ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-12-2020
ಚಿಂತಾಕಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಭಾಗ್ಯಶ್ರೀ ಗಂಡ ಬಸವರಾಜ ವಯ: 28 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಎಕಲಾರ ಗ್ರಾಮ, ತಾ: ಔರಾದ (ಬಿ) ರವರ ಗಂಡನದ ಬಸವರಾಜ ತಂದೆ ಬಾಪು ಬೋರಾಳೆ ಸಾ: ಎಕಲಾರ ಗ್ರಾಮ, ತಾ: ಔರಾದ(ಬಿ) ರವರಿಗೆ ಅವಾಗ ಅವಾಗ ಹೋಟ್ಟೆ ನೋವು ಆಗುತ್ತಿತ್ತು ಹಾಗೂ ಅವರಿಗೆ ಚರ್ಮದ ರೋಗವು ಸಹ ಇದ್ದು, ಆದ್ದರಿಂದ ಅವರು ಸದರಿ ನೋವನ್ನು ತಳಾರಾದ ಸಂಬಂಧ ದಿನಾಲು ಸರಾಯಿ ಕೋಡಿತ್ತಿದ್ದರು, ಸರಾಯಿ ನಶೆಯಲ್ಲಿ ಹಾಗೂ ಜಿವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 29-11-2020 ರಂದು ತೋಂಬರೆ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 111/2020, ಕಲಂ. 379 ಐಪಿಸಿ :-
ಲಾಡವಂತಿ ಗ್ರಾಮ ಪಂಚಾಯತ ವ್ಯಾಪ್ತಿಯ ಭಕನಾಳ ಗ್ರಾಮದಲ್ಲಿನ ಸರಕಾರಿ ತೆರೆದ ಬಾವಿಯಲ್ಲಿ ಕೂಡಿಸಿದ ಅಜಂತಾ ಕಂಪನಿಯ 10 ಹೆಚ್.ಪಿ 4 ಸ್ಟೇಜ್ ಮೋಟಾರ ಅ.ಕಿ 45,000/- ರೂ. ನೇದನ್ನು ದಿನಾಂಕ 14-11-2020 ರಂದು 2300 ಗಂಟೆಯಿಂದ ದಿನಾಂಕ 19-11-2020 ರಂದು 0600 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ಫಿರ್ಯಾದಿ ಉಮೇಶ ತಂದೆ ಸದಾಶಿವ ಪಂಚಾಯತ ಅಭಿವೃದ್ದಿ ಅಧಿಕಾರಿ ಲಾಡವಂತಿ ಗ್ರಾಮ ಪಂಚಾಯತ ರವರು ನೀಡಿದ ದೂರಿನ ಸಾರಾಂಶದ ಮೇರೆಗೆ ದಿನಾಂಕ 30-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 160/2020, ಕಲಂ. 457, 380 ಐಪಿಸಿ :-
ದಿನಾಂಕ 28-11-2020 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ರಾಜಿಯಾ ಬೆಗಂ ಗಂಡ ಮಹ್ಮದ ಹನೀಸ್, ಸಾ: ಅಗ್ರಿಕಲ್ಚರ ಕಚೇರಿ ಹಿಂದುಗಡೆ ಹುಮನಾಬಾದ ರವರ ಟಿಚರ್ಸ ಕಾಲೋನಿಯಲ್ಲಿರುವ ಮನೆಯ ಬಾಗಿಲಿಗೆ ಇರುವ ಗ್ರೀಲ್ ತೆಗೆದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿರುವ ಮಕಿತಾ ಕಂಪನಿಯ 3 ಡ್ರೀಲ ಮಶೀನ ಅ.ಕಿ 36,000/- ರೂ., ಮಕೀತಾ ಕಂಪನಿಯ ಕಟರ್ ಮಶೀನ್ ಅ.ಕಿ 7000/- ರೂ, ಮತ್ತು ಮಕೀತಾ ಬ್ಲೌವರ ಅ.ಕಿ 5000/- ರೂ. ಹಾಗೂ ಒಂದು ಮಕಿತಾ ಕಂಪನಿಯ ವಾಕ್ಯೂಮ್ ಕ್ಲಿನರ ಅ.ಕಿ 3500/- ರೂ. ನೇದ್ದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 30-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂ. 178/2020, ಕಲಂ. 454, 457, 380 ಐಪಿಸಿ :-
