Police Bhavan Kalaburagi

Police Bhavan Kalaburagi

Saturday, July 24, 2021

BIDAR DISTRICT DAILY CRIME UPDATE 24-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-07-2021

 

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 33/2021, ಕಲಂ. 302 ಐಪಿಸಿ :-

ಫಿರ್ಯಾದಿ ಮೀನಾ ಗಂಡ ಪ್ರಲ್ಹಾದ ಜಾಧವ ವಯ: 30 ವರ್ಷ, ಜಾತಿ: ಲಮಾಣಿ, ಸಾ: ಹಂದಿಕೇರಾ ತಾಂಡಾ ರವರ ಗಂಡ ಆಟೋ ನಂ. ಕೆಎ-38/8645 ನೇದನ್ನು 6 ತಿಂಗಳ ಹಿಂದೆ ಖರೀದಿಸಿ ಚಲಾಯಿಸುತ್ತಿದ್ದರು, ಹೀಗಿರುವಲ್ಲಿ ದಿನಾಂಕ 22-07-2021 ರಂದು ಗಂಡ ಆಟೋ ತೆಗೆದುಕೊಂಡು ಹಂದಿಕೇರಾ ಗ್ರಾಮಕ್ಕೆ ಹೋಗಿ ಮರಳಿ ಆಟೋ ಚಲಾಯಿಸಿಕೊಂಡು ಬಂದು ತಿಳಿಸಿದ್ದೆನೆಂದರೆ ಹಂದಿಕೇರಾ ಗ್ರಾಮದ ಅಣ್ಣಭಾವ ಸಾಠೆ ಚೌಕ ಹತ್ತಿರ ಆಟೋ ನಿಲ್ಲಿಸಿದಾಗ ಹಂದಿಕೇರಾ ಗ್ರಾಮದ ಆಟೋ ಚಾಲಕನಾದ ವಿಕಾಶ ತಂದೆ ಮಧುಕರ ಭೊಸ್ಲೆ ಈತನು ಬಂದು ನನ್ನ ಆಟೋ ಟೈರಿನ ಗಾಳಿ ಬಿಟ್ಟಾಗ ಏಕೆ ಗಾಳಿ ಬಿಟ್ಟಿರುತ್ತಿ ಅಂತ ಕೇಳಿದಾಗ ನನಗೆ ಕೈಯಿಂದ ಎದೆಯಲ್ಲಿ ಬೆನ್ನಲ್ಲಿ ಹೊಡೆದಿರುತ್ತಾನೆ ಅಂತ ಹೇಳಿ ನೀರು ಕುಡಿಯಲು ಕೇಳಿದಾಗ ನೀರು ಕೊಟ್ಟಿದ್ದು ನೀರು ಕುಡಿದ ನಂತರ ಮೈಯಲ್ಲಿ ಬೆವರು ಬಂದು ವಾಂತಿ ಮಾಡಿಕೊಂಡಿರುತ್ತಾರೆ, ಆಗ ಫಿರ್ಯಾದಿಯು ಚೀರಿ ನ್ನ ತಾಯಿ, ತಮ್ಮ ಹಾಗೂ ತಾಂಡಾದ ಸುರೇಶ ಇತನಿಗೆ ಕರೆಯಿಸಿ ಆಟೋದಲ್ಲಿ ಹಾಕಿ ಮುರ್ಕಿ ದವಖಾನೆಗೆ ತೋರಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಉದಗೀರಗೆ ಬಂದು ಆಟೋದಲ್ಲಿ ಹಾಕಿಕೊಂಡು ಉದಗೀರ ಚೋಲೆ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಗಂಡ ಮೃತಪಟ್ಟಿರುತ್ತಾರೆ, ಕಾರಣ ಫಿರ್ಯಾದಿಯವರ ಗಂಡ ಪ್ರಲ್ಹಾದ ಇವರಿಗೆ ಹಂದಿಕೇರಾ ಗ್ರಾಮದ ವಿಕಾಶ ತಂದೆ ಮಧುಕರ ಬೋಸ್ಲೆ ಇವನು ಎದೆಯಲ್ಲಿ ಹೊಡೆದಿರುವ ಪ್ರಯುಕ್ತ ಗಂಡ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ ಠಾಣೆ ಅಪರಾಧ ಸಂ.47/2021, ಕಲಂ. 