Police Bhavan Kalaburagi

Police Bhavan Kalaburagi

Tuesday, June 22, 2021

BIDAR DISTRICT DAILY CRIME UPDATE 22-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-06-2021

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 08/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸಿದ್ರಾಮೇಶ ತಂದೆ ಮಲ್ಲಯ್ಯಾ ಸ್ವಾಮಿ ಬೇಲೂರೆ ವಯ: 26 ವರ್ಷ, ಜಾತಿ: ಸ್ವಾಮಿ, ಸಾ: ಹೋಳಕುಂದಾ, ತಾ: ಕಮಲಾಪುರ, ಸದ್ಯ: ಗುಡದಪ್ಪಾ ಕಾಲೋನಿ ಬಸವಕಲ್ಯಾಣ ರವರ ತಂದೆಯಾದ ಮಲ್ಲಯ್ಯಾ ತಂದೆ ಗುರಯ್ಯಾ ಸ್ವಾಮಿ ಬೇಲೂರೆ ವಯ: 48 ವರ್ಷ ರವರು ದಿನಾಂಕ 21-06-2021 ರಂದು 1645 ಗಂಟೆಗೆ ವಾಕಿಂಗ್ಗೆ ಹೋಗಿ ಒಂದು ಬೇವಿನ ಮರ ಹತ್ತಲು ಹೋಗಿ ಆಕಸ್ಮಿಕ ಕಾಲು ಜಾರಿ ನೇಲದ ಮೇಲೆ ಬಿದ್ದಿದರಿಂದ ತಲೆಗೆ ಭಾರಿ ಗುಪ್ತ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 37/2021, ಕಲಂ. 279, 337, 304() ಐಪಿಸಿ :-

