Police Bhavan Kalaburagi

Police Bhavan Kalaburagi

Thursday, March 29, 2018

Yadgir District Reported Crimes Updated on 29-03-2018


                                       Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ 71/2017 ಕಲಂ.379 ಐಪಿಸಿ;- ದಿನಾಂಕ: 28/03/2018 ರಂದು 8-30 ಎಎಮ್ ಕ್ಕೆ ಪಾಂಡುರಂಗ್ ಎಸ್. ಪೊಲೀಸ್ ಉಪ-ಅಧೀಕ್ಷಕರು ಯಾದಗಿರಿ ಉಪ ವಿಭಾಗ ಯಾದಗಿರಿ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ಫಿರ್ಯಾಧಿ ಸಲ್ಲಿಸಿದ್ದೇನಂದರೆ ಈ ಮೂಲಕ ಜ್ಞಾಪನಾ ನೀಡುವುದೆನೆಂದರೆ, ಇಂದು ದಿನಾಂಕ: 28/03/2018 ರಂದು ಬೆಳಗ್ಗೆ 7:00 ಗಂಟೆಗೆ ಯಾದಗಿರಿ ನಗರದಲ್ಲಿ ಇರುವಾಗ ಯಾದಗಿರಿ ನಗರ ಕಡೆ ರಾಚೋಟಿ ಗುಡಿಯ ಹತ್ತಿರ ಹಳ್ಳದಿಂದ ಟ್ರ್ಯಾಕ್ಟರದಲ್ಲಿ ಆಕ್ರಮವಾಗಿ ಮರಳು ತುಂಬಿಕೊಂಡು ಮೈಲಾಪೂರ ಬೇಸ್ ಕಡೆಗೆ ಬರುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ನಮ್ಮ ಚಾಲಕನಾದ ಸುಭಾಸ ಎಪಿಸಿ 108 ರವರಿಗೆ, ಮತ್ತು ಹನುಮೇಗೌಡ ಎಪಿಸಿ 71 ಬರಲು ಹೇಳಿ ಅವರು 7-10 ಎಎಮ್ ಕ್ಕೆ ಬಂದಿದ್ದು, ಎಲ್ಲರೂ ಕೂಡಿಕೊಂಡು ನಮ್ಮ ಸರಕಾರಿ ವಾಹನ ಕೆಎ.33.ಜಿ.127 ರಲ್ಲಿ ನಮ್ಮ ಆಫೀಸಿನಿಂದ ಬೆಳಗ್ಗೆ 7:15 ಗಂಟೆ ಸುಮಾರಿಗೆ ಹೊರಟು ಬೆಳಗ್ಗೆ.7-30 ಗಂಟೆಗೆ ಯಾದಗಿರಿ ನಗರದ ಚಕ್ಕರಕಟ್ಟಾ ಹತ್ತಿರ ಬಂದಾಗ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ನಮ್ಮ ಎದುರಿಗೆ ಬರುತ್ತಿದ್ದು, ಟ್ರ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದನು. ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಆಕ್ರಮವಾಗಿ ಮರಳನ್ನು ಕದ್ದು ಸಾಗಿಸುತ್ತಿದ್ದು  ಖಚಿತವಾಯಿತು ನಂತರ ನಾವು ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ ಇಂಜನ ನಂ. ಕೆಎ 33 ಟಿಎ 2850 ಮತ್ತು ಟ್ರ್ಯಾಲಿ ನಂ. ಕೆಎ 33 ಟಿಎ 2851 ಅಂತಾ ಇದ್ದು, ಅದರಲ್ಲಿ ಆಕ್ರಮವಾದ ಮರಳು ತುಂಬಿದ್ದು ಇತ್ತು. ಟ್ರ್ಯಾಕ್ಟರ ಚಾಲಕ ಓಡಿ ಹೋಗಿದ್ದರಿಂದ ಮತ್ತು ಮಾಲಿಕನ ಹೆಸರು ಗೊತ್ತಾಗಿರುವುದಿಲ್ಲಾ. ನಂತರ ಎಪಿಸಿ 108 ಸುಭಾಸನನ್ನು ಕುಳ್ಳರಿಸಿ ನಗರ ಠಾಣೆಗೆ ಹೋಗಲು ತಿಳಿಸಿ, ನಾನು ಮತ್ತು ಹನುಮೆಗೌಡ ಎಪಿಸಿ 71 ನನ್ನ ಸರಕಾರಿ ವಾಹನದಲ್ಲಿ ಕುಳಿತು ನಾನೇ ವಾಹನವನ್ನು ಚಲಾಯಿಸಿಕೊಂಡು ಟ್ರ್ಯಾಕ್ಟರದ ಹಿಂದೆ ನಗರ ಠಾಣೆಗೆ ಬೆಳಗ್ಗೆ 8:00 ಗಂಟೆಗೆ ಬಂದು ಟ್ರ್ಯಾಕ್ಟರನ್ನು ಠಾಣಾ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಠಾಣಾಧಿಕಾರಿಗಳಿಗೆ ಆಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಒಪ್ಪಿಸಿ, ನಂತರ ನಾನು ಸುಭಾಷ ಎಪಿಸಿ.108, ಹನುಮೇಗೌಡ ಎಪಿಸಿ 71, ನಮ್ಮ ಕಛೇರಿಗೆ ಹೋಗಿ ನಮ್ಮ ಕಛೇರಿ ಕಂಪ್ಯೂಟರ ಆಪರೇಟರ ಹನುಮನಗೌಡ ಎಪಿಸಿ.71 ಇವರಿಗೆ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಮಾಡಿಸಿ, ಕಛೇರಿಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು ಬೆಳಗ್ಗೆ 8-30 ಗಂಟೆಗೆ ಯಾದಗಿರಿ ನಗರ ಠಾಣೆಗೆ ಹೋಗಿ ಸರಕಾರಿ ತಫರ್ೆ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ ಮುಂದಿನ ಸೂಕ್ತ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ.ಎಂದು ಕೊಟ್ಟ ಸರಕಾರಿ ತಫರ್ೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 71/2018 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 53/2018 ಕಲಂ: 448, 449, 451, 453, 454, 461, 442, 443, 444, 378 ಐಪಿಸಿ;- ದಿನಾಂಕ 28-03-2018 ರಂದು ಸಾಯಂಕಾಲ 7-30 ಗಂಟೆಗೆ ಸದರಿ ಅಜರ್ಿಯು ಮಾನ್ಯ ಸಿಪಿಐ ಸಾಹೇಬರು ಯಾದಗಿರಿ ರವರ ಕಾಯರ್ಾಲಯದಿಂದ ವಸೂಲಾಗಿದ್ದು ಅದರ ಸಾರಾಂಶವೆನೆಂದರೆ ನಾನು ಗಿರಿಜಾ ಪಾಟೀಲ ಗಂಡ ರವೀಂದ್ರೆಡ್ಡಿ ಹೊನಗೇರಾದವರಾಗಿದ್ದು, ಇಲ್ಲಿ ನನ್ನ ಹೊಲ ಸವರ್ೆ ನಂಬರ 345 ರಲ್ಲಿಒಂದು ಚಿಕ್ಕ ಮಲ್ಲಯ್ಯನ ದೇವಸ್ಥನವಿದ್ದು, ಅದನ್ನು ಕೆಲವು ದುಷ್ಟರಾದ ನಮ್ಮೂರಿನ ನಿಂಗಪ್ಪ ಗುಡಿಗುಡಿ, ಈಶಪ್ಪ ರ್ಯಾಖ, ಬಸಲಿಂಗಪ್ಪ ತಂದೆ  ಹೊನ್ನಯ್ಯ ಉಪ್ಪಾರ, ಇವರೆಲ್ಲರೂ ಸೇರಿ ನಮ್ಮ ಒಪ್ಪಿಗೆಯಿಲ್ಲದೆ, ದೇವಸ್ಥಾನವನ್ನು ಕೆಡವಿ, ಸವರ್ೆ ನಂಬರ 345 ರ ಪಕ್ಕದಲ್ಲಿದ್ದ ನನ್ನದೇ ಹೊಲ ಸವರ್ೆ ನಂಬರ 379 ರ ಹೊಲವನ್ನು ಸಹ ಆಕ್ರಮಿಸಲು ಯತ್ನಿಸಿದಾಗ, ನಾನು ಯಾದಗಿರಿ ರೂರಲ್ ಪೊಲೀಸ್ ಸ್ಟೇಶನದಲ್ಲಿ ಒಂದು ದೂರನ್ನು ದಾಖಲಿಸಿದೆ, ಆದಾದ ನಂತರ ಈ ಮೇಲೆ ತಿಳಿಸಿದ ಕಿಡಿಗೇಡಿಗಳು ನಮ್ಮ ಹೊಲದಲ್ಲಿಯ ವಿಧ್ಯುತ್ ಸಂಪರ್ಕ ಕಡಿಯುವದು, ಬೊರವೆಲನ್ನು ಹಾಳು ಮಾಡುವದು, ನಮ್ಮ ಬೆಳೆಯನ್ನು ಹಾಳು ಮಾಡುವದು ಮುಂದುವರೆದಿದೆ, ಆದರೂ ನಾವು ಅದೆಲ್ಲವನ್ನು ಸಹಿಸಿಕೊಂಡರೂ, ನಿನ್ನೆ ಆ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಬೆಳಿಗ್ಗೆ ಮುಂಜಾನೆ ಸುಮಾರು 7 ಗಂಟೆಯ ಹೊತ್ತಿಗೆ, ಈಶಪ್ಪ ರ್ಯಾಖ, ಬಸಲಿಂಗಪ್ಪ ತಂದೆ ಹೊನ್ನಯ್ಯ ಉಪ್ಪಾರ ಮತ್ತು ಗುಡುಗುಡಿ ನಿಂಗಪ್ಪ ತಂದೆ ಖಂಡೆಪ್ಪ ಎನ್ನುವ ಈ ಮೂರು ಜನರು ಸೇರಿ ನಮ್ಮ ಸವರ್ೆ ನಂಬರ 345 ರಲ್ಲಿ ಯ ಕಟ್ಟಡದ ಬೀಗಗಳನ್ನು ಹೊಡೆದು ಅದರಲ್ಲಿ ಇಟ್ಟಿದ್ದ ಸುಮಾರು ನಾಲ್ಕು ಕೆ.