279, 337, 304 () ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 23-07-2021 ರಂದು ಫಿರ್ಯಾದಿ ಅರವಿಂದ ತಂದೆ ಗುರಲಿಂಗಪ್ಪ ಹುಂಪಳೆ ವಯ: 43 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನೂರಾ(ಆರ್) ರವರ ಮಗಳು ಭಾಗ್ಯಶ್ರಿ ವಯ: 19 ವರ್ಷ ಇವಳಿಗೆ ಆರಾಮ ಇಲ್ಲದ ಕಾರಣ ಅವಳಿಗೆ ಆಸ್ಪತ್ರೆಗೆ ತೋರಿಸಲು ಅವಳಿಗೆ ಕರೆದುಕೊಂಡು ಹಳ್ಳಿಖೇಡ(ಕೆ) ಗ್ರಾಮಕ್ಕೆ ಹೋಗಿ ಮಗಳಿಗೆ ಆಸ್ಪತ್ರೆಗೆ ತೋರಿಸಿ ಮರಳಿ ತಮ್ಮೂರಿಗೆ ಬರಲು ತಮ್ಮೂರ ಕೈಲಾಸ ತಂದೆ ಜಗಪ್ಪ ದಿನಸಿ ಈತನ ಅಪ್ಪಿ ಆಟೋ ನಂ. ಕೆಎ- 32/ಸಿ-5177 ನೇದರಲ್ಲಿ ಕುಳಿತಾಗ ಅದೇ ಅಪ್ಪಿ ಆಟೋದಲ್ಲಿ ತಮ್ಮೂರ ಮಲ್ಲಮ್ಮ ಗಂಡ ಮಲ್ಲಣ್ಣ ಕುಂಬಾರ ವಯ: 48 ವರ್ಷ ಇವರು ಊರಿಗೆ ಬರುತ್ತಿದ್ದರು, ಎಲ್ಲರೂ ಕುಳಿತಾಗ ಅಪ್ಪಿ ಆಟೋ ಚಾಲಕನಾದ ಆರೋಪಿ ಕೈಲಾಸ ತಂದೆ ಜಗಪ್ಪ ದಿನಸಿ ವಯ: 38 ವರ್ಷ, ಜಾತಿ: ಹೊಲೆಯ, ಸಾ: ಧನ್ನೂರ(ಆರ್) ಇತನು ಆಟೋ ಚಲಾಯಿಸಿಕೊಂಡು ತಮ್ಮೂರಿಗೆ ಬರುತ್ತಿರುವಾಗ ಅಪ್ಪಿ ಆಟೋವನ್ನು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿ ತಮ್ಮೂರ ಶಾಲೆಯ ಹತ್ತಿರ ಹೋದಾಗ ಕೈಲಾಸ ಇತನು ತನ್ನ ಆಟೋವನ್ನು ಅತಿವೇಗದಿಂದ ಚಲಾಯಿಸಿ ನಿಯಂತ್ರಣ ಮಾಡದೇ ಪಲ್ಟಿ ಮಾಡಿರುತ್ತಾನೆ, ಸದರಿ ಪಲ್ಟಿಯಿಂದ ಫಿರ್ಯಾದಿಯ ಬಲಗಾಲು ತೊಡೆಗೆ ಗುಪ್ತಗಾಯವಾಗಿರುತ್ತದೆ, ಮಗಳಿಗೆ ನೋಡಲು ಯಾವುದೇ ಗಾಯಗಳಾಗಿರುವದಿಲ್ಲ, ಮಲ್ಲಮ್ಮ ಇವರಿಗೆ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯವಗಿ ಮಾತನಾಡುತ್ತಿರಲಿಲ್ಲ, ಆರೋಪಿಗೆ ಯಾವುದೇ ಗಾಯಗಳಾದಂತೆ ಕಂಡು ಬಂದಿರುವದಿಲ್ಲ, ನಂತರ ದಾರಿ ಹೋಕರು ಜಮಾಯಿಸಿ ಉರುಳಿದ ಆಟೋ ಎತ್ತಿದಾಗ ಆಟೋ ಚಾಲಕ ತನ್ನ ಆಟೋ ಸಮೇತ ಅಲ್ಲಿಂದ ಓಡಿ ಹೋಗಿರುತ್ತಾನೆ, ನಂತರ ದಾರಿ ಹೋಕರು ಗಾಯಾಳು ಮಲ್ಲಮ್ಮ ಇವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹಳ್ಳಿಖೇಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಮಲ್ಲಮ್ಮ ಇವರು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 28/2021, ಕಲಂ. 379 ಐಪಿಸಿ :-

