Police Bhavan Kalaburagi

Police Bhavan Kalaburagi

Friday, September 11, 2020

BIDAR DISTRICT DAILY CRIME UPDATE 11-09-2020

 ದಿನಂಪ್ರತಿ ಅಪರಾಧಗಳ ಮಾಹಿತ ದಿನಾಂಕ 11-09-2020

 

ಜನವಾಡಾ ಪೊಲಿಸ್ ಠಾಣೆ ಯು.ಡಿ.ಆರ್ ನಂ. 17/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 04-09-2020 ರಂದು ಫಿರ್ಯಾದಿ ರಾಜಕುಮಾರ ತಂದೆ ಭೂಮಣ್ಣಾ ಮೈನಳ್ಳೆ ಸಾ: ಶ್ರೀಮಂಡಲ ಗ್ರಾಮ, ತಾ: & ಜಿ: ಬೀದರ  ರವರ ಹೆಂಡತಿಯಾದ ಜ್ಯೋತಿ ಗಂಡ ರಾಜಕುಮಾರ ಮೈನಳ್ಳೆ ವಯ: 25 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಶ್ರೀಮಂಡಲ ಗ್ರಾಮ, ತಾ: ಜಿ: ಬೀದರ ರವರು ಕಲಾವತಿ ಗಂಡ ಶಂಕರ ಹಂಡೆ ಸಾ: ಶ್ರೀಮಂಡಲ್ ಹೊಲ ಸರ್ವೆ ನಂ. 51 ನೇದರಲ್ಲಿ ಹತ್ತಿ ಬೇಳೆಯಲ್ಲಿ ಸೆದೆ ಕಳೆಯುತ್ತಿರುವಾಗ ಹತ್ತಿ ಬೇಳೆಯಲ್ಲಿ ಅವರ ಬಲಗೈ ಮುಂಗೈ ಹಾವು ಕಚ್ಚಿದ್ದರಿಂದ ಖಾಸಗಿ ಔಷಧ ಹಾಕಲು ಚಾಂಬೋಳಕ್ಕೆ ಕರೆದುಕೊಂಡು ಹೋಗಿ ನಂತರ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 09-09-2020 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೆಲೆ ಯಾವುದೆ ಸಂಶಯ ಇರುವುದಿಲ್ಲ ಸದರಿ ಘಟನೆ ಆಕಸ್ಮಿಕವಾಗಿ ಜರುಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲಿಸ್ ಠಾಣೆ ಯು.ಡಿ.ಆರ್ ನಂ. 18/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-

ದಿನಾಂಕ 10-09-2020 ರಂದು ಫಿರ್ಯಾದಿ ಮಧು ಗಂಡ ಸತೀಷಕುಮಾರ ಗಾಯಕವಾಡ ಸಾ: ಮಿಲಿಂದ ನಗರ ಬೀದರ ರವರ ಮಗನಾದ ಅಜಯ ತಂದೆ ಸತೀಷಕುಮಾರ ಗಾಯಕವಾಡ ವಯ: 15 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮಿಲಿಂದ ನಗರ ಬೀದರ ಇತನು ತನ್ನ ಗೆಳೆಯರಾದ ವಿನೋದ ಕಾಂಬಳೆ, ಗಣೇಶ ಮುಂಗ್ಲೆ ಮತ್ತು ಸಂದೀಪ್ ನರೋಟೆ ರವರೊಂದಿಗೆ ಜನವಾಡಾ ಗ್ರಾಮ ಶೀವಾರದಲ್ಲಿರುವ ಗಣಪತರಾವ ನರವಟೆ ರವರ ಹೊಲ ಸರ್ವೆ ನಂ. 100 ನೇದರ ಜಮೀನಿನಲ್ಲಿರುವ ಖಣಿಯಲ್ಲಿನ ನೀರಿನಲ್ಲಿ ಈಜಲು ಹೊಗಿ ಅಜಯ ಇತನು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು, ಅವನ ಸಾವಿನಲ್ಲಿ ನನಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 75/2020, ಕಲಂ. ಕಲಂ. 379 ಐಪಿಸಿ 86, 87 ಅರಣ್ಯ ಕಾಯ್ದೆ :-

