Police Bhavan Kalaburagi

Police Bhavan Kalaburagi

Wednesday, December 23, 2020

BIDAR DISTRICT DAILY CRIME UPDATE 23-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-12-2020

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 05/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 19-12-2020 ರಂದು ರೇಣುಕಾ ಂಡ ರಾಜಕುಮಾರ ಢೋಕಿ ವಯ: 30 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಮಠಾಣಾ ರವರು ತಮ್ಮ ಹೋಲದಲ್ಲಿ ಕೆಲಸ ಮಾಡುವಾಗ ಹಾವು ರೇಣುಕಾ ರವರ ಎಡಗಾಲ ಹಿಮ್ಮಡಿಗೆ ಕಚ್ಚಿದ್ದು ಕೂಡಲೇ ಅವರಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರಗೆ ದಾಖಲಿಸಿದಾಗ ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ 20-12-2020 ರಂದು ಹೈದ್ರಾಬಾದ ಗಾಂಧಿ ಆಸ್ಪತ್ರೆಗೆ ದಾಖಲಿಸಿದಾಗ ರೇಣುಕಾ ರವರು ಹೈದ್ರಾಬಾದ ಗಾಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಾಲಕ್ಕೆ ಗುಣಮುಖಳಾಗದೇ ಮೃತಪಟ್ಟಿರುತ್ತಾರೆಂದು ಫಿರ್ಯಾದಿ ಗಣಪತಿ ತಂದೆ ಅಮೃತರಾವ ಚೆಟನಳ್ಳಿಕರ ವಯ: 27 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಮಠಾಣಾ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 106/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 22-12-2020 ರಂದು ಪ್ರಭು ತಂದೆ ಶಂಕರ ಕೋಳಿ ಸಾ: ರೇಕುಳಗಿ, ತಾ & ಜಿಲ್ಲೆ: ಬೀದರ ರವರು ರವರು ಹುಮನಾಬಾದಗೆ ಬಂದು ಹಿಟ್ಟು ಬಿಸಿಕೊಂಡು ಹೋಗಲು ಜೋಳ ತೆಗೆದುಕೊಂಡು ತಾನು ಕೆಲಸ ಮಾಡುವ ಕಾರ್ಖಾನೆಯ ಹತ್ತಿರ ಬಂದು ಬಸ್ಸಿನ ದಾರಿ ಕಾಯುತ್ತಾ ನಿಂತಿರುವಾಗ ಕಲ್ಲೂರ ಕಡೆಯಿಂದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-39/ಆರ್-0237 ನೇದರ ಚಾಲಕನಾದ ಗುಂಡಪ್ಪಾ ತಂದೆ ಮಲಶೆಟ್ಟಿ ಸಾ: ಕಲ್ಲೂರ ರವರು ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಹುಮನಾಬಾದ ಕಡೆಗೆ ಬರುತ್ತಿರುವಾಗ ಫಿರ್ಯಾದಿಯು ಅವರಿಗೆ ಕೈ ಸನ್ನೆ ಮಾಡಿ ನಿಲ್ಲಿಸಿ ಸದರಿ ಮೋಟಾರ್ ಸೈಕಲ್ ಮೇಲೆ ಹುಮನಾಬಾದ ಕಡೆಗೆ ಬರುತ್ತಿರುವಾಗ ಜಗನ್ನಾಥರೆಡ್ಡಿ ರವರ ಹೊಲದ ಹತ್ತಿರ ಬಂದಾಗ ಅದೇ ಸಮಯಕ್ಕೆ ಎದುರಿನಿಂದ ಅಂದರೆ ಹುಮನಾಬಾದ ಕಡೆಯಿಂದ ಒಂದು ಟಾಟಾ ಸಫಾರಿ ಕಾರ್ ನಂ. ಕೆಎ-28/ಎನ್-1442 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತಿರುವ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಆರೋಪಿಯು ತನ್ನ ಕಾರ ಸಮೇತ ಕಲ್ಲೂರ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎರಡು ಕಾಲುಗಳಿಗೆ ಮತ್ತು ಹೊಟ್ಟೆಗೆ ಸಾದಾ ಗುಪ್ತಗಾಯಗಳು ಹಾಗೂ ಬಲಗಾಲ ಹೆಬ್ಬೆರಳಿಗೆ ತರಚಿದ ರಕ್ತಗಾಯ ಆಗಿರುತ್ತದೆ, ಮೋಟಾರ್ ಸೈಕಲ್ ಚಾಲಕನಿಗೆ ಬಲಗಾಲ ತೋಡೆಗೆ, ಬಲಗೈಗೆ ತೀವ್ರ ಗುಪ್ತಗಾಯಗಳು, ತಲೆಗೆ ಮತ್ತು ಬಲಗಾಲ ಪಾದಕ್ಕೆ ಸಾದಾ ರಕ್ತಗಾಯಗಳು ಆಗಿರುತ್ತವೆ, ನಂತರ ಅಲ್ಲೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜಗನ್ನಾಥರೆಡ್ಡಿ ತಂದೆ ಗುರಾರೆಡ್ಡಿ ಮುಡಬಿ ಸಾ: ವಾಂಜರಿ ಹುಮನಾಬಾದ ರವರು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿ ಗಾಯಗೊಂಡ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಕೂಡಿಸಿ ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 241/2020, ಕಲಂ. 188 ಐಪಿಸಿ ಮತ್ತು ಕಲಂ. 32, 34 ಕೆ. ಕಾಯ್ದೆ :-

