Police Bhavan Kalaburagi

Police Bhavan Kalaburagi

Saturday, November 7, 2020

BIDAR DISTRICT DAILY CRIME UPDATE 07-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-11-2020

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 99/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 06-11-2020 ರಂದು ರಜೊಳಗಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸರಜೋಳಗಾ ಗ್ರಾಮಕ್ಕೆ ಹೋಗಿ ಗ್ರಾಮದ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ. 1) ಮಿಲಿಂದ ತಂದೆ ಶರಣಪ್ಪಾ ಲಾಕೆ ವಯ: 36 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಸರಜೋಳಗಾ ಗ್ರಾಮ ಇತನು ಜೂಜಾಟದ ನಂಬರ ಬರೆಯಿಸಿ 01 ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಮಿಲಿಂದ ಇತನ ಮೇಲೆ ದಾಳಿ ಮಾಡಿ ಹಿಡಿದುಕೊಂಡಾಗ ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಮಿಲಿಂದ ಇತನಿಗೆ ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಹಣವನ್ನು ಆರೋಪಿ ನಂ. 2) ಸೋಮಣ್ಣಾ ತಂದೆ ದೇವಿಂದ್ರ ಕಲೋಜಿ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಕೋಹಿನೂರ ಇತನಿಗೆ ಕೋಡುತ್ತೇನೆ ಅವನು ನನಗೆ ಕಮಿಷನ್ ಹಣ ನೀಡುತ್ತಾನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 940/- ರೂಪಾಯಿ., 2) ಒಂದು ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 73/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 06-11-2020 ರಂದು ಮುಡಬಿ ಗ್ರಾಮದ ವೆಂಕಟ ಧಾಬಾ ಕಡೆಗೆ ಹೋಗುವ ದಾರಿಯ ಕಲಬುರಗಿ ರೋಡಿಗೆ ಹತ್ತಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಮಟಕಾ ಎಂಬ ನಸೀಬಿನ ಜೂಜಾಟದ ನಂಬರಗಳು ಬರೆದುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತ ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಧಾಬಾದಿಂದ ಸ್ವಲ್ಪ ದೂರದಲ್ಲಿ ರೋಡಿನ ಬದಿಗಿರುವ ಗಿಡದ ಮರೆಯಾಗಿ ನಿಂತು ನೋಡಲು ಕಲಬುರಗಿ ರೋಡಿಗೆ ಹತ್ತಿಕೊಂಡಿರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ. 1) ಪ್ರಶಾಂತ ತಂದೆ ಭೋಜಪ್ಪಾ ಬಿರಾದರ ವಯ: 33 ವರ್ಷ, ಜಾತಿ: ಲಿಂಗಾಯತ, ಸಾ: ಚಿಕನಾಗಾಂವ ಇತನು ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ 01 ರೂಪಯಿಗೆ 90/- ರೂಪಾಯಿ ಪಡೆಯಿರಿ ಅಂತ ಕೂಗಾಡುತ್ತಿದ್ದು ಇನ್ನೊಬ್ಬ ಆರೋಪಿ ನಂ. 2) ವಿನೋದ ತಂದೆ ತಿಪ್ಪಣ್ಣ ಸುತಾರ ಸಾ: ಮುಡಬಿ ಇತನು ಕೆಳಗೆ ಕುಳಿತುಕೊಂಡು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದುಕೊಳ್ಳುತ್ತಿರುವದನ್ನು ಕಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿ ವಿನೋದ ಇತನು ಹಾಗೂ ಮಟಕಾ ಆಡಲು ಬಂದ ಜನ ಅವರು ಹೊಲದಲ್ಲಿ ಓಡಿ ಹೋಗಿರುತ್ತಾರೆ, ನಂತರ ಆರೋಪಿ ಪ್ರಶಾಂತ ಇತನಿಗೆ ಹಿಡಿದು ಕೇಳಿದಾಗ ನಾನು ಮತ್ತು ವಿನೋದ ಇಬ್ಬರು ಕೂಡಿಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವದು ಮಾಡಿ ಇದರಿಂದ ಬಂದ ಹಣವನ್ನು ಇಬ್ಬರು ಕೂಡಿಕೊಂಡು ಹಂಚಿಕೊಳ್ಳುತ್ತೇವೆ ಅಂತಾ ತಿಳಿಸಿದನು, ನಂತರ ಪಂಚರ ಸಮಕ್ಷಮ ಪ್ರಶಾಂತ ಇತನ ಅಂಗ ಜಡ್ತಿ ಮಾಡಲು ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 2970/- ರೂಪಾಯಿ ನಗದು ಹಣ ಮತ್ತು ಒಂದು ಬಾಲ್ ಪೆನ್ನು ಹಾಗೂ ಎರಡು ಚೀಟಿಗಳು ಅದರ ಮೇಲೆ ಮಟಕಾ ನಂಬರ ಬರೆದದ್ದು ಕಂಡು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 154/2020, ಕಲಂ. 279, 338 ಐಪಿಸಿ :-

