Police Bhavan Kalaburagi

Police Bhavan Kalaburagi

Tuesday, June 29, 2021

BIDAR DISTRICT DAILY CRIME UPDATE 29-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-06-2021

 

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 20/2021, ಕಲಂ. 279, 338, 304(ಎ) ಐಪಿಸಿ :-

ದಿನಾಂಕ 27-06-2021 ರಂದು ಫಿರ್ಯಾದಿ ಮಾರುತಿ ತಂದೆ ಶಿವರಾಯ ಎಸಕೆ ಯ: 60 ವರ್ಷ, ಜಾತಿ: ಎಸ.ಟಿ ಕೊಳಿ, ಸಾ: ವನಮಾರಪಳ್ಳಿ, ತಾ: ಔರಾದ(ಬಿ) ರವರ ಮಗನಾದ ಶ್ರಾವಣ ಇವನು ಮೋಟಾರ ಸೈಕಲ ನಂ. ಟಿ.ಎಸ್-16/ಇಎಲ್-5110 ನೇದರ ಮೇಲೆ ಯನಗುಂದಾದಿಂದ ಖಾಸೆಂಪೂರ ಕಡೆಗೆ ಹೋಗುವಾಗ ಯನಗುಂದಾ ಗ್ರಾಮದ ಶಂಕರ ಹಂಗರಗೆ ಇವರ ಹೋಲದ ಹತ್ತಿರ ರೋಡಿನ ಮೇಲೆ ಎದುರಿನಿಂದ ಖಾಸೆಂಪೂರ ಕಡೆಯಿಂದ ಯನಗುಂದಾ ಗ್ರಾಮದ ಭಾಸ್ಕರ ಹಾಗೂ ಉದಯ ಇವರು ಮೋಟಾರ ಸೈಕಲ ನಂ. ಕೆಎ-38/ಆರ್-7399 ನೇದರ ಮೇಲೆ ತಮ್ಮೂರಿಗೆ ಬರುವಾಗ ಭಾಸ್ಕರ ಇವನು ಮೊಟಾರ ಸೈಕಲನ್ನು ಅತೀವೆಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶ್ರಾವಣ ಇತನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಶ್ರಾವಣ ಇತನ ಬಲಗಣ್ಣಿನ ಕೆಳಗೆ, ಬಲಗಡೆ ಬಾಯಿಗೆ ಭಾರಿ ಪೆಟ್ಟಾಗಿ ಭಾರಿ ರಕ್ತಗಾಯ, ಎಡಗಡೆ ಎದೆಗೆ ಭಾರಿ ರಕ್ತಗಾಯ, ಬಲಗಡೆ ಭುಜಕ್ಕೆ ರಕ್ತಗಾಯವಾಗಿ ಘಟನಾದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಭಾಸ್ಕರ ಮತ್ತು ಉದಯ ಇವರಿಗೂ ಸಹ ಭಾರಿ ರಕ್ತಗಾಯಗಳು ಆಗಿದ್ದು ಅವರಿಬ್ಬರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಔರಾದ(ಬಿ) ಸರಕಾರಿ ಆಸ್ಪತ್ರಗೆ ತೆಗೆದಕೊಂಡು ಹೋಗಿ ನಂತರ ಇಬ್ಬರಿಗೂ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 49/2021, ಕಲಂ. 279, 304(ಎ) ಐಪಿಸಿ :-

ದಿನಾಂಕ 27-06-2021 ರಂದು ಫಿರ್ಯಾದಿ ಗುರುನಾಥ ತಂದೆ ಮಲಶೇಟ್ಟಿ ಖರಾಬೆ ಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಭಾತಾಂಬ್ರಾ ರವರ ವಸಾ: ಭಾತಾಂಬ್ರಾ, ತಾ: ಭಾಲ್ಕಿ ರವರ ಮಗನಾದ ಲೋಕೆಶ ತಂದೆ ಗುರುನಾಥ ಖರಾಬೆ ಸಾ: ಭಾತಾಂಬ್ರಾ ಇತನು ಖಟಕ ಚಿಂಚೋಳಿ ಗ್ರಾಮಕ್ಕೆ ತಮ್ಮ ಹಿರೋ ಸ್ಪ್ಲೆಂಡರ್ ಮೋಟಾರ ಸೈಕಲ ನಂ. ಎಪಿ-10/ಎಲ್-7034 ನೇದರ ಮೇಲೆ ತನ್ನ ಹೆಂಡತಿ ಶೋಭಾವತಿ ಇವಳಿಗೆ ಕರೆದುಕೊಂಡು ಹೋಗಿ ಮರಳಿ ಬರುವಾಗ ಏಣಕೂರ ಗ್ರಾಮದ ಒಂದು ರಸ್ತೆ ತಿರುವಿನಲ್ಲಿ ಆಕಸ್ಮಿಕವಾಗಿ ಮೋಟಾರ ಸೈಕಲ ಸ್ಕಿಡ್ ಆಗಿ ರೋಡಿನ ಮೇಲೆ ಬಿದ್ದು ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 28-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಸಿ..ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 04/2021, ಕಲಂ. 66(), 67, 67() .ಟಿ ಕಾಯ್ದೆ :-

ದಿನಾಂಕ 27-01-2021 ರಂದು ಅಮೃತಾ ವಾಲಿ ರವರು ಫಿರ್ಯಾದಿ ಪ್ರಶಾಂತ ಎಸ್‍.ಕೆ. ಸಾ: ನ್ಯೂ ರಾಘವೇಂದ್ರ ಕಾಲೋನಿ, ಕಲಬುರಗಿ ರವರಿಗೆ ಫೇಸಬುಕ್ ನಲ್ಲಿ ಫ್ರೇಂಡ್ ರಿಕ್ವೆಸ್ಟ್ ಕಳುಹಿಸಿರುತ್ತಾರೆ, ನಂತರ ಫಿರ್ಯಾದಿಯು ಅದನ್ನು ಅಕ್ಸೆಪ್ಟ್ ಮಾಡಿಕೊಂಡಿದ್ದು, ನಂತರ ಮೇಸೆಂಜರನಲ್ಲಿ ಅಮೃತಾ ವಾಲಿ ಇವರು ಫಿರ್ಯಾದಿಗೆ ವ್ಯಾಟ್ಸ್ ಅಪ್ ನಂಬರ ಕೇಳಿರುತ್ತಾರೆ, ಆಗ ಫಿರ್ಯಾದಿಯು ತನ್ನ ವ್ಯಾಟ್ಸ್ ಅಪ್ ನಂಬರ ಕೊಟ್ಟಿರುತ್ತಾರೆ, ಹೀಗೆ 2 ದಿನಗಳವರೆಗೆ ಚಾಟಿಂಗ್ ಪ್ರಾರಂಭವಾಗಿರುತ್ತದೆ, ನಂತರ ಅವರು ದಿನಾಂಕ 29-01-2021 ರಂದು ಅಮೃತಾ ವಾಲಿ ಇವಳ ಮೊಬೈಲ್ ನಂ. 9660871627 ನೇದರಿಂದ ವಿಡಿಯೋ ಕಾಲಿಂಗ ಮಾಡಿರುತ್ತಾಳೆ, ನಂತರ ಫಿರ್ಯಾದಿಯು ರಿಸಿವ್ ಮಾಡಿ ನೋಡಿದರೆ ಅವಳು ಫಿರ್ಯಾದಿಯ ಜೊತೆಯಲ್ಲಿ ಮಾತನಾಡುತ್ತಾ ಅವಳ ಮೈಮೇಲೆ ಬಟ್ಟೆ ಇಲ್ಲದ ಫೋಟೊಗಳನ್ನು ತೋರಿಸುತ್ತಿರುವುದರಿಂದ ಫಿರ್ಯಾದಿಯು ಕರೆ ಕಟ್ ಮಾಡಿದ್ದು ಇರುತ್ತದೆ, ನಂತರ ಪುನಃ ವಿಡಿಯೋ ಕಾಲಿಂಗ್ ಮಾಡಿರುತ್ತಾಳೆ, ಆದರೆ ಫಿರ್ಯಾದಿಯು ಕರೆಯನ್ನು ರಿಸಿವ್ ಮಾಡಿರುವುದಿಲ್ಲ, ನಂತರ ದಿನಾಂಕ 30-01-2021 ರಂದು ಅವಳು ಫಿರ್ಯಾದಿಗೆ ವ್ಯಾಟ್ಸ್ ಅಪ್ ಚಾಟಿಂಗನಲ್ಲಿ 20,000/- ರೂ. 6378175960 ನೇದಕ್ಕೆ ಫೋನ್ ಪೇ ಮಾಡಬೇಕೆಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ, ಒಂದು ವೇಳೆ ಹಣ ಕೊಡದೇ ಹೋದ ಪಕ್ಷದಲ್ಲಿ ನನ್ನ ಜೊತೆಯಲ್ಲಿ ಅಶ್ಲೀಲ ವಿಡಿಯೋ ಕಾಲಿಂಗ್ ಮಾಡಿರುವ ಬಗ್ಗೆ ಫಿರ್ಯಾದಿಯ ಗೆಳೆಯರಿಗೆ ಕಳಿಸುತ್ತೇನೆಂದು ಹೇಳಿ ಈಗಾಗಲೇ 90 ಜನರಿಗೆ ವಿಡಿಯೋ ಕಾಲಿಂಗ್ ಕಳುಹಿಸಿರುತ್ತಾಳೆ ಮತ್ತು ಇದರಿಂದ ಫಿರ್ಯಾದಿಯ ಗೆಳೆಯರು ಫಿರ್ಯಾದಿಗೆ ಕರೆ ಮಾಡಿ ಸದರಿ ವಿಷಯದ ಬಗ್ಗೆ ಕೇಳುತ್ತಿದ್ದಾರೆ, ಇದರಿಂದ ಫಿರ್ಯಾದಿಯು ಮಾನಸಿಕವಾಗಿ ತುಂಬಾ ನೊಂದುಕೊಂಡು ನೆಮ್ಮದಿ ಇಲ್ಲದಂತಾಗಿದೆ,          ಆದ ಕಾರಣ ಅಮೃತಾ ವಾಲಿ ಇವಳ  ವ್ಯಾಟ್ಸ್ ಅಪ್ ಮೊಬೈಲ್ ನಂ. 96608712 ಮತ್ತು ಫೋನ್ ಪೇ ನಂ. 6378175960 ಇವರು ಹಣ ಕೊಡಬೇಕೆಂದು ಬ್ಲ್ಯಾಕ್ ಮೇಲ್ ಮಾಡುತ್ತಿರುವ ಇವರ ಮೇಲೆ ಸೂಕ್ತವಾದ ಕಾನೂನು ಕ್ರಮಕೈಕೊಂಡು ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಹಾಗೂ ಫಿರ್ಯಾದಿಯ ಫೇಸಬುಕ್ .ಡಿ (prashant sk) prashant6750@gmail.com & ಅಮೃತಾ ವಾಲಿ ಇಕೆಯ ಫೇಸಬುಕ್ .ಡಿ amruthavalli ಅಮೃತಾ ವಾಲಿ ಇವಳ ಕೆಳಗೆ ನಮೂದಿಸಿದ ಫೇಸಬುಕ್ ಲಿಂಕ್ ಇರುತ್ತದೆ link www.facebook.com/vijay.maske.1654 ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 64/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 28-06-2021 ರಂದು ಉಜಳಂಬ ಗ್ರಾಮದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ, ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಉಜಳಂಬ ಗ್ರಾಮಕ್ಕೆ ಹೋಗಿ ಅಲ್ಲಿ ಉಜಳಂಬ ಗ್ರಾಮದ ವಾಲ್ಮಿಕ ಚೌಕ ಹತ್ತಿರ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಉಜಳಂಬ ಗ್ರಾಮದಲ್ಲಿರುವ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪ್ರಲ್ಹಾದ ತಂದೆ ಬಳಿರಾಮ ಜೋಗೆ ವಯ: 50 ವರ್ಷ, ಜಾತಿ: ಕೋಳಿ, ಸಾ: ಜೋಗೆವಾಡಿ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಪೊಲೀಸ್ ಸಿಬ್ಬಂದಿ ಜೊತೆಯಲ್ಲಿ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಂಡಾಗ ಹಣ ಕೊಟ್ಟು ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿಗೆ ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದÄಕೊಳ್ಳುತ್ತಿದ್ದೆನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಅಂಗ ಜಡ್ತಿ ಮಾಡಿಲು ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 1220/- ರೂಪಾಯಿ, 2) 2 ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ಸಿಕ್ಕಿದ್ದು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮ£Áಬಾದ ಪೊಲೀಸ್ ಠಾಣೆ ಅಪರಾಧ ಸಂ. 112/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 28-06-2021 ರಂದು ಹುಣಸನಾಳ ಗ್ರಾಮದ ಉರ್ದು ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದಾರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತ ರವಿಕುಮಾರ ಪಿಎಸ್ಐ (ಕಾಸು) ಹುಮನಾಬಾದ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತರಾದ 1) ಅನೀಲ ತಂದೆ ಹಂಸರಾಜ, 2) ಅರ್ಜುನ ತಂದೆ ಪಾಂಡುರಂಗ, 3) ನಹಿಬೂಬು, 4) ಭರತ ತಂದೆ ಸುಭಾಷರಾವ, 5) ಫೈಯಾಜ ತಂದೆ ಮೈನೋದ್ದಿನ, 6) ಈರಪ್ಪಾ @ ಪಪ್ಪು ತಂದೆ ಸಂಗಪ್ಪಾ ಗೋದೆ, 7) ಎಂ.ಡಿ ರಬ್ಬಾನಿ, 8) ಮಂಜಲೆಸಾಬ ತಂದೆ ಹಬೀಬಮಿಯ್ಯಾ, 9) ರಾಜುಕುಮಾರ ತಂದೆ ತುಕಾರಾಮ ಜಮದಾರ ಹಾಗೂ 10) ಹಾಜಿ ತಂದೆ ಮುನೀರಮಿಯ್ಯಾ ಎಲ್ಲರು ಸಾ. ಹುಣಸನಾಳ ಇವರೆಲ್ಲರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು ಅವರಿಂದ 1) 52 ಸ್ಪಿ ಎಲೆಗಳು ಹಾಗೂ 2) ನಗದು 3580/- ರೂ. ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮ£Áಬಾದ ಪೊಲೀಸ್ ಠಾಣೆ ಅಪರಾಧ ಸಂ. 113/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 28-06-2021 ರಂದು ಹುಡಗಿ ಗ್ರಾಮದ ಚಂದ್ರಕಾಂತ ಸಿಂಧನಕೇರಿ ಹೋಟೆಲ ಹತ್ತಿರ ಇಬ್ಬರು ವ್ಯಕ್ತಿಗಳು ಚೀಲದಲ್ಲಿ ಸರಾಯಿ ಇಟ್ಟುಕೊಂಡು ನಿಂತಿರುತ್ತಾರೆ ಅಂತಾ ರವಿಕುಮಾರ ಪಿಎಸ್ಐ (ಕಾಸು) ಹುಮನಾಬಾದ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿವಯರೊಡನೆ ಹುಡುಗಿ ಗ್ರಾಮದ ನಿಸರ್ಗ ಫಂಕ್ಷನ ಹಾಲ ಹತ್ತಿರ ಹೋಗಿ ನೋಡಲು ಹುಡುಗಿ ಗ್ರಾಮದ ಸಿಂಧನಕೇರಿ ಹೋಟಲ್ ಹತ್ತಿರ ಆರೋಪಿತರಾದ 1) ಶಂಕರ ತಂದೆ ಶಿವಪ್ಪಾ ಕನ್ನಾ, ವಯ: 56 ವರ್ಷ, ಜಾತಿ: ಕ್ರೀಶ್ಚನ ಹಾಗೂ 2) ಸ್ವಾಮಿದಾಸ ತಂದೆ ಮಾರುತಿ ಬೈರನಳ್ಳಿ, ವಯ: 35 ವರ್ಷ, ಜಾತಿ: ಎಸ.ಸಿ ಮಾದಿಗ, ಇಬ್ಬರು ಸಾ: ಇಂದಿರಾನಗರ ಹುಡುಗಿ ಇವರಿಬ್ಬರು ಪ್ರತ್ಯೇಕವಾಗಿ ಒಂದೊಂದು ಚೀಲ ಹಿಡಿದುಕೊಂಡು ನಿಂತಿದ್ದು ಅವರ ಚೀಲದಲ್ಲಿ ಸರಾಯಿ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಅವರ ಮೇಲೆ ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವರ ಹತ್ತಿರ ಇದ್ದ ಬಿಳಿ ಚೀಲ ತೆಗೆದು ಚೇಕ ಮಾಡಿ ನೋಡಲು ಅದರಲ್ಲಿ 90 ಎಂ.ಎಲ್ ವುಳ್ಳ 96 ಯು.ಎಸ ವಿಸ್ಕಿ ಬಾಟಲಗಳು ಅ.ಕಿ 3372.48 ರೂ. ಇದ್ದು, ಇವು ಎಲ್ಲಿಂದ ತಂದಿರಿ ಅಂತಾ ವಿಚಾರಿಸಲು ಇಲ್ಲೇ ಒಬ್ಬ ವ್ಯಕ್ತಿ ತಂದು ಕೊಟ್ಟಿರುತ್ತಾನೆ ಅ ವ್ಯಕ್ತಿಯ ಹೆಸರು ವಿಳಾಸ ನಮಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿದರು, ನಂತರ ಪಿಎಸಐ ರವರು ದರಿ ಸರಾಯಿ ಬಾಟಲಗಳು ತೆಗೆದುಕೊಂಡು ಹೊಗಲು ಲೈಸನ್ಸ ಪರವಾನಿಗೆ ವಿಚಾರಣೆ ಮಾಡಲು ಅವರು ತಿಳಿಸಿದೆನೆಂದರೆ ತಮ್ಮ ಹತ್ತಿರ ಯಾವುದೇ ರಿತೀಯ ಲೈಸನ್ಸ ಪರವಾನಿಗೆ ಇರುವುದಿಲ್ಲಾ ತಾವು ಆಕ್ರಮವಾಗಿ ಸರಾಯಿ ತೆಗೆದುಕೊಂಡು ಹೋಗಿ ನಮ್ಮ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದರು, ನಂತರ ಪಿಎಸಐ ಸದರಿ ಸರಾಯಿ ಬಾಟಲಗಳಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 111/2021, ಕಲಂ. 379 ಐಪಿಸಿ :-