ದಿನಾಂಕ 30-05-2021 ರಂದು ಫಿರ್ಯಾದಿ ಸಂಜು @ ಸಂಜೀವ ತಂದೆ ಪುಂಡಲೀಕ ರೇಕುಳಗಿ ವಯ: 42 ವರ್ಷ, ಜಾತಿ: ಕಬ್ಬಲಿಗ, ಸಾ: ರಾಜಗೀರಾ, ತಾ: & ಜಿ: ಬೀದರ ರವರು ತನ್ನ ಹಿರೋ ಫ್ಯಾಶನ ಪ್ರೋ ಮೋಟರ ಸೈಕಲ ನಂ. ಕೆ.-38/ಕ್ಯೂ-4073 ನೇದರ ಮೇಲೆ ತಮ್ಮೂರ ಶಿವಾರದಲ್ಲಿದ್ದ ಕರಕನಳ್ಳಿ ಗ್ರಾಮದ ಬಸರೆಡ್ಡಿ ರವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಬಸರೆಡ್ಡಿ ರವರ ಹೊಲದಲ್ಲಿ ಭಂಗೂರ-ಮನ್ನಳ್ಳಿ ರೋಡಿನ ಕಡೆಗೆ ಇರುವ ಹೊಲದ ಬಂದರಿ ಸಮೀಪ ತನ್ನ ಮೋಟಾರ ಸೈಕಲ ನಿಲ್ಲಿಸಿ ಹೊಲದಲ್ಲಿ ಕಳಕಿಯನ್ನು ಟ್ರಾಕ್ಟರದಲ್ಲಿ ತುಂಬಿ ನಂತರ ಮನೆಗೆ ಹೋಗಲು ಅಂತ ತನ್ನ ಮೋಟರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲು ತನ್ನ ಮೋಟಾರ ಸೈಕಲ ಸದರಿ ಸ್ಥಳದಲ್ಲಿ ಇರಲಿಲ್ಲ, ನಂತರ ಫಿರ್ಯಾದಿಯು ಸಂತೊಷ, ಸಾ: ರಾಜಗಿರಾ, ಶಿವರೆಡ್ಡಿ, ಈಶಪ್ಪಾ ಸಾ: ಕರಕನಳ್ಳಿ ರವರು ಕೂಡಿ ಹೊಲದ ಸುತ್ತ ಮುತ್ತ ಹಾಗೂ ರೋಡಿನ ಕಡೆಗೆ ಹುಡುಕಾಡಿದ್ದು ಎಲ್ಲಿಯು ಮೋಟಾರ ಸೈಕಲ ಸಿಕ್ಕಿರುವುದಿಲ್ಲ, ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಮೋಟಾರ ಸೈಕಲ .ಕಿ 14,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 44/2021, ಕಲಂ. 457, 380 ಐಪಿಸಿ :-

ದಿನಾಂಕ 17-07-2021 ರಂದು 1400 ಗಂಟೆಯಿಂದ 19-07-2021 ರಂದು 1100 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಮಂದಕನಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿನ ಕಂಪ್ಯೂಟರ್ ಕೋಣೆಯ ಬಾಗಿಲು ಮುರಿದು ಕೋಣೆಯಲ್ಲಿನ 1) ಯುನಿವರ್ಸಲ್ ಕಂಪನಿಯ ಬ್ಯಾಟರಿ ಅ.ಕಿ 9150/-  ರೂ., 2) ಮೈಕ್ರೋಟೇಕ್ ಕಂಪನಿಯ ಇನವರ್ಟರ್ ಅ.ಕಿ 7990/- ರೂ., 3) ಕೀ ಬೋರ್ಡ ಅ.ಕಿ 1099/- ರೂ. ಹೀಗೆ ಒಟ್ಟು 18,239/- ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಯಾದೂಲ್ಲಾ ತಂದೆ ಉಸ್ಮಾನಸಾಬ, ವಯ: 56 ವರ್ಷ, ಜಾತಿ: ಮುಸ್ಲಿಂ, : ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢ ಶಾಲೆ ಮಂದಕನಳ್ಳಿ, ಸಾ: ಹಕ್ ಕಾಲೋನಿ ಚಿದ್ರಿ ರಸ್ತೆ ಬೀದರ ರವರು ನೀಡಿದ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 23-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 68/2021, ಕಲಂ. 379 ಐಪಿಸಿ :-