ಜಿ. ಬೆಳ್ಳಿಯ ದೇವರ ವಿಗ್ರಹಗಳನ್ನು ಮತ್ತು ಕೆಲವು ಕ್ವಿಂಟಲ್ ದಿನಸಿ, ಅಕ್ಕಿ, ಜೋಳ ಬೆಳೆಯ ಚೀಲಗಳನ್ನು ಕಳ್ಳತನ ಮಾಡಿದ್ದಾರೆ, ಇದು ನಮ್ಮ ಗದ್ದೆ ಸಾಗುವಳಿ ಮಾಡುವ ನಿಂಗಪ್ಪ ಎಸ್.ಸಿ. ಮತ್ತು ಇತರರಿಂದ ಪೋನ ಮೂಲಕ ಗೋತ್ತಾದ ಮೇಲೆ ಲೋಕಪ್ಪ ತಂದೆ ಮಾರ್ತಂಡಪ್ಪ, ಬಸಲಿಂಗಪ್ಪ ತಂದೆ ಹೊನ್ನಯ್ಯ ಉಪ್ಪಾರ, ಗೋವಿಂದಪ್ಪ ಎಮ್ಮೆ, ಹನುಮಂತ ಬಾವನೊರ, ಮಲ್ಲಪ್ಪ ಕಸಂನಳ್ಳಿ ಮತ್ತು ದೇವಿಂದ್ರಪ್ಪ ಎನ್ನುವ ವ್ಯಕ್ತಿಗಳು ನಮ್ಮ ಜಮೀನಿನ ಕಟ್ಟಡಗಳಿಂದ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು, ಆಗ ಬೀಗ ಮುರಿದ ಕಾರಣ ಕೇಳಿದರೆ ನಮ್ಮ ಇಷ್ಟ, ನೀನು ಯಾರು ಎಂದು ಬಸಲಿಂಗ ಉಪ್ಪಾರ ಜೋರು ಮಾಡಿದನು, ಬಸಲಿಂಗ ಮತ್ತು ಇತನ ತಂದೆ ಹೊನ್ನಯ್ಯ ಎನ್ನುವವರು, ನಿಜಲಿಂಗಪ್ಪ ಪೂಜಾರಿ ಗುಂಡಗುತರ್ಿ ತಾ:ದೇವದುರ್ಗ ಎನ್ನುವ ವ್ಯಕ್ತಿಯನ್ನು ಪೂಜಾರಿ ತಾತಾ ದೇವರು ಎಂದು ನಂಬಿಸಿ ಈ ನಮ್ಮ ಜಾಗದಲ್ಲಿ ಪೂಜಾರಿಯ ಹೆಸರಿನಲ್ಲಿ ನಮ್ಮ ದೇವಸ್ಥಾನವನ್ನು ಅನ್ಯಾಯವಾಗಿ ಹಣ ಗಳಿಸುವ ಯತ್ನಿಸುತ್ತಿದ್ದಾರೆ, ಈಶಪ್ಪ ರ್ಯಾಖ ಮತ್ತು ನಿಂಗಪ್ಪ ಗುಡಗುಡಿ ಇವರು ಈ ದೇವಸ್ಥಾನದ ಹೆಸರಿನಲ್ಲಿ ಊರಿನಲ್ಲಿ ಮತ್ತು ಸರಕಾರದಿಂದ ಹಣ(ಚಂದಾ) ವಸೂಲಿ ಮಾಡಿ, ನಮ್ಮ ಹೊಲ, ಮತ್ತು ಹಣ ಎರಡನ್ನು ಕಬಳಿಸಲು ಯತ್ತನಿಸುತ್ತಿದ್ದಾರೆ, ಇದೇ ಕಾರಣಕ್ಕೆ ನಮ್ಮ ಎರಡು ಕಟ್ಟಡಗಳ ಬೀಗ ಹೊಡೆದು ಕಳ್ಳತನ ಮಾಡಿದ್ದಾರೆ, ನಿಂಗಪ್ಪ ಮತ್ತು ಈಶಪ್ಪ ರ್ಯಾಖ ಎನ್ನುವ ವ್ಯಕ್ತಿಗಳು ಕ್ರೀಮಿನಲ್ ಚರಿತ್ರೆ ಉಳ್ಳವರಾಗಿದ್ದು, ಇವರ ವಿರುಧ ಕ್ರಿಮಿನಲ್ ಕೇಸಗಳು ಯಾದಗಿರಿ ನ್ಯಾಯಾಲಯದಲ್ಲಿ ನಡೆಯುತ್ತಲಿವೆ, ನಿಂಗಪ್ಪ ಗುಡಗುಡಿಯ ವಿರುಧ ಎಸ್.ಪಿ.ಎಲ್ ಕೆಸ್ ನಂ 36/2012 ಈ ಕ್ರೀಮಿನಲ್ ಮೊಕದ್ದಮೆ ಎನ್.ಡಿ.ಪಿ.ಎಸ್ ಕಾಯ್ದೆ.