Police Bhavan Kalaburagi

Police Bhavan Kalaburagi

Wednesday, October 30, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು
ಅಫಜಲಪೂರ ಠಾಣೆ : ದಿನಾಂಕ:29/10/2019 ರಂದು 4-00 ಪಿ,ಎಮ್,ಸುಮಾರಿಗೆ ಶ್ರೀ ಶಶಿಕಾಂತ ತಂದೆ ಬಸವರಾಜ ಸಾಕರೆ ಸಾ|| ತಾರಾಪೂರ ಹಾ|||| ಅಫಜಲಪೂರ ರವರ ತಮ್ಮನು ದುಧನಿ ಗ್ರಾಮದಲ್ಲಿರುವ ನನ್ನ ತಾಯಿಯ ತಂಗಿಗೆ ಮಾತನಾಡಿಸಿ ಬರುತ್ತೇನೆ ಅಂತ ಮನೆಯಿಂದ ನನ್ನ ಮೋಟಾರ ಸೈಕಲ ನಂಬರ ಕೆ,-41 ಇಬಿ-1220 ನೇದ್ದನ್ನು ತಗೆದುಕೊಂಡು ಹೋಗಿರುತ್ತಾನೆ ನಂತರ 4-30 ಪಿ,ಎಮ್,ಸುಮಾರಿಗೆ ಅಫಜಲಪೂರ ಪಟ್ಟಣದ ರಾಚಯ್ಯ ತಂದೆ ಗಂಗಯ್ಯ ಮಠ ರವರು ನನ್ನ ಮೊಬೈಲಗೆ ಕರೆ ಮಾಡಿ ತಿಳಿಸಿದ್ದೆನಂದರೆ ನಾನು ಅಪಜಲಪೂರ-ದುಧನಿ ರೊಡಿಗಿರುವ ಮಳೇಂದ್ರ ಮಠದ ಹೊಲದಲ್ಲಿದ್ದಾಗ 4-30 ಪಿ,ಎಮ್,ಸುಮಾರಿಗೆ ನಿನ್ನ ತಮ್ಮನು ಅಫಜಲಪೂರದಿಂದ ದುಧನಿ ಕಡೆ ಹೋಗುತ್ತಿರುವಾಗ ಎದುರುಗಡೆಯಿಂದ ದುಧನಿ ಕಡೆಯಿಂದ ಬರುತ್ತಿದ್ದ ಕೆ,ಎಸ್,ಆರ್,ಟಿ,ಸಿ ಬಸ್ ನಂಬರ ಕೆ,-32 ಎಫ್-2148 ನೆದ್ದರ ಚಾಲಕನು ಬಸನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ರೊಡ ಬದಿಗೆ ಹೋಗುತ್ತಿದ್ದ ನಿನ್ನ ತಮ್ಮನ ಮೋಟಾರ ಸೈಕಲ ನೇದ್ದಕ್ಕೆ ಗುದ್ದಿ ಅಪಘಾತಪಡಿಸಿದ್ದು ಇರುತ್ತದೆ ಸದರಿ ಅಪಘಾತದಿಂದ ನಿನ್ನ ತಮ್ಮನು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ನನಗೆ ಪರಿಚಯದವರಾದ ಮಲ್ಲಿಕಾರ್ಜುನ ತಂದೆ ಶೀವರಾಯ ಲಾಳಸಂಗಿ ರವರು ಹೋಗಿ ನೋಡಲಾಗಿ ನನ್ನ ತಮ್ಮನಿಗೆ ಸದರಿ ಅಪಘಾತದಿಂದ ನನ್ನ ತಮ್ಮನಿಗೆ ತಲೆಯ ಹಿಂಭಾಗಕ್ಕೆ,ಎಡಗಡೆಗೆ ಕುತ್ತಿಗೆಯ ಹತ್ತಿರ ಭಾರಿಗಾಯ ಮತ್ತು ಎಡಗಾಲು ಮೋಣಕಾಲು ಕೇಳಗೆ ಕಾಲು ಮುರಿದು ನನ್ನ ತಮ್ಮನು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಮತ್ತು ಸದರಿ ಬಸ್ ಚಾಲಕನು ಅಪಘಾತಪಡಿಸಿದ ಬಸನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ಗೋತ್ತಾಯಿತು. ನನ್ನ ತಮ್ಮನಾದ ಉಮೇಶನಿಗೆ ಅಪಘಾತಪಡಿಸಿ ಸ್ಥಳದಲ್ಲಿಯೆ ಬಸ್ ಬಿಟ್ಟು ಓಡಿ ಹೋದ ಕೆ,ಎಸ್,ಆರ್,ಟಿ,ಸಿ ಬಸ್ ನಂಬರ ಕೆ,-32 ಎಫ್-2148 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಾಡಿ ಠಾಣೆ : ದಿನಾಂಕ 29/10/2019 ರಂದು ಮದ್ಯಾಹ್ನ 02-00 ಗಂಟೆ ಸುಮಾರು ಶ್ರೀ ದತ್ತಾತ್ರೇಯ ಸಿಪಿಸಿ-1013 ವಾಡಿ ಪೊಲೀಸ ಠಾಣೆ ರವರು ಮತ್ತು ಅಶೋಕ ಸಿಪಿಸಿ-1106 ರವರು ಕೂಡಿಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ಕುರಿತು ಹೊರಟು ಲಕ್ಷ್ಮೀಪೂರ ವಾಡಿಯಿಂದ  ರಾವೂರ ಮುಖಾಂತರ ಮುಂದೆ ಚಿತ್ತಾಪೂರ ಕಡೆಗೆ ಹೋಗುವ ರೊಡಿನ ಕಡೆಗೆ ಹೊರಟಾಗ ಬೈಪಾಸ ರೊಡ ಸಮೀಪ ಹೋಗುತ್ತಿದ್ದಂತೆ ಎದರುಗಡೆಯಿಂದ ಒಂದು ಗೂಡ್ಸ ವಾಹನದ ಚಾಲಕನು ಗೂಡ್ಸ ವಾಹನದಲ್ಲಿ ದನಗಳನ್ನು  ಹಿಂಸೆಯಾಗುವ ರೀತಿಯಲ್ಲಿ ಒಂದರ ಮೇಲೆ ಒಂದು ತುಂಬಿಕೊಂಡು ವಾಹನವನ್ನು ಅತಿವೇಗ ಹಾಗೂ ಆಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದನ್ನು ಕಂಡು ಆತನಿಗೆ ಕೈ ಮಾಡಿ ನಿಲ್ಲಿಸಲು ಹೇಳಿದರು ಸಹ ಹಾಗೇ ಸ್ವಲ್ಪ ಮುಂದಕ್ಕೆ ಓಡಿಸಿಕೊಂಡು ಹೊರಟಿದ್ದು ನಾವು ಮೊಟರ ಸೈಕಲ ಮೇಲೆ ಬೆನ್ನು ಹತ್ತಿದಾಗ ಸದರಿ ವ್ಯಕ್ತಿಯು ವಾಹನವನ್ನು ನಿಲ್ಲಿಸಿ ಅಲ್ಲಿಂದ ಓಡ ಹತ್ತಿದನು. ನಾವು ಆತನಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದರು ಸಹ ಸಿಗದೇ ಓಡಿ ಹೋದನು.ಆಗ ಸಮಯ 02-30 ಪಿ.ಎಮ್ ಆಗಿತ್ತು. ನಂತರ ವಾಹನದ ನಂಬರ ನೋಡಲಾಗಿ ಅಶೋಕ ಲೇ ಲ್ಯಾಂಡ ಕಂಪನಿಯ ಚಿಕ್ಕ ಗೂಡ್ಸ ವಾಹನ ಇದ್ದು ಅದರ ನಂಬರ ಕೆಎ-33 -3767 ಅಂತಾ ಬರೆದಿದ್ದು ಅದರ ಅಂದಾಜು ಕಿಮ್ಮತ್ತು 75 ಸಾವಿರ ರೂಪಾಯಿ ಆಗಬಹುದು ಒಳಗಡೆ 03 ಹೋರಿಗಳು ಹಾಗೂ 02 ಆಕಳುಗಳು ಹಿಂಸೆಯಾಗುವ ರೀತಿಯಲ್ಲಿ ಒಂದರ ಮೇಲೆ ಒಂದು ತುಂಬಿದ್ದು ಅವುಗಳನ್ನು ಪರಿಶೀಲಿಸಿ ನೋಡಲಾಗಿ 1] ಒಂದು ಕಪ್ಪು ಬಣ್ಣದ 2 ½ ವರ್ಷದ ಆಕಳು ಅದರ ಅಂದಾಜು ಕಿಮ್ಮತ್ತು 8 ಸಾವಿರ ರೂಪಾಯಿ 2] ಒಂದು ಕೆಂಪು ಬಣ್ಣದ 3 ½ ವರ್ಷದ ಆಕಳು ಅಂದಾಜು ಕಿಮ್ಮತ್ತು 11 ಸಾವಿರ ರೂಪಾಯಿ 3] ಒಂದು ಬಿಳಿ ಬಣ್ಣದ 1 ವರ್ಷದ  ಹೋರಿ ಅಂದಾಜು  ಕಿಮ್ಮತ್ತು 4 ಸಾವಿರ ರೂಪಾಯಿ 4] ಒಂದು ಕಪ್ಪುಬಣ್ಣದ 02 ವರ್ಷದ ಹೋರಿ ಅಂದಾಜು ಕಿಮ್ಮತ್ತು 6 ಸಾವಿರ ರೂಪಾಯಿ 5] ಒಂದು ಬಿಳಿ ಹಾಗೂ ಕಂದು ಬಣ್ಣದ 01 ವರ್ಷದ ಹೋರಿ ಅಂದಾಜು ಕಿಮ್ಮತ್ತು 3  ಸಾವಿರ ರೂಪಾಯಿ ಹೀಗೆ ಒಟ್ಟು 02 ಆಕಳು ಮತ್ತು 03 ಹೋರಿಗಳು ವಾಹನದ ನಂಬರ ಕೆಎ-33 -3767 ನೇದ್ದರಲ್ಲಿ ತುಂಬಿಕೊಂಡು ವಾಹನ ಚಾಲಕನು ಅವುಗಳಿಗೆ ಯಾವದೇ ಸುರಕ್ಷತೆ ಇಲ್ಲದೇ ಹಿಂಸೆಯಾಗುವ ರೀತಿಯಲ್ಲಿ ಒಂದರ ಮೇಲೆ ಒಂದು ಹಾಕಿಕೊಂಡು ವೇಗವಾಗಿ ಹಾಗೂ ಆಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು ಸದರಿ ವಾಹನ ಮತ್ತು ದನಗಳನ್ನು ಖಾಸಗಿ ವಾಹನ ಚಾಲಕನ ಸಹಾಯದಿಂದ ಪೊಲೀಸ ಠಾಣೆಗೆ ತಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದರ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ಟ್ಯಾಂಕ ಕುಸಿದು ಮಹಿಳೆ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀಮತಿ.ಗಂಗಮ್ಮ ಗಂಡ ಮಹಾದೇವಪ್ಪಾ ಬಿರಾದಾರ, ರವರು ದಿನಾಂಕ:29/10/2019 ರಂದು ಮಧ್ಯಾಹ್ನ  ನಮ್ಮೂರಿನ ಹನುಮಾನ ದೇವರ ಗುಡಿಯ ಹತ್ತಿರ ಇರುವ ಸಾರ್ವಜನಿಕ ನೀರಿನ ಟ್ಯಾಂಕಿಗೆ ನೀರು ತಲರು ಹೋದಾಗ, ನೀರಿನ ಟ್ಯಾಂಕ್ ಒಮ್ಮಿಂದ ಒಮ್ಮಿಂದಲೆ ಕುಸಿದು ಅವಳ ಮೈಮೇಲೆ ಬಿದ್ದಿದ್ದರಿಂದ ಅವಳ ತಲೆಗೆ ಎಡ ಕಪಾಳಿಗೆ ಹೊಟ್ಟೆಗೆ ಬೆನ್ನಿಗೆ ಎದೆಗೆ ಗಂಭೀರಗಾಯ ಹಾಗೂ ಗುಪ್ತಗಾಯಗಳು ಆಗಿದ್ದು, ಇದನ್ನು ನೋಡಿ ನಮ್ಮೂರಿನ ನಾಗರಾಜ ತಂದೆ ಶಿವರಾಜ್ ಬಿರಾದಾರ, ವಿಲಾಸ ತಂದೆ ಶಿವರಾಯ ಹಂಗರಗಾ ಪ್ರಭುಲಿಂಗ ತಂದೆ ಮಾಣಿಕರಾಯ ಬಿರಾದಾರ, ಈರಣ್ಣಾ ತಂದೆ ಶರಣಬಸಪ್ಪಾ ಬಿರಾದಾರ ಇವರೆಲ್ಲರೂ ಸೇರಿ ಬಂದು ಖಾಸಗಿ ಜೀಪಿನಲ್ಲಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತರುವಾಗ ಪಟ್ಟಣದ ಗ್ರಾಮದ ಹತ್ತಿರ ಮೃತಪಟ್ಟಿದ್ದಾರೆ,  ಸದರಿ ನೀರಿನ ಟ್ಯಾಂಕ್ ಹತ್ತುವರ್ಷಗಳ ಹಿಂದೆ ನಿರ್ಮಿಸಿದ್ದು, ಹೋದವರ್ಷ ಕುಸಿದು ಬಿದ್ದಿದ್ದು, ಆಗ ಗ್ರಾಮ ಪಂಚಾಯಿತಿಯವರು ಕಟ್ಟಿಸಿದ್ದು, ಇದನ್ನು ಕಟ್ಟಲು ನಮ್ಮೂರಿನ ಗ್ರಾಮ ಪಂಚಾಯಿತಿ ಸದಸ್ಯರಾದ ಜಾನಾಕಾಯಿ ಗಂಡ ನಾಗಪ್ಪಾ ಕೇರೂರ ಇವರ ಮಗನಾದ ಸಿದ್ದಪ್ಪಾ ತಂದೆ ನಾಗಪ್ಪಾ ಕೇರೂರ ಈತನಿಗೆ ಕೊಟ್ಟಿರುತ್ತಾರೆ. ಸಿದ್ದಪ್ಪನು ಕಟ್ಟಿಸುವಾಗ ಹಳೆಯ ಬೇಸಮಿಂಟ್ ಮೇಲೆ ನಿರೀನ ಟ್ಯಾಂಕ್ ಕಟ್ಟಡ ಕಟ್ಟಿದ್ದು ಇರುತ್ತದೆ. ಕಟ್ಟುವಾಗ ಕಳಪೆ ಮಟ್ಟದ ಕಮಗಾರಿ ಕಟ್ಟಿರುತ್ತಾನೆ. ಹೀಗಾಗಿ ನೀರಿನ ಟ್ಯಾಂಕ್ ಕುಸಿದು ಬಿದ್ದಿರುತ್ತದೆ. ಹೀಗಾಗಿ ನನ್ನ ತಾಯಿ ಮೃತಪಟ್ಟಿರುತ್ತಾಳೆ. ನನ್ನ ತಾಯಿಯ ಸಾವಿಗೆ ನೀರಿನ ಟ್ಯಾಂಕ್ ಕಟ್ಟಿಸಿದ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಅಧ್ಯಕ್ಷರು ಹಾಗೂ ಕಟ್ಟಡ ನಿರ್ಮಿಸಿದ ಗುತ್ತಿಗೆದಾರರು ಹಾಗೂ ಇಂಜಿನಿಯರಗಳು ಮತ್ತು ಸಿದ್ದಪ್ಪಾ ತಂದೆ ನಾಗಪ್ಪಾ ಕೇರೂರ ಇವರ ಬೆಜವಾಬ್ದಾರಿತನ ಹಾಗೂ ನಿರ್ಲಕ್ಷತನವೆ ಕಾರಣವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಠ್ಠಲ ತಂದೆ ನಿಂಗಪ್ಪ ಜಮಾದಾರ ಸಾ|| ಭೋಸಗಾ ರವರು ದಿನಾಂಕ 28-10-2019 ರಂದು 3:00 ಪಿ ಎಮ್ ಕ್ಕೆ ನಮ್ಮೂರಿನ ಜನರು ನಮ್ಮೂರಿನ ಶಿವಪ್ಪ ಹಿಟ್ನಳ್ಳೀ ರವರು ಹೊಲದ ಹತ್ತಿರ ಭಿಮಾ ನದಿಯಲ್ಲಿ ಅಂದಾಜು 25-30 ವರ್ಷ ವಯಸ್ಸಿನ ಗಂಡು ವ್ಯೆಕ್ತಿಯ ಶವವು ನೀರಿನಲ್ಲಿ ತೇಲುತ್ತಾ ಬಂದಿದೆ ಎಂದು ತಿಳಿಸಿದ ಮೇರೆಗೆ ನಾನು ಸಹ ಸ್ಥಳಕ್ಕೆ ಹೋಗಿ ನೋಡಲಾಗಿ ಶವವು ಬೋರಲಾಗಿ ಬಿದ್ದಿತ್ತು, ಶವದ ಮೈಮೈಲೆ ಅಂಡವೇರ ಬಟ್ಟೆ ಇದ್ದು ಯಾವುದೆ ಬಟ್ಟೆ ಇರಲಿಲ್ಲ. ಸದರಿ ವ್ಯೆಕ್ತಿ ಯಾವುದೊ ಸ್ಥಳದಲ್ಲಿ ನೀರಿನಲ್ಲಿ ಈಜಲು ಹೋಗಿ ಅಥವಾ ಮೀನು ಹಿಡಿಯಲು ಹೋಗಿ ನಿರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾನೆ. ಸದರಿ ಮೃತನ ಸಾವಿನಲ್ಲಿ ಸಂಶಯ ಇರುತ್ತದೆ ಎಂದು ಕೊಟ್ಟ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: