Police Bhavan Kalaburagi

Police Bhavan Kalaburagi

Sunday, November 11, 2018

BIDAR DISTRICT DAILY CRIME UPDATE 11-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-11-2018

¨sÁ°Ì UÁæ«ÄÃt ¥Éưøï oÁuÉ AiÀÄÄ.r.Dgï £ÀA. 15/2018, PÀ®A. 174 ¹.Dgï.¦.¹ :-
ಫಿರ್ಯಾದಿ ಮಹಾನಂದಾ ಗಂಡ ದಯಾನಂದ ಮೇತ್ರೆ, ಸಾ: ತೆಲಗಾಂವ, ತಾ: ಭಾಲ್ಕಿ ರವರ ಗಂಡ ದಯಾನಂದ ಇವರು ಬೆಳೆ ಸಾಲ 10,000/- ಹಾಗೂ ಸಂಬಂಧಿಕರಲ್ಲಿ 10 ಲಕ್ಷ ರೂ. ಸಾಲ ಮಾಡಿದ್ದು, ಹೊಲದಲ್ಲಿ ಬೆಳೆ ಸರಿಯಾಗಿ ಬೆಳಯುತ್ತಿಲ್ಲ, ಸಾಲ ಹೇಗೆ ತೀರಸಬೇಬೆಂದು ಸಾಲದ ಬಾದೆ ತಾಳಲಾರದೇ, ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ಜಿವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09-11-2018 ರಂದು ಹೊಲದಲ್ಲಿ ಬೇವಿನ ಗೀಡಕ್ಕೆ ಹಗ್ಗದಿಂದ ನೇಣುಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೆ ತರಹದ ಸಂಶಯ, ವಗೈರೆ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 10-10-2018 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥Éưøï oÁuÉ C¥ÀgÁzsÀ ¸ÀA. 190/2018, PÀ®A. 354(©), 376(3), 511, 448, L¦¹ 3(1) (qÀ§Äè), 3, (2) (5) J¸ï.¹/J¸ï.n PÁAiÉÄÝ 1989 ªÀÄvÀÄÛ 8, 4, 18 ¥ÉÆPÉÆìà PÁAiÉÄÝ 2012 :-
ದಿನಾಂಕ 09-11-2018 ರಂದು ಫಿರ್ಯಾದಿ ರವರು ತಮ್ಮ ಮನೆಯಲ್ಲಿ ಒಬ್ಬಳೆ ಹೊಮ ವರ್ಕ ಮಾಡುತ್ತಾ ಕುಳಿತಾಗ ಪ್ರದೀಪ ತಂದೆ ವೆಂಕಟಗೀರಿ ಜಾತಿ: ಗೋಸಾಯಿ, ಸಾ: ಕೊಟಗ್ಯಾಳ ವಾಡಿ ಈತನು ಮನೆಯಲ್ಲಿ ಬಂದು ಮನೆಯ ಒಳಗಿನಿಂದ ಕೊಂಡಿ ಹಾಕಿ ಕಿಡಕಿ ಬಾಗಿಲು ಮುಚ್ಚಿರುತ್ತಾನೆ, ಆಗ ಫಿರ್ಯಾದಿಯು ಆತನಿಗೆ ಯಾಕೆ ಬಾಗಿಲು ಮುಚ್ಚಿ ಕೊಂಡಿ ಹಾಕಿರುತ್ತಿ ಎಂದಾಗ ಪ್ರದೀಪ ಈತನು ಸುಮ್ಮನೆ ಕೂಡು ಚಿರಬೇಡಾ ಅಂತ ಅಂದು ಕೈಹಿಡಿದು ಎಳೆದಾಡಿ ಕೈಯಿಂದ ಬಾಯಿ ಮುಚ್ಚಿ ಫಿರ್ಯಾದಿಯ ಮೈ, ಕೆನ್ನೆ ಸವರಿಸುತ್ತಾ ಜಬರದಸ್ತಿ ಮಾಡುತ್ತಿರುವಾಗ ಆತನ ಕೈಯಿಂದ ತಪ್ಪಿಸಿಕೊಂಡು ಒಮ್ಮೆಲೆ ಬಚಾಯಿಸಿ, ಮಲಾ ಸೊಡ್ ಎಂದು ಮರಾಠಿಯಲ್ಲಿ ಚೀರಿದಾಗ ಬಾಜು ಮನೆಯ ಹೊರಗೆ ಇದ್ದ ಫಿರ್ಯಾದಿಯ ತಮ್ಮ ದತ್ತಾ ಮತ್ತು ಮನೆಯ ಪಕ್ಕದವರು ಬಂದು ಫಿರ್ಯಾದಿಯ ಮನೆಯ ಬಾಗಿಲು ತೆರೆದಾಗ ಪ್ರದೀಪ ಈತನು ಫಿರ್ಯಾದಿಯ ತಮ್ಮನಿಗೆ ನೂಕಿಕೊಟ್ಟು ಮನೆಯಿಂದ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 95/2018, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಬಳಿರಾಮ ತಂದೆ ಮಾಣಿಕರಾವ ಭೈರಾಳೆ ವಯ: 55 ವರ್ಷ, ಜಾತಿ: ಮರಾಠಾ, ಸಾ: ಭಂಡಾರ ಕುಮಟಾ ರವರ ಮಗಳಾದ ಲಕ್ಷ್ಮೀಬಾಯಿ ಇವಳು ಸ್ವಲ್ಪ ಮಂದ ಬುದ್ಧಿಯವಳು ಹಾಗು ಕರಣಕುಮಾರಿಯಾಗಿದ್ದು, ಹೀಗಿರುವಾಗ ದಿನಾಂಕ 25-10-2018 ರಂದು ಫಿರ್ಯಾದಿಯು ತನ್ನ ಹೆಂಡತಿಗೆ ಆರಾಮ ಇಲ್ಲದ ಕಾರಣ ಅವಳನ್ನು ಕರೆದುಕೊಂಡು ಉದಗೀರ ಆಸ್ಪತ್ರೆಗೆ ಹೋಗಿದ್ದು, ಮನೆಯಲ್ಲಿ ಮಗಳು ಮತ್ತು ಅಕ್ಕ ಇಬ್ಬರು ಇದ್ದರು, ಫಿರ್ಯಾದಿಯು ಆಸ್ಪತ್ರೆಗೆ ತೋರಿಸಿಕೊಂಡು ರಾತ್ರಿ ಮನೆಗೆ ಬಂದಾಗ ಅಕ್ಕ ಪದಮ್ಮಿಣಿಬಾಯಿ ಇವಳು ತಿಳಿಸಿದೆನೆಂದರೆ ಸಾಯಂಕಾಲ ಲಕ್ಷ್ಮೀಬಾಯಿ ಇವಳು ಹೋಲದಿಂದ ಮನೆಗೆ ಬಂದು ಮನೆಯೆ ಕೋಣೆಗಳಿಗೆ ಬೀಗ ಹಾಕಿ ಬೀಗದ ಕೈ ಹೋರಗೆ ಕುಳಿತ ನನಗೆ ಕೊಟ್ಟು ನಾನು ಸಂಡಾಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಇದುವರೆಗೆ ಮನೆಗೆ ಬಂದಿರುವುದಿಲ್ಲಾ ಅಂತ ತಿಳಿಸಿದಳು, ನಂತರ ಫಿರ್ಯಾದಿಯು ತಮ್ಮೂರ ಶಿವಾರದಲ್ಲಿ ಹುಡುಕಾಡಿ, ನಂತರ ಔರಾದ(ಬಿ), ತೋರಣಾ, ಕಮಲನಗರ, ಡೊಣಗಾಂವ, ಮಾಳೆಗಾಂವ ಹಾಗು ತಮ್ಮ ಸಂಬಂಧಿಕರ ಮನೆಗಳಿಗ ಹೋಗಿ ವಿಚಾರಿಸಿದ್ದ್ಉ ಮತ್ತು ಉದಗೀರ ಲಾತೂರ, ಜಹೀರಾಬಾದವರೆಗೆ ಹೋಗಿ ಹುಡುಕಾಡಿದ್ದು ಮಗಳ ಪತ್ತೆ ಆಗಿರುವುದಿಲ್ಲಾ, ಈ ಮುಂಚೆ ಸುಮಾರು 10 ವರ್ಷಗಳ ಹಿಂದೆ ಇದೇ ರೀತಿ ಮನೆ ಬಿಟ್ಟು ಹೊಗಿದ್ದು ಮತ್ತೆ 2 ದಿವಸಗಳ ನಂತರ ಮನೆಗೆ ಬಂದಿರುತ್ತಾಳೆ, ಕಾಣೆಯಾದ ಮಗಳ ಚೆಹರೆ ಗುರುತು ಉದ್ದನೆ ಮುಖ, ನೇರ ಮುಗು, ತೇಳ್ಳನೆಯ ಮೈಕಟ್ಟು, ಬಿಳಿ ಬಣ್ಣ, ಕಪ್ಪು ಕೂದಲು, ವಯ: 20 ವರ್ಷ, ಎತ್ತರ 5.9 ಅಡಿ ಮತ್ತು 5 ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು ಮಾರಾಠಿ ಭಾಷೆಯಲ್ಲಿ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 134/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 10-11-2018 ರಂದು ಫಿರ್ಯಾದಿ ಕು. ಶೀಫಾ ರೋಹಿ ತಂದೆ ನೂರ ಮಹಮದ ವಯ: 22 ವರ್ಷ, ಜಾತಿ: ಮುಸ್ಲಿಂ, ಸಾ: ಬೀಲಾಲ ಕಾಲೋನಿ ಚಿದ್ರಿ ರೋಡ ಬೀದರ ರವರ ತಮ್ಮ ಮಹಮದ ಮುಸಾ ತಂದೆ ನೂರ ಮಹಮದ ಇತನು ಫಿರ್ಯಾದಿಗೆ ಬ್ರೀಮ್ಸ ಕಾಲೇಜ ಬೀದರಗೆ ಬಿಡಲು ಮ್ಮ ಟಿ.ವಿಎಸ್ ಸೂಪರ ಎಕ್ಸ.ಎಲ್ ಮೋಟಾರ ಸೈಕಲ ನಂ. ಕೆಎ-38/ಜೆ-6372 ನೇದರ ಮೇಲೆ ಕರೆದುಕೊಂಡು ಬೀದರ ಬೀಲಾಲ ಕಾಲೋನಿ ಚಿದ್ರಿ ರೋಡದಿಂದ ಮಹಾವೀರ ವೃತ್ತದ ಮುಖಾಂತರ ಬ್ರೀಮ್ಸ್ ಕಾಲೇಜಗೆ ಹೋಗುತ್ತಿರುವಾಗ ಮಹಾವೀರ ವೃತ್ತದ ಹತ್ತಿರ ಬಂದಾಗ ಕಾರ ನಂ. ಎಮ್.ಹೆಚ್-05/ಎ.