ಫಿರ್ಯಾದಿ ಸಂಜುಕುಮಾರ ತಂದೆ ಬಾಬುರಾವ ಉಪ್ಪಾರ ಸಾ: ಮೀನಕೆರಾ ಗ್ರಾಮ ರವರು ತನ್ನ ಮನೆಯ ಹೊರಗೆ ನಿಲ್ಲಿಸಿರುವ ತನ್ನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. KA-39/R-0039, ಚಾಸಿಸ್ ನಂ. MBLHAR085HHL18770, ಇಂಜಿನ್ ನಂ. HA10AGHHLB4240 ಹಾಗೂ ಅ.ಕಿ 25,00/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 11-07-2021 ರಂದು 2330 ಗಂಟೆಯಿಂದ ದಿನಾಂಕ 12-07-2021 ರಂದು 0700 ಗಂಟೆಯ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 69/2021, ಕಲಂ. 379 ಐಪಿಸಿ :-

ದಿನಾಂಕ 22-07-2021 ರಂದು 0300 ಗಂಟೆಯಿಂದ 0400 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಸಂತೋಷ ತಂದೆ ಮಲ್ಲಯ್ಯಾ ಹಿರೆಮಠ ವಯ: 32 ವರ್ಷ, ಜಾತಿ: ಸ್ವಾಮಿ, ಸಾ: ಧರ್ಮಪೇಟ್ ಮಂಠಾಳ ರವರ  ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-56/ಜೆ-5485 ನೇದನ್ನು ಫಿರ್ಯಾದಿಯವರ ಮನೆಯ ಮುಂದಿನಿಂದ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 23-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 90/2021, ಕಲಂ. 379 ಐಪಿಸಿ :-

ದಿನಾಂಕ 13-07-2021 ರಂದು 2000 ಗಂಟೆಯಿಂದ ದಿನಾಂಕ 14-07-2021 ರಂದು 0600 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ದಿಗಂಬರ ತಂದೆ ಪ್ರಭುರಾವ ಕೊಣಜಿವಾಲೆ ಸಾ: ಲಖನಗಾಂವ, ತಾ: ಭಾಲ್ಕಿ ರವರ ಹೊಲದ ದಂಡಿಗೆ ಮಾಂಜ್ರಾ ನದಿಗೆ ಕೂಡಿಸಿದ 05 ಎಚ್.ಪಿ ಟೆಕ್ಸಮೋ ಕರೆಂಟ ಮೋಟಾರ ಅ.ಕಿ 17,500/- ರೂ. ಬೆಲೆಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 31/2021, ಕಲಂ. 363 ಐಪಿಸಿ :-