ದಿನಾಂಕ 20-06-2021 ರಂದು ಫಿರ್ಯಾದಿ ಮಕ್ಸೂದ ಶಹಾ ತಂದೆ ಮಹೆಬೂಬಪಾಶಾ ಸಾ: ಐನಾಪೂರ ರವರು ಹೊಚಕನಳ್ಳಿಯಲ್ಲಿ ಸಂಬಂಧಿಕರ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಸೈಯದ ಅಯುಬ ಶಹಾ ತಂದೆ ಸೈಯದ ಬಾಬಾ ಶಹಾ, ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ನಂದಗಾಂವ, ಸದ್ಯ: ತಲಾಪ ಕಟ್ಟಾ ಹೈದ್ರಾಬಾದ ರವರ ಜೊತೆಯಲ್ಲಿ ಇಬ್ಬರು ಮೋಟಾರ ಸೈಕಲ ನಂ. ಕೆಎ-48/ಜೆ-6262 ನೇದರ ಮೇಲೆ ಸಿರಕಟನಳ್ಳಿಯಿಂದ ಹೊಚಕನಳ್ಳಿಗೆ ಹೋಗುತ್ತಿರುವಾಗ ರಂಜೋಳ ಖೇಣಿ ಗ್ರಾಮ್ ಹತ್ತಿರ ಹೊಚಕನಳ್ಳಿ ಕ್ರಾಸ ಹತ್ತಿರ ಬಂದಾಗ ಸದರಿ ವಾಹನ ಚಾಲಾಯಿಸುತ್ತಿರುವ ಸೈಯದ ಅಯುಬ ಶಹಾ ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಮೋಟಾರ ಸೈಕಲನ್ನು ಸ್ಕೀಡ್ ಮಾಡಿದ್ದರಿಂದ ಇಬ್ಬರು ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಿದ್ದು, ಪರಿಣಾಮ ಸೈಯದ ಅಯುಬ ಶಹಾ ಇವನಿಗೆ ತಲೆಯಲ್ಲಿ ಭಾರಿ ರಕ್ತಗಾಯವಾಗಿ ಮೂಗಿನಿಂದ ಬಾಯಿಯಿಂದ, ಕಿವಿಯಿಂದ ರಕ್ತ ಬಂದಿರುತ್ತದೆ, ಬಲಗಾಲ ಪಾದದ ಹತ್ತಿರ ತರಚಿದ ರಕ್ತಗಾಯ, ಬಲಗೈ ಮುಂಗೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ ಮತ್ತು ಫಿರ್ಯಾದಿಗೆ ಎಡಗಣ್ಣಿನ ಕೆಳಗೆ ರಕ್ತಗಾಯ, ಹೊಟ್ಟೆಯಲ್ಲಿ ಗುಪ್ತಗಾಯ, ಬಲ ಮೊಣಕಾಲ ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೇ ಹೊಗುತ್ತಿದ್ದ ಸೈಯದ ಅಸ್ಲಂ ತಂದೆ ಅನ್ವರಸಾಬ, ವಯ: 22 ವರ್ಷ ಮತ್ತು ರಾಹುಲ ತಂದೆ ವಿಠಲ ಗಂಗೆ, ವಯ: 25 ವರ್ಷ ಇಬ್ಬರು ಸಾ: ಸಿರಕಟನಳ್ಳಿ ಇವರಿಬ್ಬರು ಫಿರ್ಯಾದಿಯವರಿಗೆ ನೋಡಿ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತಾರೆ, ಆದರೆ ಸೈಯದ ಅಯುಬ ಶಹಾ ಇವನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 50/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 21-06-2021 ರಂದು ಫಿರ್ಯಾದಿ ಸೂರ್ಯಕಾಂತ ತಂದೆ ಗಣಪತಿ ಲಾಕೆ, ವಯ: 40 ವರ್ಷ, ಜಾತಿ: ಎಸ್.ಸಿ(ಹೊಲಿಯಾ), ಸಾ: ತ್ರಿಪುರಾಂತ ಬಸವಕಲ್ಯಾಣ ರವರ ತಂದೆ ಗಣಪತಿ ವಯ: 66 ವರ್ಷ ಮನೆಯಿಂದ ಖಾಸಗಿ ಕೆಲಸ ಕುರಿತು ಬಸವಕಲ್ಯಾಣ ನಗರದಲ್ಲಿ ಹೋಗುವಾಗ ತ್ರಿಪುರಾಂತ ಕಡೆಯಿಂದ ಮೋಟರ ಸೈಕಲ್ ನಂ. ಕೆಎ-56/ಇ-1018 ನೇದರ ಚಾಲಕನಾದ ಆರೋಪಿಯು ತನ್ನ ಮೋಟರ ಸೈಕಲನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಯವರ ತಂದೆಗೆ ಡಿಕ್ಕಿ ಮಾಡಿದನು, ಸದರಿ ಅಪಘಾತದಿಂದ ಅವರ ಎಡಗೈಗೆ ಭಾರಿ ಗುಪ್ತಗಾಯ & ರಕ್ತಗಾಯ ಹಾಗೂ ಬಲಗಾಲ ಮೊಳಕಾಲಿನ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ ಹಾಗೂ ಆರೋಪಿಯು ತನ್ನ ವಾಹನದ ಸಮೇತ ಓಡಿ ಹೋಗಿರುತ್ತಾನೆ, ನಂತರ ಗಾಯಗೊಂಡ ತಂದೆಗೆ ಆಟೋದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 61/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 21-06-2021 ರಂದು ಮಂಠಾಳ ಗ್ರಾಮದ ಭವಾನಿ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೇಲವು ಜನ ಕಾನೂನು ಬಾಹಿರವಾಗಿ ಅಂದರ ಬಾಹರ ಎಂಬ ಸ್ಪಿಟ್ ಎಲೆಗಳ ನಶೀಬಿನ ಜೂಜಾಟಕ್ಕೆ ಹಣ ಹಚ್ಚಿ ಪಣ ತೊಟ್ಟು ಆಟವಾಡುತಿ್ತದ್ದಾರೆಂದು ಕು: ಜೈಶ್ರೀ ಪಿಎಸ್ಐ ಮಂಠಾಳ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮಂಠಾಳ ಗ್ರಾಮದ ಗುಂಡೂರ ಕ್ರಾಸ್ ಹತ್ತಿರಅಂಬಾಭವಾನಿ ದೆವಾಲಯದ ಕಡೆಗೆ ಹೋಗಿ ಮನೆಗಳÀ ಮರಿಯಾಗಿ ನಿಂತು ನೋಡಲು ಬಾತ್ಮಿಯಂತೆ ಆರೋಪಿತರಾದ 1) ಶಿವಕುಮಾರ ತಂದೆ ಶರಣಪ್ಪಾ ಬಿರಾದಾರ ವಯ: 30 ವರ್ಷ, ಜಾತಿ: ಎಸ್.ಟಿ ಗೊಂಡ, 2) ಕಿರಣ ತಂದೆ ಹಣಮಂತ ಮಾನಗೋಪಾಳೆ ವಯ: 24 ವರ್ಷ, ಜಾತಿ: ಎಸ್.ಟಿ ಗೊಂಡ, 3) ಭೀಮಾ ತಂದೆ ಸೈಬಣ್ಣಾ ಫೂಲೆ ವಯ: 55 ವರ್ಷ, ಜಾತಿ: ಕಬ್ಬಲಿಗ, 4) ಮಚಿಂದರ ತಂದೆ ಝರಣಪ್ಪಾ ಮಲಶೆಟ್ಟಿ ವಯ: 19 ವರ್ಷ, ಜಾತಿ: ಪಾರ ಹಾಗೂ 5) ಖಂಡಪ್ಪಾ ತಂದೆ ತಿಪ್ಪಣ್ಣಾ ಮೂಳೆ ವಯ: 35 ವರ್ಷ, ಜಾತಿ: ಕೋಳಿ, 5 ಜನ ಸಾ: ಖಡಕವಾಡಿ ಮಂಠಾಳ ಮತ್ತು 6) ನರಸಿಂಗ ತಂದೆ ಈರಣ್ಣಾ ಹಡಪದ ವಯ: 22 ವರ್ಷ, ಜಾತಿ: ಹಡಪದ, ಸಾ: ಇಂದಿರಾ ಕಾಲೋನಿ ಮಂಠಾಳ 560/- ಇವರೆಲ್ಲರೂ ಮಂಠಾಳ ಗ್ರಾಮದ ಅಂಬಾಭವಾನಿ ಮಂದಿರದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಗೋಲಾಕಾರವಾಗಿ ಕುಳಿತು ಸ್ಪಿಟ್ ಎಲೆಗಳ ಅಂದರ ಬಾಹರ ನಶೀಬಿನ ಜೂಜಾಟವನ್ನು ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ನೋಡಿ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 720/- ರೂ., ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.