ಕೊಲೆ
ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ರಾಮಪ್ಪ
ಸಿಂಗೆ ಸಾ|| ಅಫಜಲಪೂರ ರವರು ಕೊನೆಯ ಮಗಳಾದ ಸುಮಿತ್ರಾ
ಇವಳಿಗೆ ಅಫಜಲಪೂರದ ಮನೋಹರ ತಂದೆ ಭಿಮಶ್ಯಾ
ಗುಡ್ಡೋಡಗಿ ಇವರಿಗೆ ಮದುವೆ ಮಾಡಿಕೊಟ್ಟಿದ್ದು ನಮ್ಮ ಗ್ರಾಮದಲ್ಲಿ ನಮ್ಮ ಸಂಬಂದಿಕರಲ್ಲಿ ನಿನ್ನೆ
ಸರಿಹೋಗಿದ್ದು ಇಂದು ಅಂತಿಮ ಸಂಸ್ಕಾರ ಇದ್ದ ಪ್ರಯುಕ್ತ ಸದರಿ ಅಂತಿಮ ಸಂಸ್ಕಾರಕ್ಕೆ ಸುಮಿತ್ರಾಳು
ಬರುತ್ತೇನೆ ಅಂತಾ ನಿನ್ನೆ 4-00 ಪಿಎಮ್ ಸುಮಾರಿಗೆ ಪೊನ ಮಾಡಿ ತಿಳಿಸಿರುತ್ತಾಳೆ ಹೀಗಿದ್ದು ಇಂದು
ದಿನಾಂಕ 30-10-2019 ರಂಧು 8-00 ಎಎಮ್ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಗೊತ್ತಾಗಿದ್ದೆನೆಂದರೆ
ಬಳುರ್ಗಿ ಸಿಮಾಂತರದ ಶ್ರೀ ಮಲ್ಲಯ್ಯಾ ಸ್ವಾಮಿರ ರವರ ಹೊಲದ ಬಂಡಿ ರಸ್ತೆಯಲ್ಲಿ ಒಬ್ಬ
ಹೆಣ್ಣುಮಗಳನ್ನು ಬಿಸಾಕಿರುತ್ತಾರೆ ಅಂತಾ ಗೊತ್ತಾಗಿ ನಾನು ಮತ್ತು ನನ್ನ ಮಗನಾದ ಶ್ರೀ ಶರಣಪ್ಪ
ತಂದೆ ರಾಮಪ್ಪ ಸಿಂಗೆ ಜೋತೆಗೆ ಹೋಗಿ ನೋಡಲಾಗಿ ನನ್ನ ಮಗಳಾದ ಸುಮಿತ್ರಾಳಿಗೆ ಯಾರೋ ವ್ಯಕ್ತಿಗಳು
ಯಾವುದೋ ದುರುದ್ದೇಶದಿಂದ ಹೆಣ್ಣು ಮಕ್ಕಳು ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆಯಿಂದ ಕುತ್ತಿಗೆಗೆ
ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುತ್ತಾರೆ ಸುಮಿತ್ರಾಳಿಗೆ ದಿನಾಂಕ: 29-10-2019 ರ
4-00 ಪಿಎಮ್ ದಿಂದ ದಿ|| 30-10-2019 ರ ಬೆಳಗಿನ 8-00 ಗಂಟೆಯ ಮದ್ಯದ ಅವಧಿಯಲ್ಲಿ ಕೊಲೆ ಮಾಡಿರುತ್ತಾರೆ ನನ್ನ ಮಗಳನ್ನು ಕೊಲೆ ಮಾಡಿದವರನ್ನು
ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು
ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಅವಮ್ಮ ಗಂಡ ಸೋಮಣ್ಣಾ ಹಲಸಂಗಿ ಸಾ|| ಉಡಚಾಣ ರವರಿಗೆ
ಆಕಾಶ ಮತ್ತು ಸುರೇಶ ಅಂತ ಇಬ್ಬರು ಗಂಡು ಮಕ್ಕಳಿರುತ್ತಾರೆ
