ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ
06-06-2020
ಚಿಟಗುಪ್ಪಾ ಪೊಲೀಸ ಠಾಣೆ
ಯು.ಡಿ.ಆರ್
ಸಂ. 09/2020, ಕಲಂ.
174(ಸಿ) ಸಿ.ಆರ್.ಪಿ.ಸಿ
:-
ದಿನಾಂಕ 05-06-2020 ರಂದು ಫಿಯಾಱದಿ ವಿಜಯಲಕ್ಷ್ಮೀ ಗಂಡ ಭರತ ಮೇತ್ರೆ, ವಯ: 45 ವರ್ಷ, ಜಾತಿ: ಎಸ್.ಸಿ, ಸಾ: ಇಟಗಾ ರವರ ಮಗಳಾದ
ಬಿಂದು ತಂದೆ ಭತರ ಮೇತ್ರೆ ವಯ: 20 ವರ್ಷ, ಜಾತಿ: ಎಸ್.ಸಿ, ಸಾ: ಇಟಗಾ ಇಕೆಯು ತನಗೆ
ಮದುವೆಯಾಗಿ ಒಂದು ವರ್ಷದೊಳಗೆ ವಿಚ್ಛೇದನೆಯಾಗಿದ್ದರಿಂದ ಅದನ್ನೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಮ್ಮ ಮನೆಯ ಒಳಗಡೆ ತಗಡದ ಕೆಳಗಿರುವ ಕಟ್ಟಿಗೆಯ ದಂಟಕ್ಕೆ ತನ್ನ ಓಡನಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ, ತನ್ನ ಮಗಳ ಸಾವಿನ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿಯಾಱದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ)
ಪೊಲೀಸ್ ಠಾಣೆ ಅಪರಾಧ ಸಂ
75/2020, ಕಲಂ. 269, 270, 271 ಐಪಿಸಿ
:-
ದಿನಾಂಕ 05-06-2020 ರಂದು
ಫಿಯಾಱದಿ
ಸಂಗಪ್ಪಾ ಹೂಗಾರ ಗ್ರಾಮ ಪಂಚಾಯತ ಅಭಿವೃಧ್ದಿ ಅಧಿಕಾರಿಗಳು ದುಬಲಗುಂಡಿ ರವರು ಮಾರ್ಚ ತಿಂಗಳಿಂದ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಹೊರ ರಾಜ್ಯ ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಂದ ಬಂದ ಜನರಿಗೆ ಸರಕಾರಿ ಪ್ರೌಢ ಶಾಲೆ ದುಬಲಗುಂಡಿ ಹಾಗೂ ಬಾಲಕಿಯರ ವಸತಿ ನಿಲಯ ದುಬಲಗುಂಡಿಯಲ್ಲಿ ಕ್ವಾರೆಂಟೈನ ಮಾಡುತ್ತಾ ಬಂದಿದ್ದು, ಹೀಗಿರುವಾಗ ದಿನಾಂಕ 12-05-2020 ರಂದು ಮಹಾರಾಷ್ಟ್ರದ ಕಲ್ಯಾಣದಿಂದ ಪವನ ತಂದೆ ಬಸಪ್ಪಾ ನಿಡವಂಚಾ ವಯ: 22 ವರ್ಷ, ಜಾತಿ: ಎಸ್.