ಕೆಳಗೆ ದಾಖಲಾಗಿದೆ. ಮತ್ತು ಈಶಪ್ಪ ರ್ಯಾಖನ ವಿರುಧ ಹೊನಗೇರಾ ಗ್ರಾಮ ಪಂಚಾಯತನ ಸುಳ್ಳು ದಾಖಲೆಗಳಡಿಯಲ್ಲಿ ಮತ್ತು ಸರಕಾರದ ಹಣ ದುರುಪಯೋಗ ಕುರಿತು ಕ್ರಿಮಿನಲ್ ಮೊಕದ್ದಮೆಗಳು ದಾಖಲೆಗಳು ಇವೆ, ಈ ಎಲ್ಲ ಕ್ರೀಮಿನಲ್ ಚರಿತ್ರೆ ಇರುವ ವ್ಯಕ್ತಿಗಳು, ನನ್ನ ಹೊಲ ಸವರ್ೆ ನಂಬರ 345 ರಲ್ಲಿ ಒಂದು ಚಿಕ್ಕ ದೇವಸ್ಥಣದ ಸಲುವಾಗಿ ನಮ್ಮ ಪೂತರ್ಿ ಹೊಲ 2 ಎಕರೆ 39 ಗುಂಟೆ ಮತ್ತು ಪಕ್ಕದ ಸವರ್ೆ ನಂ 379 ರನ್ನು ಕಬಳಿಸುವ ಹುನ್ನಾರದಿಂದ ಸೆಕ್ಸನ್ 448, 449, 451, 453, 454, 461, 442, 443, 444 ಮತ್ತು 378 ಐಪಿಸಿ ಪ್ರಕಾರ ಅಪರಾಧವನ್ನು ಎಸಗೆ ನನಗೆ ತೊಂದರೆ ಕೊಡುವ ಉದ್ದೇಶದಿಂದ ಈ ಎಲ್ಲಾ ಕೃತ್ಯ ಎಸಗಿದ್ದಾರೆ, ಆದ ಕಾರಣ ಈ ಅಪರಾಧ ವಿರುಧ ಕಾನೂನು ಕ್ರಮ ಕೈಗೊಂಡು ಎಫ್.ಐ.ಆರ್ ದಾಖಲಿಸಬೇಕೆಂದು ಕೋರಿಕೆ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 53/2018 ಕಲಂ 448, 449, 451, 453, 454, 461, 442, 443, 444, 378 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 54/2018  ಕಲಂ 323, 324, 504, 506 ಐಪಿಸಿ;- ದಿನಾಂಕ 28-03-2018 ರಂದು 8-30 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರೀದಮ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ಕೊಟ್ಟು ಅಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ಶ್ರೀ ಚಂದ್ರಶೇಖರ ತಂದೆ ಹಣಮಂತ ರಾಠೋಡ ವಯಾ:34 ಉ: ಸೆಂಟ್ರಿಂಗ್ ಕೆಲಸ ಜಾ: ಲಂಬಾಣಿ ಸಾ: ಎಮ್. ಹೊಸಳ್ಳಿ ತಾಂಡಾ ತಾ:ಜಿ: ಯಾದಗಿರಿ ಇವರು ಹೇಳಿಕೆ ನೀಡಿದ್ದು ಸಾರಾಂಶವೆನೆಂದರೆ ನಮ್ಮ ದೊಡ್ಡಪ್ಪನ ಮಗನಾದ ಪ್ರಕಾಶ ತಂದೆ ಶಂಕರ ರಾಠೋಡ ಇತನು ಈಗ ಕೆಲವು ದಿವಸಗಳಿಂದ ಕುಡಿದು ಬಂದು ನನಗೆ ಸಿಮ್ಮನೆ ಮಗನೇ ನಿನ್ನ  ಹೆಂಡತಿಗೆ ಹಡತಿನಿ ಚೋದು ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಬಂದಿದ್ದು ನಾನು ಆತನ ಕಡೆಗೆ ಗಮನ ಕೊಡದೇ ನಮ್ಮಷ್ಟಕ್ಕೆ ನಾನು ಸುಮ್ಮನಿದ್ದೆನು. ಇಂದು ದಿನಾಂಕ 28-03-2018 ರಂದು ಸಾಯಂಕಾಲ ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ನನ್ನ ತಂಗಿದೆ ಮಕ್ಕಳ ಆಪರೆಷನ್ ಆಗಿದ್ದ ಕಾರಣ ನಾನು ಇಲ್ಲಿಗೆ ಬಂದು ನಮ್ಮ ತಾಯಿಯಾದ ಬುಗ್ಗಮ್ಮಾ ಇವಳಿಗೆ ಬುತ್ತಿ ಕೊಟ್ಟು ಮರಳಿ ಮತ್ತೆ ನಮ್ಮ ತಾಂಡಾಕ್ಕೆ ಹೋದೇನು. ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ತಾಂಡಾದ ಸಕರ್ಾರಿ ಶಾಲೆ ಹತ್ತಿರ ನಾನು ಹಾಗೂ ನಮ್ಮ ತಾಂಡಾದ ಉಮೇಶ ತಂದೆ ಸೈದಪ್ಪಾ ರಾಠೋಡ ಹಾಗೂ ರಮೇಶ ತಂದೆ ಈಶಪ್ಪಾ ರಾಠೋಡ ಮೂವರು ಮಾತಾಡುತ್ತಾ ನಿಂತಿದ್ದೆವು. ಅದೇ ವೇಳಗೆ ನಮ್ಮ ದೊಡ್ಡಪ್ಪನ ಮಗನಾದ ಪ್ರಕಾಶ ತಂದೆ ಶಂಕರ ರಾಠೋಡ ಇತನು ಬಂದವನೇ ಒಮ್ಮೇಲೆ ನನಗೆ ಭೊಸಡಿ ಮಗನೇ ತಾಂಡಾದಲ್ಲಿ ನಿನ್ನ ಸೊಕ್ಕು ಬಹಳ ಆಗಿದೆ ಇವತ್ತ ಏನ್ ಸೆಂಟಾ ಕತ್ತುಕೊಳ್ಳತಿ ಕಿತ್ತಗೋ ರಂಡಿ ಮಗನೇ ಅಂತಾ ಬೈಯ್ಯಹತ್ತಿದನು. ಆಗ ಆತನಿಗೆ ನಾವು ಮೂರು ಜನರು ಈ ತರಹ ಯಾಕೆ ಬೈಯ್ಯುತ್ತಿದ್ದಿ ನೀನು ಸುಮ್ಮನೇ ಈ ತರಹ ಬೈಯ್ಯುವುದು ಸರಿಯಲ್ಲಾ ಅಂತಾ ಆತನಿಗೆ ಸಂಬಾಳಿಸಿ ಹೇಳುತ್ತಿದ್ದಾಗ ಒಮ್ಮೇಲೆ ಪ್ರಕಾಶನು ಮಗನೇ ನನಗೆ ಬುದ್ದಿ ಹೇಳಲಿಕ್ಕೆ ಬರತಿಯೇನು ಇವತ್ತ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೊಲಸು ಶಬ್ದಗಳಿಂದ ಬೈಯುತ್ತಾ ಅಲ್ಲಿಯೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಬಲಗಿವಿ ಹಿಂದೆ ಹೊಡೆದು  ರಕ್ತಗಾಯ ಮಾಡಿದನು. ಮತ್ತು ಕೈಯಿಂದ ಹೊಟ್ಟೆಗೆ ಗುದ್ದಿದನು ಆಗ ಅಲ್ಲಿಯೇ ಇದ್ದ ನಮ್ಮ ತಾಂಡಾದ ಉಮೇಶ ತಂದೆ ಸೈದಪ್ಪಾ ರಾಠೋಡ ಹಾಗೂ ರಮೇಶ ತಂದೆ ಈಶಪ್ಪಾ ರಾಠೋಡ ಸಮುಜಾಯಿಸಿ ಜಗಳಾ ಬಿಡಿಸಿ ಪ್ರಕಾಶನಿಗೆ ಅಲ್ಲಿಂದ ಕಳುಹಿಸಿದರು. ನನಗೆ ಹೊಡೆಬಡಿ ಮಾಡಿದ ಪ್ರಕಾಶ ತಂದೆ ಶಂಕರ ರಾಠೋಡ ಸಾ: ಎಮ್ ಹೊಸಳ್ಳಿ ತಾಂಡಾ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಿಬೇಕು ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ 9-30 ಪಿ.ಎಮ್ ಕ್ಕೆ ಠಾಣೆಗೆ ಬಂದು ಫಿರ್ಯಾಧೀಯ ಹೇಳಿಕೆಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 54/2018 ಕಲಂ 323,324, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 71/2018  ಕಲಂ.408,409,420 ಐಪಿಸಿ ;- ದಿನಾಂಕ 28-03-2018 ರಂದು 5-45 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಬಲವಂತ ತಂದೆ ಸಕಾರಾಮ ರಾಠೋಡ ವಯಾ|| 47 ವರ್ಷ ಜಾ|| ಲಂಬಾಣಿ ಉ|| ತಾಲೂಕ ಪಂಚಾಯತಿ ಯಾದಗಿರಿಯಲ್ಲಿ ಕಾರ್ಯನಿವರ್ಾಹಕ ಅಧಿಕಾರಿ ಸಾ|| ಬಿಜಾಪೂರ ದಗರ್ಾರೋಡ ಮಾನಸ ರೆಸ್ಸಿರೆನ್ಸಿಕಾಲೋನಿ ಮನೆ ನಂ 41 ಹಾ||ವ|| ಯಾದಗಿರಿ ಇವರು ಠಾಣೆಗೆ ಒಂದು ಗಣಕೀಕರಣ ಮಾಡಿಸಿದ ಪಿಯರ್ಾದಿಯನ್ನು ತಂದು ಹಾಜರ ಮಾಡಿದ್ದು ಅದರ ಸಾರಾಂಶ ವೇನಂದರೆ. ಬಾಡಿಯಾಳ ಗ್ರಾಮ ಪಂಚಾಯತಿಗೆ ಸಂಬಂದಿಸಿದಂತೆ 2013-14 ನೇಯ ಸಾಲಿನ ಎಮ್.ಜಿ.ಎನ್.ಅರ್.ಇ.ಜಿ.ಎ.ಯೋಜನೆ 2013-14 ನೇಯ ಸಾಲಿನ ಗ್ರಾಮ ಸ್ವರಾಜ ಹೆಚ್ಚುವರಿ ಕ್ರಿಯಾಯೋಜನೆ ಮತ್ತು 2013-14 ನೇಯ ಸಾಲಿನ ಬಿ.ಅರ್.ಜಿ.