ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-05-2021
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 27/2021, ಕಲಂ. 379 ಐಪಿಸಿ :-
ಫಿರ್ಯಾದಿ ನರಸಿಂಗ ತಂದೆ ನಾರಾಯಣರಾವ ವಯ: 37 ವರ್ಷ, ಸಾ: ಮಾಳೆಗಾಂವ, ತಾ: ಜಿ: ಬೀದರ ರವರು ತನ್ನ ಗೆಳೆಯನಾದ ಸಂಗಪ್ಪಾ ತಂದೆ ಶಂಕರೆಪ್ಪಾ ಟೇಕೂರ ವಯ: 36 ವರ್ಷ, ಜಾತಿ: ಲಿಂಗಾಯತ, ಸಾ: ಮಾಳೆಗಾಂವ ಗ್ರಾಮ, ತಾ: ಜಿ: ಬೀದರ ರವರ ಹೀರೊ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಸಂ. ಕೆ.ಎ-38/ಕೆ-8215, ಚಾಸಿಸ್ ನಂ. MBLHA10EZAHH05244, ಇಂಜಿನ್ ನಂ. HA10EFAHH23831, ಮಾಡಲ್ 2010, ಬಣ್ಣ: ಸಿಲ್ವರ್ ಬಣ್ಣ ಹಾಗೂ ಅ.ಕಿ 18,000/- ರೂಪಾಯಿ ನೇದನ್ನು ಬೀದರ ನಗರದ ಬಸವೇಶ್ವರ ವೃತ್ತದ ಹತ್ತಿರ ಇರುವ ಡಾ:ಹತ್ತಿ ಕಾಂಪ್ಲೇಕ್ಸ್ ಹತ್ತಿರ ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ದಿನಾಂಕ 30-03-2021 ರಂದು 1530 ಗಂಟೆಯಿಂದ 1545 ಗಂಟೆಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 92/2021, ಕಲಂ. 379 ಐಪಿಸಿ :-
ದಿನಾಂಕ 11-05-2021 ರಂದು 0930 ಗಂಟೆಯಿಂದ 1130 ಗಂಟೆಯ ಮಧ್ಯದ ಅವಧಿಯಲ್ಲಿ ಮಿನಿ ವಿಧಾನ ಸೌಧಾದ ಎದುರುಗಡೆ ನಿಲ್ಲಿಸಿದ ಫಿರ್ಯಾದಿ ಫಿರ್ಯಾದಿ ರಹಿಮೋದ್ದಿನ ತಂದೆ ಕರೀಮಸಾಬ ಕಾರಿಗಾರ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ತಾಜಪೂರಾ ಬಸವಕಲ್ಯಾಣ ರವರ ಮೊಟಾರ ಸೈಕಲ್ ನಂ. ಕೆಎ-56/ಜೆ-7074, ಚಾಸಿಸ್ ನಂ. ME4JC65DJKD096234, ಇಂಜಿನ್ ನಂ. JC65ED0192043, ಮಾಡಲ್ 2019, ಬಣ್ಣ: ಗ್ರೇ ಬಣ್ಣ ಹಾಗೂ ಅ.ಕಿ 49,000/- ರೂಪಾಯಿ ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 18/2021, ಕಲಂ. 279, 337, 338 ಐಪಿಸಿ :-
ದಿನಾಂಕ 16-05-2021 ರಂದು ಫಿರ್ಯಾದಿ ರಂಗರಾವ ತಂದೆ ವೆಂಕಟ ಕಾಸ್ಲೆ ವಯ: 45
ವರ್ಷ, ಜಾತಿ: ಒಡೆಯರ್, ಸಾ: ಎಕಂಬಾ ರವರು ತನ್ನ ಅಜ್ಜಿ ಲಕ್ಷ್ಮೀಬಾಯಿ ಇವರ ಅಂತಿಮ ಸಂಸ್ಕಾರಕ್ಕೆ
ತನ್ನ ಹೆಂಡತಿ ತಂಗಿಯ ಗಂಡನಾದ ಶಿವಾಜಿ ತಂದೆ ಮಾರುತಿ ಶೇಲ್ಲಾಳೆ ವಯ:
40 ವರ್ಷ,
ಸಾ:
ತೇರಗಾಂವ, ತಾ:ನಳೆಗಾಂವ (ಎಮ್.ಎಸ್) ಇವರು ಬಂದು
ಅಂತಿಮ ಸಂಸ್ಕಾರ ಮುಗಿಸಿಕೊಂಡು ಮರಳಿ ತನ್ನ ಹೊಂಡಾ ಶೈನ್ ಮೊಟಾರ ಸೈಕಲ ನಂ. ಎಮ್.ಎಚ್-24/ಎ.ಎಚ್-9036 ನೇದರ ಮೇಲೆ ತನ್ನ ಗ್ರಾಮಕ್ಕೆ ತೇರಗಾಂವಕ್ಕೆ ಹೋಗುವಾಗ
ಹುಲ್ಯಾಳ ಎಕಂಬಾ ರಸ್ತೆಯ ಹುಲ್ಯಾಳ ಶಿವಾರದಲ್ಲಿ ಹಣಮಂತ ಬಿರಾದಾರ ಇವರ ಹೊಲದ ಹತ್ತಿರ ರಸ್ತೆಯ ತಿರುವಿನಲ್ಲಿ ತನ್ನ
ಅತಿವೇಗ ಹಾಗು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗಿ ಮೊಟಾರ ಸೈಕಲ ಹಿಡಿತ ತಪ್ಪಿ ಕೆಳಗೆ ಬಿದ್ದಿರುತ್ತಾರೆ, ಇದರಿಂದ
ಅವರಿಗೆ ಎಡಗಡೆ
ಮೊಳಕಾಲಿಗೆ ರಕ್ತಗಾಯ,
ಎಡಗಡೆ ಕಣ್ಣಿನ ಮೇಲೆ ಮತ್ತು ಹುಬ್ಬಿನ ಮೇಲೆ ರಕ್ತಗಾಯ ಹಾಗು ಮೇಲ್ತುಟಿಗೆ ಭಾರಿ ರಕ್ತಗಾಯವಾಗಿ
ಮೇಲಿನ ಹಲುಗಳ್ಲು ಬಿದ್ದಿರುತ್ತವೆ ಮತ್ತು ಮೂಗಿನ ಮೇಲೆ ತರಚಿದ ರಕ್ತಗಾಯ ಹಾಗು ಎಡಗಾಲ ಹೆಬ್ಬೆರಳಿಗೆ ತರಚಿದ ರಕ್ತಗಾಯವಾಗಿರುತ್ತದೆ,
ನಂತರ
ಅವರಿಗೆ 108 ಅಂಬುಲೇನ್ಸ ನಲ್ಲಿ
ವಾಜಿ ಶೆಲ್ಲಾಳೆ ಇತನಿಗೆ ಹಾಕಿಕೊಂಡು ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು
ಮಾಡಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.