Police Bhavan Kalaburagi

Police Bhavan Kalaburagi

Friday, June 25, 2021

BIDAR DISTRICT DAILY CRIME UPDATE 25-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-06-2021

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 109/2021, ಕಲಂ. 379 ಐಪಿಸಿ :-

ದಿನಾಂಕ 06-06-2021 ರಂದು ಆಕಾಶ ತಂದೆ ಅನೀಲಕುಮಾರ ಏಣಕುರೆ ಸಾ: ಭೀಮ ನಗರ ಭಾಲ್ಕಿ ರವರು 12:30 ಗಂಟೆಗೆ ನ್ನ ಕೆಲಸಕ್ಕಾಗಿ ಮ್ಮ ಹೀರೊ ಸ್ಪ್ಲೆಂಡರ ಪ್ಲಸ್ ಮೋಟಾರ ಸೈಕಲ ತಾತ್ಕಾಲಿಕ ನೊಂದಣಿ ಸಂ. KA38/TMP/2019/3584, ಚಾಸಿಸ್ ನಂ. MBLHAR07XKHA00192, ಇಂಜೀನ ನಂ. HA10AGKHA00178, ಬಣ್ಣ: ಗ್ರೇ ಕಲರ್, ಮಾದರಿ 2019 ಹಾಗೂ ಅ.ಕಿ 35,000/- ರೂ. ನೇದನ್ನು ತೆಗೆದುಕೊಂಡು ರೈಲ್ವೆ ನಿಲ್ದಾಣದ ಹತ್ತಿರ ಇರುವ ವಿಜಯಲಕ್ಷ್ಮೀ ಡ್ರೇಸ್ಸಸ್ ರವರ ಮನೆಯ ಹತ್ತಿರ ಹೋಗಿ ನ್ನ ಮೋಟಾರ ಸೈಕಲ ನಿಲ್ಲಿಸಿ ನ್ನ ಅಣ್ಣನ ಮನೆಗೆ ಹೋಗಿ ಮರಳಿ 1330 ಗಂಟೆ ಸುಮಾರಿಗೆ ಮನೆಗೆ ಹೋಗಲು ಹೊರಗಡೆ ಬಂದು ನೋಡಲು ಸದರಿ ಮೋಟಾರ ಸೈಕಲ ಇರಲಿಲ್ಲ, ಎಲ್ಲಾ ಕಡೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 24-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 23/2021, ಕಲಂ. 498(), 306 ಜೊತೆ 34 ಐಪಿಸಿ :-

ಫಿರ್ಯಾದಿ ಲಕ್ಷ್ಮಣ ತಂದೆ ಶರಣಪ್ಪಾ ಡೊಮಣೆ ವಯ: 55 ವರ್ಷ, ಜಾತಿ: ಕುರುಬ, ಸಾ: ಅಷ್ಟೂರ, ತಾ: ಬೀದರ ರವರ ಮಗಳಾದ ಸವೀತಾ ಇವಳಿಗೆ ಗೊರನಳ್ಳಿ ಗ್ರಾಮದ ಕಲ್ಲಪ್ಪಾ ತಂದೆ ಅರ್ಜುನ್ ಈತನ ಜೋತೆಯಲ್ಲಿ 12 ವರ್ಷಗಳ ಹಿಂದೆ ಮದುವೆ ಮಾಡಿದ್ದು, ಸವಿತಾ ಇವಳಿಗೆ ಮೂರು ಜನ ಮಕ್ಕಳಿರುತ್ತಾರೆ, ಅಳಿಯನಾದ ಕಲ್ಲಪ್ಪಾ ಇತನು ಸರಾಯಿ ಕುಡಿಯುವ ಚಟದವನಿದ್ದು, ಸವಿತಾ ಇವಳಿಗೆ ಹೊಡೆ ಬಡೆ ಮಾಡುತ್ತಾ ಬಂದು ನೀನು ಬೇರೆಯವರ ಜೊತೆ ಇರುತ್ತಿ ಅಂತ ಅವಳ ಮೇಲೆ ಸಂಶಯ ಪಡುವದು ಮಾಡುತ್ತಾ ಬಂದು, ನೆ ಯಾರು ನಡೆಸುತ್ತಾರೆ ನಿಮ್ಮಪ್ಪನ ಮನೆಯಿಂದ ಗಂಟು ತೆಗೆದುಕೊಂಡು ಬಾ ಅಂತ ಜಗಳ ಮಾಡುತ್ತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಅತ್ತೆಯಾದ ಸಾಯಮ್ಮಾ ಇವಳು ಸಹ ನಿಮ್ಮಪ್ಪನ ಮನೆಯಲ್ಲಿ ನಿನಗೆ ಅನ್ನ ಸಿಕ್ಕಿರುವದಿಲ್ಲ, ನೀನು ಆವಾರಾ ಇದ್ದಿ ನಮಗೆ ಎಲ್ಲಿಂದ ಗಂಟು ಬಿದ್ದಿದಿ ಅಂತ ಅವಳಿಗೆ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದು ಇರುತ್ತದೆ, ಅವರು ಕಿರುಕುಳ ಕೊಡುವ ವಿಷಯವನ್ನು ಮಗಳು ತನ್ನ ತಂದೆ ತಾಯಿಗೆ ತಿಳಿಸಿದಾಗ ಫಿರ್ಯಾದಿಯು ತಮ್ಮೂರಿನ ಜನರೊಂದಿಗೆ ಗಂಡ ಮತ್ತು ಅತ್ತೆಗೆ ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ದಿ ಮಾತು ಹೇಳಿದ್ದು, ಆದರೂ ಸಹ ಅವರು ಅವಳಿಗೆ ಕಿರುಕುಳ ಕೊಡುವದು ಬಿಟ್ಟಿರುವದಿಲ್ಲ, ಕಾರ ಹುಣ್ಣಿಮೆ ಇದ್ದ ಪ್ರಯುಕ್ತ ದಿನಾಂಕ 22-06-2021 ರಂದು ಫಿರ್ಯಾದಿಯು ತನ್ನ ಮೊಮ್ಮಕ್ಕಳಿಗೆ ಮ್ಮ ಮನೆಗೆ ಕರೆದುಕೊಂಡು ಬಂದಿದ್ದು, ಮಗಳು ಹುಣ್ಣಿಮೆ ದಿವಸ ಬರುತ್ತೇನೆಂದು ಹೇಳಿರುತ್ತಾಳೆ, ಹೀಗಿರುವಾಗ ದಿನಾಂಕ 24-06-2021 ರಂದು ಕಾರ ಹುಣ್ಣಿಮೆ ಪ್ರಯುಕ್ತ ಫಿರ್ಯಾದಿಯವರ ಮಗನಾದ ಕನಕದಾಸ ಇತನು ಫಿರ್ಯಾದಿಯ ಮಗಳಿಗೆ ಕರೆಯಲು ಅವಳ ಮನೆಗೆ ಹೋಗಿ ನಂತರ ಕನಕದಾಸ ಇತನು ಕರೆ ಮಾಡಿ ತಿಳಿಸಿದೆನೆಂದರೆ ಅಕ್ಕ ಸವೀತಾ ಇವಳು ನೇಣು ಹಾಕಿಕೊಂಡು ಮರಣ ಹೊಂದಿರುತ್ತಾಳೆ ಅಂತ ತಿಳಿಸಿದ ಕೂಡಲೆ ಫಿರ್ಯಾದಿಯು ತನ್ನ ಹೆಂಡತಿ, ಮಗನಾದ ಶಿವಕಾಂತ, ತಮ್ಮನಾದ ನಾಗಶೆಟ್ಟಿ, ಸಂಬಂದಿ ಸಿದ್ರಾಮ ತಂದೆ ಅರ್ಜುನ್ ದೊಮಣೆ ಮತ್ತು ಮ್ಮೂರಿನ ಮಾರುತಿ, ಧನರಾಜಪ್ರಕಾಶ ರವರೆಲ್ಲರೂ ಕೂಡಿ ಗೊರನಳ್ಳಿಯ ಗಳ ಮನೆಗೆ ಹೋಗಿ ನೋಡಲಾಗಿ ಮಗಳು ನೇಣು ಹಾಕಿಕೊಂಡು ಮರಣ ಹೊಂದಿದ್ದು, ಅವಳಿಗೆ ಫಿರ್ಯಾದಿಯು ತಮ್ಮೂರಿನ ಪ್ರಕಾಶ, ಮಗನಾದ ಕನಕದಾಸ ರವರು ಕೂಡಿ ನೇಣಿನಿಂದ ಕೆಳಗೆ ಇಳಿಸಿ ಅವಳ ಶವವನ್ನು ಬೀದರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ನೋಡಲಾಗಿ ಅವಳ ಕುತ್ತಿಗೆಗೆ ನೇಣಿನಿಂದ ಕಂದುಗಟ್ಟಿದ ಗಾಯವಾಗಿದ್ದು ಇರುತ್ತದೆ, ಫಿರ್ಯಾದಿಯವರ ಮಗಳಿಗೆ ಅವಳ ಗಂಡ, ಅತ್ತೆ ರವರು ಕಿರುಕುಳ ಕೊಡುವ ಬಗ್ಗೆ ಅವಳ ಪಕ್ಕದ ಮನೆಯವರಿಗೆ ಗೊತ್ತಿದ್ದು, ಅವರು ಬಂದು ಅವಳಿಗೆ ನೋಡಿರುತ್ತಾರೆ, ಫಿರ್ಯಾದಿಯ ಮಗಳಿಗೆ ಅವಳ ಗಂಡ, ಅತ್ತೆ ಇಬ್ಬರು ಕೂಡಿ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ಅವಳಿಗೆ ಸಾಯುವಂತೆ ಪ್ರಚೋದನೆ ಮಾಡಿದ್ದರಿಂದ ಅವರು ಕೊಡುವ ಕಿರುಕುಳವನ್ನು ತಾಳಲಾರದೆ ಅವಳ ಮನೆಯಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಸ್ಕಾರ್ಪದಿಂದ ಮನೆಯ ದೇವರ ಕೊಣೆಯ ಛಾವಣಿಗೆ ಇರುವ ದಂಡಿಗೆಗೆ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 56/2021, ಕಲಂ. 143, 147, 324, 498(ಎ), 504, 506, 342 ಜೊತೆ 149 ಐಪಿಸಿ :-