ನನ್ನ ಗಂಡನಾದ ಸೋಮಣ್ಣ್ ತಂದೆ ಬೀರಪ್ಪಾ ಹಲಸಂಗಿ ಈತನು ಒಕ್ಕಲುತನ ಮಾಡಿಕೊಂಡಿರುತ್ತಾನೆ ನಮಗೆ ಉಡಚಾಣ
ಸಿಮಾಂತರದಲ್ಲಿ ಹೊಲವಿದ್ದು ಸರ್ವೆ ನಂಬರ 41/2 ನೇದ್ದು ಇರುತ್ತದೆ. ಹಿಗಿದ್ದು ಇಂದು ದಿನಾಂಕ:30/10/2019 ರಂದು ಬೆಳಿಗ್ಗೆ
ನಾನು ಮತ್ತು ನನ್ನ ಗಂಡ ಕೂಡಿಕೊಂಡು ಮನೆಯಿಂದ 6-00 ಎ,ಎಮ್,ಸುಮಾರಿಗೆ ನಮ್ಮ ಹೊಲಕ್ಕೆ ಹೋಗಿರುತ್ತೇವೆ ನಾನು ಹೊಲದಲ್ಲಿ ಕಸ
ತಗೆಯುತ್ತಿದ್ದಾಗ ನನ್ನಿಂದ ಸ್ವಲ್ಪ ದೂರದಲ್ಲಿ ನನ್ನ ಗಂಡನು ಎತ್ತುಗಳನ್ನು ನಮ್ಮ ಹೊಲದ ಬಾಂದಾರಿಗೆ
ಮೇಯಿಸಲು ಬಿಟ್ಟು ಅಲ್ಲಿ ಗಿಡದ ಕೇಳಗೆ ಮಲಗಿಕೊಂಡಿದ್ದನು 6-30 ಎ,ಎಮ್.ಸುಮಾರಿಗೆ
ನನ್ನ ಗಂಡನು ಹಾವು ಕಡಿತೊ ಅಂತ ಚಿರಿದನು ಆಗ ನಾನು ಗಾಬರಿಯಿಂದ ಹೋಗಿ ನೋಡಲಾಗಿ ನನ್ನ ಗಂಡನಿಗೆ ಹೆಡಕಿನ ಕೇಳಗೆ ಬಿನ್ನಿನ ಮೇಲೆ ಸಣ್ಣ ಜೋಳದ ಕಾಳಿನಷ್ಷ ಎರಡು
ಚಿಕ್ಕೆ ಗುರುತುಗಳು ಕಂಡವು ನಂತರ ನಾನು ಪಕ್ಕದ ಹೊಲದಲ್ಲಿದ್ದ ನನ್ನ ಗಂಡನ ಅಣ್ಣತಮ್ಮಕಿಯವನಾದ ಶಂಕರಲಿಂಗ
ತಂದೆ ಕೆಂಚಪ್ಪ ಹಲಸಂಗಿ ರವರಿಗೆ ಕೂಗಿ ಕರೆದು ಖಾಸಗಿ ವಾಹನ ತರಿಸಿ ನನ್ನ ಗಂಡನಿಗೆ ಮಾಶಾಳ ಆಸ್ಪತ್ರೇಗೆ
ಕರೆದುಕೊಂಡು ಹೋಗುತ್ತೀರುವಾಗ ಮಾರ್ಗ ಮದ್ಯದಲ್ಲಿ ಕರಜಗಿ ಗ್ರಾಮದ ಹತ್ತಿರ 7-45 ಎ,ಎಮ್,ಸುಮಾರಿಗೆ
ನನ್ನ ಗಂಡನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ವಾಡಿ ಠಾಣೆ : ಶ್ರೀ ವಿಜಯ
ತಂದೆ ಮಾನಸಿಂಗ ರಾಠೋಡ ಮು:ಸಕ್ಕುನಾಯಕ ತಾಂಡಾ ನಾಲವಾರ ರವರು ಕಳೆದ 01 ವರ್ಷದ ಹಿಂದೆ
ನಾನು ಬಾಂಬೆಯಲ್ಲಿ ಕೂಲಿಕೆಲಸಕ್ಕೆ ಹೋದಾಗ ನಾಲವಾರ ಸ್ಟೇಷನ ತಾಂಡಾದ ಕಿರಣ ಮತ್ತು ರಾಹುಲ ಸಹ ಬಾಂಬೆಯಲ್ಲಿ
ಕೂಲಿಕೆಲಸ ಮಾಡುತ್ತಿದ್ದರು. ಒಂದು ದಿವಸ ಕ್ರೀಕೆಟ ಆಡುವ ಕಾಲಕ್ಕೆ ಕಿರಣ ಮತ್ತು ರಾಹುಲ ಇವರು ವಿನಾಕಾರಣ
ನನ್ನೊಂದಿಗೆ ಜಗಳ ಮಾಡಿ ಹೊಡೆ ಬಡೆ ಮಾಡಿದ್ದು ಅಲ್ಲದೇ ಮುಂದೆ ನಿನಗೆ ಬಿಡುವದಿಲ್ಲ ಮಗನೇ ಅಂತಾ ಬೆದರಿಕೆ
