ದಿನಂಪ್ರತಿ ಅಪರಾಧಗಳ
ಮಾಹಿತ ದಿನಾಂಕ:
12-04-2020
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
31/2020 ಕಲಂ 87 ಕೆಪಿ ಕಾಯ್ದೆ
:-
ದಿನಾಂಕ; 11/04/2020 ರಂದು 1400 ಗಂಟೆಗೆ ಬಸಲಿಂಗಪ್ಪ ಪಿಎಸ್ಐ ಮಂಠಾಳ ಪೊಲೀಸ್ ಠಾಣೆಯಲ್ಲಿರುವಾಗ ಮಂಠಾಳ ಗ್ರಾಮ ಶಿವಾರದಲ್ಲಿರುವ ವಿದ್ಯಾ ವಿಕಾಸ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನ ಕಾನೂನು ಬಾಹಿರವಾಗಿ ಅಂದರ ಬಾಹರ ಎಂಬ ಇಸ್ಪೇಟ ಎಲೆಗಳ ನಶೀಬಿನ ಜೂಜಾಟಕ್ಕೆ ಹಣ ಹಚ್ಚಿ ಪಣ ತೊಟ್ಟು ಆಟವಾಡುತ್ತಿದ್ದಾರೆ ಎಂದು ಫೋನ್ ಮುಖಾಂತರ ಖಚಿತ ಮಾಹಿತಿ ಬಂದಿದ ಮೇರೆಗೆ
ಸಿಬ್ಬಂದಿಯೊಂದಿಗೆ
ಹೊರಟು 1615
ಗಂಟೆಗೆ ಮಂಠಾಳ ಗ್ರಾಮ ಶಿವಾರದಲ್ಲಿರುವ ವಿದ್ಯಾ ವಿಕಾಸ ಶಾಲೆಯ ಹತ್ತಿರ ಮರೆಯಾಗಿ ನಮ್ಮ ಪೊಲೀಸ್ ಜೀಪ ನಿಲ್ಲಿಸಿ ಎಲ್ಲರು ಕೇಳಗೆ ಇಳಿದು ಅಲ್ಲಿಯೆ ಸುಮಾರು 100 ಅಡಿ ಅಂತರದಲ್ಲಿ ನಿಂತು ನೋಡಲು ವಿದ್ಯಾ ವಿಕಾಸ ಶಾಲೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿರುವ ಒಂದು ಮರದ ಕೇಳಗೆ ಕೆಲವು ಜನರು ಗೋಲಾಕಾರವಾಗಿ ಕುಳಿತು ಇಸ್ಪೇಟ ಎಲೆಗಳ ಅಂದರ ಬಾಹರ ನಶೀಬಿನ ಜೂಜಾಟವನ್ನು ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ನೋಡಿ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಿನಾಂಕ 11/04/2020 ರಂದು ಸಮಯ 1620 ಗಂಟೆಗೆ ಇಸ್ಪೀಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಲು ಅವರು ತಮ್ಮ ತಮ್ಮ ಹೆಸರು 1] ಸಾಜೀದ್ ತಂದೆ ಫಜಲೆ ರೆಹೆಮಾನ್ ಮೊಲಿಲ್ ವಯಸ್ಸು: 34ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ಖಡಕವಾಡಿ ಮಂಠಾಳ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 280/- ರೂಪಾಯಿ ಸಿಕ್ಕಿರುತ್ತದೆ. 2] ಸೈಯದ್ ಜಮಾಲ್ ತಂದೆ ಸೈಯದ್ ಹೈದರ್ ವಯಸ್ಸು: 34ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ಖಡಕವಾಡಿ ಮಂಠಾಳ ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 420/- ರೂಪಾಯಿ ಸಿಕ್ಕಿರುತ್ತದೆ. 