ದಿನಾಂಕ 10-09-2020 ರಂದು ಔರಾದ ಪಟ್ಟಣದ ನ್ನಬಸವೇಶ್ವರ ಕಾಲೋನಿಯ ಸಂತೋಷ ತಂದೆ ವಿಶ್ವನಾಥ ದ್ಯಾರಂಗಲೆ ಸಾ: ಔರಾದ ಇತನ ಮನೆಯಲ್ಲಿ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆ ಸಂಗ್ರಹ ಮಾಡಿರುತ್ತಾರೆ ಟಿ.ಆರ್ ರಾಘವೇಂದ್ರ ಸಿಪಿಐ ಔರಾದ(ಬಿ) ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು, ತೂಕ ಮಾಡುವ ವ್ಯಕ್ತಿಗೆ ಬರಮಾಡಿಕೊಂಡು ಹಾಗೂ ತಮ್ಮ ಸಿಬ್ಬಂದಿಯೊಂದಿಗೆ ಔರಾದ ಪಟ್ಟಣದ ನ್ನಬಸವೇಶ್ವರ ಕಾಲೋನಿಗೆ ಹೋಗಿ ಆರೋಪಿತನಾದ ಸಂತೋಷ ಇತನ ಮನೆಗೆ ಹೋಗಿ ನೋಡಿ ಶೋಧನೆ ವಾರೆಂಟ್ ತೋರಿಸಿ ಪಂಚರ ಸಮಕ್ಷಮ ಆರೋಪಿತನ ಮನೆಯಲ್ಲಿ ಶೋಧನೆ ಮಾಡಿದಾಗ ಸದರಿ ಮನೆಯಲ್ಲಿ ಶ್ರೀಗಂಧದ ಕಟ್ಟಿಗೆ (ಶ್ಯಾಂಡಲವುಡ್) 200 ಕೆ.ಜಿ ಅ.ಕಿ 12,00,000/- ರೂ ಹಾಗೂ ಎರಡು ಮೋಟಾರ ಸೈಕಲ್ಗಳು ಅ.ಕಿ 50,000/- ರೂ. ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 105/2020, ಕಲಂ. 379 ಐಪಿಸಿ :-

ದಿನಾಂಕ 01-09-2020 ರಂದು 1700 ಗಂಟೆಯಿಂದ 2200 ಗಂಟೆಯ ಅವಧಿಯಲ್ಲಿ ಬೀದರ ಗುರುನಾನಕ ಸ್ಪತ್ರೆಯ ಎದುರಿಗೆ ನಿಲ್ಲಿಸಿದ ಫಿರ್ಯಾದಿ ಬಾಲಾಜಿ ತಂದೆ ನರಸಿಂಗರಾವ ಮಾನಕಾರಿ ಸಾ: ಮೈಲೂರ ಬೀದರ ರವರ ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. KA-39/J-7248, ಚಾಸಿಸ್ ನಂ. MBLHA10EYAHL23586, ಇಂಜಿನ್ ನಂ. HA10EFAHL80884, ಮಾಡಲ್ 2010, ಬಣ್ಣ: ಕಪ್ಪು ಬಣ್ಣ ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 56/2020, ಕಲಂ. ಮನುಷ್ಯ ಕಾಣೆ :-

ದಿನಾಂಕ 05-9-2020 ರಂದು 0600 ಗಂಟೆಯ ಸುಮಾರಿಗೆ ಫಿರ್ಯಾದಿ ಬಸಮ್ಮಾ ಗಂಡ ಬಸವರಾಜ ಬಿರಾದಾರ ಸಾ: ನಾವದಗೆರಿ ಬೀದರ ರವರ ಮಗಳಾದ ಶಿವಾನಿ ಇವಳು ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲಾ, ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ಹುಡುಕಾಡಿದರೂ ಸಹ ಶಿವಾನಿ ಇವಳು ಸಿಕ್ಕಿರುವದಿಲ್ಲಾ ಅವಳು ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 70/2020, ಕಲಂ. 279, 338 ಐಪಿಸಿ :-

ದಿನಾಂಕ 10-09-2020 ರಂದು ಫಿರ್ಯಾದಿ ಭೀಮರೆಡ್ಡಿ ತಂದೆ ಪ್ರಕಾಶರೆಡ್ಡಿ ಸಾಯರೆಡ್ಡಿ ಸಾ: ಯರಭಾಗ ರವರ ಚಿಕ್ಕಪ್ಪನ ಮಗಳಾದ ಗೋದಾವರಿ ಇವಳು ಫಿರ್ಯಾದಿಯವರ ಮನೆಯ ಪಕ್ಕದ ಸೂರ್ಯಕಾಂತ ತಂದೆ ಧೂಳಪ್ಪಾ ಲಖನಗಾಂವ ರವರ ಜೊತೆ ಮೊಟರ ಸೈಕಲ ನಂ. ಕೆಎ-56/ಈ-2611 ನೇದರ ಮೇಲೆ  ಹುಮನಾಬಾದಕ್ಕೆ ಕಾಲೇಜು ಶುಲ್ಕ ಕಟ್ಟಲು ಹೋಗುವಾಗ ಸದ್ಲಾಪೂರ ರಾಜೇಶ್ವರ ರೋಡಿನ ಮೇಲೆ ಸೂರ್ಯಕಾಂತ ಇತನು ತನ್ನ ಮೊಟರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಹೋಗುವಾಗ ಮೊಟರ ಸೈಕಲ ಹಿಡಿತ ತಪ್ಪಿದ್ದರಿಂದ ಯರಬಾಗ ಬಿ.ಸಿ.ಎಮ್ ವಸತಿ ನಿಲಯದ ಹತ್ತಿರ ತನ್ನ ಮೊಟರ ಸೈಕಲ ಒಮ್ಮೆಲೆ ರೋಡಿನ ಮೇಲೆ ಪಲ್ಟಿ ಮಾಡಿದ್ದರಿಂದ ಗೋದಾವರಿಯ ಬಲಗಾಲ ಹಿಮ್ಮಡಿ ಹಿಂದಿನ ಚಕ್ರದಲ್ಲಿ ಸಿಕ್ಕಿ ಬಿದ್ದು ಹಿಮ್ಮಡಿಗೆ ಭಾರಿ ರಕ್ತಗಾಯವಾಗಿರುತ್ತದೆ ಹಾಗು ಮೊಳಕಾಲಿಗೆ ತರಚಿದ ಗಾಯವಾಗಿರುತ್ತವೆ, ಸೂರ್ಯಕಾಂತನಿಗೆ ಕಾಲಿಗೆ ಕೈಗೆ ತರಚಿದ ಗಾಯವಾಗಿರುತ್ತದೆ, ಅವರಿಬ್ಬರಿಗೂ ಚಿಕಿತ್ಸೆ ಕುರಿತು ಮುಕಾಂಬಿಕಾ ಆಸ್ಪತ್ರೆ ಬಸವಕಲ್ಯಾಣದಲ್ಲಿ ತಂದು ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಪಾಟೀಲ ಆಸ್ಪತ್ರೆ ಬಸವಕಲ್ಯಾಣದಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 62/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 10-09-2020 ರಂದು ಸುಂಠಾಣ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಎಂಬ ನಸೀಬಿನ ಜೂಜಾಟದ ನಂಬರಗಳು ಬರೆದುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸುಂಠಾಣ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಹೋಗಿ ಒಂದು ಗಿಡದ ಪೊದೆಯ ಮರೆಯಾಗಿ ನಿಂತು ನೋಡಲು ಸುಂಠಾಣ ಸರಕಾರಿ ಶಾಲೆಯ ಹತ್ತಿರ ರಾಜೇಶ್ವರ - ಮುಡಬಿ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಾಜಕುಮಾರ ತಂದೆ  ಶರಣಪ್ಪಾ ಜಮಾದಾರ ವಯ 32 ವರ್ಷ, ಜಾತಿ: ಕಬ್ಬಲಿಗ, ಸಾ: ಸುಂಠಾಣ, ತಾ: ಬಸವಕಲ್ಯಾಣ ಇತನು ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ ಒಂದು ರೂಪಯಿಗೆ 90/- ರೂಪಾಯಿ ಪಡೆಯಿರಿ ಅಂತ ಕೂಗಾಡುತ್ತಿರುವುದನ್ನು ಕಂಡು ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ನಂತರ ಪಂಚರ ಸಮಕ್ಷಮ ಸದರಿ ಆರೋಪಿತನ ಅಂಗ ಜಡ್ತಿ ಮಾಡಲು ಅವನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 4000/- ರೂಪಾಯಿ ನಗದು ಹಣ ಮತ್ತು ಒಂದು ಬಾಲ್ ಪೆನ್ನು ಹಾಗೂ ಎರಡು ಚೀಟಿಗಳು ಅದರ ಮೇಲೆ ಮಟಕಾ ನಂಬರ ಬರೆದದ್ದು ಸಿಕ್ಕಿದ್ದು, ಅವುಗಳನ್ನು ಜಪ್ತಿ ಮಾಡಿಕೊಂಡು, ಅವುಗಳ ಬಗ್ಗೆ ವಿಚಾರಿಸಲಾಗಿ ನಾನು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಂಡು ನಂತರ ಬಂದ ಹಣವೆಲ್ಲಾ ಮೇಘರಾಜ ತಂದೆ ಮಧುಕರರಾವ ಸೂರ್ಯವಂಶಿ ಸಾ: ಬಸವಕಲ್ಯಾಣ ಇತನಿಗೆ ಕೋಡುತ್ತೆನೆ ಅವನು ನನಗೆ ಅದರಲ್ಲಿ ಕಮಿಶನ ಕೋಡುತ್ತಾನೆ ಹೀಗೆ ನಾವು ಇಬ್ಬರು ಕೂಡಿ ವ್ಯವಹಾರ ಮಾಡುತ್ತೆವೆಂದು ತಿಳಿಸಿದನು, ಸದರಿ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 190/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 10-09-2020 ರಂದು ಭಾಲ್ಕಿ-ಹುಮನಾಬಾದ ರೋಡಿನ ಬದಿಯಲ್ಲಿ ರಾಮತೀರ್ಥವಾಡಿ ಕ್ರಾಸ ಹತ್ತಿರ ಒಬ್ಬ ತನ್ನ ಹತ್ತಿರ ಸಂಬಂಧಪಟ್ಟ ಇಲಾಖೆಯವರಿಂದ ಯಾವುದೆ ಅನುಮತಿ ಪತ್ರ ಇಲ್ಲದೆ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುವ ಕುರಿತು ತಮ್ಮ ವಶದಲ್ಲಿ ಇಟ್ಟುಕೊಂಡು ಕುಳಿತಿರುತ್ತಾನೆ ಅಂತಾ ಶೇಕಶಾ ಪಟೇಲ ಪಿ.ಎಸ್. (ಕಾ.ಸೂ) ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭಾಲ್ಕಿ-ಹುಮನಾಬಾದ ರೊಡಿನ ರಾಮತೀರ್ಥವಾಡಿ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ರಾಮತೀರ್ಥವಾಡಿ ಕ್ರಾಸ ಹತ್ತಿರ ಆರೋಪಿ ಜಾಲಿಂದರ ತಂದೆ ಪಾಂಡುರಂಗ ಪವಾರ ವಯ: 32 ವರ್ಷ, ಜಾತಿ: ವಡ್ಡರ, ಸಾ: ಬಸವನಗರ ಭಾಲ್ಕಿ ಇತನು ತನ್ನ ವಶದಲ್ಲಿ ಮಧ್ಯ ತುಂಬಿದ ಕಪ್ಪು ಬಣ್ಣದ ಪ್ಲಾಸ್ಟಿ ಕವರ ಇಟ್ಟುಕೊಂಡು ಕುಳಿತು ಜನರಿಗೆ ಮಾರಾಟ ಮಾಡುತ್ತಿರುವುದನ್ನು ನೊಡಿ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಲ್ಲಿ ದೊರೆತ ಪ್ಲಾಸ್ಟಿಕ ಕವರ ತೆಗೆದು ಪರೀಶಿಲಿಸಿ ನೊಡಲು 1) ಯು.ಎಸ್ ವಿಸ್ಕಿ 90 ಎಂ.ಎಲ್ ವುಳ್ಳ 24 ಪ್ಲಾಸ್ಟಿಕ ಬಾಟಲಗಳು ಅ.ಕಿ 843 ರೂ 12 ಪೈಸೆ, 2) ಓರಿಜಿನಲ ಚಾಯ್ಸ ವಿಸ್ಕಿ 90 ಎಂ.ಎಲ್ ವುಳ್ಳ 46 ಪೌಚಗಳು ಅ.ಕಿ 1615 ರೂ. 98 ಪೈಸೆ ಹೀಗೆ ಒಟ್ಟು ಎಲ್ಲಾ ಸೆರಿ ಅ.ಕಿ 2459/- ರೂ. ದಷ್ಟು ಮಧ್ಯ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಮದ್ಯವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.