ಜೆ-6372 ನೇದರ ಚಾಲಕನು ಹರಳಯ್ಯಾ ವೃತ್ತದ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ತನ್ನ ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತು ಹೋಗುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ಕಾರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಪಿರ್ಯಾದಿಗೆ ಬಲಗಾಲು ಮೊಳಕಾಲ ಕೆಳಗೆ ಭಾರಿ ಗುಪ್ತಗಾಯ ಮತ್ತು ಬಲಗಣ್ಣಿನ ಮೇಲೆ ತರಚಿದ ಗಾಯವಾಗಿರುತ್ತದೆ, ನಂತರ ಮಹಮದ ಮುಸಾ ಇತನು ಒಂದು ಖಾಸಗಿ ವಾಹನದಲ್ಲಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಗುರುನಾನಕ ಖಾಸಗಿ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 138/2018, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 10-11-2018 ರಂದು ನಿರ್ಣಾ ಗ್ರಾಮದ ಭವಾನಿ ಮಂದಿರದ ಎದುರಿಗೆ ಸಾರ್ವಜನಿಕ ರೋಡಿನ ಮೇಲೆ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ್ ಬಾಹರ್ ಎಂಬ ನಸುಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ರವಿಕುಮಾರ ಎಸ್.ಎನ್ ಪಿಎಸ್ಐ ಮನ್ನಾಎಖೇಳ್ಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ನಿರ್ಣಾ ಗ್ರಾಮದ ಗುರು ಭವನದ ಹತ್ತಿರ ಭವಾನಿ ಮಂದಿರದ ಹಿಂದುಗಡೆ ಮರೆಯಾಗಿ ನಿಂತು ನೋಡಲು ಭಾವನಿ ಗುಡಿಯ ಎದುರಗಡೆ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರಾದ 1) ಜೈಪಾಲರೆಡ್ಡಿ ತಂದೆ ರಾಮರಡ್ಡಿ ಚಟ್ಟನಳ್ಳಿ ವಯ: 38 ವರ್ಷ, ಜಾತಿ: ರೆಡ್ಡಿ, 2) ಮಂಜುನಾಥ ತಂದೆ ಘಾಳೆಪ್ಪಾ ಮುತ್ತಂಗಿ ವಯ: 30 ವರ್ಷ, ಜಾತಿ: ಕಬ್ಬಲಿಗ, 3) ರವಿಂದ್ರರಡ್ಡಿ ತಂದೆ ಶಿವಾರೆಡ್ಡಿ ಚಟ್ಟನಳ್ಳಿ ವಯ: 41 ವರ್ಷ, ಜಾತಿ: ರಡ್ಡಿ, 4) ಚಂದ್ರಶೇಖರ ತಂದೆ ಲಕ್ಷ್ಮಣ ಕೇಳಕೆರಿ ವಯ: 30 ವರ್ಷ, ಜಾತಿ: ಎಸ್.ಸಿ, 5) ಸಂಜೀವರೆಡ್ಡಿ ತಂದೆ ಜ್ಞಾನರೆಡ್ಡಿ ಚಟ್ಟನಳ್ಳಿ ವಯ: 32 ವರ್ಷ, 6) ಅನೀಲಕುಮಾರ ತಂದೆ ವೆಂಕಟೆಶ್ವರ ದಾಸೂರ ವಯ: 25 ವರ್ಷ, ಜಾತಿ: ಕಬ್ಬಲಿಗ ಹಾಗೂ 7) ವಿಠ್ಠಲ ತಂದೆ ಬಕ್ಕಪ್ಪಾ ಯಂಕಡಿನೊರ ವಯ: 48 ವರ್ಷ, ಜಾತಿ: ಕಬ್ಬಲಿಗ, ಎಲ್ಲರೂ ಸಾ: ನಿರ್ಣಾ ಇವರೆಲ್ಲರೂ ಗೋಲಾಕಾರವಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸಿಬಿನ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿ ಅವರನ್ನು ಹಿಡಿದು ಅವರಿಂದ ಒಟ್ಟು ನಗದು ಹಣ 19,010/- ಮತ್ತು 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.