ಫಿರ್ಯಾದಿ ಬಸವರಾಜ ತಂದೆ ಭೀಮಣ್ಣಾ ಚಿಮಕೊಡೆ ಜಾತಿ: ಲಿಂಗಾಯತ, ವಯ: 56 ವರ್ಷ, ಸಾ: ಕೈಲಾಶ ನಗರ ಕಾಲೋನಿ ಗುಂಪಾ ಬೀದರ ರವರ ಮಗನಾದ ಸಿದ್ದಾರೂಢ ವಯ: 15 ವರ್ಷ ಇತನು ಗುಂಪಾ ಸಿದ್ದಾರೂಢ ಪಬ್ಲಿಕ ಸ್ಕೂಲದಲ್ಲಿ 10 ನೇ ತರಗತಿಯಲ್ಲಿ ಇಂಗ್ಲಿಷ ಮಾದ್ಯಮದಲ್ಲಿ ಓದುತ್ತಿದ್ದು, ಲಾಕ್ ಡೌನದಿಂದ ಶಾಲೆಗಳು ಬಂದ ಇದ್ದರಿಂದ ಮನೆಯಲ್ಲಿಯೇ ದಿನಾಲು ಆನ್ ಲೈನ್ ಕ್ಲಾಸಗೆ ಹಾಜರಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ, ಮಗನಿಗೆ ಕೆಲವು ದಿವಸಗಳ ಹಿಂದೆ ಆನ್ ಲೈನ್ ಕ್ಲಾಸ್ ಪ್ರಯುಕ್ತ ಮೊಬೈಲ್ ಕೊಟ್ಟಿದ್ದು, ಆತನು ಮೊಬೈಲದಿಂದ ಆನ್ ಲೈನ್ ಗೇಮ್ ಆಡಿ ಹಣ ಖರ್ಚು ಮಾಡಿದ್ದರಿಂದ ಆತನಿಗೆ ಇನ್ನೂ ಮುಂದೆ ಹೀಗೆ ಮಾಡಬೇಡ ಮಗ ಅಂತ ಬುದ್ದಿಮಾತು ಹೇಳಿದ್ದು ಇರುತ್ತದೆ,  ಹೀಗಿರುವಾಗ ದಿನಾಂಕ ದಿನಾಂಕ 22-07-2021 ರಂದು ರಾತ್ರಿ ಫಿರ್ಯಾದಿಯು ತನ್ನ ಹೆಂಡತಿ ಮಕ್ಕಳೊಂದಿಗೆ ಊಟ ಮಾಡಿ ಒಂದು ಕೊಣೆಯಲ್ಲಿ ಮಲಗಿಕೊಂಡಿದ್ದು, ತಾಯಿ ಬೇರೆ ಕೋಣೆಯಲ್ಲಿ ಮಲಗಿಕೊಂಡಿರುತ್ತಾರೆ, ಚಿಕ್ಕ ಮಗನಾದ ಜಯಚಂದ್ರನ್ ಇತನಿಗೆ ನಿರಡಿಕೆ ಆಗಿದ್ದರಿಂದ ನಸುಕಿನ ಜಾವ 0300 ಗಂಟೆಯ ಸುಮಾರಿಗೆ ಫಿರ್ಯಾದಿ ತನ್ನ ಹೆಂಡತಿಯವರ ಜೊತೆ ಎದ್ದು ಚಿಕ್ಕ ಮಗನಿಗೆ ನೀರು ಕೊಟ್ಟು ಪುನಃ ಮಲಗಿಕೊಂಡಿದ್ದು, ನಂತರ 0530 ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ, ಹಿರಿಯ ಮಗನಾದ ಸಿದ್ದಾರೂಢ ಇತನು ಮನೆಯಲ್ಲಿ ರಲಿಲ್ಲ, ನಂತರ ಫಿರ್ಯಾದಿ  ಮತ್ತು ಭಾವಂದಿರಾದ ಗಣಪತಿ, ಕೃಷ್ಣಕಾಂತ ಮತ್ತು ಪರಿಚಯ ಇರುವ ವಿವೆಕಾನಂದ ನಗರದ ಶರಣು ಬಿರಾದರ್ ರವರೆಲ್ಲರೂ ಕೂಡಿ ನ್ನ ಮಗನಿಗೆ ಬಸ ನಿಲ್ದಾಣ, ರೈಲ್ವೆ ನಿಲ್ದಾಣ, ಚಿದ್ರಿ ರಿಂಗ್, ಮೈಲೂರ್ ರಿಂಗ್ ರೋಡ, ಗುಂಪಾ ರಿಂಗ್ ರೋಡ, ಗಾಂಧಿಗಂಜ ಎರಿಯಾ ಮತ್ತು ಬೀದರ ನಗರದ ಎಲ್ಲಾ ಕಡೆಗಳಲ್ಲಿ ತಿರುಗಾಡಿ ಹುಡುಕಾಡಲಾಗಿ ಮಗನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ತನ್ನ ಮಗನಿಗೆ ಯಾರೋ ಅಪರಿಚಿತ ವ್ಯಕ್ತಿ ಅಪಹರಣ ಮಾಡಿರುವ ಬಗ್ಗೆ ಸಂಶಯ ಇರುತ್ತದೆ, ಮಗ ಮನೆಯಿಂದ ಹೋಗುವ ಸಮಯದಲ್ಲಿ ಹಳದಿ ಬಣ್ಣದ ಟಿಶರ್ಟ, ನೀಲಿ ಬಣ್ಣದ ನೈಟ್ ಪ್ಯಾಂಟ ಧರಿಸಿರುತ್ತಾನೆ, ಆತನು ದಿನಾಂಕ 22-07-2021 ರಂದು 