Police Bhavan Kalaburagi

Police Bhavan Kalaburagi

Monday, April 29, 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 28-04-2019 ರಂದು ಕೂಡಿಗನೂರ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಮಾಹಿತಿ  ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೂಡಿಗನೂರ ಗ್ರಾಮದ ನದಿಯಲ್ಲಿ ಹೋಗಿ ನೋಡಲಾಗಿ ಭೀಮಾ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಸದರಿ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ತನ್ನ ಟ್ರಾಕ್ಟರನಲ್ಲಿದ್ದ ಮರಳನ್ನು ನದಿಯಲ್ಲೆ ಡಂಪ ಎತ್ತಿ ಓಡಿ ಹೋದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ಬಿದ್ದತ್ತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಕೆಎ-28 ಟಿಡಿ-0371 ಅದರ ಚೆಸ್ಸಿ ನಂ WSCM-40906082943 ಅಂತ ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು  ಜಪ್ತಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 28-04-2019 ರಂದು ಶಿವೂರ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಮಾಹಿತಿ  ಬಾತ್ಮಿ ಬಂದ ಮೇರೆಗೆ ಸಿಪಿಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶೀವೂರ ಗ್ರಾಮದ ನದಿಯಲ್ಲಿ ಹೋಗಿ ನೋಡಲಾಗಿ ಭೀಮಾ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಸದರಿ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ತನ್ನ ಟ್ರಾಕ್ಟರನಲ್ಲಿದ್ದ ಮರಳನ್ನು ನದಿಯಲ್ಲೆ ಡಂಪ ಎತ್ತಿ ಓಡಿ ಹೋದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ಬಿದ್ದತ್ತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಜಾನಡೀಯರ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಕೆಎ-32 ಟಿಬಿ-2896 ಅದರ ಚೆಸ್ಸಿ ನಂ IPY5050EAHA017642 ಅಂತ ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು  ಜಪ್ತಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸುಲಿಗೆ ಪ್ರಕರಣ :