ಫಿರ್ಯಾದಿ ಶರಣಮ್ಮಾ ಗಂಡ ಅಶೋಕ ಹಲಗರೆ ವಯ: 36 ವರ್ಷ, ಜಾತಿ: ಹೊಲಿಯಾ, ಸಾ: ಡೋಣಗಾಂವ(ಎಮ್) ಸಂಗ್ರಾಮ ತಂದೆ ಗಣಪತಿ ಡೊಳೆ ವಯ: 60 ವರ್ಷ, ಜಾತಿ: ಹೊಲಿಯಾ, ಸಾ: ನಾರಾಯಣಪೂರ ರವರಿಗೆ ಸುಮಾರು 6 ವರ್ಷದ ಹಿಂದೆ ಡೋಣಗಾಂವ ಗ್ರಾಮದ ವೆಂಕಟ ಹಲಗಾರೆ ಇವರ ಕಿರಿಯ ಮಗನಾದ ಅಶೋಕ ಇತನ ಜೊತೆ ಮದುವೆ ಮಾಡಿಕೊಟ್ಟಿದ್ದಾರೆ, ಆದರೆ ಮದುವೆಯಾದ ನಂತರ ಫಿರ್ಯಾದಿಗೆ 6 ತಿಂಗಳು ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡರು ನಂತರ ಪ್ರತಿನಿತ್ಯ ಗಂಡನನ್ನು ಹೊರತುಪಡಿಸಿ ಉಳಿದವರು ಚಿತ್ರಹಿಂಸೆ ನೀಡಲು ಆರಂಭಿಸಿದರು, ದಿನನಿತ್ಯ ಒಂದಿಲ್ಲ ಒಂದು ರೀತಿಯಿಂದ ಅವಾಚ್ಯ ಶಬ್ದಗಳಿಂದ ಅವಮಾನಿಸಿ ಯಾವುದೋ ಒಂದು ನೆಪ ಮಾಡಿ ಹೊಡೆಯುತ್ತಿದ್ದಾರೆ ಅವರು ಹೇಳಿದಂತೆ ಎಲ್ಲಾ ಮನೆಯ ಕೆಲಸಗಳನ್ನು ಮಾಡಿದರೂ ಕೂಡ ಹೊಡೆಯಿರಿ ಬಿಡಬೇಡಿರಿ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ, ಅಲ್ಲದೇ ನಾದನಿಯಾದ ಮಂಗಲಾಬಾಯಿ ಈಕೆಯು ಫಿರ್ಯಾದಿಗೆ ಹಿಂಸೆ ಕೊಡುತ್ತಿದ್ದಾಳೆ, ಫಿರ್ಯಾದಿಗೆ ಊಟ ಕೂಡಾ ಕೊಡುತ್ತಿಲ್ಲಾ, ಫಿರ್ಯಾದಿಯು ಮನೆಯಯಲ್ಲಿರುವ ಯಾವುದಾದರೂ ವಸ್ತುವಿಗೆ ಮುಟ್ಟಿದರೆ ಅದನ್ನು ನೀರಿನಿಂದ ತೋಳೆದು ಇಡಲು ಹೇಳುತ್ತಾಳೆ ಮತ್ತು ಗಂಡನ ಅಣ್ಣಾನಾದ ಸೂರೂಪ ಈತನ ಮಕ್ಕಳಾದ ಸುಧಾರಾಣಿ, ಶೃತಿ ರಾಕೇಶ ಹಾಗೂ ರೂಪಾಬಾಯಿ ತಂದೆ ವೆಂಕಟಸುಮಿತ್ರಾ ತಂದೆ ವೆಂಕಟ, ಸಂಗೀತಾ ಗಂಡ ಸಂತೋಷ, ವರ್ಷಾ ಗಂಡ ಅಂಬಾದಾಸ ಹಳ್ಳಿಖೇಡೆ, ಅಂಬಾದಾಸ ಹಳ್ಳಿಖೇಡೆ ಇವರೆಲ್ಲರೂ ಕೂಡಿಕೊಂಡು ಫಿರ್ಯಾದಿಗೆ ಕೊಂದು ಬಿಟ್ಟರೆ ನಮಗೆ ಸುಖ ಆಗುತ್ತದೆ ಅಂತ ಜೀವದ ಬೆದರಿಕೆ ಹಾಕುತ್ತಿದ್ದಾರೆ, ಅಲ್ಲದೆ ದಿನನಿತ್ಯ ಕಲ್ಲು, ಕಟ್ಟಿಗೆ ಹಾಗು ಕೈಯಲ್ಲಿ ಎನು ಸಿಗುತ್ತದೆ ಅದರಿಂದ ಹೊಡೆಯುತ್ತಿದ್ದಾರೆ ಹಾಗೂ ದಿನಾಂಕ 21-06-2021 ರಂದು ರಾತ್ರಿ ಹೊತ್ತಿನಲ್ಲಿ ಫಿರ್ಯಾಧಿಗೆ ನಾದನಿ ಮಂಗಲಾ, ಶೃತಿ, ರಾಕೇಶ, ಸುಧಾರಾಣಿ, ಸ್ವರೂಪ, ಸುಮಿತ್ರಾ ತಂದೆ ವೆಂಕಟ, ರೂಪಾಬಾಯಿ ತಂದೆ ವೆಂಕಟ, ಸಂಗೀತಾ ಗಂಡ ಸಂತೋಷ,  ಮುಕ್ತಾ ತಂದೆ ಸ್ವರೂಪ, ಸ್ವರೂಪ ತಂದೆ ವೆಂಕಟ ಇವರೆಲ್ಲರೂ ಕೂಡಿ ಫಿರ್ಯಾದಿಯ ಮೇಲೆ ಬಿದ್ದು ಎಲ್ಲರು ಕೂಡಿ ಎಲ್ಲಿ ಸಿಕ್ಕಲ್ಲಿ ಕೈಯಿಂದ ಹೊಡೆದಿರುತ್ತಾರೆ, ನಂತರ ದಿನಾಂಕ 24-06-2021 ರಂದು ದಿನನಿತ್ಯದಂತೆ ಫಿರ್ಯಾದಿಯು ಮನೆಯ ಕೆಲಸ ಮಾಡಿಕೊಳ್ಳುವಾಗ ಮಗು ಇಡ್ಲಿ ಬೇಕು ಎಂದು ಹೇಳಿ ಅಳುತ್ತಿರುವಾಗ ಫಿರ್ಯಾದಿಯು ತನ್ನ ಮಗುವಿಗೆ ಇಡ್ಲಿ ಮಾಡಿಕೊಡಲು ಅಡುಗೆ ಮನೆಗೆ ಹೋದಾಗ ಸುಧಾರಾಣಿ, ಮಂಗಲಾಬಾಯಿ ಅಡುಗೆ ಮನೆಯಲ್ಲಿ ಚಹಾ ಮಾಡುತ್ತಿದ್ದರು, ಅದನ್ನು ನೋಡಿ ಫಿರ್ಯಾದಿಯು ಹಿಂತಿರುಗಿ ಬಂದು ಪಡಸಾಲೆಯಲ್ಲಿ ನಿಂತಾಗ ಮಂಗಲಾಬಾಯಿ ಸುಧಾರಾಣಿಗೆ ಸನ್ನೆ ಮಾಡಿದನ್ನು ಗಮನಿಸಿದಾಗ ಸುಧಾರಾಣಿ ಚಹಾದ ಭೋಗಣಿ ತಂದು ಫಿರ್ಯಾದಿಯ ಎದೆಯ ಮೇಲೆ ಸುರಿದಿರುತ್ತಾಳೆ, ಇದ್ದರಿಂದ ಫಿರ್ಯಾದಿಯ ಎದೆ, ಮುಖ ಸುಟ್ಟು ಹೋಗಿರುತ್ತದೆ, ಫಿರ್ಯಾದಿಯು ತಾಳಲಾರದೆ ಕಿರುಚಿಲಾರಂಭಿಸಿದಾಗ ಮಂಗಲಾಬಾಯಿ ಈಕೆಯೂ ಹೊಡೆದು ಹಾಕುತ್ತೆನೆಂದು ಜೀವದ ಬೆದರಿಕೆ ಹಾಕಿ ಚಿರಾಡದಂತೆ ಕೂಡಿ ಹಾಕಿರುತ್ತಾಳೆ, ನಂತರ ಫಿರ್ಯಾದಿಯು ತನ್ನ ಗಂಡ ಬಂದಾಗ ಕಿರುಡುತ್ತಾ ಹೊರಗಡೆ ಓಡಿ ಹೋಗಿದ್ದು, ಆಗ ಅಕ್ಕ ಪಕ್ಕದ ಜನರು ಸೇರಿಕೊಂಡು ಗಂಡ ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೊಗಿ ಚಿಕಿತ್ಸೆ ಕೊಡಿಸಿದ್ದಾರೆ ನಂತರ ಸದರಿ ವಿಷಯ ಫಿರ್ಯಾದಿಯು ತನ್ನ ಸಹೋದರರಿಗೆ ತಿಳಿಸಿದಾಗ ಅವರು ಬಂದು ಫಿರ್ಯಾದಿಗೆ ಕಮಲನಗರ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 24-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.