ಎಪ್. ಯೋಜನೆ ಈ ಎಲ್ಲಾ ಯೋಜನೆಗಳಿಗೆ ಗ್ರಾಮ ಪಂಚಾಯತಿಯಿಂದ ಕ್ರಿಯಾಯೋಜನೆಗಳನ್ನು ತಯ್ಯಾರಿಸಿದ್ದು. ಅದರ ಅಂದಾಜು ಪತ್ರಿಕೆಗಳನ್ನು ತಯ್ಯಾರಿಸದೆ ಸರಕಾರದ ಮಾರ್ಗಸೂಚಿಗಳ ಪ್ರಕಾರ ಕಾಮಗಾರಿಗಳನ್ನು ನಿರ್ವಹಿಸದೆ. ಸರಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡು ಕರ್ತವ್ಯಲೋಪವೆಸಗಿಸುವ ಶ್ರೀ ಬಾಲಯ್ಯಾ ಹಿಂದಿನ ಅದ್ಯಕ್ಷರು ಗ್ರಾಮ ಪಂಚಾಯತಿ ಬಾಡಿಯಾಳ. ಮತ್ತು ಹಿಂದಿನ ಪಂಚಾಯತಿಯ ಅಭಿವೃದ್ದಿ ಅಧಿಕಾರಿಯಾದ ಸಿ. ಅಣ್ಣರಾವ್ ಉಡಗಿ ವಿರುದ್ದ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು 16-03-2018 ರಂದು ನನ್ನ ಪರವಾಗಿ ಸಹಾಯಕ ನಿದರ್ೆಶಕರು (ಗ್ರಾಉ) ವಿಷಯ ನಿವರ್ಾಹಕರೊಂದಿಗೆ ಬೇಟಿ ನೀಡಿದಾಗ ತಾವು ಕೊರ್ಟ ಕೆಲಸದ ನಿಮಿತ್ಯ ಬೆಂಗಳೂರಿಗೆ ತೆರಳಿರುವದಾಗಿ ತಮ್ಮ ಕಾರ್ಯಲಯದ ಶ್ರೀ ರವಿಂದ್ರ ನಾಯಕ ಜಮಾದಾರ ರವರು ತಿಳಿಸಿರುತ್ತಾರೆ.    ಪ್ರಯುಕ್ತ ಮೇಲಿನ ಎಲ್ಲಾ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವ ಶ್ರೀ ಬಾಲಯ್ಯಾ ಹಿಂದಿನ ಅದ್ಯಕ್ಷರು ಗ್ರಾಮ ಪಂಚಾಯತಿ ಬಾಡಿಯಾಳ. ಒಟ್ಟು ರೂಪಾಯಿಗಳು 13.59.500=00 ಮತ್ತು ಹಿಂದಿನ ಪಂಚಾಯತಿ ಅಭಿವೃದ್ದಿ ಅಧೀಕಾರಿಯಾದ. ಸಿ. ಅಣ್ಣರಾವ್ ಉಡಗಿ ಒಟ್ಟು ರೂಪಾಯಿ.13.59.500=00 ರೂಗಳನ್ನು ಸರಕಾರಕ್ಕೆ ಆಗಿರುವ  ಆಥರ್ಿಕ ನಷ್ಟ ಒಟ್ಟು ರೂಪಾಯಿ 27.1900=00 ರೂಗಳು ವಸೂಲಾತಿ ಮಾಡಲು ಸದರಿಯವರ ವಿರುದ್ದ ಕ್ರಿಮಿನಲ್ ಮೊಕದ್ದಮ್ಮೆ ಹೂಡಿ ಪ್ರಥಮ ವರ್ತಮಾನ ವರದಿ ಸಲ್ಲಿಸುವಂತೆ ಮಾನ್ಯರವರಲ್ಲಿ ಪುನಃ ಕೋರಲಾಗಿದೆ ಅಂತಾ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 71/2018 ಕಲಂ 408.409.420. ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 118/2018 ಕಲಂ 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್.ಆಕ್ಟ್  ;- ದಿನಾಂಕ: 28/03/2018 ರಂದು 8.15 ಎ.ಎಂ.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ನಾಗರಾಜ.ಜಿ ಪಿಐ ಶಹಾಪುರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟ್ರಾಕ್ಟರನ್ನು ಹಾಜರಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿ ಸಾರಾಂಶವೇನೆಂದರೆ, ಇಂದು ದಿನಾಂಕ: 28/03/2018 ರಂದು ಬಾತ್ಮಿಯಾದಾರದ ಮೇಲೆ ಪಿಸಿ-198, 141 ರವರೊಂದಿಗೆ ಶಹಾಪುರ-ಯಾದಗಿರಿ ಮುಖ್ಯರಸ್ತೆಯ ದೋರನಳ್ಳಿ ಕೆನಾಲ ಹತ್ತಿರ ಹೋದಾಗ ಒಂದು ಮಹಿಂದ್ರಾ ಕಂಪನಿಯ ಟ್ರಾಕ್ಟರದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದುದನ್ನು ನೋಡಿ ಅದನ್ನು ನಿಲ್ಲಿಸಿ ಅದರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಪರವಾನಿಗೆ ಪತ್ರದ ಬಗ್ಗೆ ವಿಚಾರಿಸಿದಾಗ ಸದರ ಟ್ರಾಕ್ಟರ್(ಇಂಜಿನ್.