3] ಮೊಹ್ಮದ್ ಮುಜಾಹಿದ್ ತಂದೆ ಮೊಹ್ಮದ್ ಲಯಾಕ ಅಲಿ ಬರಾಡಿ ವಯಸ್ಸು: 40ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ಖಡಕವಾಡಿ ಮಂಠಾಳ ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 520/- ರೂಪಾಯಿ ಸಿಕ್ಕಿರುತ್ತದೆ. 4] ಖಾದೀರ್ ತಂದೆ ಇಸಾಮಿಯ್ಯಾ ಬರಾಡಿ ವಯಸ್ಸು: 33ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ಖಡಕವಾಡಿ ಮಂಠಾಳ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 670/- ರೂಪಾಯಿ ಸಿಕ್ಕಿರುತ್ತದೆ. 5] ಖಾಜಾ ಮೈನೊದ್ದಿನ್ ತಂದೆ ಮೊಸಿನ್ ಸಾಬ್ ವಯಸ್ಸು: 40ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ಖಡಕವಾಡಿ ಮಂಠಾಳ ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 430/- ರೂಪಾಯಿ ಸಿಕ್ಕಿರುತ್ತದೆ. 6] ಮೊಹ್ಮದ್ ತನ್ವೀರ್ ತಂದೆ ಮೊಹ್ಮದ್ ಸಲೀಮ್ ಜಮಾದಾರ ವಯಸ್ಸು: 27ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ಖಡಕವಾಡಿ ಮಂಠಾಳ ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 380/- ರೂಪಾಯಿ ಸಿಕ್ಕಿರುತ್ತದೆ. 7] ಅಹ್ಮದ್ ಪಾಶಾ ತಂದೆ ಖಾಜಾಮಿಯ್ಯಾ ಖುರೇಶಿ ವಯಸ್ಸು: 32ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ಅಗಸಿ ಹತ್ತಿರ, ಮಂಠಾಳ ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 350/- ರೂಪಾಯಿ ಸಿಕ್ಕಿರುತ್ತದೆ. 8] ಇಮ್ರಾನ್ ಶೇಖ್ ತಂದೆ ಅಬ್ದುಲ್ಲಾಸಾಬ್ ಮೋಹ್ರಿಲ್ ವಯಸ್ಸು: 32ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ಖಡಕವಾಡಿ ಮಂಠಾಳ. ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 640/- ರೂಪಾಯಿ ಸಿಕ್ಕಿರುತ್ತದೆ. ಮತ್ತು ಘಟನಾ ಸ್ಥಳದ ಎಲ್ಲರ ಮದ್ಯದಲ್ಲಿ
970/-ರೂಪಾಯಿ ಹೀಗೆ ಒಟ್ಟು 4,660/- ರೂಪಾಯಿ ನಗದು ಹಣ ಮತ್ತು ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಠಾಣೆ ಯುಡಿಆರ್
