ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 22/04/2018 ರಂದು ಸಾಯಂಕಾಲ ನಾನು ಕೆಲಸ ಮಾಡುತ್ತಿದ್ದಾಗ ಆಗ ನಮ್ಮ ಬಾಜು ಖಾಜಾ ದಾಲಮೀಲದಲ್ಲಿ
ಕೆಲಸ ಮಾಡುವ ಬಿಹಾರ ರಾಜ್ಯದ ಒಬ್ಬ ಮನುಷ್ಯನು ನಮ್ಮ ಹುಡುಗನಿಗೆ ಯಾರೋ ದಾಲಮೀಲದ ಹಿಂದೆ
ಹೊಡೆಯುತ್ತಿದ್ದಾರೆ ಅಂತಾ ಒಂದೇ ಸವನೇ ಚೀರಾಡುತ್ತಿದ್ದಾಗ ಆಗ ನಾನು ಮತ್ತು ನಮ್ಮ ದಾಲಮಿಲ ಮಾಲಿಕ
ರಿಜ್ವಾನ ಹಾಗು ಬಿಹಾರ ರಾಜ್ಯದ ಇನ್ನು 03 ಜನರು ಕೂಡಿಕೊಂಡು ನಮ್ಮ ದಾಲಮೀಲದ ಹಿಂದುಗಡೆ ಇರುವ ಅಸ್ಪಾನ ಮೋಟಾರ್ಸ್ ಇವರ
ಹೋದಲ್ಲಿ ಮುಳ್ಳಿನ ಕಂಟಿಯಲ್ಲಿ ಒಬ್ಬ ಹುಡಗನು ಬೋರಲಾಗಿ ಬಿದ್ದಿದ್ದನು ಆಗ 03 ಜನರು
ಬಿಹಾರ ರಾಜ್ಯದ ಹುಡುಗರು ಅವನಿಗೆ ಸರಿಯಾಗಿ ಮಲಗಿಸಿ ನೋಡಲಾಗಿ ಅವನಿಗೆ ತಲೆಯ ಹಿಂದೆ ಭಾರಿ
ರಕ್ತಗಾಯ, ಎಡಹಣೆಗೆ ತರಚಿದ ಗಾಯ, ಬಲಕಣ್ಣಿಗೆ
ತರಚಿದ ಗಾಯ, ಎಡಗಣ್ಣಿನ ಕೆಳಗೆ ತರಚಿದ ಗಾಯ, ಎರಡು ಕಿವಿ ಮತ್ತು ಮೂಗಿನಿಂದ ರಸ್ತಸ್ರಾವ, ಎಡರಟ್ಟೆಗೆ ಮತ್ತು
ಮೋಳಕೈಗೆ, ಹೆಬ್ಬೆರಳಿಗೆ ಮುಳ್ಳು ಚುಚಿದ ಗಾಯಗಳಾಗಿ ಎರಡು ಕಿವಿಯಿಂದ ಮತ್ತು ಮೂಗಿನಿಂದ
ರಕ್ತಸ್ರಾವವಾಗುತ್ತಿತ್ತು. ನಂತರ
ಅವನಿಗೆ ನಾನು ಮತ್ತು ಬಿಹಾರ ರಾಜ್ಯದ ಒಬ್ಬ ಹುಡುಗ ಇಬ್ಬರು ಕೂಡಿಕೊಂಡು ಸದರಿಯವನಿಗೆ ನನ್ನ ಮೋಟಾರ
ಸೈಕಲ ಮೇಲೆ ನಡುವೆ ಕೂಡಿಸಿಕೊಂಡು ಕಪನೂರ ಗ್ರಾಮದ ಎ.ಎಸ್.ಎಮ್ ಆಸ್ಪತ್ರೆಗೆ ತೆಗೆದುಕೊಂಡು
ಹೋಗಿದ್ದು ಸದರಿಯವನನ್ನು ಪರೀಕ್ಷಿಸಿದ ವೈದ್ಯರು ಈಗಾಗಲೆ ಮೃತಪಟ್ಟಿರುತ್ತನೆ ಅಂತಾ ತಿಳಿಸಿದ್ದು ನನ್ನ
ಜೊತೆಗೆ ಮೋಟಾರ ಸೈಕಲ ಮೇಲೆ ಬಂದವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಭೋಜಮುಖಿಯಾ
ತಂದೆ ಹೀರಾಲಾಲ ಮುಖಿಯಾ ಸಾ : ತಿರಬಿನಿ ಸಾ:ತಿರಬಿನಿ ಅಂತಾ ತಿಳಿಸಿದ್ದು
ಪ್ರಕಾಶ ತಂದೆ ಕೈಲಾಸ ಮುಖಿಯಾ ಮು:ಜೀತವಾರಪೂರ ತಾ:ಅರೇರಾ ಜಿ:ಮತಿಹಾರಿ ರಾಜ್ಯ: ಬಿಹಾರ ಹಾವ:
ಮಹಮ್ಮದ ಜಾವೀದ ಇವರ ದಾಲಮೀಲದಲ್ಲಿ ಅಂತಾ ತಿಳಿಸಿರುತ್ತಾನೆ ಮತ್ತು ನನ್ನೊಂದಿಗೆ ಸ್ಥಳಕ್ಕೆ ಬಂದ ಇಬ್ಬರ ಹೆಸರು
ಸಿಪಾಯಿ ತಂದೆ ರಾಮರಂಗೇರಾವ ಹಾಗು ಹೀರಾಲಾಲ ತಂದೆ ರುವಾಲ ಪಣಿತ ಅಂತಾ ತಿಳಿಸಿದನು ಪ್ರಕಾಶ
ಮುಖಿಯಾ ಇತನು ಸಾಯಂಕಾಲ 4 ಗಂಟೆಗೆ ದಾಲಮಿಲ್ದಿಂದ ಸಂಡಾಸಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ
ಹೋಗಿದ್ದು ನಂತರ ಈ ಘಟನೆ ನಡೆದಿರುತ್ತದೆ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ಅಥವಾ ಯಾವುದೋ
ದುರದ್ದೇಶದಿಂದ ಇಂದು ದಿನಾಂಕ:-
22/04/2018 ರಂದು ಸಾಯಂಕಾಲ 04:00
ಗಂಟೆಯಿಂದ 06:30 ಪಿ.ಎಂದ
ಮದ್ಯದ ಅವಧಿಯಲ್ಲಿ ಮೃತ ಪ್ರಕಾಶ ಇತನು ಸಂಡಾಸಕ್ಕೆ ಹೋದಾಗ ಯಾವುದೋ ಭಾರವಾದ
ವಸ್ತುವಿನಿಂದ ಅಥವಾ ಯಾವುದೋ ಹರಿತವಾದ ಆಯುದದಿಂದ ಆತನ ತಲೆಗೆ ಹಾಗು ಇತರೇ ಕಡೆಗೆ ಹೊಡೆದು ಬಾರಿ
ಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಶ್ರೀ ಮಹಮ್ಮದ ಶಕೀಲ ತಂದೆ ಶಫೀ ಅಹೆಮ್ಮದ ಸಾ : ಇಸ್ಲಾಮಾ ಬಾದ ಕಾಲನಿ ಕಲಬುರಗಿ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ಶ್ರೀಮತಿ ಉಮಾಶ್ರೀ ಗಂಡ ಭಗವಂತ್ರಾಯ ಬಿರಾದಾರ ಸಾ||ಬಂಕಲಗಾ
ತಾ||ಅಫಜಲಪೂರ ರವರ ಗಂಡನಾದ ಭಗವಂತ್ರಾಯ ತಂದೆ ಮಲ್ಲೇಶಿ ಬಿರಾದಾರ ಈತನು ದಿನಾಲು ಸರಾಯಿ ಸೇವನೆ ಮಾಡಿ ಮನೆಗೆ ಬರುತಿದ್ದನ್ನು ನಾನು ನಮ್ಮ ಅತ್ತೆಯಾದ ಶಿವಮ್ಮಾ ಮೈದುನನಾದ ಸಾಯಿಬಣ್ಣ ಸರಾಯಿ ಸೇವನೆ ಮಾಡಬೇಡ ಆರೋಗ್ಯ ಹಾಳಾಗುತ್ತೇ ಸಂಸಾರ ಕೆಡುತ್ತೇ ಎರಡು ಹೆಣ್ಣು ಮಕ್ಕಳಿವೆ ಅಂತ ತಿಳುವಳಿಕೆ ಹೇಳಿದರು ಕೇಳದೆ ನನಗೆ ಜೀವನ ಸಾಕಾಗಿದೆ ಅಂತ ಹೇಳಿ ದಿನಾಲು ಸರಾಯಿ ಸೇವನೆ ಮಾಡುತಿದ್ದನು ದಿನಾಂಕ 20/04/2018 ರಂದು 3.00 ಪಿಎಮ್ ಸುಮಾರಿಗೆ ನನ್ನ ಗಂಡನು ಸರಾಯಿ ಸೇವನೆ ಮಾಡಿ ಮನೆಗೆ ಬಂದು ನನಗೆ ಜೀವನ ಸಾಕಾಗಿದೆ ನಾನು ಇಂದು ಸಾಯುತ್ತೇನೆ ಅಂತ ಅನ್ನುತ್ತಾ ಹೊಲಕ್ಕೆ ಹೋಗುತ್ತೇನೆ ಅಂತ ಹೇಳಿ ಹೋದನು ನಾವು ಸರಾಯಿ ನಶೆಯಲ್ಲಿ ಹಾಗೇ ಹೇಳುತ್ತಾನೆ ಅಂತ ಸುಮ್ಮನಿದ್ದೇವು ನಂತರ 6.00 ಪಿಎಮ್ ಸುಮಾರಿಗೆ ನಮಗೆ ತಿಳಿದಿದ್ದೇನೆಂದರೆ ನನ್ನ ಗಂಡನಾದ ಭಗವಂತ್ರಾಯ ಈತನು ನಮ್ಮ ಹೊಲಕ್ಕೆ ಹೋಗುವ ದಾರಿಯಲ್ಲಿ ವಿಠ್ಠಲ ಜಾಮಗೊಂಡ ರವರ ಹೊಲದ ಹತ್ತಿರ ಕ್ರೀಮಿನಾಶಕ ವಿಷ ಸೇವನೆ ಮಾಡಿ ಒದ್ದಾಡುತಿದ್ದಾನೆ ಅಂತ ಗೊತ್ತಾಗಿ ನಾನು ನಮ್ಮ ಅತ್ತೆಯಾದ ಶಿವಮ್ಮಾ ಮೈದುನನಾದ ಸಾಯಿಬಣ್ಣ ಹಾಗು ನಮ್ಮ ಗ್ರಾಮದ ಸಿದ್ದರಾಮ ತಂದೆ ಯಶವಂತ್ರಾಯ ಬಿರಾದಾರ, ಮಲ್ಕಣ್ಣಗೌಡ ತಂದೆ ಹಣಮಂತ್ರಾಯ ಗೌಡ ಬಿರಾದಾರ ಎಲ್ಲರು ಕೂಡಿ ಒಂದು ಖಾಸಗಿ ತಗೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ವಿಠ್ಠಲ ಜಾಮಗೊಂಡ ರವರ ಹೊಲದ ಹತ್ತಿರ ದಾರಿಯ ಮೇಲೆ ನನ್ನ ಗಂಡನು ಬಿದ್ದು ಒದ್ದಾಡುತಿದ್ದನು ನಾವು ನನ್ನ ಗಂಡನಿಗೆ ವಿಚಾರಿಸಿದಾಗ ಬೆಳೆಗೆ ಸಿಂಪಡಿಸುವ ಕ್ರೀಮಿನಾಷಕ ಔಷದಿ ಸರಾಯಿ ಕುಡಿದ ನಶೆಯಲ್ಲಿ 5.00 ಗಂಟೆ ಸುಮಾರಿಗೆ ಸೇವನೆ ಮಾಡಿರುತ್ತೇನೆ ಅಂತ ತಿಳಿಸಿದನು ನಾವು ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಕಲಬುರಗಿಯ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನನ್ನ ಗಂಡನಿಗೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನಾಂಕ 21/04/2018 ರಂದು ರಾತ್ರಿ 9.25 ಪಿಎಮ್ ಸುಮಾರಿಗೆ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.