Police Bhavan Kalaburagi

Police Bhavan Kalaburagi

Saturday, April 18, 2020

BIDAR DISTRICT DAILY CRIME UPDATE 18-04-2020ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 18-04-2020
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 65/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 17/04/2020 ರಂದು 1700 ಗಂಟೆಗೆ ಪಿಎಎಸ್ಐ ರವರಿಗೆ ಗಾಂಧಿಗಂಜದಲ್ಲಿರುವ ಎ.ಪಿ.ಎಮ್.ಸಿ ಯಲ್ಲಿ. ಕೃಷಿ ಉತ್ಪನ ಮಾರುಕಟ್ಟೆ ಕಛೇರಿಯ ಹತ್ತಿರ ಕೃಷಿ ಉತ್ಪನ ಮಾರುಕಟ್ಟೆ ಗೋದಾಮ ಮುಂದೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಕ್ಕದಲ್ಲಿ ಇಸ್ಪಟ್ ಜೂಜಾಟ್ ಆಡುತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ 1745 ಗಂಟೆಗೆ ದಾಳಿ ಮಾಡಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಜನರ ಅಂಗ ಜಡ್ತಿ ಮಾಡಲಾಗಿ 1) ಗುಂಡು ತಂದೆ ಪ್ರಭು ಜಾಂತಿಕರ ವಯ 34 ವರ್ಷ ಜಾತಿ ಲಿಂಗಾಯತ ಸಾ: ವಿದ್ಯಾನಗರ ಕಾಲೋನಿ ಬೀದರ ಇವನ ಹತ್ತಿರ ನಗದು ಹಣ ರೂ: 1,200-00 (2) ವಿದ್ಯಾನಂದ ತಂದೆ ಸನಮುಖಯ್ಯಾ ಸ್ವಾಮಿ ವಯ 40 ವರ್ಷ ಸಾ: ವಿದ್ಯಾನಗರ ಕಾಲೋನಿ ಬೀದರ ಇವನ ಬಳಿ ನಗದು ಹಣ ರೂ: 900-00 (3) ನಾಗರಾಜ ತಂದೆ ರಾಜಕುಮಾರ ಕಾಡವಾದೆ ವಯ 30 ವರ್ಷ ಜಾತಿ ಲಿಂಗಾಯತ ಬಸವನಗರ ಬೀದರ ಇವನ ಬಳಿ ನಗದು ಹಣ ರೂ: 1,300-00 (4) ಶಿವಕುಮರ ತಂದೆ ಶಂಕರಪ್ಪ ಫತ್ತೆಪುರ ವಯ 32 ವರ್ಷ ಲಿಂಗಾಯತ ವಿದ್ಯಾನಗರ ಕಾಲೋನಿ ಬೀದರ ಇವನ ಬಳಿ ನಗದು ಹಣ ರೂ 1,000-00 (5) ಶಿವಶರಣಪ್ಪಾ ತಂದೆ ಅಣ್ಣರಾವ ಪಾಟೀಲ ವಯ 42 ವರ್ಷ ಜಾತಿ ಲಿಂಗಾಯತ ಸಾ: ಹೌಸಿಂಗ ಬೊರ್ಡ ಕಾಲೋನಿ ಬೀದರ  ಇವನ ಬಳಿ ನಗದು ಹಣ ರೂ: 950-00 ಮತ್ತು (6) ಭಿಮರಾವ ತಂದೆ ಗೋಪಾಲರಾವ ವಯ 42 ಜಾತಿ ಮರಾಠ ಸಾ: ಹಾರೂರಗೇರಿ ಬೀದರ ಇವನ ಬಳಿ ನಗದು ಹಣ ರೂ: 1,020-00 ಎಲ್ಲರ ಮದ್ಯದಲ್ಲಿದ್ದ ನಗದು ಹಣ ರು: 1,950-00 ಹಿಗೆ ಎಲ್ಲಾ ಒಟ್ಟು 8,320-00 ಮತ್ತು 52 ಇಸ್ಪಿಟ ಎಲೆಗಳು ಮತ್ತು 8,320-00 ರೂಪಾಯಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 24/2020 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 17/04/2020 ರಂದು ಮುಂಜಾನೆ 1150 ಗಂಟೆಗೆ ಠಾಣೆಯಲ್ಲಿರುವಾಗ ಫೋನ ಮೂಲಕ ಖಚಿತ ಮಾಹಿತಿ ಬಂದಿದ್ದೆನೆಂದರೆ, ಆನಂದವಾಡಿ ಶಿವಾರದಲ್ಲಿ ವಿಜಯಕುಮಾರ ಪಾಟೀಲ ರವರ ಹೊಲದ ಹತ್ತಿರ ಒಬ್ಬ ವ್ಯಕ್ತಿ ಕಳ್ಳಭಟ್ಟಿ ಸಾರಾಯಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತಿದ್ದಾನೆಂದು ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಲು ವಿಜಯಕುಮಾರ ಪಾಟೀಲ್ ರವರ ಹೊಲದ ಹತ್ತಿರ ಆನಂದವಾಡಿ- ಮಿರಕಲ್ ರಸ್ತೆಯ ಹತ್ತಿರ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಬಿಳಿ ಪ್ಲಾಸ್ಟಿಕ್ ಡಬ್ಬಿ ಇಟ್ಟುಕೊಂಡು ನಿಂತಿರುವುದನ್ನು ಖಚಿತ ಪಡಿಸಿಕೊಂಡು ಇಂದು 1300 ಗಂಟೆಗೆ ಪಂಚರ ಸಮಕ್ಷಮದಲ್ಲಿ ಅವನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತಿಳಿಸಿದ್ದೆನೆಂದರೆ,  ಆನಂದ ತಂದೆ ವಿಶ್ವಂಬರ ಪುಂಡೆ ವಯ 23 ವರ್ಷ, ಜಾತಿ ಮಾದಿಗ ಉ: ಕೂಲಿ ಕೆಲಸ ಸಾ: ಗುತ್ತಿ ಅಂತ ತಿಳಿಸಿರುತ್ತಾನೆ. ಮುಂದುವರೆದು ನಾನು ನಿನ್ನ ಹತ್ತಿರವಿರುವ ಪ್ಲಾಸ್ಟಿಕ ಡಬ್ಬಿಯಲ್ಲಿ ಎನು ಇದೆ ಅಂತ ವಿಚಾರಿಸಲಾಗಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಕಳ್ಳಭಟ್ಟಿ ಸಾರಾಯಿ ಇರುವುದಾಗಿ ತಿಳಿಸಿರುತ್ತಾನೆ.   ಅವನ ಹತ್ತಿರವಿದ್ದ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿನ ಅಂದಾಜು 5 ಲೀಟರ ಕಳ್ಳಭಟ್ಟಿ ಸಾರಾಯಿ ಅಂದಾಜು ಕಿಮ್ಮತ್ತು 500/- ರೂಪಾಯಿಗಳು  ಬೆಲೆ ಉಳ್ಳದು ಪಂಚರ ಸಮಕ್ಷಮ ಡಬ್ಬಿಯ ಸಮೇತ ಕಳ್ಳಭಟ್ಟಿ ಸಾರಾಯಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.