ದಿನಾಂಕ 20-10-2020 ರಂದು 1200 ಗಂಟೆಯಿಂದ ದಿನಾಂಕ 21-10-2020 ರಂದು 0700 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ನವೀನಕುಮಾರ ತಂದೆ ಪ್ರಭು ಹಡಪದ ವಯ: 32 ವರ್ಷ, ಜಾತಿ: ಹಡಪದ, ಸಾ: ಮನೆ ನಂ. 15/04/237 ರಾಂಪುರೆ ಬ್ಯಾಂಕ ಕಾಲೋನಿ ಬೀದರ ರವರು ವಾಸವಿದ್ದ ಮನೆಯ ಬಾಗಿಲಿನ ಕೀಲಿ ಮುರಿದು ಒಳಗೆ ಪ್ರವೇಶಿಸಿ ಅಲಮಾರಾ ಲಾಕರ ಕೀಲಿ ಮುರಿದು ಅಲಮಾರಾದಲ್ಲಿಟ್ಟಿದ್ದ 1) 30 ಗ್ರಾಮ ಬಂಗಾರದ ಗಂಟನ, 2) 10 ಗ್ರಾಮ ಬಂಗಾರದ ಚೈನ್, 3) 08 ಗ್ರಾಮ ಬಂಗಾರದ ತಾಳಿ, 5) 08 ಗ್ರಾಮ ಬಂಗಾರದ ಉಂಗುರ ಹೀಗೆ ಒಟ್ಟು 56 ಗ್ರಾಮ ಅ.ಕಿ 2,80,000/- ರೂಪಾಯಿ ಮತ್ತು 7) ನಗದು ಹಣ 80,000/- ರೂಪಾಯಿ ಹಾಗು 8) ಬೇಳ್ಳಿಯ 250 ಗ್ರಾಮ ಕಾಲು ಚೈನಗಳು ಅ.ಕಿ 15,000/- ರೂಪಾಯಿ ಹೀಗೆ ಒಟ್ಟು 3,75,000/- ರೂಪಾಯಿ ಮೌಲ್ಯದ ಬಂಗಾರದ & ಬೇಳ್ಳಿ ಒಡವೆಗಳು ಮತ್ತು ನಗದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 30-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂ. 179/2020, ಕಲಂ. 454, 457, 380 ಐಪಿಸಿ :-
ದಿನಾಂಕ 27-10-2020 ರಂದು 1100 ಗಂಟೆಯಿಂದ ದಿನಾಂಕ 28-10-2020 ರಂದು 0600 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಈರಪ್ಪಾ ತಂದೆ ಶಿವರಾಜ ಕುತ್ತಾಬಾದೆ ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ರಾಂಪುರೆ ಕಾಲೋನಿ ಬೀದರ ರವರು ವಾಸವಿದ್ದ ಮನೆಯ ಬಾಗಿಲಿನ ಕೀಲಿ ಹಾಕುವ ಕೊಂಡಿ ಮುರಿದು ಒಳಗೆ ಪ್ರವೇಶಿಸಿ ಅಲಮಾರಾ ಲಾಕರ ಕೀಲಿ ಮುರಿದು ಅಲಮಾರಾದಲ್ಲಿಟ್ಟಿದ್ದ 1) 05 ಗ್ರಾಮ ಬಂಗಾರದ ಕಿವಿಯ ಓಲೆ ಅ.ಕಿ 25,000/- ರೂ., 2) ಬೆಳ್ಳಿಯ 150 ಗ್ರಾಮ ಕಾಲು ಚೈನಗಳು ಅ.ಕಿ 9000/- ರೂ. ಹೀಗೆ ಒಟ್ಟು 34,000/- ರೂಪಾಯಿ ಮೌಲ್ಯದ ಬಂಗಾರ ಒಡವೆಗಳು ಹಾಗು ಬೆಳ್ಳಿ ಚೈನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 30-11-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂ. 180/2020, ಕಲಂ. 454, 457, 380 ಐಪಿಸಿ :-
ದಿನಾಂಕ 30-11-2020 ರಂದು 0700 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಮಹೇಶ ತಂದೆ ಶಿವರಾಜ ಭುಯ್ಯಾ ವಯ: 35 ವರ್ಷ, ಜಾ: ಲಿಂಗಾಯತ, ಸಾ: ಮನೆ ನಂ. 9-12-541/1 5ನೇ ಕ್ರಾಸ ವಿದ್ಯಾನಗರ ಕಾಲೋನಿ ಬೀದರ ರವರು ವಾಸವಿದ್ದ ಮನೆಯ ಬಾಗಿಲಿನ ಕೀಲಿ ಹಾಕುವ ಕೊಂಡಿ ಮುರಿದು ಒಳಗೆ ಪ್ರವೇಶಿಸಿ ಅಲಮಾರಾ ಲಾಕರ ಕೀಲಿ ಮುರಿದು ಅಲಮಾರದಲ್ಲಿಟಿ್ಟದ್ದ 1) ನಗದು ಹಣ 3,50,000/- ರೂ., 2) 150 ಗ್ರಾಮ ಬೆಳ್ಳಿಯ ಕಡಗ, ಲಿಂಗ, ದೇವರ ಮೂರ್ತಿಗಳು ಅ.ಕಿ 10,000/- ರೂಪಾಯಿ ಹಿಗೆ ಒಟ್ಟು 3,60,000/- ರೂಪಾಯಿ ಮೌಲ್ಯದ ನಗದು ಹಣ ಮತ್ತು ಬೆಳ್ಳಿಯ ಸಾಮಾನುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 36/2020, ಕಲಂ. 498(ಎ), 323, 324, 506 ಜೊತೆ 149 ಐಪಿಸಿ :-
ದಿನಾಂಕ 28-05-2020 ರಮದು ಫಿರ್ಯಾದಿ ಸುಮೀನ್ ಸುಲ್ತಾನಾ ಗಂಡ ಮಹ್ಮದ ಶಾದುಲ್ ಖಾನ ಸಾ: ಗಾಂಧಿ ನಗರ ಕಾಲೋನಿ ಬೀದರ ರವರ ಗಂಡನಾದ ಮಹ್ಮದ ಶಾದುಲ್ ಖಾನ ಹಾಗು ಗಂಡನ ಮನೆಯವರಾದ ಮಹ್ಮದ ರಸುಲಖಾನ, ರಿಹಾನಾ ಬೆಗಂ, ಅಹ್ಮದ, ಅಂಜುಮ್, ಸಬಾ ಬೆಗಂ, ರೆಷ್ಮಾ ಬೆಗಂ, ಮಹ್ಮದ ಫಿರೋಜ, ಆಸಮಾ, ಮಹ್ಮದ ಜಲೀಲ, ಸಮ್ರೀನ್, ಮಹ್ಮದ ಜಲೀಲ ರವರೆಲ್ಲರೂ ಕೂಡಿ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾರೆ, ಅಲ್ಲದೆ ದಿನಾಂಕ 25-08-2020 ರಂದು ಮನೆಯವರೆಲ್ಲರೂ ಕೂಡಿ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡಿ ಹೊಡೆ ಬಡೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 30-11-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 81/2020, ಕಲಂ. 279, 338 ಐಪಿಸಿ :-
ದಿನಾಂಕ 30-11-2020 ರಂದು ಫಿರ್ಯಾದಿ ಪ್ರತಾಪ ತಂದೆ ಹರಿಶ್ಚಂದ್ರ ಆಡೆ ಸಾ: ಐ.ಬಿ. ತಾಂಡ ಠಾಣಾ ಕುಶನೂರ ರವರು ತನ್ನ ಹೆಂಡತಿ ಗಂಗೂಬಾಯಿ ಗಂಡ ಪ್ರತಾಪ ಆಡೆ ವಯ: 55 ವರ್ಷ ಇಬ್ಬರೂ ಕೂಡಿ ಕುಶನೂರ ಕೇನರಾ ಬ್ಯಾಂಕಿಗೆ ಹೋಗಿ ಬ್ಯಾಂಕಿನಲ್ಲಿ ಕೆಲಸ ಮುಗಿಸಿಕೊಂಡು ಹೆಂಡತಿಯು ತಾಂಡಕ್ಕೆ ನಡೆದುಕೊಂಡು ಹೋಗುವಾಗ ಕೊರೆಕಲ್ ಕಡೆಯಿಂದ ಮೋಟಾರ ಸೈಕಲ್ ನಂ. ಕೆಎ-395914 ನೇದ್ದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಗಂಗೂಬಾಯಿ ರವರಿಗೆ ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಂತರ ಅವರಿಗೆ ಕುಶನೂರ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಅಂಬುಲೇನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು, ಇನ್ನೂ ಹೆಚ್ಚಿನ ಚಿಕಿತ್ಸೆ ಕುರಿತು ಪ್ರಯಾವಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 96/2020, ಕಲಂ. 279, 337, 338 ಐಪಿಸಿ ಜೊತೆ 177 ಐಎಂವಿ ಕಾಯ್ದೆ :-
ದಿನಾಂಕ 30-11-2020 ರಂದು ಫಿರ್ಯಾದಿ ಮಾಣಿಕ ತಂದೆ ಪೊಚಪ್ಪಾ ಬುರೆಬರೆ ಸಾ: ಧನಗರಗಡ್ಡ ಹುಮನಾಬಾದ ರವರ ಮಗನಾದ ಸಂಜು ಇವನು ತಾನು ಚಲಾಯಿಸುತ್ತಿದ್ದ ಸ್ಕೂಟಿ ಮೋಟಾರ್ ಸೈಕಲ್ ಸಂ. ಕೆಎ-39/ಎಲ್-3302 ನೇದನ್ನು ಚಲಾಯಿಸಿಕೊಂಡು ತನ್ನ ಖಾಸಗಿ ಕೆಲಸದ ಪ್ರಯುಕ್ತ ಹಳೆ ಆರ್.ಟಿ.ಓ ಚೆಕ್ ಪೋಸ್ಟ್ ಕಡೆಯಿಂದ ಮೋಳಕೇರಾ ಗ್ರಾಮದ ಕಡೆಗೆ ಹೋಗುತ್ತಿರುವಾಗ ಮಯೂರ ಹೋಟೆಲ್ ಹತ್ತಿರ ಹೋದಾಗ ಅದೇ ಸಮಯಕ್ಕೆ ಎದುರಿನಿಂದ ಅಂದರೆ ಮೋಳಕೇರಾ ಗ್ರಾಮದ ಕಡೆಯಿಂದ ರಾಂಗ್ ಸೈಡಿನಲ್ಲಿ ಒಂದು ಮೋಟಾರ್ ಸೈಕಲ್ ನಂ. ಕೆಎ-39/ಕ್ಯೂ-9421 ನೇದರ ಚಾಲಕನಾದ ಆರೋಪಿ ಯಲ್ಲಾಲಿಂಗ ತಂದೆ ಬಸಪ್ಪಾ ಇಂಚೂರೆ ಸಾ: ಕಬಿರಾಬಾದವಾಡಿ ತಾ: ಹುಮನಾಬಾದ ಇತನು ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಂಜು ಇವನು ಚಲಾಯಿಸುತ್ತಿದ್ದ ಸ್ಕೂಟಿ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಸಂಜು ಇತನಿಗೆ ಎರಡು ಮುಂಗೈಗಗಳಿಗೆ ತೀವ್ರ ಗುಪ್ತಗಾಯ, ಬಲಗಾಲ ಮೊಣಕಾಲಗೆ ತರಚಿದ ಗಾಯ ಹಾಗೂ ತಲೆಗೆ ತೀವ್ರ ಗುಪ್ತಗಾಯವಾಗಿ ಬಾಯಿಯಿಂದ ರಕ್ತಸ್ರಾವ ಆಗಿರುತ್ತದೆ, ಆರೋಪಿಗೆ ನೋಡಲಾಗಿ ಬಲಗೈ ಮೊಣಕೈಗೆ ಕೆಳಗೆ ತರಚಿದ ಗಾಯ ಮತ್ತು ಬಲಗಾಲ ಮೊಣಕಾಲ ಕೆಳಗೆ ಸಾದಾ ಗುಪ್ತಗಾಯಗಳು ಆಗಿದ್ದು, ನಂತರ ಇಬ್ಬರಿಗೆ ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 99/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 30-11-2020 ರಂದು ಫಿರ್ಯಾದಿ ಚನ್ನಬಸಪ್ಪಾ ತಂದೆ ಶಂಕ್ರೆಪ್ಪಾ ಪತ್ತಂಗೆ ವಯ: 75 ವರ್ಷ, ಜಾತಿ: ಲಿಂಗಾಯತ, ಸಾ: ಗೋರ್ಟಾ(ಬಿ) ರವರ ರವರ ಮಗನಾದ ಶಂಕರ ಇತನು ತಮ್ಮೂರ ಗಜಾನಂದ ತಂದೆ ಪಂಚಯ್ಯಾ ಸ್ವಾಮಿ ಇಬ್ಬರು ಮೋಟಾರ ಸೈಕಲ ನಂ. ಕೆಎ-39/ಜೆ-7465 ನೇದರ ಮೇಲೆ ಗೋರ್ಟಾದಿಂದ ಬಸವಕಲ್ಯಾಣದ ಕಡೆಗೆ ಹೋಗುವಾಗ ಮುಚಳಂಬ ಶಿವಾರದಲ್ಲಿ ರಾಜೇಂದ್ರ ಬುದ್ದೆ ರವರ ಹೊಲದ ಹತ್ತಿರ ಟಾಟಾ ಸುಮೋ ಜೀಪ ನಂ. ಎಮ.