ಫಿರ್ಯಾದಿ ಯೋಗೇಶ ತಂದೆ ನಾಗಶೆಟ್ಟಿ ಚಿಮಕೊಡೆ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಮರೂರ ರವರ ಕಾಮಗಾರಿಯಲ್ಲಿ ಕೆಲಸ ಮಾಡುವ 1) ವೊಲ್ವೊ ಕಂಪನಿಯ ರೋಲರ ಕೆಎ-39/0275 ನೇದರ ಚಾಲಕನಾದ ಸಂತೋಷ ತಂದೆ ಕಾಶೀನಾಥ ಸಾ: ಧನ್ನೂರಾ(ಆರ್), ತಾ: ಬಸವಕಲ್ಯಾಣ, 2) ವೊಲ್ವೋ ಕಂಪನಿಯ ರೂಲರ್ ನಂ. ಕೆಎ-39/9674 ನೇದರ ಚಾಲಕನಾದ ಚಾಂದಪಾಶ್ಯಾ ತಂದೆ ಮಕಬೂಲಶಾ ಸಾ: ಜೋಳದಾಬಕಾ, ತಾ: ಭಾಲ್ಕಿ ಇವರಿಬ್ಬರು ದಿನಾಂಕ 26-06-2021 ರಂದು 1800 ಗಂಟೆಯವರೆಗೆ ಕೆಲಸ ಮಾಡಿ 2 ರೂಲರಗಳನ್ನು ಕಾಶೆಪ್ಪಾ ಖಂಡ್ರೆರವರ ಪೆಟ್ರೋಲ ಬಂಕ ಎದುರುಗಡೆ ನಿಲ್ಲಿಸಿ ಮನೆಗೆ ಹೋಗಿರುತ್ತಾರೆ, ನಂತರ ದಿನಾಂಕ 27-06-2021 ರಂದು ಫಿರ್ಯಾದಿ ಹಾಗೂ ಸದರಿ ರೂಲರಗಳ ಇಬ್ಬರು ಚಾಲಕರು ಬಂದು ನೋಡಲು ಎರಡು ರೂಲರಗಳ ಡಿಸಿಲ ಟ್ಯಾಂಕನ ಮುಚ್ಚಳಿಕೆ ತೆಗೆದಿದ್ದು ಟ್ಯಾಂಕ ಪೂರ್ಣ ಖಾಲಿಯಾಗಿದ್ದು ಇರುತ್ತದೆ, ದಿನಾಂಕ 26-06-2021 ರಂದು 2300 ಗಂಟೆಯಂದ ದಿನಾಂಕ 27-6-2021 0500 ಗಂಟೆಯ ಅವಧಿಯಲ್ಲಿ ಭಾಲ್ಕಿ ಪಟ್ಟಣದ ಖಾಶೆಪ್ಪಾ ಖಂಡ್ರಯವರ ಪೆಟ್ರೋಲ ಪಂಪ ಎದುರುಗಡೆ ನಿಲ್ಲಿಸಿದ ಸದರಿ ರೂಲರಗಳ ಟ್ಯಾಂಕಿನಲ್ಲಿರುವ ಒಟ್ಟು 475 ಲೀಟರ ಡಿಸಿಲ್ ಅ.ಕಿ 45,125/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.