Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 275/2017 ಕಲಂ: 143,147,323,354,504,506 ಸಂ.149 ಐಪಿಸಿ ಮತ್ತು 3(1)(ಡಿ),3(1)(),3(1)(ತಿ) ಖಅ ಖಖಿ ಕಂ ಂಅಖಿ 1989;- ದಿನಾಂಕ: 01-10-2017 ರಂದು 4 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರಳಾದ ಶ್ರೀಮತಿ ನಾಗಮ್ಮ ಗಂಡ ಅಂಬ್ಲಪ್ಪ ಮ್ಯಾಗೇರಿ ವಯಸ್ಸು:45 ಜಾತಿ:ಮಾದಿಗ ಉದ್ಯೋಗ:ಕೂಲಿ ಸಾ:ಅರಳಹಳ್ಳಿ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:01-10-2017 ರಂದು ರಾತ್ರಿ 1 ಗಂಟೆ ಸುಮಾರಿಗೆ ನಮ್ಮ ಮಾದಿಗರ ಓಣಿಯ ಕೆಂಚಮ್ಮ ಮತ್ತು ದುರ್ಗಮ್ಮ ದೇವಸ್ಥಾನದ ಮುಂದೆ ನಮ್ಮ ಮಾದಿಗ ಹುಡುಗರು ಮೊಹರಂ ಹೆಜ್ಜೆ ಕುಣಿಯುವ ಸಂದರ್ಭದಲ್ಲಿ ನಮ್ಮ ಊರಿನ ಸಿದ್ದಪ್ಪ ಹಂದ್ರಾಳ ಎಂಬುವವರ ಮಗನಾದ ದೇವರಾಜ ತಂದೆ ಸಿದ್ದಪ್ಪ ಹಂದ್ರಾಳ ಈತನು ಲೇ ಮಾದಗಿ ಸೂಳಿ ಮಕ್ಕಳೇ, ಯಾರನ್ನು ಕೇಳಿ ಮೊಹರಂ ಕುಣಿಯುತ್ತಿದ್ದಿರಿ ಎಂದು ಕೂಗಾಡುತ್ತಾ (ಸೈಕಲ್ ಮೊಟರ) ಬೈಕ್ನಿಂದ ಇಳಿದು ಸುತ್ತ ಮುತ್ತ ನೊಡುತ್ತಾ ನನ್ನತ್ತ ತಿರುಗಿ ಲೇ ಸೂಳಿ ನಿಮ್ಮ ಮಕ್ಕಳ ಮೊಹರಂ ಕುಣಿಯುವುದು ನೋಡಕಹತ್ತಿದ್ದಿ ಏನು ಅಂತ ನನ್ನ ಮೇಳೆ ಏರಗಿ ಬರುವಂತೆ ಬಂದು ನನ್ನ ಸೀರೆ ಹಿಡಿದು ಎಳೆದಾಡಿದನು. ಹಿಂದಿನಿಂದ ಸುಮಾರು 5-6 ಹುಡುಗರು ಲೇ ಮಾದಿಗ ಸೂಳಿ ಮಕ್ಕಳೇ ನಿಮ್ಮ ಸೋಕ್ಕು ಬಹಳ ಆಗಿದೆ ಅಂತ ನಮ್ಮ ಹುಡುಗರ ಅಂಗಿ ಹಿಡಿದು ಏಳೆದಾಡಿ ದನಕ್ಕೆ ಬಡಿದಂತೆ ಬಡಿದರು. ಶಿವರಾಜ ಎನ್ನುವ ಹುಡುಗ ಲೇ ಸೂಳಿ ನೀ ಯಾಕ ಅಡ್ಡ ಬರುತ್ತಿ ಅಂತ ನನ್ನ ಕೂದಲು ಹಿಡಿದು ಏಳೆದಾಡಿ ದಬ್ಬಿದನು. ಶಿವರಾಜ ಜೊತೆಯಲ್ಲಿದ್ದ ಆನಂದ ತಂದೆ ಬಸಣಗಭಡ ಈತನು ಮಾದಿಗರದು ಬಾಹಳ ಆಗಿದೆ ಈ ಓಣಿಯ ಹುಡುಗಿಯರನ್ನು ಎಳೆದಾಡಿ ಮಾಡಿದರು ಇವರಿಗೆ ಬುದ್ದಿ ಬಂದಿಲ್ಲ ಎಂದು ಕೂಗಾಡಿದ ಮತ್ತು ಜೊತೆಯಲ್ಲಿದ್ದ ಮಲ್ಕಪ್ಪ ತಂದೆ ಮಾನಪ್ಪ ಜಾಲಿಬೆಂಚಿ, ಮಲ್ಲಪ್ಪ ತಂದೆ ದೇವಪ್ಪ ಜಾಲಿಬೆಂಚಿ ಮತ್ತು ಚನ್ನಪ್ಪ ತಂದೆ ತಿಪ್ಪಣ್ಣ ಲಿಂಗದಹಳ್ಳಿ ಇವರುಗಳು ನಮ್ಮ ಹುಡುಗರಾದ ಕಾಳಿಂಗ ತಂದೆ ಆನಂದಪ್ಪ, ರಮೇಶ ತಂದೆ ಬೀಮಪ್ಪ ಮತ್ತು ಭೀಮರಾಯ ತಂದೆ ಅಂಬ್ಲಪ್ಪ ಇವರುಗಳಿಗೆ ನೆಲಕ್ಕೆ ಕೆಡವಿ ಮೈ ಮೇಲೆ ಬಟ್ಟೆ ಹರಿದು ಓಡಾಡಿಸಿ ಪಶು ಪ್ರಾಣಿಗಳಿಗೆ ಹೊಡೆಯುವಂತೆ ಹೊಡೆದರು. ಆಗ ಅಲ್ಲಿ ಇದ್ದ ಶ್ರೀಮತಿ ಸಾಬಮ್ಮ ಗಂಡ ತಿಪ್ಪಣ್ಣ ತಳಗೇರಿ ಹಾಗೂ ಮಹಾದೇವಪ್ಪ ತಂದೆ ಧರ್ಮಣ್ಣ ತಳಗೇರಿ ಇವರುಗಳು ಬಂದ ಜಗಳ ಬಿಡಿಸಿದರು. ಅದೇ ಸಮಯದಲ್ಲಿ ಪೊಲೀಸ್ ಠಾಣೆಗೆ ಪೋನ ಮಾಡಿದೆವು ಸ್ವಲ್ಪ ಸಮಯದಲ್ಲಿ ಪೊಲೀಸರು ಬಂದು ನಮ್ಮ ಜಗಳವನ್ನು ಬಿಡಿಸಿದರು. ಈಗ ಪೊಲೀಸರು ಬಂದಿದ್ದಾರೆ ನೀವು ಉಳಿದು ಕೊಂಡಿದ್ದೀರಿ ಸೂಳಿ ಮಕ್ಕಳೇ ನಾಳೆ ನೀವು ಊರಲ್ಲಿ ಸಂಸಾರ ಮಾಡಿರೀ ನೊಡಮ್ ಎಂದು ಕೂಗಾಡಿದರು. ಲೇ ಮಾದಿಗ ಸೂಳಿ ಮಕ್ಕಳೇ ನಿಮ್ಮನ್ನೇಲ್ಲಾ ಜೀವ ಸಹಿತ ಕಲಾಸ್ ಮಾಡುತ್ತಿವಿ ಎಂದು ಅಂಜಿಸಿ ಜೀವ ಬೇದರಿಕೆ ಹಾಕಿದರು. ಊರಲ್ಲಿ ಅವರ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇದೆ ಆದುದ್ದರಿಂದ ನಮಗೆ ಊರಲ್ಲಿ ಬದುಕಲು ಬಯವಾಗಿದೆ. ಈ ಹಿಂದೆ ನಮ್ಮ ಓಣಿಯ ಹುಡಿಗಿಯರು ಕೆಲಸಕ್ಕೆ ಅಂತ ಅಡವಿಗೆ ಹೋದರೆ ಅತ್ಯಾಚಾರ ಮಾಡಿ ಕೆಡಸಿದ ಪ್ರಸಂಗಗಳು ಕೂಡಾ ಇದೆ ಇದ್ದನ್ನು ಕೂಡಾ ನಾವು ಅಂಜಿ ಮುಚ್ಚಿಕೊಂಡಿದ್ದೆವೆ. ನಮ್ಮ ಹುಡುಗರು ಒಳ್ಳೆಯ ಬಟ್ಟೆ ಹಾಕಿಕೊಂಡರೇ ಲೇ ಮಕ್ಕಳೇ ಇಂತ ಬಟ್ಟೆ ನೀವು ಯಾಕ ಹಾಕೊಳ್ಳುತ್ತಿರಿ ಅಂತ ಹೊಡೆದ ಪ್ರಸಂಗ ಕೂಡಾ ನಡೆದಿದೆ. ಹಲವು ಬಾರಿ ನಮ್ಮ ಮೇಲೆ ಹಲ್ಲೇಗಳಾದರೂ ಊರಿನವರಿಗೆ ಅಂಜಿ ಬದುಕುತ್ತಿದ್ದೆವೆ. ಊರಲ್ಲಿ ಯಾವುದೇ ರೀತಿಯ ಗೌರವ ವಿಲ್ಲ ನಮ್ಮನ್ನು ಕೀಳಾಗಿ ಕಾಣಿತ್ತಿದ್ದಾರೆ ನಾವು ಮಾದಿಗರು ತುಂಬಾ ಅಂಜಿಕೆಯಲ್ಲಿ ಬದುಕುತ್ತಿದ್ದೆವೆ. ಈ ಪಿಯರ್ಾದಿಯಲ್ಲಿ ತಿಳಿಸಿದ ಇವರುಗಳಿಂದ ನಮಗೆ ಜೀವ ಬಯವಿದೆ ನಮ್ಮ ಹೆಣ್ಣು ಮಕ್ಕಳ ಬಗ್ಗೆ ನಮಗೆ ಚಿಂತೆ ಇದೆ ಆದ್ದರಿಂದ ನಮಗೆ ಸೂಕ್ತ ರಕ್ಷಣೆ ನೀಡಿ ಕ್ರಮ ಕೈಕೊಳ್ಳಬೇಕೆಂದು ಮತ್ತು ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಬೇಕೆಂದು ತಮ್ಮಲ್ಲಿ ವಿನಯಪೂರ್ವಕ ಪಿಯರ್ಾದಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 275/2017 ಕಲಂ. 143,147,323,354,504,506 ಸಂ.149 ಐಪಿಸಿ ಮತ್ತು ಕಲಂ. 3(1)(ಡಿ), 3(1)(),3(1)(ತಿ) ಖಅ ಖಖಿ ಕಂ ಂಅಖಿ 1989 ನೇದ್ದರಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 249/2017 ಕಲಂ: 323, 324, 504, 506 ಐಪಿಸಿ;- ದಿನಾಂಕ ದಿನಾಂಕ 30.09.2017 ರಂದು ಬೆಳಿಗಿನ ಜಾವ 3-00 ಗಂಟೆ ಸುಮಾರಿಗೆ ನಾನಗೆ ಹೊಟ್ಟೆ ನೋವು ಬಂದು ಸಂಡಾಸ ಬಂದಂತಾಗಿದ್ದರಿಂದ ನಾನು ಒಬ್ಬನೆ ಎದ್ದು ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ನಮ್ಮ ತಾಂಡಾದಿಂದ ಮೇನ್ ರೋಡಿಗೆ ಹೋಗುವ ಬಂಡಿದಾರಿಗೆ ಹೋಗುತ್ತಿದ್ದಾಗ ನಮ್ಮ ತಾಂಡಾದ ಮಲ್ಯ ತಂದೆ ಹಣಮಂತ ರಾಠೋಡ ಮತ್ತು ನಾರಾಯಣ ತಂದೆ ಗೋಬ್ರ್ಯಾ ರಾಠೋಡ ಇವರು ಸಂಡಾಸ ಮಾಡಿ ತಂಬಿಗೆ ಹಿಡಿದುಕೊಂಡು ನನ್ನ ಎದುರಿಗೆ ಬಂದರು. ಅವರು ಸ್ವಲ್ಪ ಮುಂದೆ ಹೋದ ನಂತರ ನಾನು ಮಲ್ಯ ರಾಠೋಡ ಇವರ ದೊಡ್ಡಿ ಜಾಗದಿಂದ ಸ್ವಲ್ಪ ದೂರದಲ್ಲಿ ಕಚ್ಚಾ ರಸ್ತೆಗೆ ಒಂದು ಕಡೆಯಲ್ಲಿ ಸಂಡಾಸ ಮಾಡುತ್ತಿದ್ದಾಗ ಮುಂದೆ ಹೋದ ಮಲ್ಯ ತಂದೆ ಹಣಮಂತ ರಾಠೋಡ ಈತನು ಮತ್ತೆ ಬಂದು ನನಗೆ ಏ ಸೂಳೆ ಮಗನೆ ನಮ್ಮ ದೊಡ್ಡಿ ಜಾಗದಲ್ಲಿ ಸಂಡಾಸ ಕುಂತಿದಿ ಅಂತಾ ಹೇಳಿ ನನಗೆ ಕೈಯಿಂದ ತಲೆಯ ಮೇಲೆ ಜೋರಾಗಿ ಹೊಡೆದನು. ಆಗ ನಾನು ಇಲ್ಲ ನಾನು ಕಚ್ಚಾ ರೋಡಿಗೆ ಕುಂತಿನಿ ನಿಮ್ಮ ದೊಡಿ ದೂರ ಆದ ಅಂತಾ ಹೇಳಿದಕ್ಕೆ ಅಲ್ಲಿಯೇ ಬಿದ್ದಿದ್ದ ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು ಬೆನ್ನಿಗೆ ಮತ್ತು ನನ್ನ ಮೂಗಿಗೆ ಜೋರಾಗಿ ಹೊಡೆದನು. ಆಗ ನನಗಿಂತ ಮೊದಲು ತಂಬಿಗೆ ತಗೊಂಡು ಹೋಗಿದ್ದ ಮಲ್ಯನ ತಂದೆಯಾದ ಹಣಮಂತ ತಂದೆ ಸೋಮ್ಲ್ಯಾ ರಾಠೋಡ ಈತನು ಸಹ ಅಲ್ಲಿಗೆ ಬಂದು ಈ ಸೂಳೆ ಮಗನಿಗೆ ಬಿಡಬ್ಯಾಡ ಚೊಲೊ ಹೊಡಿ ಖಲಾಸ ಮಾಡು ನಮ್ಮ ದೊಡ್ಡಿ ಜಾಗದಲ್ಲಿಯೇ ಸಂಡಾಸ ಮಾಡತಾನ ಅಂತಾ ಹೇಳಿ ಕಾಲಿನಿಂದ ನನಗೆ ಸೊಂಟಕ್ಕೆ ಒದ್ದನು. ಆಗ ನಾನು ಅಳುತ್ತಿರುವ ಶಬ್ದ ಕೇಳಿ ಮಲ್ಯನ ಜೊತೆಗೆ ಹೋಗಿದ್ದ ನಾರಾಯಣ ರಾಠೋಡ ಈತನು ಮತ್ತೆ ಹಿಂದಕ್ಕೆ ಬಂದು ಅವರಿಂದ ನನಗೆ ಬಿಡಿಸಿಕೊಂಡನು. ನನಗೆ ಮೂಗಿನಿಂದ ರಕ್ತ ಸೊರುತ್ತಿತ್ತು ನಾರಾಯಣ ಈತನು ನನಗೆ ನಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಟ್ಟನು. ನಂತರ ನನ್ನ ಮಗ ಮೋನಪ್ಪ ಈತನು 108 ಆಂಬುಲೆನ್ಸ್ಗೆ ಫೋನ್ ಮಾಡಿ ಕರೆಸಿದ್ದು ಅದರಲ್ಲಿ ಮಗ ಕಸ್ತೂರ್ಯಾ, ಮೋನಪ್ಪ, ಹೆಂಡತಿ ಸೋಮ್ಲಿಬಾಯಿ ಇವರೆಲ್ಲರು ನನಗೆ ಚಿಕಿತ್ಸೆ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ ಅಂತಾ ಲಿಖಿತ ದೂರು ಅಜರ್ಿ ಸಲ್ಲಿಸಿದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 249/2017 ಕಲಂ: 323, 324 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.