದೆಯಾದ ಮಹ್ಮದ ಯುಸುಫ್ ಇವರು ಮತ್ತು ಮನೆಯಲ್ಲಿ ಬಾಡಿಗೆಯಿಂದ ವಾಸವಿರುವ ಅಜಮೇರ್ ತಂದೆ ಮೊಸೀನ್ ಮತ್ತು ಪಕ್ಕದ ಮನೆಯ ಮೊಯಿಜ್ ತಂದೆ ಜೈನೋದ್ದಿನ್ ರವರು ಬಂದು ಅವರಿಗೆ ಸಮಜಾಯಿಸಿ ಹೀಗೆಕೆ ಜಗಳ ಮಾಡಿ ಬೈಯುತ್ತಿದ್ದಿರಿ ಅಂತ ಸಮಜಾಯಿಸಿರುತ್ತಾರೆ, ಸದರಿ ಆರೋಪಿತರೆಲ್ಲರೂ ಫಿರ್ಯಾದಿಗೆ ಹೊಡೆದಿರುವುದರಿಂದ ಚಕ್ಕರ್ ಬಂದು ನೆಲದ ಮೇಲೆ ಬಿದ್ದಾಗ ಸದರಿ ಆರೋಪಿತರು ಅಲ್ಲಿಂದ ಓಡಿ ಹೋಗಿರುತ್ತಾರೆ, ನಂತರ ಅಣ್ಣ 108 ಅಂಬುಲೇನ್ಸನಲ್ಲಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಿನಾಂಕ 27-07-2021 ರಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದು ದೂರು ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 06-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 55/2021, ಕಲಂ. 379 ಐಪಿಸಿ :-
ದಿನಾಂಕ 02-08-2021 ರಂದು ಫಿರ್ಯಾದಿ ಅರ್ಜುನ ತಂದೆ ಲಕ್ಷ್ಮಣ ವಯ: 30 ವರ್ಷ, ಜಾತಿ: ಕ್ರಿಶ್ಚನ್, ಸಾ: ಮನೆ ನಂ. 14-8-228 ಎಡೆನ ಕಾಲೋನಿ, ಬೀದರ ರವರು ತನ್ನ ಹೆಂಡತಿಯ ಚಿಕ್ಕಪ್ಪನ ಮಗನಾದ ಸುನೀಲ್ ತಂದೆ ಯಸುದಾಸ ಸಾ: ಗರೀಬ ಕಾಲೂನಿ ಬೀದರ ರವರ ಮೋಟಾರ ಸೈಕಲ್ ನಂ. ಕೆಎ-51/ಇಎಮ್-3581 ನೇದರ ಮೇಲೆ ಗರೀಬ ಕಾಲೋನಿಯಿಂದ ಗವಾನ ಚೌಕ ಕಡೆಯಿಂದ ಮಿರಾಗಂಜ್ ಗ್ರಾಮಕ್ಕೆ ಹೋಗುವಾಗ ಫಿರ್ಯಾದಿಯು ಮೊಹಮ್ಮದ ಗವಾನ ಮದರಸಾ ಹತ್ತಿರ ಹೋದಾಗ ಇಬ್ಬರು ಅಪರಿಚಿತ ಹುಡುಗರು ಮೋಟಾರ ಸೈಕಲಗೆ ಕೈ ಮಾಡಿ ನಿಲ್ಲಿಸಿ ಭೈಯಾ ಹಮೆ ಮೀರಾಗಂಜ್ ತಕ್ ಛೊಡೊ ಅಂತ ಕೇಳಿದಾಗ ಫಿರ್ಯಾದಿಯು ಅವರಿಗೆ ತನ್ನ ಮೊಟಾರ ಸೈಕಲ್ ಮೇಲೆ ಹಿಂದುಗಡೆ ಕೂಡಿಸಿಕೊಂಡು ಮಿರಾಗಂಜ್ ಹಿಂದುಗಡೆ ಇದ್ದ ವಿಜ್ಞಾನ ಕೇಂದ್ರದ ಹತ್ತಿರ ಹೋದಾಗ ಫಿರ್ಯಾದಿಗೆ ಮೂತ್ರ ವಿಸರ್ಜನೆಗೆ ಹೋಗಬೇಕಾಗಿದ್ದರಿಂದ ಮೋಟಾರ ಸೈಕಲ್ ನಿಲ್ಲಿಸಿ ಕೀಲಿ ಅದಕ್ಕೆ ಇಟ್ಟು ಪಕ್ಕದಲ್ಲಿ ಹೋಗಿ ಮೂತ್ರ ವಿಸರ್ಜನಗೆ ಮಾಡುತ್ತಿರುವಾಗ ಸದರಿ ಇಬ್ಬರೂ ಅಪರಿಚಿತ ಹುಡುಗರು ಸದರಿ ಮೋಟಾರ ಸೈಕಲನ್ನು ಮಿರಾಗಂಜ್ ಕಡೆಗೆ ಓಡಿಸಿಕೊಂಡು ಹೋಗಿರುತ್ತಾರೆ, ಸದರಿ ಮೋಟಾರ ಸೈಕಲ್ ಚಾಸಿಸ್ ನಂ. ME4JC589HET237117, ಇಂಜಿನ್ ನಂ. JC58ET3423715 ಹಾಗೂ ಅ.ಕಿ 30,000/- ರೂ ಇರುತ್ತದೆ ಹಾಗೂ ಸದರಿ ಹುಡುಗರ ಅಂದಾಜು ವಯಸ್ಸು 19-20 ವರ್ಷ ಇರಬಹುದು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 06-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 74/2021, ಕಲಂ. 457, 380 ಐಪಿಸಿ :-
ದಿನಾಂಕ 05, 06-08-2021 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಅಂಕುಶ ತಂದೆ ಶರತ ಮಾನೆ ವಯ: 34 ವರ್ಷ, ಜಾತಿ: ಮರಾಠಾ, ಸಾ: ಹುಪಳಾ ರವರ ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿನ ಅಲಮಾರಿಯ ಕೀಲಿ ತೆಗೆದು ಅಲಮರಿಯಲ್ಲಿದ್ದ 5 ತೊಲಿ ಬಂಗಾರದ ಪಾಟಲಿ ಅ.ಕಿ 2 ಲಕ್ಷ ರೂಪಾಯಿ ಹಾಗು ಮನೆಯಲ್ಲಿ ಕಡಲೆ ಬೆಳೆಯ ಡಬ್ಬಿಯಲ್ಲಿ ಟ್ಟಿದ್ದ 5 ತೊಲೆ ಬಂಗಾದ ಬಳೆಗಳು ಅ.ಕಿ 2 ಲಕ್ಷ ರೂಪಾಯಿ ಹೀಗೆ ಒಟ್ಟು 4 ಲಕ್ಷ ರೂಪಾಯಿ ಬೇಲೆ ಬಾಳುವ ಬಂಗಾರ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ ಫಿರ್ಯಾದಿಯವರ ದೂರು ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 87/2021, ಕಲಂ. 379 ಐಪಿಸಿ :-
ದಿನಾಂಕ 04-08-2021 2200 ಗಂಟೆಗೆ ಫಿರ್ಯಾದಿ ಸಂತೋಷ ತಂದೆ ಈರಪ್ಪಾ ನಂದಿ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ತಡೋಳ ರವರ ರವರು ತನ್ನ ಮನೆಯ ಮುಂದೆ ಖುಲ್ಲಾ ಜಾಗದಲ್ಲಿ ನಿಲ್ಲಿಸಿದ ಮೋಟಾರ ಸೈಕಲ ನಂ. ಕೆಎ-56/ಕೆ-0361 ನೇದನ್ನು ದಿನಾಂಕ 05-06-2021 ರಂದು 0200 ಗಂಟೆಯಿಂದ 0500 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ವಾಹನದ ಅ.ಕಿ 62,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 86/2021, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 06-08-2021
ರಂದು ಸುಲ್ತಾನಬಾದವಾಡಿ ಗ್ರಾಮದ ಸಂಗಮೇಶ ತಂದೆ ಬಾಬುರಾವ ಕುರುಬಖೇಳಗಿ ರವರ ಮನೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಫಿರ್ಯಾದಿ ನಿಂಗಪ್ಪಾ ಮಣ್ಣೂರ ಪಿ.ಎಸ್.ಐ(ಕಾಸು)
ಹಳ್ಳಿಖೇಡ(ಬಿ)
ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ತಮ್ಮ ಸಿಬ್ಬಂದಿಯವರೊಡನೆ ಹೋಗಿ ನೋಡಲು ಬಾತ್ಮಿಯ ವಿಷಯ ನಿಜವಿದ್ದು, ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಇಸ್ಪಿಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ವಿಜಯಕುಮಾರ ತಂದೆ ಶಂಕ್ರೆಪ್ಪಾ ಸ್ವಾಮಿ, 2) ಹಣಮಂತ ತಂದೆ ಶಂಕರ ಮಡಿವಾಳ, 3) ಅನೀಲಕುಮಾರ ತಂದೆ ಬಸವರಾಜ ಪಟ್ನೆ ಮೂವರು ಸಾ: ಖಟಕಚಿಂಚೋಳಿ, 4) ನಂದಕುªÀiÁರ ತಂದೆ ಚಂದ್ರಕಾಂತ ಬೆಲ್ಲಾಳೆ, 5) ಸಂಗಮೇಶ ತಂದೆ ಬಾಬುರಾವ ಕುರುಬಖೇಳಗಿ, 6) ಶರಣಪ್ಪಾ ತಂದೆ ಬಸಪ್ಪಾ ರಂಜೇರಿ, 7) ಪ್ರಶಾಂತ ತಂದೆ ಗುಂಡಪ್ಪಾ ಔಂಟಗೇರ 4 ಜನ ಸಾ: ಸುಲ್ತಾನಬಾದವಾಡಿ, 8) ರಾಜಕುಮಾರ ತಂದೆ ಪಾಂಡುರಂಗ ಬಾವಗಿ ಸಾ: ಬಸಲಾಪುರ ಹಾಗೂ 4) ಪವನ ತಂದೆ ಮಹಾದೇವಪ್ಪಾ ಹುಮನಾಬಾದೆ ಸಾ: ನೌಬಾದ ಬೀದರ
ಇವರೆಲ್ಲರ ಮೇಲೆ ದಾಳಿ ಮಾಡಿ ಅವರಿಂದ ಒಟ್ಟು 60,849/- ರೂ. ನಗದು ಹಣ ಹಾಗೂ 52 ಇಸ್ಪಿಟ್ ಎಲೆಗಳಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿ ಸದರಿ ಆರೋಪಿತರ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.