0300 ಗಂಟೆಯಿಂದ 0530 ಗಂಟೆಯ ಮದ್ಯದ ಅವಧಿಯಲ್ಲಿ ಹೋದವನು ಮರಳಿ ಬರದೆ ಕಾಣೆಯಾಗಿರುತ್ತಾನೆ, ಆತನು ಮನೆಯಿಂದ ಹೋಗುವಾಗ ಆತನು ಮಲಗಿಕೊಂತಲೆ ದಿಂಬಿನ ಕೇಳಗೆ  ನನಗೆ ಹುಡುಕಾಡಬೇಡಿರಿ ಮತ್ತು ಕಾಂಪ್ಲೆಂಟ್ ಮಾಡಬೇಡಿ ಅಂತ ಇತ್ಯಾದಿಯಾಗಿ ಒಂದು ಪತ್ರ ಬರೆದು ಇಟ್ಟು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 23-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 48/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 23-07-2021 ರಂದು ಮರಖಲ ಗ್ರಾಮದ ಸಾಯಿ ಬಾಬಾ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗದಲ್ಲಿ ಕೆಲವು ಜನರು ಅಂದರ-ಬಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಶಿವರಾಜ ಪಾಟೀಲ್ ಪೊಲೀಸ್ ಉಪ ನಿರೀಕ್ಷಕರು ಜನವಾಡಾ ಪೊಲೀಸ್ ಠಾಣೆ  ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ನೋಡಲು ಮರಖಲ-ಬೀದರ ರೋಡಿನ ಮರಖಲ ಗ್ರಾಮದ ಸಾಯಿ ಬಾಬಾ ಮಂದಿರದ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಂದಿರ ಮೇಲಿನ ಲೈಟಿನ ಬೆಳಕಿನಲ್ಲಿ ಆರೋಪಿತರಾದ 1) ಸೈಯದ್ ಸಮೀರ ತಂದೆ ಹಯದಮೀಯಾ ಮಚಕೂರಿ ಸಾ: ಮರಖಲ ಗ್ರಾಮ, 2) ಅಪ್ಸರ್ ತಂದೆ ಗುಲಾಬಮೀಯಾ ಮೋಜನ್ ಸಾ: ಮರಖಲ ಗ್ರಾಮ, 3) ಚಿನ್ನುಸಾಬ ತಂದೆ ಖಾಜಾಸಾಬ ಚಾವರದಾರ ಸಾ: ವಲ್ಲೆಪೂರ ಗ್ರಾಮ, ತಾ: ಔರಾದ (ಬಾ), 4) ಜಮೀರ ತಂದೆ ಪಾಶಾಮೀಯಾ ಮೋಜನ ಸಾ: ಮರಖಲ್ ಗ್ರಾಮ, 5) ರಫೀಕ್ ಮೀಯಾ ತಂದೆ ತಾಯರಸಾಬ ಮೋಜನ್ ಸಾ: ಮರಖಲ್ ಗ್ರಾಮ, 6) ಯಲ್ಲಾಲಿಂಗ್ ತಂದೆ ಮಾದಪ್ಪಾ ಮೇತ್ರೆ ಸಾ: ಮರಖಲ್ ಗ್ರಾಮ, 7) ಜೈರಾಜ ತಂದೆ ರಾಜೆಪ್ಪಾ ಕುಂಬಾರೆ ಸಾ: ಮರಖಲ್ ಗ್ರಾಮ, 8) ಶಿವಕುಮಾರ ತಂದೆ ನಾಗಶೆಟ್ಟಿ ಪಾಟೀಲ್ ಸಾ: ಮರಖಲ್ ಗ್ರಾಮ, 44790 ಇವರೆಲ್ಲರೂ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಟಿಟ್ ಜೂಜಾಟ ಆಡುತ್ತಿರುವಾಗ ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆರೋಪಿತರನ್ನು ಹಿಡಿದು ಅವರಿಂದ ಒಟ್ಟು ನಗದು ಹಣ 52,690/- ರೂ., ಹಾಗೂ ಒಟ್ಟು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.