ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-07-2021
ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 08/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 02-07-2021 ರಂದು 0600 ಗಂಟೆಗೆ ಫಿರ್ಯಾದಿ ಚಂದ್ರಯ್ಯ ತಂದೆ ಗುರುಯ್ಯ ಸ್ವಾಮಿ ವಯ: 40 ವರ್ಷ, ಜಾತಿ: ಜಂಗಮ, ಸಾ: ಘೊಡಂಪಳ್ಳಿ ರವರು ಬಹಿರ್ದೆಸೆಗೆಂದು ತಮ್ಮೂರ ಶಿವಾರದ ಸಾಧುಘಾಟ ರಸ್ತೆಯ ಕಡೆಗೆ ಹೋದಾಗ ತಮ್ಮೂರಿನ ಇಬ್ರಾಹಿಂಸಾಬ ರವರ ಹೋಲದಲ್ಲಿನ ಬೇವಿನ ಗಿಡಕ್ಕೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ಹಗ್ಗದಿಂದ ನೇಣು ಹಾಕಿಕೊಂಡಿದ್ದು ಕಂಡು ಬಂದಿದ್ದು ಇರುತ್ತದೆ, ನತರ ಸದರಿ ವ್ಯಕ್ತಿಯ ಹತ್ತಿರ ಹೋಗಿ ನೊಡಲಾಗಿ ಸುಮಾರು 65 ವರ್ಷದ ಗಂಡು ಮನುಷ್ಯನಿದ್ದು ಮೈಮೇಲೆ ಬಿಳಿ ಕಮೀಸ ಮತ್ತು ಬೀಳಿ ಧೋತರ ಇದ್ದು, ಕಪ್ಪು ಬಣ್ಣ ಸಾಧಾರಣ ಮೈಕಟ್ಟುವುಳ್ಳವನಿದ್ದು, ಮೃತದೇಹ ಸಂಪೂರ್ಣವಾಗಿ ಕೋಳೆತು ಹೋಗಿದ್ದು ವಾಸನೆ ಬರುತ್ತಿತ್ತು, ಮೃತ್ತನ ಹೆಸರು ವಿಳಾಸ ಗೊತ್ತಿರುವುದಿಲ್ಲಾ, ಸದರಿ ಘಟನೆ ಸುಮಾರು 4 ದಿವಸಗಳ ಹಿಂದೆ ಆಗಿರಬಹುದು ಅಂತ ಕೊಟ್ಟ ಫಿರ್ಯದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 61/2021, ಕಲಂ. 379 ಐಪಿಸಿ :-
ದಿನಾಂಕ 26-02-2021 ರಂದು ಫಿರ್ಯಾದಿ ಈಶ್ವರಯ್ಯಾ ತಂದೆ ಚಂದ್ರಯ್ಯಾ ಸ್ವಾಮಿ ವಯ: 30 ವರ್ಷ, ಜಾತಿ: ವೀರಶೈವ ಲಿಂಗಾಯತ, ಸಾ: ಭದ್ರಾಪುರ, ತಾ: ಚಿಟಗುಪ್ಪಾ, ಜಿ: ಬೀದರ ರವರು ತನ್ನ ಫ್ಯಾಶನ ಪ್ರೋ ಮೋಟರ ಸೈಕಲ್ ನಂ. KA-39/H-0911, ಚಾಸಿಸ್ ನಂ. 04G09C48810, ಇಂಜಿನ್ ನಂ. 04G08M49509 ಹಾಗೂ ಅ.ಕಿ 10,000/- ರೂ. ನೇದರ ಮೇಲೆ ತಮ್ಮೂರಿನಿಂದ ಮನ್ನಾಏಖೇಳ್ಳಿಗೆ ಬಂದು ಸದರಿ ಮೋಟಾರ್ ಸೈಕಲನ್ನು ಮನ್ನಾಏಖೇಳ್ಳಿಯ ಬಸ್ ನಿಲ್ದಾಣದಲ್ಲಿನ ಬೇವಿನ ಮರದ ಕೆಳಗೆ ನಿಲ್ಲಿಸಿ 1000 ಗಂಟೆಯ ಸುಮಾರಿಗೆ ತನ್ನ ಖಾಸಗಿ ಕೆಲಸವಿದ್ದ ಪ್ರಯುಕ್ತ ಬಸ್ ಮುಖಾಂತರ ಬೀದರಗೆ ಹೋಗಿ ಬೀದರನಲ್ಲಿ ತನ್ನ ಕೆಲಸ ಮುಗಿಸಿಕೊಂಡು ಮರಳಿ ಮನ್ನಾಏಖೇಳ್ಳಿಗೆ ಬಸ್ ಮುಖಾಂತರ 1600 ಗಂಟೆಗೆ ಹೋಗಿ ಮನ್ನಾಏಖೇಳ್ಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ತನ್ನ ಮೋಟಾರ್ ಸೈಕಲ್ ನೋಡಲು ಅದು ಸದರಿ ಸ್ಥಳದಲ್ಲಿ ಇರಲಿಲ್ಲ, ನಂತರ ತನ್ನ ಮೋಟಾರ್ ಸೈಕಲನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲಾ, ಫಿರ್ಯಾದಿಯವರ ಸದರಿ ಮೋಟರ ಸೈಕಲನ್ನು ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. ಅಪರಾಧ ಸಂ. 75/2021, ಕಲಂ. 457, 380 ಐಪಿಸಿ :-
ದಿನಾಂಕ 01-07-2021 ರಂದು 2300 ಗಂಟೆಯಿಂದ ದಿನಾಂಕ 02-07-2021 ರಂದು 0200 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಪ್ರಭಾಕರ ತಂದೆ ಪುಟ್ಟರಾಜ ಖಜೂರೆ ವಯ: 24 ವರ್ಷ, ಜಾತಿ: ಎಸ್.ಸಿ, ಮಾದಿಗ, ಸಾ: ದುಬಲಗುಂಡಿ ರವರ ಬೇಡ್ ರೂಮಿನ್ ಕೀಲಿ ಮುರಿದು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆ ತೆಗೆದುಕೊಂಡು ಹೋಗಿ ಅದರ ಕೀಲಿ ಮುರಿದು ಅದರಲ್ಲಿದ್ದ 1) ಒಂದು ತೊಲೆ ಬಂಗಾರದ ಗುಂಡಿನ ಸರ ಅ.ಕಿ 48,000/- ರೂ., 2) 3 ಗ್ರಾಂ. ನ ಬಂಗಾರದ ಒಂದು ಜೊತೆ ಕಿವಿಯ ಬೆಂಡಲಿಗಳು ಅ.ಕಿ 14,400/- ರೂ., 3) 5 ಗ್ರಾಂ. ಬಂಗಾರದ ಜೀರಾಮಣಿ ಅ.ಕಿ 24,000/- ರೂ., ಹಾಗೂ ನಗದು ಹಣ 50,000/- ರೂ. ಹೀಗೆ ಒಟ್ಟು ಬಂಗಾರ ಹಾಗೂ ನಗದು ಹಣ ಎಲ್ಲವುಗಳ ಅ.ಕಿ 1,36,400/- ರೂ. ಬೆಲೆ ಬಾಳುವುದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 115/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 02-07-2021 ರಂದು ಬಸವೇಶ್ವರ ಚೌಕ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಮರ ಕುಲ್ಕರ್ಣಿ ಪಿಎಸ್ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಬಸವೇಶ್ವರ ಚೌಕ ಹತ್ತಿರ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಶೇಖ ರಿಯಾಜೋದ್ದೀನ ತಂದೆ ಅಬ್ದುಲ ಕರೀಮ್ ವಯ: 44 ವರ್ಷ, ಜಾತಿ: ಮುಸ್ಲಿಂ, ಸಾ: ಲಾಲತಲಾಬ ಬಸವಕಲ್ಯಾಣ ಹಾಗೂ 2) ಮುಬೀನ ಖಾನ ತಂದೆ ವಾಯದ ಖಾನ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಖಿಲಾ ಗಲ್ಲಿ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ 01/- ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಇಬ್ಬರಿಗೂ ಹಿಡಿದುಕೊಂಡು ಅವರಿಂದ 1) 8200/- ರೂ. ನಗದು ಹಣ, 2) 02 ಮಟಕಾ ಚೀಟಿಗಳು ಹಾಗೂ 3) 2 ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 33/2021, ಕಲಂ. 279, 337, 338 ಐಪಿಸಿ :-
ದಿನಾಂಕ 02-07-2021 ರಂದು ಫಿರ್ಯಾದಿ ದತ್ತಾ ತಂದೆ ತಾತೇರಾವ ಮೇತ್ರೆ: 19 ವರ್ಷ, ಜಾತಿ: ಕುರುಬ, ಸಾ: ಕೊಂಗಳಿ ರವರು ಮತ್ತು ಭರತ ತಂದೆ ನಾಗುರಾವ ಮೇತ್ರೆ ವಯ: 40 ವರ್ಷ, ಜಾತಿ: ಕುರುಬ, ಸಾ: ಕೊಂಗಳಿ ಇಬ್ಬರೂ ಕೂಡಿ ಖಾಸಗಿ ಕೆಲಸದ ನಿಮಿತ್ಯ ಭರತ ಈತನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ ಮೊಟಾರ ಸೈಕಲ ನಂ. ಎಮ್.ಹೆಚ್-02/ಇಎ-859 ನೇದರ ಮೇಲೆ ಮೇಹಕರಗೆ ಹೋಗಿ ಮರಳಿ ತಮ್ಮೂರಿಗೆ ಬರುವಾಗ ಸದರಿ ಭರತ ಈತನು ಮೇಹಕರ–ಕೊಂಗಳಿ ರೋಡ ಮೇಹಕರ ಬೀಜ ವಿತರಣ ಕೇಂದ್ರದ ಬಳಿ ಬಂದಾಗ ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರ ಸೈಕಲನ ನಿಯಂತ್ರಣ ತಪ್ಪಿ ಸೆಲ್ಪ ಸ್ಕೀಡ ಆಗಿ ಬಿದಿದ್ದು, ಇದರಿಂದ ಭರತ ಈತನಿಗೆ ಎಡಗಣ್ಣಿನ ಮೇಲೆ ರಕ್ತಗಾಯ ಮತ್ತು ತಲೆಯಲ್ಲಿ ಭಾರಿಗಾಯವಾಗಿ ಸ್ಥಳದಲ್ಲೆ ಪ್ರಜ್ಞೆ ತಪ್ಪಿ ಬಿದ್ದಿರುತ್ತಾನೆ, ಫಿರ್ಯಾದಿಗೆ ಅಲ್ಲಿಲ್ಲಿ ತರಚಿದ ಗಾಯಗಳು ಆಗಿದ್ದು, ನಂತರ ಫಿರ್ಯಾದಿಯು ರೋಡಿಗೆ ಹೋಗುತ್ತಿರುವ ಖಾಸಗಿ ವಾಹನ ಕೈಮಾಡಿ ನಿಲ್ಲಿಸಿ ಭರತ ಇತನಿಗೆ ಚಿಕಿತ್ಸೆ ಕುರಿತು ಹುಲಸೂರ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.