ನಂ.ಓಙಖಿಘ8835) ನೇದ್ದರ ಚಾಲಕನು ಯಾವುದೇ ಪರವಾನಿಗೆ ಇಲ್ಲಾ ಅಂತಾ ಹೇಳಿದಾಗ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತವಾಗಿದ್ದರಿಂದ ಸದರಿ ಮರಳು ತುಂಬಿದ ಟ್ರಾಕರನ್ನು ಮತ್ತು ಆರೋಪಿತನೊಂದಿಗೆ ಬರುತ್ತಿದ್ದಾಗ ಆರೋಪಿತನು ಶಹಾಪುರದ ಮಾರುತಿ ಮಂದಿರದ ಹತ್ತಿರ ಟ್ರಾಕ್ಟರ ನಿಲ್ಲಿಸಿ ಓಡಿ ಹೋಗಿದ್ದು ಮುಂದಿನ ಕ್ರಮ ಜರುಗಿಸಲು ಟ್ರಾಕ್ಟರನ್ನು ಠಾಣೆಗೆ ತಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದ್ದು ಇರುತ್ತದೆ ಅಂತಾ ಇತ್ಯಾದಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 118/2018 ಕಲಂ 379 ಐಪಿಸಿ ಮತ್ತು 44(1) ಕೆ.ಎಂ.ಎಂ.ಸಿ.ಆರ್. ಆಕ್ಟ್  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 81/2018 ಕಲಂ: 143, 147, 148, 323, 324, 307, 498(ಎ), 504, 506, 149 ಐಪಿಸಿ;- ದಿನಾಂಕ 28/03/2018 ರಂದು 8-10 ಪಿಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಇಂದು ದಿನಾಂಕ: 28/03/2018 ರಂದು 9 ಎಎಮ್ಕ್ಕೆ ಆರೋಪಿತರೆಲ್ಲರೂ ಕೂಡಿ ನನಗೆ ನೀನು ಸರಿಯಾಗಿಲ್ಲ ಅವರ ಇವರ ಜೊತೆ ಮಾತಾಡುತ್ತಿ ಮತ್ತು ನಮಗೂ ಸಹ ಎದುರು ಮಾತನಾಡುತ್ತೀ ಅಂತ ನನ್ನ ಗಂಡ, ಅತ್ತೆ ಹಾಗೂ ನಾದಿನಿಯರು ಮತ್ತು ನಾದಿನಿಯರ ಗಂಡಂದಿರು ಸೇರಿ ಕೊಲೆ ಮಾಡುವ ಉದ್ದೇಶದಿಂದ ಮೈಮೇಲೆ ಖಾರದ ಪುಡಿ ಹಾಗೂ ಸೀಮೆಎಣ್ಣೆ ಸುರುವಿ ಮನಬಂದಂತೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು ಸದರಿಯವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 82/2018 ಕಲಂ: 279, 337, 338 ಐಪಿಸಿ;- ದಿ: 28/03/2018 ರಂದು ಜಿ.ಜಿ.ಹೆಚ್ ಕಲಬುರಗಿಯಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ 3-00 ಪಿ.ಎಮ್ ಕ್ಕೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಶ್ರೀ ಮರೆಪ್ಪ ತಂದೆ ಮರೆಪ್ಪ ಸತ್ಯಂಪೇಟ ಸಾಃ ರುಕ್ಮಾಪೂರ ಇವರ ಹೇಳಿಕೆ ಫಿರ್ಯದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ದಿನಾಂಕಃ 25/03/2018 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಮರೆಮ್ಮ, ನನ್ನ ತಮ್ಮನ ಹೆಂಡತಿಯಾದ ದುರ್ಗಮ್ಮ ಗಂಡ ಶರಣಪ್ಪ ಸತ್ಯಂಪೇಟ ಹಾಗು ನನ್ನ ತಮ್ಮನ ಮಗನಾದ ಶಿಲಿಂಗಾ ತಂದೆ ಶರಣಪ್ಪ ಎಲ ಟಂ ಟಂ ಅಟೋರಿಕ್ಷಾ ನಂಬರ ಕೆ.