ನಂ.
03/2020 ಕಲಂ 174 ಸಿಆರ್.ಪಿ.ಸಿ. :-
ದಿನಾಂಕ 11/04/2020 ರಂದು 1300 ಗಂಟೆಗೆ ಶ್ರೀ ಭರತ ತಂದೆ ಸುಭಾಷ ಜವಳದಾಬಕೆ ಸಾ; ಸೈದಾಪೂರವಾಡಿ ತಾ; ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನಿಡಿದರ ಸಾರಾಂಶವೇನೆಂದರೆ, ಗ್ರಾಮದ ಶಿವಾರದಲ್ಲಿ ಹೊಲ ಸರ್ವೆ ನಂ. 17/3 ನೇದ್ದರಲ್ಲಿ 1 ಎಕ್ಕರೆ ಜಮೀನು ಇದ್ದು ಈ
ಜಮೀನು ಅಜ್ಜಿ ಚಂಪಾಬಾಯಿ ಇವರ
ಹೆಸರಿನಲ್ಲಿರುತ್ತದೆ. ಫಿರ್ಯಾದಿ ತಂದೆ ಸುಭಾಷ ಇವರು ಹೊಲದ ಮೇಲೆ ಸಿದ್ದೇಶ್ವರ ಪಿ.ಕೆ.ಪಿ.ಎಸ್. ಬ್ಯಾಂಕನಲ್ಲಿ 50000/-
ರೂ ಬೆಳೆ ಸಾಲ ಪಡೆದಿರುತ್ತಾರೆ. ಮತ್ತು ಹೊಲ ಸಾಗುವಳಿ ಮಾಡಲು ಮತ್ತು ಲಗ್ನ ಮಾಡಲು ಊರಲ್ಲಿ ಹಾಗೂ ಸಂಬಂಧಿಕರಲ್ಲಿ ಖಾಸಗಿ ಸಾಲ 1,50,000/- ರೂ ಪಡೆದಿರುತ್ತಾರೆ. ತಂದೆಯವರು ಮನೆಯಲ್ಲಿ ಆಗಾಗ ಫಿರ್ಯಾದಿಗೆ ಮತ್ತು ತಾಯಿ ಕಲಾವತಿ ಮತ್ತು ತಮ್ಮ ಶರದ ರವರಿಗೆ ಈ
ವರ್ಷ ಹೊಲ ಸರಿಯಾಗಿ ಬೆಳೆದಿರುವುದಿಲ್ಲಾ ನಾನು ಮಾಡಿದ ಸಾಲ ಹೇಗೆ ತಿರಸಲಿ ನಾನು ಇರುವದು ಕಿಂತಾ ಸಾಯುವದು ಒಳ್ಳೆದು ಅಂತ ಅನ್ನುತಿದ್ದಾಗ ಎಲ್ಲರು ಅವರಿಗೆ ಈ ವರ್ಷ ಇಲ್ಲಾ ಮುಂದಿನ ವರ್ಷ ಸಾಲ ತಿರಸಲಿಕೆ ಬರುತ್ತದೆ ಈ ರೀತಿ ನೀವು ವಿಚಾರ ಮಾಡುವದು ಸರಿ ಇಲ್ಲಾ ಅಂತ ಅವರಿಗೆ ಸಮಾಧಾನ ಹೇಳಿರುತ್ತಾರೆ. ದಿನಾಂಕ 11/04/2020 ರಂದು ಬೆಳಿಗ್ಗೆ 7;30 ಗಂಟೆಯ ಸುಮಾರಿಗೆ ನಮ್ಮ ಹೊಲದ ಪಕ್ಕದವರಾದ ಕೀಶನಗೀರ ತಂದೆ ಪರಬತಗೀರ ರವರು ನಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ, ನಾನು ನಮ್ಮ ಹೊಲಕ್ಕೆ ಎಮ್ಮೆ ಕಟ್ಟಲು ಹೋದಾಗ ಸುಭಾಷ ಇವರು ತನ್ನ ಹೊಲದಲ್ಲಿರುವ ಹುಂಚೆ ಗೀಡಕ್ಕೆ ಹಗ್ಗದಿಂದ ನೇಣುಹಾಕಿಕೊಂಡು ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದರಿಂದ ಕೂಡಲೇ ನಾನು ಮತ್ತು ನಮ್ಮ ತಾಯಿ ಕಲಾವತಿ ಮತ್ತು ನಮ್ಮ ತಮ್ಮ ಶರದ ಮತ್ತು ರವರು ನಮ್ಮ ಹೊಲಕ್ಕೆ ಹೋಗಿ ನೋಡಲು ನಮ್ಮ ತಂದೆ ಸುಭಾಷ ಇವರು ನಮ್ಮ ಹೊಲದಲ್ಲಿರುವ ಹುಂಚೆ ಗೀಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದರು. ನಮ್ಮ ತಂದೆಯವರು ಬೆಳೆಯ ಮತ್ತು ಖಾಸಗಿ ಸಾಲದ ಬಾದೆ ತಾಳಲಾರದೆ ಮನಸ್ಸಿನ ಮೇಲೆ ಪರಿನಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಿಗ್ಗೆ 0600 ಗಂಟೆಯಿಂದ 0730 ಗಂಟೆಯ ಅವಧಿಯಲ್ಲಿ ನೇಣುಹಾಕೊಂಡು ಅತ್ಮಹತ್ತೆ ಮಾಡಿಕೊಂಡಿರುತ್ತಾರೆ. ಅಂತಾ ನೀಡಿದ ದೂರಿನ
ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
ಮೆಹಕರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2020 ಕಲಂ 174 ಸಿಆರ್.ಪಿ.ಸಿ. :-
ದಿನಾಂಕ:
11-04-2020 ರಂದು 1730 ಗಂಟೆಗೆ ಫಿರ್ಯಾದಿ
ಶ್ರೀ ವಿಠಲ ತಂದೆ ಬಾಬುರಾವ ಕಾಂಬಳೆ 38 ವರ್ಷ ಜಾ; ಮಾದಿಗ ಸಾ: ಕೊಂಗಳಿ ಠಾಣೆಗೆ
ಹಾಜರಾಗಿ ದೂರನ ನೀಡಿದರ ಸಾರಾಂಶವೆನೆಂದರೆ, ಮುಂಜಾನೆ ಗ್ರಾಮದ ಪಪ್ಪು ಡಾಂಗೆ
ರವರ ಹೊಲಕ್ಕೆ ಕೂಲಿ ಕೆಲಸಕ್ಕೆಂದು ಹೋಗಿದ್ದು ಹೊಲದಲ್ಲಿದ್ದಾಗ ಮನೋಜ ತಂದೆ ತಾತೇರಾವ ಕಾಂಬಳೆ ಇವರು ಮದ್ಯಾಹ್ನ 2:10 ಗಂಟೆಗೆ ಬಂದು ಫಿರ್ಯಾದಿ
ಹೆಂಡತಿಯಾದ ರೂಪಾ ಗಂಡ ವಿಠಲ ಕಾಂಬಳೆ 35 ವರ್ಷ ಜಾ: ಎಸ್.ಸಿ ಮಾದಿಗ ಉ: ಮನೆ ಕೆಲಸ ಸಾ: ಕೊಂಗಳಿ ಇವರಿಗೆ
ಕರೆಂಟ ತಗಲಿದರಿಂದ ಖಾಸಗಿ ವಾಹನದಲ್ಲಿ ಹುಲಸೂರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿಯ
ವೈದ್ಯಾಧಿಕಾರಿಗಳು ಬಸವ ಕಲ್ಯಾಣಕ್ಕೆ ಹೋಗಲು ತಿಳಿಸಿದ್ದರಿಂದ ಅಲ್ಲಿಂದ ಬಸವ ಕಲ್ಯಾಣದ ನ್ಯೂ ರಿಫಾಹ
ಆಸ್ಪತ್ರೆಗೆ ಒಯ್ದಾಗ ಅಲ್ಲಿಯ ವೈದ್ಯಾಧಿಕಾರಿ ಸಾಯಂಕಾಲ 4:40 ಗಂಟೆಗೆ ಮೃತಪಟ್ಟಿರುತ್ತಾರೆಂದು
ತಿಳಿಸಿದ್ದು ಇರುತ್ತದೆ. ಈ ಘಟನೆಯು ದಿನಾಂಕ: 11-04-2020 ರಂದು ಮಧ್ಯಾಹ್ನ 2:00 ಗಂಟೆಗೆ ಫಿರ್ಯಾದಿ
ಹೆಂಡತಿ ಮನೆಯಲ್ಲಿ ನೆಲ ಸಾರಿಸುವಾಗ ಕಬ್ಬಿಣದ ಟೇಬಲದಲ್ಲಿ ಕರೆಂಟ ತಗಲಿ ಆಗಿದ್ದು ಇರುತ್ತದೆ. ಈ ಘಟನೆ ಆಕಸ್ಮಿಕ
ವಿದ್ಯುತ ತಗಲುವಿಕೆಯಿಂದ ಆಗಿದ್ದು ಈ ಘಟನೆ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ದೂರು ಇರುವುದಿಲ್ಲ. ಅಂತಾ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.