ಹೆಚ್-12/ಎ.ಎಫ್-4112 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಬಂದು ಶಂಕರ ಇತನಿಗೆ ಡಿಕ್ಕಿ ಮಾಡಿ ತನ್ನ ವಾಹನದ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಶಂಕರ ಇತನಿಗೆ ಬಲಗಾಲ ಮೊಣಕಾಲಿಗೆ ಭಾರಿ ರಕ್ತಗಾಯ, ತಲೆಯಲ್ಲಿ ರಕ್ತಗಾಯವಾಗಿರುತ್ತದೆ ಹಾಗೂ ಗಜಾನಂದ ಇತನಿಗೆ ಬಲಗಣ್ಣಿನ ಹುಬ್ಬಿಗೆ ಭಾರಿ ರಕ್ತಗಾಯ, ಬಲಗಾಲಿಗೆ ರಕ್ತಗಾಯ ಮತ್ತು ತಲೆಯಲ್ಲಿ ರಕ್ತಗಾಯಗಳು ಆಗಿದ್ದರಿಂದ ಚಿಕಿತ್ಸೆ ಕುರಿತು ಇಬ್ಬರಿಗೂ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡುಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 88/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 30-11-2020 ರಂದು ಉಚ್ಚಾ ಗ್ರಾಮದಲ್ಲಿನ ಮಹಾದೇವ ಮಂದಿರ ಹತ್ತಿರ ಬಸವರಾಜ ಸಜ್ಜನಶೇಟ್ಟಿರವರ ಕಿರಾಣಾ ಅಂಗಡಿ ಎದುರುಗಡೆ ಸಾರ್ವಜನಿಕ ಸಿಸಿ ರಸ್ತೆಯ ಮೇಲೆ ಕೆಲವು ಜನರು ಪರೇಲ್ ಎಂಬ ಮೂರು ಎಲೆಯ ಇಸ್ಪೀಟ ಜೂಜಾಟ ಆಡುತಿದ್ದಾರೆಂದು ಹುಲೆಪ್ಪಾ ಪಿಎಸ್ಐ ಖಟಕಚಿಂಚೊಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಉಚ್ಚಾ ಗ್ರಾಮದ ಹನುಮಾನ ಮಂದಿರ ಹತ್ತಿರ ಬಂದು ಸಿಸಿ ರಸ್ತೆಯ ಮುಖಾಂತರ ನಡೆದುಕೊಂಡು ಬಸವರಾಜ ಸಜ್ಜನಶೇಟ್ಟಿ ರವರ ಕಿರಾಣಾ ಅಂಗಡಿ ಪಕ್ಕ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಶಾಂತಕುಮಾರ ತಂದೆ ವಿಶ್ವನಾಥ ಚಿದರೆ, 2) ಅನಿಲ ತಂದೆ ಓಂಕಾರ ಸಜ್ಜನಶೇಟ್ಟಿ, 3) ರೇವಣಪ್ಪಾ ತಂದೆ ಮಾರುತಿ ಧರ್ಮಣ್ಣಾ, 4) ವೆಂಕಟ ತಂದೆ ಸಂಗಪ್ಪಾ ಶೇರಡೊಳೆ, 5) ಸುಬಾಷ ತಂದೆ ರಾಮಚಂದ್ರ ಪಂಚಾಳ, 6) ಸುನೀಲಕುಮಾರ ತಂದೆ ಶಂಕರಾವ ಹಳನೊರೆ ಹಾಗೂ 7) ಬಾಲಾಜಿ ತಂದೆ ಬಾಬುರಾವ ಹುಣಜೆ ಎಲ್ಲರೂ ಸಾ: ಉಚ್ಚಾ, ತಾ: ಭಾಲ್ಕಿ ಇವರೆಲ್ಲರೂ ಸಾರ್ವಜನಿಕ ಸಿಸಿ ರಸ್ತೆಯ ಮೇಲೆ ದುಂಡಾಗಿ ಕುಳಿತು ಪರೇಲ ಎಂಬ ನಸೀಬಿನ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ಹಣ 7730/- ರೂಪಾಯಿ ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.