ದಿನಾಂಕ 06-11-2020 ರಂದು ಫಿರ್ಯಾದಿ ಬಸವರಾಜ ತಂದೆ ವೈಜಿನಾಥ ಸದಲಾಪೂರೆ, ವಯ: 35 ವರ್ಷ, ಜಾತಿ: ಕಬ್ಬಲಿಗ, ಸಾ: ಹಳ್ಳಿಖೇಡ (ಕೆ) ವಾಡಿ ರವರ ಚಿಕ್ಕಪ್ಪನಾದ ಪ್ರಕಾಶ ತಂದೆ ಘಾಳೆಪ್ಪಾ ಸದಲಾಪೂರೆ ವಯ: 42 ವರ್ಷ ರವರು ಕೂಲಿ ಕೆಲಸದಿಂದ ಮರಳಿ ಮ್ಮೂರಿಗೆ ಬರಲು  ಕಂಕರ ಮಶೀನ ಕಡೆಯಿಂದ ಮುಸ್ತಾಪೂರ ಕಡೆಗೆ ನಡೆದುಕೊಂಡು ಬರುವಾಗ ರಾ.ಹೆ ನಂ. 50 ಕಲಬುರ್ಗಿ-ಹುಮನಾಬಾದ ರೋಡಿನ ಮೇಲೆ  ಸುಭಾಷ ಅಷ್ಠೂರಕರ್ ರವರ ಹೊಲದ ಹತ್ತಿರ ಎದುರಿನಿಂದ  ಬಂದ ಮೋಟಾರ ಸೈಕಲ್ ನಂ. ಕೆಎ-32/ಇ.ಡಿ-4446 ನೇದರ ಚಾಲಕನಾದ ಆರೋಪಿ ನಾಗೇಶ ತಂದೆ ಪ್ರಹ್ಲಾದ ಅಜಮನಿ ವಯ: 23 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚಿಕ್ಕಮಣೂರ, ತಾ: ಇಂಡಿ, ಜಿ: ಬಿಜಾಪೂರ, ಸದ್ಯ: ಗುಬ್ಬಿ ಕಾಲೋನಿ ಕಲಬುರ್ಗಿ ಇತನು ತನ್ನ ಮೋಟಾರ   ಸೈಕಲನ್ನು ಅತೀವೇಗ ಹಾಗು ನಿಷ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ಚಿಕ್ಕಪ್ಪ ಪ್ರಕಾಶ ರವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು ಅವನು ಸಹ ಬಿದ್ದಿರುತ್ತಾನೆ, ಸದರಿ ಅಪಘಾತದಿಂದ ಚಿಕ್ಕಪ್ಪರವರಿಗೆ ಎಡಗಡೆ ತಲೆಗೆ ಭಾರಿ ರಕ್ತಗಾಯ ಹಾಗೂ  ಕಿವಿಯಿಂದ ಮತ್ತು ಬಾಯಿಯಿಂದ ರಕ್ತ ಬಂದಿದ್ದು ಮತ್ತು ಕೈ ಹಾಗು ಮೊಳಕಾಲಿಗೆ ತರಚಿದ ಗಾಯವಾಗಿರುತ್ತವೆ, ಅಪಘಾತ ಪಡಿಸಿದ ನಾಗೇಶನಿಗೆ ಬಲ ಮೊಳಕಾಲಿಗೆ ಹಾಗು ಎಡ ಮುಂಗೈಗೆ, ಕಣ್ಣಿನ ಹುಬ್ಬಿನ ಮೇಲೆ ತರಚಿದ ಗಾಯಗಳಾಗಿರುತ್ತವೆ, ಮೋಟಾರ ಸೈಕಾಲ ಹಿಂಬದಿಯ ಸವಾರನಾದ ಪ್ರಸಾದ ತಂದೆ ಶರಣಪ್ಪಾ ಬೊಜ್ಜಾ ರವರಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು ಅವನು ಮೋಟಾರ ಸೈಕಲ್ ತೆಗೆದುಕೊಂಡು ಹೋಗಿರುತ್ತಾನೆ, ಅಪಘಾತವನ್ನು ನೋಡಿದ ಮ್ಮೂರ ಪರಶುರಾಮ ತಂದೆ ಭಿಮಣ್ಣಾ ಸದಲಾಪೂರೆ ರವರು ಚಿಕ್ಕಪ್ಪ ಪ್ರಕಾಶ ರವರಿಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.