ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-01-2021
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. 279, 338 ಐಪಿಸಿ ಜೊತೆ ಐಎಂವಿ ಕಾಯ್ದೆ :-
ದಿನಾಂಕ 20-01-2021 ರಂದು ಫಿರ್ಯಾದಿ ತುಕಾರಾಮ ತಂದೆ ಮಲ್ಲಪ್ಪಾ ಭೋಸ್ಲೇ ವಯ: 40 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಕಾಪಲಾಪೂರ (ಜೆ), ತಾ: ಜಿ: ಬೀದರ, ಸದ್ಯ: ಮೀರಾಗಂಜ್ ಬೀದರ ರವರ ಹೆಂಡತಿ ಶರಣಮ್ಮಾ ರವರು ಬಾಲಿ ಆಸ್ಪತ್ರೇಗೆ ಕನ್ನಡಾಂಬೆ ವೃತ್ತದ ಕಡೆಯಿಂದ ನಡೆದುಕೊಂಡು ಬರುತ್ತಿರುವಾಗ ರಂಗ ಮಂದಿರದ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಕನ್ನಡಾಂಬೆ ವೃತ್ತದ ಕಡೆಯಿಂದ ಕಾರ ನಂ. ಎಮ್.ಹೆಚ್-02/ಸಿಬಿ-9216 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶರಣಮ್ಮಾ ಇವರಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಶರಣಮ್ಮಾ ರವರ ತಲೆಯ ಎಡಭಾಗದಲ್ಲಿ ರಕ್ತಗಾಯ, ಎಡಗಾಲ ಮೊಳಕಾಲ ಕೆಳಗೆ ರಕ್ತಗಾಯ, ಎಡಕಿವಿಯಿಂದ, ಮೂಗಿನಿಂದ ರಕ್ತ ಸೋರಿದ್ದು, ಎಡಗೈ ಮೊಳಕೈ ಹತ್ತಿರ ಭಾರಿ ಗುಪ್ತಗಾಯವಾಗಿದ್ದರಿಂ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೇಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಪ್ರಕರಣ ದಾಖಲಿಸಿ ಇರುತ್ತದೆ ಅಂತ ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ ಠಾಣೆ, ಬೀದರ ಅಪರಾಧ ಸಂ. 10/2021, ಕಲಂ. 392 ಐಪಿಸಿ :-
ದಿನಾಂಕ 07-01-2021 ರಂದು 2130 ಗಂಟೆಗೆ ಫಿರ್ಯಾದಿ ಸುಮಿತ ತಂದೆ ಅನೀಲಕುಮಾರ ಪಾಟೀಲ ವಯ: 26 ವರ್ಷ, ಜಾತಿ: ಹಟಕರ, ಸಾ: ರಾಣಿ ಕಿತ್ತುರ ಚನ್ನಮ್ಮಾ ಶಾಲೆ ಹಿಂದುಗಡೆ ವಿದ್ಯಾನಗರ ಕಾಲೋನಿ ಬೀದರ ರವರು ತಮ್ಮ ಮನೆಯ ಹತ್ತಿರದ ರಾಣಿ ಕಿತ್ತುರ ಚನ್ನಮ್ಮಾ ಶಾಲೆಯ ಮುಂದೆ ರಸ್ತೆಯ ಮೇಲೆ ಮೋಬೈಲನಲ್ಲಿ ಮಾತನಾಡುತ್ತಿರುವಾಗ ಇಬ್ಬರು ಯಾರೋ ಅಪರಿಚಿತರು ಹೊಂಡಾ ಎಕ್ಟಿವಾ ವಾಹನದ ಮೇಲೆ ಫಿರ್ಯಾದಿಯ ಹಿಂದಿನಿಂದ ಬಂದು ವಾಹನದ ಹಿಂಬದಿಯಲ್ಲಿ ಕುಳಿತ ವ್ಯಕ್ತಿ ಫಿರ್ಯಾದಿಯ ಮೊಬೈಲನ್ನು ಕಸಿದುಕೊಂಡು ವಾಹನದ ಮೇಲೆ ಓಡಿ ಹೋಗಿರುತ್ತಾರೆ, ದೋಚಿಕೊಂಡು ಹೋದ ಮೋಬೈಲ ಒನಪ್ಲಸ 8 ಇದ್ದು ಅದರ ಐಎಂಇಐ ನಂ. 1) 864721055991117 2) 864721055991109 ಹಾಗು ಅ.ಕಿ 46,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.