ಸಿ ಮಾದಿಗ ರವರು ಬಂದಿದ್ದು ಸದರಿಯವರನ್ನು ದಿನಾಂಕ 28-05-2020 ರವರೆಗೆ ಸಂಸ್ಥಿಕ ಕ್ವಾರೆಂಟೈನನಲ್ಲಿ ಇಟ್ಟಿದ್ದು, ದಿನಾಂಕ 28-05-2020 ರಂದು ಸದರಿ ಪವನ ತಂದೆ ಬಸಪ್ಪಾ ಇವರಿಗೆ ಹೋಮ ಕ್ವಾರೆಂಟೈನ್ನಲ್ಲಿ ಇರಲು ತಿಳಿಸಿ ಬಿಡುಗಡೆ ಮಾಡಿದ್ದು ಇರುತ್ತದೆ, ಆದರೆ ಸದರಿ ಪವನ ಇತನು ಹೊಮ್ ಕ್ವಾರೆಂಟೈನ ಆದೇಶವನ್ನು ಉಲ್ಲಂಘಿಸಿರುತ್ತಾನೆ, ಅಲ್ಲದೆ ಸದರಿ ಪವನ ಇತನ ತಾಯಿಯಾದ ಸೂಲೆಮ್ಮಾ ಗಂಡ ಬಸಪ್ಪಾ ನಿಡವಂಚಾ ವಯ: 45 ವರ್ಷ ರವರು ದಿನಾಂಕ 01-06-2020 ರಂದು 1300 ಗಂಟೆಯಿಂದ 1400 ಗಂಟೆಯ ಮದ್ಯಾವಧಿಯಲ್ಲಿ ತಮ್ಮ ಮನೆಯಲ್ಲಿ ಬಗದಲ್ ಗ್ರಾಮದ ಸಂಬಂಧಿಕರಾದ 1) ರಾಜಕುಮಾರ ತಂದ ಮಾಣಿಕ ವಯ: 25 ವರ್ಷ, 2) ಅಶೋಕ ತಂದೆ ಬಾಬು ವಯ: 42 ವರ್ಷ, 3) ಪ್ರಭು ತಂದೆ ಮಾಣಿಕ ವಯ: 40 ವರ್ಷ, 4) ಸೀತಮ್ಮಾ ಗಂಡ ಭೀಮಶಾ ವಯ: 60 ವರ್ಷ ಹಾಗೂ 5) ತಿಪ್ಪಣ್ಣಾ ತಂದೆ ಎಲ್ಲಪ್ಪಾ ವಯ: 62 ವರ್ಷ ಎಲ್ಲರು ಸಾ: ಬಗದಲ್ ಗ್ರಾಮ ಇವರೆಲ್ಲರನ್ನು ಕರೆಯಿಸಿಕೊಂಡು ಮನೆಯಲ್ಲಿ ನಿಶ್ಚಿತಾಥಱದ ಕಾರ್ಯಕ್ರಮ
ಮಾಡಿದ್ದು ಇರುತ್ತದೆ, ಇವರೆಲ್ಲರೂ ಕೋರೊನಾ ವೈರಸ್ ಹರಡದಂತೆ ಸರಕಾರ ವಿಧಿಸಿದ ನಿಷೇಧಾಜ್ಞೆ ಗೊತ್ತಿದ್ದರು ಸಹ ದುಬಲಗುಂಡಿ ಗ್ರಾಮದ ಸೂಲೆಮ್ಮಾ ನಿಡವಂಚಾ ರವರ ಮನೆಯಲ್ಲಿ ಸಾಮೂಹಿಕವಾಗಿ ಕೂಡಿಕೊಂಡು ಯಾವುದೇ ಅನುಮತಿ ಇಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾಮೂಹಿಕವಾಗಿ ಕೂಡಿಕೊಂಡರೆ ಮಾನವ ಜೀವಕ್ಕೆ ಅಪಾಯಕಾರಿಯಾದ ಮಾರಕ ಸಾಂಕ್ರಾಮಿಕ (ಕೋವಿಡ್-19) ಕೋರೋನಾ ವೈರಸ್ ಸೊಂಕು ಹರಡುವ ಸಂಭವ ಇರುತ್ತದೆ ಅಂತ ಗೊತ್ತಿದ್ದರೂ ಸಹ ಉದ್ದೇಶ ಪುರ್ವಕವಾಗಿ ಸರಕಾರದ ಆದೇಶ ಉಲ್ಲಂಘನೆ
ಮಾಡಿದ್ದು ಕಂಡು ಬಂದಿರುತ್ತದೆ ಅಂತ ಕೊಟ್ಟ ಫಿಯಾಱದಿಯವರ
ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.