ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-07-2020
ಬೀದರ
ಗ್ರಾಮೀಣ
ಪೊಲೀಸ್
ಠಾಣೆ
ಅಪರಾಧ
ಸಂ.
31/2020, ಕಲಂ.
32, 34 ಕೆ.ಇ ಕಾಯ್ದೆ :-
ದಿನಾಂಕ 21-07-2020
ರಂದು
ಕೋರೋನಾ ವೈರಸ್ ತಡೆಗಟ್ಟುವ ನಿಮಿತ್ಯ ಜಿಲ್ಲೆಯಲ್ಲಿ ಸರಾಯಿ ಮಾರಾಟ ನಿಷೇಧ ಇದ್ದರು ಸಹ ಆರೋಪಿ
ಸೂರ್ಯಕಾಂತ ತಂದೆ ರಾಮಚಂದ್ರ ಕಲಾಲ ವಯ: 50 ವರ್ಷ, ಜಾತಿ: ಕಲಾಲ, ಸಾ: ಕಮಠಾಣಾ
ಇತನು ತನ್ನ ಹೊಟಲ ಹತ್ತಿರ ಅಕ್ರಮವಾಗಿ ಸರಾಯಿ ಮಾರಾಟ ಸಾಗಾಟ ಮಾಡುತ್ತಿದ್ದಾನೆಂದು ಸವಿತಾ
ಪ್ರಿಯಂಕಾ ಪಿ.ಎಸ.ಐ ಬೀದರ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ
ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಸದರಿ
ಆರೋಪಿತನ ಮೇಲೆ ದಾಳಿ ಮಾಡಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ.
57/2020, ಕಲಂ. 78(3) ಕೆ.ಪಿ ಕಾಯ್ದೆ
:-
ದಿನಾಂಕ
21-07-2020 ರಂದು ಜೋಗೆವಾಡಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು. ಜೈಶ್ರೀ ಪಿ.ಎಸ್.ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜೋಗೆವಾಡಿ ಗ್ರಾಮಕ್ಕೆ ತಲುಪಿ ಹನುಮಾನ ಮಂದಿರದ ಹತ್ತಿರ ಒಂದು ಮನೆಯ ಗೋಡೆಯ ಮರೆಯಾಗಿ ನಿಂತು ನೋಡಲು ಅಲ್ಲಿ ಜೋಗೆವಾಡಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಆರೋಪಿ ಕಿರಣ @ ಕಿಶನ ತಂದೆ ಬಳಿರಾಮ ಜೋಗೆ ವಯ: 33 ವರ್ಷ, ಜಾತಿ: ಕೋಳಿ, ಸಾ: ಜೋಗೆವಾಡಿ, ತಾ: ಬಸವಕಲ್ಯಾಣ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ ಒಂದು
ರೂಪಾಯಿಗೆ 80/-
ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ಆತನ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅವನಿಗೆ ಹಿಡಿದು ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ ನಾನು ಸಾರ್ಚಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಈ ಹಣವನ್ನು ಉಮರ್ಗಾದ ಸಗರ ಎಂಬ ವ್ಯಕ್ತಿ ಕೋಡುತ್ತೇನೆ ಅವನು ನನಗೆ ಕಮಿಷನ್ ಹಣ ನೀಡುತ್ತಾನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 2270/- ರೂಪಾಯಿ, 2) 3 ಮಟಕಾ ಚೀಟಿಗಳು ಮತ್ತು 4)
ಒಂದು ಬಾಲ್ ಪೆನ್ನ ಪಂಚರ ಸಮಕ್ಷಮ ವಶಕ್ಕೆ ಪಡೆದು, ಸದರಿ ಆರೋಪಿಗೆ ದಸ್ತಗಿರಿ ಮಾಡಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹೊಕ್ರಾಣಾ ಪೊಲೀಸ್ ಠಾಣೆ, ಅಪರಾಧ ಸಂ. 31/2020,
ಕಲಂ. 279, 337, 338 ಐಪಿಸಿ :-
ದಿನಾಂಕ 21-07-2020
ರಂದು ಫಿರ್ಯಾದಿ ರಾಜಕುಮಾರ ತಂದೆ ಶಂಕರರಾವ ಮೇತ್ರೆ,
ವಯ: 25 ವರ್ಷ, ಜಾತಿ: ಕುರುಬ, ಸಾ: ಬೋರಾಳ ರವರು ತಮ್ಮೂರ ಬಾಬು ತಂದೆ ಮಾರುತಿ ಕಾಂಬಳೆ,
ರವಿ ತಂದೆ ಅಮೃತರಾವ ಕಾಂಬಳೆ ರವರ ಜೊತೆಯಲ್ಲಿ ತಮ್ಮೂರ ಮಾಧವ ತಂದೆ ಗಣಪತರಾವ ಯರನಾಳೆ
ರವರು ಚಲಾಯಿಸುವ ಟ್ರ್ಯಾಕ್ಟರ ನಂ. ಕೆಎ-38/ಟಿ-2089, ಟ್ರ್ಯಾಲಿ ನಂ. ಕೆಎ-38/ಟಿ-1223 ನೇದರಲ್ಲಿ ಬೋರಾಳ ಅರಣ್ಯ ಇಲಾಖೆಯ ಗಿಡಗಳು ತೆಗೆದುಕೊಂಡು ಲಿಂಗಿ ಗ್ರಾಮದ ಕೇಶವ
ನಾಯಕ ತಾಂಡಾದ ಶಿವಾರದಲ್ಲಿ ಗೀಡಗಳು ಹಚ್ಚಲು ಟ್ರ್ಯಾಕ್ಟರನಲ್ಲಿ ಲಷ್ಕರ ನಾಯಕ ತಾಂಡಾಕ್ಕೆ ಹೋಗಿ
ಅಲ್ಲಿಂದ ಕೇಶವ ನಾಯಕ ತಾಂಡಾದಿಂದ ಮೋತಿರಾಮ ನಾಯಕ ತಾಂಡಕ್ಕೆ ಹೋಗುತ್ತಿರುವಾಗ ಕೇಶವ ನಾಯಕ
ತಾಂಡಾದ ಶಿವಾರದಲ್ಲಿ ಲಿಂಗಿ ಗ್ರಾಮದ ವಿಠಲ ಪಾಟೀಲ ರವರ ಹೋಲದ ಹತ್ತಿರ ಬ್ರೀಜಿನ ಮುಂದೆ
ಟ್ರ್ಯಾಕ್ಟರ ಚಾಲಕನಾದ ಆರೋಪಿ ಮಾಧವ ತಂದೆ ಗಣಪತರಾವ ಯರನಾಳೆ ಸಾ: ಬೋರಾಳ ಇತನು ತನ್ನ ಟ್ರ್ಯಾಕ್ಟರನ್ನು ಅಡ್ಡ ತಿಡ್ಡವಾಗಿ ಹಾಗೂ ನಿರ್ಲಕ್ಷತನದಿಂದ
ಚಲಾಯಿಸಿಕೊಂಡು ಹೋಗುವಾಗ ಟ್ರ್ಯಾಕ್ಟರ ಮುಂದಿನ ಬಾಡಿ ಮೇಲಕ್ಕೆ ಎದ್ದು ಒಮ್ಮೇಲೆ ಟ್ರ್ಯಾಕ್ಟರ
ಹಿಂದಕ್ಕೆ ಬಂದು ರಸ್ತೆಯ ಬದಿಯಲ್ಲಿ ಕೆಳಗೆ ಹೋದಾಗ ಫಿರ್ಯಾದಿ ಮತ್ತು ತಮ್ಮೂರ ಬಾಬು ತಂದೆ
ಮಾರುತಿ ಕಾಂಬಳೆ ಇಬ್ಬರೂ ಗಾಬರಿಗೊಂಡು ಕೆಳಗೆ ಇಳಿದಿದ್ದು, ಸದರಿ ಘಟನೆಯಿಂದ ಫಿರ್ಯಾದಿಯ ಬಲಗಾಲಿನ
ಮೋಳಕಾಲ ಮೇಲೆ ಗುಪ್ತಗಾಯವಾಗಿರುತ್ತದೆ ಮತ್ತು ಬಾಬು ಕಾಂಬಳೆ ಇತನಿಗೆ ನೋಡಲು ಆತನ ಎದೆಯಲ್ಲಿ
ಗುಪ್ತಗಾಯವಾಗಿರುತ್ತದೆ ಹಾಗು ರವಿ ಇತನಿಗೆ ಟ್ರ್ಯಾಕ್ಟರ ಟ್ರ್ಯಾಲಿ ಹತ್ತಿ ಆತನ ಸೊಂಟದಲ್ಲಿ
ಭಾರಿ ಗುಪ್ತಗಾಯ ಮತ್ತು ಎರಡು ಮೋಳಕಾಲ ಹತ್ತಿರ ಗುಪ್ತಗಾಯವಾಗಿರುತ್ತದೆಮ ನಂತರ ಗಾಯಗೊಂಡವವರಿಗೆ ಅಲ್ಲೆ
ಇದ್ದ ನಿರ್ವತಿ ತಂದೆ ಸೀತಾರಾಮ ರಾಠೋಡ ಸಾ: ಚಿಮ್ಮೆಗಾಂವ ತಾಂಡಾ ಹಾಗು ಇನ್ನಿತರರು ನೋಡಿ ಒಂದು
ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಔರಾದ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು
ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡ
ಪೊಲೀಸ್ ಠಾಣೆ ಅಪರಾಧ ಸಂ. 42/2020, ಕಲಂ. 279, 337, 338 ಐಪಿಸಿ ಜೊತೆ 187
ಐಎಂವಿ ಕಾಯ್ದೆ :-
ದಿನಾಂಕ 21-07-2020 ರಂದು
ಫಿರ್ಯಾದಿ ಮಹಾವೀರ ತಂದೆ ಕಾಶಿನಾಥ ಮೀಸಾ ಸಾ: ವಿದ್ಯಾನಗರ ಕಾಲೋನಿ,
ಬೀದರ ರವರು ತಮ್ಮ ಪೇಪರ್ ಮೀಲ್ಸ್ ನಲ್ಲಿ ಕೆಲಸ ಮಾಡುವ ರಾಹುಲ್
ತಂದೆ ದತ್ತಾತ್ರಿರಾವ ಬಿರಾದಾರ ರವರು ಅವರ ಹೊಂಡಾ ಯುನಿಕಾರ್ನ ಮೋಟಾರ್ ಸೈಕಲ್ ನಂ. ಕೆಎ-38/ಎಸ್-8303 ನೇದರ ಮೇಲೆ ಬೀದರದಿಂದ ಅಣದೂರ ಮಾರ್ಗವಾಗಿ ಸಿಂದಬಂದಿಗಿಯ ಕಾರಂಜಾ ಪೇಪರ್ ಮೇಲೆ ಕರ್ತವ್ಯಕ್ಕೆ ಹೊಗುತ್ತಿರುವಾಗ ರಾಹುಲ್ ಬಿರಾದಾರ ರವರು ತಮ್ಮ
ಮೋಟಾರ್ ಸೈಕಲ್ ಚಲಾಯಿಸುತ್ತಿದ್ದು ಬೀದರ ಹುಮನಾಬಾದ ರೊಡಿನ ಅಣದೂರ ಗ್ರಾಮದ ರೋಡಿಗೆ ಇರುವ ಬೌದ್ದ ಮಂದಿರ ಹತ್ತಿರ ಬಂದಾಗ ತಮ್ಮ
ಎದರುಗಡೆಯಿಂದ ಇಂಡಿಕಾ ವಿಸ್ಟಾ ಕಾರ ನಂ. ಕೆಎ-40/ಎಮ್-3337 ನೇದರ ಚಾಲಕ ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದರುಗಡೆಯಿಂದ ಫಿರ್ಯಾದಿಯವರು ಕುಳಿತ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ್ದು, ಸದರಿ
ಡಿಕ್ಕಿಯಿಂದ ಫಿರ್ಯಾದಿಯ ಎರಡು
ಕಾಲುಗಳಿಗೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯ, ಮುಖದ ಮೇಲೆ ತರಚೀದ ಗಾಯ, ಬಲ ಭಕಾಳಿಯಲ್ಲಿ ಗುಪ್ತಗಾಯವಾಗಿದ್ದು ಹಾಗೂ ರಾಹೂಲ್ ಬಿರಾದಾರ ರವರಿಗೆ ಬಲಗಾಲಿಗೆ
ಭಾರಿ ರಕ್ತ ಮತ್ತು ಗುಪ್ತಗಾಯ, ಬಲಗೈಗೆ
ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿದ್ದು ಅಷ್ಟರಲ್ಲಿ ಮೋಟಾರ ಸೈಕಲ್ ಮೇಲೆ ಹೊಗುತ್ತಿದ್ದ ಫಿರ್ಯಾದಿಯ ಗೆಳೆಯ ಶಾಮರಾವ ತಂದೆ ಬಸವರಾಜ ಬಿರಾದಾರ ಸಾಯಿ ನಗರ ಕಾಲೋನಿ ಬಿದರ ರವರು ಘಟನೆ ಕಣ್ಣಾರೆ ನೋಡಿ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಬೀದರನ ಶ್ರೀ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಆರೋಪಿಯು ತನ್ನ ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.