ಆಳಂದ ಠಾಣೆ : ಶ್ರೀ  ಫಯಾಜ್ ತಂದೆ ಮಶಾಕ ಪಟೇಲ್ ಸಾ|| ಹಸನಾಪೂರ ತಾ|| ಜಿ|| ಕಲಬುರಗಿ ರವರು  ಕಲಬುರಗಿ ನಗರದ ಶ್ರೀ ಗಣೇಶ ಸೇಠ ರವರ ಲಾರಿ ನಂ ಕೆಎ 32 ಡಿ 1093 ನೇದ್ದರ ಮೇಲೆ ಲಾರಿ ಚಾಲಕ ಅಂತಾ ಸುಮಾರು ಒಂದು ವರ್ಷದಿಂದ ಕೆಲಸ ಮಾಡುತ್ತಾ ಬಂದಿದ್ದು ನಿನ್ನೆ ದಿನಾಂಕ 27/04/2019 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನಾನು ಚಲಾಯಿಸುವ ಲಾರಿ ನಂ ಕೆಎ 32 ಡಿ 1093  ನೇದ್ದರಲ್ಲಿ ವಾಡಿ ಸಿಮೆಂಟ್ ಕಾರ್ಖಾನೆಯಿಂದ ನನ್ನ ಲಾರಿಯಲ್ಲಿ ಸಿಮೆಂಟ್ ತುಂಬಿಕೊಂಡು ವಾಡಿಯಿಂದ ಉಸ್ಮಾನಾಬಾದ ಕಡೆಗೆ ಆಳಂದ ಮಾರ್ಗವಾಗ ಹೋಗುತ್ತಿದ್ದಾಗ ತೆಲುಕುಣಿ ಚಡೌಣ ಹತ್ತಿರ ದಿನಾಂಕ 28/04/2019 ರಂದು ಅಂದಾಜು 02-00 ಎಎಮ್ ಸುಮಾರಿಗೆ ರೋಡಿನ ಮೇಲೆ ಎರಡು ಜನ ಅಪರಿಚಿತರು ಅವರ ಒಂದು ಕಪ್ಪು ಬಣ್ಣದ ನಂಬರ ಇಲ್ಲದ ಪಲ್ಸರ್ ಮೋಟಾರ ಸೈಕಲನ್ನು ನನ್ನ ಲಾರಿಗೆ ಅಡ್ಡಗಟ್ಟಿ ನಿಲ್ಲಿಸಿದರಿಂದ ನಾನು ನನ್ನ ಲಾರಿಯನ್ನು ರೋಡಿನ ಪಕ್ಕಕ್ಕೆ ನಿಲ್ಲಿಸಿದಾಗ ಸದರಿ ಎರಡು ಅಪರಿಚಿತ ಜನರು ಓಡಿ ನನ್ನ ಹತ್ತಿರ ಬಂದು ಕ್ಯಾಬಿನ್ ಪಕ್ಕದಲ್ಲಿ ನಿಂತು ಕಪ್ಪು ಬಿಳಿ ಮಿಶ್ರಿತ್ ಟಿ ಶರ್ಟ ಧರಿಸಿದ ವ್ಯಕ್ತಿ ನನಗೆ '' ಏ ರಾಂಡಕೇ ಕಿದರ ಜಾರೆ ನಿಚೇ ಉತರೋ ಪೈಸೇ ದೋ ಅಂದು ಬೈದು ಟೊಂಕದಲ್ಲಿದ್ದ ಬೆಲ್ಟ ತೆಗೆದು ಹೊಡೆದಿದ್ದು ಆಗ ನೀಲಿ ಗೆರೆಗಳುಳ್ಳ ಫುಲ್ ಶರ್ಟ ಧರಿಸಿದ ಇನ್ನೊಬ್ಬನು ''ತುಮಾರೆ ಪಾಸ ಜಿತನಾ ಭಿ ಹೈ ಉತನಾ ಪೈಸಾ ದೋ'' ಅಂತಾ ಒಂದು ಹರಿತವಾದ ಚಾಕುವನ್ನು ತೋರಿಸಿ ನನ್ನ ಜೇಬಿನಲ್ಲಿಟ್ಟಿದ್ದ 2800/- ರೂಪಾಯಿಗಳನ್ನು ಮತ್ತು ನನ್ನ ಕಲರ್ ಜಿರಾಕ್ಸವುಳ್ಳ ಡಿಎಲ್ ಪ್ರತಿಯನ್ನು ಜಬರದಸ್ತಿಯಿಂದ ಕಸಿದುಕೊಂಡಿರುತ್ತಾರೆ, ನಂತರ ಸದರಿ ಅಪರಿಚಿತ ವ್ಯಕ್ತಿಗಳು ಹಣ ತೆಗೆದುಕೊಂಡು ಸದರಿ ಮೋಟಾರ್ ಸೈಕಲ ಮೇಲೆ ಕುಳಿತುಕೊಂಡು ಓಡಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 02 : ದಿನಾಂಕ-27/04/2019 ರಂದು ರಾತ್ರಿ 10-45 ಗಂಟೆಯಿಂದ 11-15 ಗಂಟೆಯ ಸುಮಾರಿಗೆ  ಹಣಮಂತ ತಂದೆ ಸಿದ್ದಪ್ಪ ಇತನು ಹುಮುನಾಬಾದ ರಿಂಗ ರೋಡದಿಂದ ಆಳಂದ ಚೆಕ್ ಪೋಸ್ಟ ರೋಡಿನಲ್ಲಿ ಬರುವ ಕಸ್ತೂರಿ ದರ್ಶನಿ ಹೋಟೆಲ್ ಏದುರಿನ ರೋಡಿನಲ್ಲಿ ನಡೆದುಕೊಂಡು ರೋಡ್ ದಾಟುತ್ತಿದ್ದಾಗ ಯಾವುದೋ ಒಂದು ವಾಹನದ ಚಾಲಕ ಹುಮನಾಬಾದ ರಿಂಗರೋಡ ಕಡೆಯಿಂದ ತನ್ನ ವಾಹನವನ್ನು ಅತೀವೇಗವಾಗಿ & ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹಣಮಂತ ಈತನಿಗೆ ಡಿಕ್ಕಿಪಡಿಸಿ ಆತನ ತಲೆಯ ಮೇಲಿಂದ ಟೈರ್ ಹಾಯಿಸಿ ವಾಹನ ಸಮೇತ ಚಾಲಕ ಓಡಿ ಹೋಗಿದ್ದು ಹಣಮಂತ ಈತನ ತಲೆಗೆ ಭಾರಿ ರಕ್ತಗಾಯವಾಗಿ ತಲೆ ಒಡೆದು ಮೆದಳು ಹೊರಗೆ ಬಂದು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಅಂತಾ ಶ್ರೀಮತಿ ಮಾಲಾಶ್ರೀ ಗಂಡ ಹಣಮಂತ ಜಟ್ಟೂರ ಸಾ : ಕೂಪನೂರ ತಾ : ಚಿಂಚೋಳಿ ಹಾ:ವ: ರಾಮನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ 02 : ದಿನಾಂಕ 28.04.2019 ರಂದು ಮಧ್ಯಾಹ್ನ 4.30 ಗಂಟೆ ಸುಮಾರಿಗೆ ರಾಮ ಮಂದಿರ ದಿಂದ ಸೇಡಂ ರಿಂಗ ರೋಡನಲ್ಲಿ ಬರುವ ರೇಲ್ವೆ ಓವರ್ ಬ್ರೀಜ್ ಹತ್ತಿರದ ಕಾರ್ನರ ಹತ್ತಿರ ರೋಡ ಮೇಲೆ ವಜೀರ ಮಿಯಾ ಈತನು ತನ್ನ ಮೋಟಾರ ಸೈಕಲ ನಂ ಕೆಎ32 ಇಪಿ 0799 ನೇದ್ದರ ಮೇಲೆ ಹಿಂದುಗಡೆ ಶ್ರೀ ಮಹ್ಮದ ಜಬಿರೊದ್ದಿನ ತಂದೆ ಖಾಜಾಮಿಯಾ ಸಾಃ ದಾರಾಗಿರ ಏರಿಯಾ ತಾಃ ಬಸವಕಲ್ಯಾಣ ಜಿಃ ಬೀದರ ರವರನ್ನು ಕೂಡಿಸಿಕೊಂಡು ನಿಧಾನವಾಗಿ ಮೋಟಾರ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಜೀಪ ನಂಬರ ಕೆಎ 32 ಎಂ 8420 ನೇದ್ದರ ಚಾಲಕನು ಅತಿವೇಗದಿಂದ & ಅಲಕ್ಷತನದಿಂದ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದು ವಜೀರಮಿಯಾ ಈತನ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾಧಿಗೆ ಗಾಯಗೊಳಿಸಿ ವಜೀರಮಿಯಾ ಈತನ ತಲೆಗೆ ಭಾರಿಗಾಯಗೊಳಿಸಿ ಚಾಲಕ ವಾಹನ ಸಮೇತ ಓಡಿ ಹೋಗಿದ್ದು ವಜೀರ ಮಿಯಾ & ಫಿರ್ಯಾಧಿ ಇಬ್ಬರು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ  ಆಗಿದ್ದು ವಜೀರ ಮಿಯಾ ಈತನು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿ ಆಗದೆ ದಿನಾಂಕಃ 29.04.2019 ರಂದು ಬೆಳಿಗ್ಗೆ 4.00 ಗಂಟೆಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಸವಿತಾ ಗಂಡ ಸುರೇಶ ಕಲಶೇಟ್ಟಿ ಸಾ: ರಟಕಲ್ ಹಾವ: ಲಕ್ಷ್ಮಿ ಗುಡಿ ಹತ್ತಿರ ರಾಮ ನಗರ ಕಲಬುರಗಿ ರವರು ದಿನಾಂಕ: 28/04/19 ರಂದು ಕಸಗಿಯಲ್ಲಿ ನಮ್ಮ ಸಂಬಂದಿಕರ ಮಧುವೆ ಇದ್ದ ಕಾರಣ ನಾನು ಮತ್ತು ನಮ್ಮ ತಾಯಿ ಮದುವೆಗೆ ಹೋಗುವ ಕುರಿತು ತಯರಾಗಿ ಆಳಂದ ಚೆಕ್ ಪೋಸ್ಟ್ ಹತ್ತಿರ ಹೋಗಿ ಬೆಳಿಗ್ಗೆ 09-00 ಗಂಟೆಯಿಂದ ಬೆಳಿಗ್ಗೆ 09-30 ಗಂಟೆಯವರಿಗೆ ಬಸ್ ಬರುವಿಕೆಗಾಗಿ ಕಾಯಿದು ನಂತರ 09-30 ಕ್ಕೆ ಆ ಮಾರ್ಗದ ಒಂದು ಬಸ್ ಬಂದಿದ್ದು ಅದರಲ್ಲಿ ನಾನು ಮತ್ತು ನನ್ನ ತಾಯಿ ಏರಿ ಸೀಟಿನಲ್ಲಿ ಕೂಡುವಾಗ ನನ್ನ ತಾಯಿ ಬಂಗಾರದ ಆಭರಣಗಳು ಇರುತ್ತವೆ ಇಲ್ಲಾ ಎಂದು ಚೆಕ್ಕ ಮಾಡು ಅಂತಾ ಹೇಳಿದಾಗ ನಾನು ನನ್ನ ವ್ಯಾನಿಟಿ ಬ್ಯಾಗ್ ಚೈನ್ ತೆರೆದು ನೋಡಲು ಅದರಲ್ಲಿಟ್ಟಿದ್ದ ಬಂಗಾರದ ಡಬ್ಬಿ ಮತ್ತು ಬಂಗಾರದ ಸಾಮಾನುಗಳು ಕಾಣಿಸಲಿಲ್ಲ. ದಿನಾಂಕ: 28/04/19 ರಂದು ಬೆಳಿಗ್ಗೆ 09-00 ಗಂಟೆಯಿಂದ ಬೆಳಿಗ್ಗೆ 09-30 ಗಂಟೆಯವರಿಗೆ  ಆಳಂದ ಚೆಕ್ ಪೋಸ್ಟ ಹತ್ತಿರ ಬಸ್ಸಿಗೆ ಕಾಯುತ್ತ ನಿತಿಂರುವಾಗ ಯಾರೋ ಕಳ್ಳರು ನನ್ನ ವ್ಯಾನಿಟಿ ಬ್ಯಾಗಿನಿಂದ 1) ಬಂಗಾರದ ತಾಳಿ ಸರ ಅ.ಕಿ. 35000/- ಮತ್ತು 2) ಎರಡು ಅರ್ದ ಅರ್ದ ತೊಲೆಯ ಸುತ್ತುಂಗುರಗಳು ಅ.ಕಿ. 10000/- ನೆದ್ದವು ಕಳ್ಳತನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.