ಹಾಕಿದ್ದು ನಾನು ಅವರಿಗೆ ಅಂಜಿ ಸುಮ್ಮನಿದ್ದೆನು. ಈಗ ಸುಮಾರು 04 ತಿಂಗಳ ಹಿಂದೆ
ಅವರಿಗೆ ಅಂಜಿಕೊಂಡು ಬಾಂಬೆಯನ್ನು ಬಿಟ್ಟು ನಮ್ಮ ತಾಂಡಾಕ್ಕೆ ಬಂದು ಕೂಲಿ ನಾಲಿ ಕೆಲಸ ಮಾಡಿಕೊಂಡು
ಉಪ ಜೀವಿಸುತ್ತೆನೆ. ದೀಪಾವಳಿ ಹಬ್ಬಕ್ಕೆಂದು ಕಿರಣ ತಂದೆ ತುಳಸಿರಾಮ , ರಾಹುಲ ತಂದೆ
ಗೋವಿಂದ ರವರು ಸಹ ತಮ್ಮ ತಾಂಡಾಕ್ಕೆ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 29/10/2019 ರಂದು ಮದ್ಯಾಹ್ನ
02-30 ಗಂಟೆ ಸುಮಾರು ನಾನು ನಮ್ಮ ಮನೆಯಲ್ಲಿದ್ದಾಗ ಕಿರಣ ತಂದೆ ತುಳಸಿರಾಮ ರಾಠೋಡ
, ರಾಹುಲ ತಂದೆ ಗೋವಿಂದ ಜಾಧವ , ಗಂಗಿಬಾಯಿ ಗಂಡ
ತುಳಸಿರಾಮ ರಾಠೋಡ ರವರು ನನ್ನ ಮನೆಯ ಹತ್ತಿರ ಬಂದು ಕಿರಣ ಇತನು ‘’ಏ ವಿಜ್ಯಾ ಸುಳೇ
ಮಗನೇ ಮನೆಯ ಹೊರಗೆ ಬಾ’’ ಅಂತಾ ಕರೆದನು ಆಗ ನಾನು ಮನೆಯ ಹೊರಗಡೆ ಬಂದಾಗ ಕಿರಣ, ರಾಹುಲ, ಗಂಗಿಬಾಯಿ ರವರಿದ್ದು
ಗಂಗಿಬಾಯಿ ಇವಳು ಹಾಂಟ್ಯಾನ ಮಗನೇ ನನ್ನ ಮಗ ಕಿರಣ ಇತನಿಗೆ ಬಾಂಬೆಯಲ್ಲಿ ವಿನಾಕಾರಣ ಜಗಳ ಮಾಡಿ ಹೊಡೆದಿರುವೆ
ಅಂತಾ ನಿನ್ನ ಸೊಕ್ಕು ಹೆಚ್ಚಾಗಿದೆ ಮಗನೇ ಅಂತಾ ಬೈದು ಕಿರಣ ಇತನು ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ
ಕೈಯಿಂದ ಮೈ ಮೇಲೆ ಹಾಗೂ ಬೆನ್ನಿಗೆ ಹೊಡೆ ಬಡೆ ಮಾಡ ಹತ್ತಿದನು. ರಾಹುಲ ಇತನು ಅಲ್ಲೇ ಬಿದ್ದ ಕಲ್ಲನ್ನು
ತೆಗೆದುಕೊಂಡು ನನ್ನ ತಲೆಯ ಹಿಂದೆ ಹೊಡೆದು ರಕ್ತಗಾಯಪಡಿಸಿದನು. ಆಗ ಮನೆಯಲ್ಲಿದ್ದ ನನ್ನ ಅಣ್ಣ ರಾಜು, ಪ್ರೇಮ ತಂದೆ
ಚಂದು ರಾಠೋಡ,ಶ್ರೀಕಾಂತ ತಂದೆ ಚಂದು ರಾಠೋಡ ರವರು ಜಗಳ ಬಿಡಿಸಿರುತ್ತಾರೆ. ಆಗ ರಾಹುಲ
ಮತ್ತು ಕಿರಣ ಇವರು ಮಗನೇ ಇವರು ಜಗಳ ಬಂದು ಬಿಡಿಸಿದಾಗ ಸುಮ್ಮನಾಗಿರುತ್ತೆವೆ ಇಲ್ಲದಿದ್ದರೆ ನಿನಗೆ
ಖಲಾಸ ಮಾಡುತ್ತಿದ್ದೆವು ಅಂತಾ ಜೀವದ ಬೆದರಿಕೆ ಹಾಕುತ್ತ ಹೊರಟು ಹೋದರು. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.