ಎ 33 ಎ 2134 ನೇದ್ದರಲ್ಲಿ ಕುಳಿತುಕೊಂಡು ರುಕ್ಮಾಪೂರ ಗ್ರಾಮದಿಂದ ಕುಡ್ಲೂರ ಗ್ರಾಮಕ್ಕೆ ಹೋಗಿ ಬಸವಣ್ಣ ದೇವರ ದರ್ಶನ ಮಾಡಿಕೊಂಡು ಮದ್ಯಾಹ್ಮ 3 ಗಂಟೆಯ ಸುಮಾರಿಗೆ ಅಲ್ಲಿಂದ ಮರಳಿ ಮನೆಗೆ ಹೊರಟೇವು. ನಾವು ಯಾದಗಿರಿ ಹತ್ತಿಗೂಡೂರ ಮಾರ್ಗವಾಗಿ ರುಕ್ಮಾಪೂರ ಕಡೆಗೆ ಬರುತ್ತಿದ್ದಾಗ ಲಕ್ಷ್ಮೀಪೂರ ಕ್ರಾಸ್ ಹತ್ತಿರದ ಬ್ರಿಡ್ಜ್ ದಾಟಿದ ಬಳಿಕ ಸಾಯಂಕಾಲ 6-15 ಗಂಟೆಯ ಸುಮಾರಿಗೆ ಹಿಂದಿನಿಂದ ಟಿಪ್ಪರ ನಂಬರ ಕೆ.ಎ 33 ಎ 4815 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ನಮ್ಮ ಅಟೋರಿಕ್ಷಾ ಓವರಟೇಕ್ ಮಾಡುತ್ತಿದ್ದಾಗ ಒಮ್ಮೆಲೆ ಟಿಪ್ಪರ ಎಡಕ್ಕೆ ತಿರುಗಿಸಿ ನಮ್ಮ ಅಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ್ದರಿಂದ ಅಟೋರಿಕ್ಷಾ ಎಡಕ್ಕೆ ಪಲ್ಟಿಯಾಗಿ ಬಿದ್ದಿತು. ಇದರಿಂದ ನನ್ನ ಬಲಭುಜಕ್ಕೆ ಗುಪ್ತಗಾಯ, ಬಲಕಿವಿಗೆ ರಕ್ತಗಾಯವಾಗಿದ್ದು, ಎಡಗಾಲಿನ ಚೆಪ್ಪೆಗೆ ಭಾರಿಗುಪ್ತ ಗಾಯವಾಗಿರುತ್ತದೆ. ಹಾಗು ನನ್ನ ತಾಯಿಯವರಿಗೆ ಎದೆಗೆ, ಎಡಪಕ್ಕಡಿಗೆ ಹಾಗು ಹೊಟ್ಟೆಗೆ ಗುಪ್ತಗಾಯವಾಗಿದ್ದು, ಎಡಗೈಗೆ ಭಾರಿಗುಪ್ತಗಾಯವಾಗಿ ಮುರಿದಂತಾಗಿರುತ್ತದೆ. ನನ್ನ ತಮ್ಮನ ಹೆಂಡತಿ ದುರ್ಗಮ್ಮಳಿಗೆ ತಲೆಗೆ ರಕ್ತಗಾಯವಾಗಿದ್ದು, ಮೂಗಿಗೆ, ಎಡಗೈಗೆ, ಬಲಮೊಣಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಹಾಗು ಬಲಮುಂಡಿಗೆ, ಎಡಗಾಲಿಗೆ ಗುಪ್ತಗಾಯಗಳಾಗಿರುತ್ತದೆ. ನನ್ನ ತಮ್ಮನ ಮಗ ಶಿಲಿಂಗನಿಗೆ ಬಲಮುಂಡಿಗೆ ಗುಪ್ತಗಾಯವಾಗಿರುತ್ತದೆ. ಅಟೋರಿಕ್ಷಾ ಚಾಲಕನಾದ ಮಲ್ಲಪ್ಪನ ಬಲಗಾಲು ಮುರಿದಿದ್ದು, ಎಡಗೈಗೆ ರಕ್ತಗಾಯ, ಮುಖದ ಮೇಲೆ ಅಲ್ಲಲ್ಲಿ ಹಾಗು ಎದೆಯ ಮೇಲೆ ತರಚಿದ ರಕ್ತಗಾಯಗಳಾಗಿರುತ್ತದೆ. ಅಪಘಾತ ಪಡಿಸಿದ  ಬಳಿಕ ಟಿಪ್ಪರ ಚಾಲಕನು ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿ ನಂತರ ಟಿಪ್ಪರ ಸಮೇತ ಓಡಿ ಹೋಗಿದ್ದು, ಆತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ನೋಡಿದರೆ ಗುತರ್ಿಸುತ್ತೇವೆ ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 82/2018 ಕಲಂಃ 279, 337, 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.