ದಿನಾಂಕ 22-12-2020 ರಂದು ಭಾಲ್ಕಿಯ ಅಮರ ಚಿತ್ರಮಂದಿರದ ಹತ್ತಿರ ಇಬ್ಬರು ಸಂಬಂಧಪಟ್ಟ ಇಲಾಖೆಯಿಂದ ಯಾವುದೆ ಅನುಮತಿ ಪತ್ರ ಇಲ್ಲದೆ ಸಾವರ್Àಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತು ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಅಮರ ಕುಲ್ಕರ್ಣಿ ಪಿ.ಎಸ್. (ಕಾ.ಸೂ) ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಅಮರ ಟಾಕೀಜ ಹತ್ತಿರ ಹೋಗಿ ಜೀಪನ್ನು ನಿಲ್ಲಿಸಿ ಎಲ್ಲರು ಜೀಪಿನಿಂದ ಇಳಿದು ಮರೆಯಲ್ಲಿ ನಿಂತು ನೋಡಲು ಅಮರ ಚಿತ್ರಮಂದಿರದ ಮುಂದೆ ಆರೋಪಿತರಾದ 1) ರಮೇಶ ತಂದೆ ವಿಶ್ವನಾಥ ಮೋರೆ ಸಾ: ಅಶೋಕ ನಗರ ಭಾಲ್ಕಿ, 2) ಬಾಬುರಾವ ತಂದೆ ಕೇಶವರಾವ ಸಾವಳೆ ಸಾ: ದಾಡಗಿ ಬೇಸ್ ಹಳೆ ಭಾಲ್ಕಿ ಇವರಿಬ್ಬರು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ತಮ್ಮ ವಶದಲ್ಲಿ ಒಂದು ಕಾಟನ ಇಟ್ಟುಕೊಂಡು ಜನರಿಗೆ ಮಧ್ಯ ಮಾರಾಟ ಮಾಡುತ್ತಿರುವದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರ ವಶದಲ್ಲಿದ್ದ ಕಾಟನ ಪರಿಶೀಲಿಸಿ ನೋಡಲು ಅದರಲ್ಲಿ 1) ಓಲ್ಡ್ ಟಾವರ್ನ ಟಿ.ಎಮ್ ವಿಸ್ಕಿ 180 ಎಂ.ಎಲ್ ವುಳ್ಳ 14 ಪೇಪರ ಪಾಕೇಟಗಳು ಅ.ಕಿ 1214.50 ರೂ., 2) ಆಫಿಸರ್ಸ್ ಚಾಯಿಸ್ ಸ್ಪೇಷಿಯಲ್ ವಿಸ್ಕಿ 180 ಎಂ.ಎಲ್ ವುಳ್ಳ 13 ಪೇಪರ ಪಾಕೇಟಗಳು ಅ.ಕಿ 1380.99 ರೂ., 3) ಓರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ 90 ಎಂ.ಎಲ್ ವುಳ್ಳ 27 ಪೇಪರ ಪಾಕೇಟಗಳು ಅ.ಕಿ 948.51 ರೂ., ಹೀಗೆ ಎಲ್ಲಾ ಸೇರಿ ಒಟ್ಟು ಅ.ಕಿ 3544 ರೂ. ದಷ್ಟು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿಗೆ ವಶಕ್ಕೆ ತೆಗೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 192/2020, ಕಲಂ. 379 ಐಪಿಸಿ :-

ದಿನಾಂಕ 21-12-2020 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಸತೀಶ ತಂದೆ ರಾಮಲು ಕೊಟರ್ಕಿ ಸಾ: ಸಾಯಿ ನಗರ ಬೀದರ ರವರು ತನ್ನ ಹಿಟಾಚಿ ಬ್ರೇಕರ್ 110ಟನ್ ಕ್ಲಾಸ್ ಅ.ಕಿ 4,00,000/- ರೂ. ನೇದನ್ನು ಮೈಲೂರ ರೋಡ ಗುರುನಾನಕ ಗೋಯಲ ಮನೆಯ ಹತ್ತಿರ ಇಟ್ಟಿರುವುದನ್ನು ಕಳ್ಳತನ ಮಾಡಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.