Police Bhavan Kalaburagi

Police Bhavan Kalaburagi

Sunday, December 24, 2017

BIDAR DISTRICT DAILY CRIME UPDATE 24-12-2017¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-12-2017

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 302/2017, ಕಲಂ. 279, 337, 338 ಐಪಿಸಿ :-
ದಿನಾಂಕ 22-12-2017 ರಂದು ಫಿರ್ಯಾದಿ ಮಹಾಂತೇಶ ತಂದೆ ಘಾಳೇಪ್ಪಾ ಗಾದಗೆ ಸಾ: ನೇಳಗಿ ವರು ತನ್ನ ಅಣ್ಣ ಲೊಕೇಶ ಕೂಡಿಕೊಂಡು ತಮ್ಮ ಮೋಟಾರ್ ಸೈಕಲ ನಂ. ಕೆಎ-38/ಯು-5634 ನೇದರ ಮೇಲೆ ಹೋಗಿ ಅಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಬೀದರ ಭಾಲ್ಕಿ ರಸ್ತೆ ಹಿಡಿದು ನೇಳಗಿ ಗ್ರಾಮಕ್ಕೆ ಬರುತ್ತಿರುವಾಗ ಮೋಟಾರ್ ಸೈಕಲನ್ನು ಅಣ್ಣ ಲೋಕೆಶ ವಯ: 25 ವರ್ಷ ಈತನು ಚಲಾಯಿಸುತಿದ್ದು, ಇಬ್ಬರು ಖಾನಾಪೂರ ಗ್ರಾಮದ ಆನಂದ ಧಾಭಾ ದಾಟಿ ರೋಡಿನ ಮೇಲೆ ಮುಂದೆ ಹೋಗುತ್ತಿರುವಾಗ ಅಣ್ಣ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಅತೀ ಜೋರಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿದ್ದರಿಂದ ಒಮ್ಮೇಲೆ ಸ್ಕಿಡಾಗಿ ಮೋಟಾರ್ ಸೈಕಲ ಕೆಳಗೆ ಬಿದ್ದಿರುತ್ತದೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡ ಮೊಳಕಾಲು ಮೂಳೆ ಮುರಿದು ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಎಡಗಾಲು, ಬಲಗಾಲು ಪಾದದ ಮೇಲೆ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ, ಅಣ್ಣ ಲೊಕೇಶ ಈತನಿಗೆ ರೊಂಡಿಯ ಮೇಲೆ ಗುಪ್ತಗಾಯವಾಗಿರುತ್ತದೆ, ಸದರಿ ಘಟನೆಯನ್ನು ಆನಂದ ಧಾಭಾದ ಮಾಲಿಕ ಮತ್ತು ಅಲ್ಲಿದ್ದ ಜನರು ಗಾಯಗೊಂಡ ಇಬ್ಬರಿಗೂ 108 ಅಂಬ್ಯೂಲೆನ್ಸಗೆ ಕರೆಸಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಕಳಿಸಿರುತ್ತಾರೆ ಮತ್ತು ಹೆಚ್ಚಿನ ಚಿಕಿತ್ಸೆ ಗುರುನಾನಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಮೇರೆಗೆ ದಿನಾಂಕ 23-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  
                                                                                                                                                                                                                       

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಸಯ್ಯ ತಂದೆ ಗೊಲ್ಲಾಳಯ್ಯ ಮೇಲಿನ ಮಠ ಸಾ|| ಮಾಗಣಗೇರಾ ತಾ|| ಜೇವರ್ಗಿ ಜಿ|| ಕಲಬುರಗಿ ರವರು ದಿನಾಂಕ 18-12-17 ರಂದು ಸಾಯಂಕಾಲ 6 ಗಂಟೆಗೆ ಹೊಲದಲ್ಲಿ ಇದ್ದಾಗ ನನ್ನ ಮಗ ಸಂತೋಷ ಇತನಿಗೆ ನನಗೆ ಕರೆದುಕೊಂಡು ಹೋಗಲು ನಮ್ಮ ಮೋಟರ್ ಸೈಕಲ್ ತೆಗೆದುಕೊಂಡು ಹೊಲಕ್ಕೆ ಬಾ ಎಂದು ಹೇಳಿರುತ್ತೆನೆ. ನಂತರ 6-30 ಪಿ ಎಂ ಸುಮಾರಿಗೆ ನಮ್ಮೂರು ದಾಟಿ ದವಲಸಾಬ ಹೊಲದ ಹತ್ತಿರ ನನ್ನ ಮಗನ ಮೊಟರ್ ಸೈಕಲ್ ಅಪಘಾತವಾಗಿರುತ್ತೆಯಂತ ವಿಷಯ ತಿಳಿದು ನಾನು ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗ ಮತ್ತು ನಮ್ಮೂರ ಜಕ್ಕಪ್ಪ ಹದಗಲ್ ಅವರ  ರೋಡಿನ ಎಡಗಡೆ ಬಿದ್ದಿದ್ದು ನನ್ನ ಮಗ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅವನ ಬಲ ತೆಲೆಗೆ ಮತ್ತು ಬಲ ಭುಜಕ್ಕೆ ಒಳ ಪೆಟ್ಟಾಗಿ ಸ್ವಲ್ಪ ಬಾತಿತ್ತು. ನಂತರ ಜಕ್ಕಪ್ಪನಿಗೆ ನೊಡಲಾಗಿ ಅವನ ಗಂಟಲಕ್ಕೆ ತೆರಚಿದ ಗಾಯ ಎಡಮೊಳಕಾಲ ಕೆಳಗೆ ರಕ್ತ ಗಾಯ ಹಾಗು ಎದೆಗೆ ಒಳ ಪೆಟ್ಟಾಗಿದ್ದು ಅವನನ್ನು ವಿಚಾರಿಸಲಾಗಿ ಹೆಳಿದ್ದೆನೆಂದರೆ ನಾನು ಮತ್ತು ನಿಮ್ಮ ಮಗ ಸಂತೋಷ ಅವರು ಕೂಡಿ ನಿಮ್ಮ ಮೊಟರ್ ಸೈಕಲ್ ಮೇಲೆ ನಿಮ್ಮ ಹೊಲಕ್ಕೆ ಬರುವಾಗ ದವಲಸಾಬ ನದಾಫ್ ಹೊಲದ ಹತ್ತಿರ ಎದುರುಗಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರ ತನ್ನ ಮೋಟರ್ ಸೈಕಲ್ ನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಒಮ್ಮೇಲೆ ನಮ್ಮ ಮೋಟರ್ ಸೈಕಲ್ ಕ್ಕೆ ಡಿಕ್ಕಿ ಹೋಡೆದನು ಆಗ ನಾವಿಬ್ಬರು ಮೋಟರ್ ಸೈಕಲ್ ನಿಂದ ಹಾರಿ ರೋಡಿನ ಮೇಲೆ ಬಿದ್ದಿರುತ್ತೆವೆ. ನನಗೆ ಎದೆಗೆ ಭಾರಿ ಒಳ ಪೆಟ್ಟಾಗಿದ್ದು ಎಡ ಮೊಳಕಾಲು ಕೇಳಗೆ ರಕ್ತಗಾಯ ಮತ್ತು ಒಳ ಪೆಟ್ಟಾಗಿರುತ್ತದೆ. ಸಂತೋಷ ಇತನು ಮೊಟರ್ ಸೈಕಲ್ ಚಲಾಯಿಸುತ್ತಿದ್ದನು ನಮಗೆ ಅಪಘಾತ ಪಡಿಸಿದ ಮೋಟರ್ ಸೈಕಲ್ ಸವಾರನು ನಮ್ಮ ಹತ್ತಿರ ಬಂದು ನಮಗೆ ಎಬ್ಬಿಸಿ ಕೂಡಿಸಿದನು ಅವನ ಹೆಸರು ಶರಣಗೌಡ ತಂದೆ ಬಸಣ್ಣಗೌಡ ಪಾಟೀಲ್ ಸಾ|| ಕಲ್ಲೂರ (ಕೆ) ಎಂಬುವವನು ಇದ್ದು ಅವನ ಪರಿಚಯ ಇರುತ್ತದೆ. ಅವನ ಮೊಟರ್ ಸೈಕಲ್ ನಂಬರ ಕೆ ಎ 32 ವಾಯ್ 0895 ಅಂತಾ ಇದ್ದು ನಂತರ ಅವನು ತನ್ನ ಮೋಟರ್ ಸೈಕಲ್ ತೆಗೆದುಕೊಂಡು ಹೋದನು  ಅಮತಾ ತಿಳಿಸಿದ್ದು ನಂತರ ನನ್ನ ಮಗನಿಗೆ ಉಪಚಾರ ಕುರಿತು ನಾನು ನನ್ನ ಹೆಂಡತಿ ನಿಂಗಮ್ಮ ರವರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನನ್ನ ಮಗನಿಗೆ ಹಾಕಿಕೊಂಡು ಬಿಜಾಪೂರ ಸಂಜೀವಿನಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆವೆ ಅದರಂತೆ ಜಕ್ಕಪ್ಪನಿಗೆ ಬಿಜಾಪೂರ ಬಿ ಎಲ್ ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಇಂದು ದಿನಾಂಕ 23-12-17 ರಂದು 4-50 ಎ ಎಂ ಕ್ಕೆ ಆಸ್ಪತ್ರೆಯಲ್ಲಿ ನನ್ನ ಮಗ ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಅತ್ಯಾಚಾರ ಪ್ರಕರಣ :
ಆಳಂದ ಠಾಣೆ : ಶ್ರೀ ರವರ ಮಗಳಾದ ಕುಮಾರಿ ಇವಳು 8 ನೇ ತರಗತಿಯವರೆಗೆ ವಿದ್ಯಾಬ್ಯಾಸ ಮಾಡಿದ್ದು ಅವಳಿಗೆ ಪರಿಚಯದ ಪ್ರವೀಣ ತಂದೆ ಹಣಮಂತ ಭನಸೋಡೆ ಇತನು ಆಗಾಗ ಅವಳೊಂದಿಗೆ ಮಾತನಾಡುತ್ತಿದ್ದನು. ಸದರಿಯವನು ನನ್ನ ಮಗಳೊಂದಿಗೆ ಮಾತನಾಡುವುದು ಮತ್ತು ಪ್ರೀತಿಸಿದಂತೆ ನಟನೆ ಮಾಡುವದು ಮಾಡುತ್ತಿದ್ದರಿಂದ ನಾವು ಸದರಿಯವನಿಗೆ ಸುಮಾರು ಭಾರಿ ಈ ರೀತಿ ಮಾಡಬೇಡೆಂದು ತಿಳಿಸಿರುತ್ತೇವೆ. ದಿನಾಂಕ: 27/09/2017 ರಂದು ಮದ್ಯಾಹ್ನ ನನ್ನ ಮಗಳು ಹೊರಗಡೆ ಹೋಗಿ ಬರುತ್ತೇನೆ  ಅಂತಾ ಮನೆಯಿಂದ ಹೊರಗಡೆ ಬಂದಾಗ ಪ್ರವೀಣ ಇತನು  ಅಪ್ರಾಪ್ತ ವಯಸ್ಸಿನವಳಾದ ನನ್ನ ಮಗಳಿಗೆ ಕೈ ಸನ್ನೆ ಮಾಡಿ ದೂರು ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅವಳಿಗೆ ಪುಸಲಾಯಿಸಿ ಅವಳ ತಲೆಕೆಡಿಸಿ ಅವಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಪಹರಣವಾದ ನನ್ನ ಮಗಳು ಸಿಗಬಹುದು ಅಂತಾ ಆಳಂದ,ಉಮರ್ಗಾ,  ಖಜೂರಿ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ನಾವು ಎಲ್ಲಾ ಕಡೆಗೆ ಹುಡುಕಾಡಿದ್ದು ನನ್ನ ಅಪ್ರಾಪ್ತ ವಯಸ್ಸಿನ ಮಗಳಿಗೆ ಪ್ರವೀಣ ತಂದೆ ಹಣಮಂತ ಬನಸೋಡೆ ಇತನು ನನ್ನ ಮಗಳ ತಲೆ ಕೆಡಿಸಿ ಪುಸಲಾಯಿಸಿ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿ ಅಪಹರಣ ಮಾಡಿಕೊಂಡು  ಹೋಗಿರುತ್ತಾನೆ. ಈ ಬಗ್ಗೆ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು            ತನಿಖೆ ಕಾಲಕ್ಕೆ ದಿನಾಂಕ:23/12/2017 ರಂದು ಗುಲಬರ್ಗಾದಲ್ಲಿ ಅಪಹರಣಕ್ಕೋಳಗಾದ ಬಾಲಕಿ ಕುಮಾರಿ ಇವಳು ಪತ್ತೆಯಾಗಿದ್ದು, ಠಾಣೆಗೆ ತಂದು ವಿಚಾರಿಸಲಾಗಿ ನಾನು ಈ ಮೇಲ್ಕಾಣಿಸಿದ ವಿಳಾಸದವಳಿದ್ದು  ಮನೆ ಕೆಲಸ ಮಾಡಿಕೊಂಡು ತಂದೆಯೊಂದಿಗೆ ಉಪಜೀವಿಸುತ್ತೇನೆ. ನಮ್ಮ ಗ್ರಾಮದ ಪ್ರವೀಣ ತಂದೆ ಹಣಮಂತ ಬನಸೊಡೆ ಇತನ  ಪರಿಚಯವಾಗಿದ್ದು ನಂತರದ ದಿನಗಳಲ್ಲಿ ಅವನು ನನ್ನ ಹಿಂದೆ ಸುತ್ತಾಡುವುದು ಮಾಡುವುದು ಮತ್ತು ನನ್ನ ಶಾಲೆಯ ಹತ್ತಿರ ಬರುವುದು ಮಾಡುತ್ತಿದ್ದನು.  ನಂತರ ನನಗೆ ಪ್ರವೀಣ ಇತನು ನಿನಗೆ ಪ್ರೀತಿಸುತ್ತಿದ್ದೇನೆ ಅಂತಾ ನಾನು ಬೇಡ ಅಂದರೂ ನನಗೆ  ಭೇಟಿ ಆಗುವುದು, ಮಾತನಾಡುವುದು ಮತ್ತು ಪೋನಿನಲ್ಲಿ ಮಾತನಾಡುತ್ತಾ ಬಂದಿರುತ್ತಾನೆ. ದಿನಾಂಕ: 27/09/2017 ರಂದು ಪ್ರವೀಣ ಇತನು ನಮ್ಮ ಗ್ರಾಮದ ಹೊರಗಡೆ ನಿಂತು ನನಗೆ ಪೋನ್ ಮಾಡಿ ಕರೆದಾಗ ನಾನು ಮನೆಯಿಂದ ಹೊರಗಡೆ ಬಂದಾಗ ನನಗೆ ಅವನು ನಿನ್ನ ಮದುವೆ ಮಾಡಿಕೊಳ್ಳುತ್ತೇನೆ ನಾವು ಇಬ್ಬರು ಕೂಡಿಕೊಂಡು ಇಲ್ಲಿಂದ ಓಡಿ ಹೋಗೋಣಾ ಅಂತಾ ನನ್ನನ್ನು ತಲೆ ಕೆಡಿಸಿ  ನನ್ನನ್ನು ಕರೆದುಕೊಂಡು ಹೋಗಿ ಆ ದಿವಸ ಆಳಂದದಿಂದ ಗುಲಬರ್ಗಾಕ್ಕೆ ಹೋಗಿ ಅದೇ ದಿವಸ ಗುಲಬರ್ಗಾದ ಹಿರಾಪೂರ ಬಡಾವಣೆಯಲ್ಲಿ ಒಂದು ರೂಮ್ ಬಾಡಿಗೆ ಮಾಡಿ ಇಟ್ಟಿರುತ್ತಾನೆ.  ನಂತರ ಪ್ರವೀಣ ಇತನು ಬಾಡಿಗೆ ಕಾರ ಓಡಿಸುತ್ತಾ ಬೆಳಗ್ಗೆ ಮನೆಯಿಂದ ಹೋಗಿ ಮರಳಿ ರಾತ್ರಿ ಮನೆಗೆ ಬರುತ್ತಿದ್ದನು ಹೀಗೆ ದಿನಾಂಕ:01/10/2017 ರಂದು ರಾತ್ರಿ ಇಬ್ಬರು ಕೂಡಿಕೊಂಡು ಮಲಗಿದಾಗ ಪ್ರವೀಣ ಇತನು ನನಗೆ ಸಂಬೋಗ ಮಾಡಲು ಬಂದಾಗ ನಾನು ಇನ್ನೂ ಬ್ಯಾಡ ಮದುವೆ ಆದ ನಂತರ ಸಂಬೋಗ ಮಾಡೋಣಾ ಅಂದಾಗ ಅದಕ್ಕೆ ಒಪ್ಪದೆ ನನ್ನನ್ನು ತಲೆಕೆಡಿಸಿ ಆ ರಾತ್ರಿ ನನಗೆ ಜಬರಿ ಸಂಬೋಗ ಮಾಡಿರುತ್ತಾನೆ. ನಂತರ ನನಗೆ ಯಾವುದೋ ಒಂದು ಗುಡಿಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡಿರುತ್ತಾನೆ. ನಂತರ ಎರಡು-ಮೂರು ತಿಂಗಳಲ್ಲಿ ಆಗಾಗ ರಾತ್ರಿ ನನ್ನೊಂದಿಗೆ ಜಬರಿ ಸಂಬೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಲೈಂಗಿಕ ಹಿಂಸೆ ನೀಡಿ ಸಹಕರಿಸುವಂತೆ ಒತ್ತಾಯ ಮಾಡಿದ  ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸೀತಮ್ಮ ಗಂಡ ಧ್ಯಾವಪ್ಪ ವಾಲಿಕಾರ ಸಾ: ಕರಜಗಿ ಇವರಿಗೆ ಸುಮಾರು 01 ವರ್ಷದಿಂದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರೀನ್ಸಿಪಾಲ್ ರವರಾದ ಸೈಫನ ಮತ್ತು ವಾರ್ಢನ ಆದ ಜಗನ್ನಾಥ ಇವರು ಸೇರಿಕೊಂಡು ನನಗೆ ಲೈಂಗಿಕ ಹಿಂಸೆ ಕೊಟ್ಟಿದ್ದು ಮತ್ತು ಲೈಂಗಿಕ ಕ್ರೀಯೆಯಲ್ಲಿ ಸಹಕರಿಸುವಂತೆ ಒತ್ತಾಯಪಡಿಸುವುದು ಮಾಡುತ್ತಿದ್ದು ಇದಕ್ಕೆ ಅಂಬಣ್ಣ ನರಗೋದಿ ಈತನ ಕುಮ್ಮಕ್ಕಿನಿಂದ ಇವರು ಹಿಗೆ ಮಾಡುತ್ತಿದ್ದು ಕಾರಣ ಸದರಿ ಮೂರು ಜನರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.