ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-02-2021
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 14/2021, ಕಲಂ. 457, 380 ಐಪಿಸಿ :-
ದಿನಾಂಕ 09-02-2021 ರಂದು 1900 ಗಂಟೆಯಿಂದ ದಿನಾಂಕ 10-02-2021 ರಂದು 0700 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಜೈಕÄಮಾರ ತಂದೆ ಅಮೃತ ಚೌಕಳೆ ಸಾ: ಅಲಿಯಾಬಾದ, ತಾ: ಬೀದರ ರವರ ಮನೆಯಲ್ಲಿಟ್ಟಿರುವ 10 ಗ್ರಾಂ. ಬಂಗಾರದ ಆಭರಣಗಳು ಅ.ಕಿ 40,000/- ರೂ. ಹಾಗೂ 15000/- ರೂ. ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 11-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂ. 24/2021, ಕಲಂ. 379 ಐಪಿಸಿ :-
ದಿನಾಂಕ 31-01-2021 ರಂದು 2100 ಗಂಟೆಯಿಂದ ದಿನಾಂಕ 01-02-2021 ರಂದು 0200 ಗಂಟೆಯ ಅವಧಿಯಲ್ಲಿ ಫಿರ್ಯಾದಿ ವಾಮನ ತಂದೆ ಕಿಶನರಾವ ಪಾಟೀಲ ವಯ: 53 ವರ್ಷ, ಜಾತಿ: ಮರಾಠಾ, ಸಾ: ಬ್ಯಾಂಕ್ ಕಾಲೋನಿ, ಬೀದರ ರವರ ದ್ವಿಚಕ್ರ ವಾಹನ ಸಂ. ಎಮ್.ಹೆಚ್-24/ಎ.ಕ್ಯೂ-0967, ಇಂಜಿನ್ ನಂ. ಡಿ.ಜಿ.ಸಿ.ಜಿ.ಇ.38162, ಚಾಸಿಸ್ ನಂ. ಎಮ್.ಡಿ.2.ಎ.12.ಡಿ.ಝಡ್.9.ಜಿ.ಸಿ.37751, ಮಾದರಿ 2017, ಬಣ್ಣ: ಕೆಂಪು ಬಣ್ಣ ಹಾಗೂ ಅ.ಕಿ 60,000/- ರೂ. ನೇದನ್ನು ಫಿರ್ಯಾದಿಯವರ ಮನೆಯ ಮುಂದಿನಿಂದ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 23/2021, ಕಲಂ. 302 ಜೊತೆ 34 ಐಪಿಸಿ ಮತ್ತು 3(2) (5) ಎಸ್.ಸಿ/ಎಸ್.ಟಿ ಕಾಯ್ದೆ :-
ಫಿರ್ಯಾದಿ ಶರಣಪ್ಪಾ ತಂದೆ ತಿಮ್ಮಯ್ಯಾ ಪವಾರ, ಸಾ: ಜನತಾ ಕಾಲೋನಿ ಭಾಲ್ಕಿ ರವರ ಮಗನಾದ ಉಮೇಶ ಇತನಿಗೆ ಒಂದು ವರ್ಷದ ಹಿಂದೆ ಪಕ್ಕು @ ಪ್ರಕಾಶ ತಂದೆ ನಾಗಪ್ಪಾ ವಡ್ಡರ ಇವರ ಮನೆಯವರು ಸೇರಿ ಹೋಡೆದಿದ್ದರು ಅವರ ಮೇಲೆ ಕೊಲೆ ಪ್ರಯತ್ನ ಕೇಸ್ ದಾಖಲಾಗಿತ್ತು, ಆಗ ಅವರು ಉಮೇಶ ಇತನಿಗೆ ಕೋಲೆ ಮಾಡುವ ಉದ್ದೇಶದಿಂದ ಹೋಡೆದರು, ಅದೇ ವೈರತ್ವದಿಂದ ಉಮೇಶ ಇತನಿಗೆ ಆರೋಪಿತರಾದ 1) ಪಕ್ಕು @ ಪ್ರಕಾಶ ತಂದೆ ನಾಗಪ್ಪಾ ವಡ್ಡರ ಹಾಗೂ 2) ಸಂಜು ಇಬ್ಬರು ಸಾ: ಜನತಾ ಕಾಲೋನಿ ಭಾಲ್ಕಿ ಇವರಿಬ್ಬರು ಸೇರಿ ದಿನಾಂಕ 10-02-2021 ರಂದು 1800 ಗಂಟೆಯಿಂದ ದಿನಾಂಕ 11-02-2021 ರಂದು 0700 ಗಂಟೆಯ ಅವಧಿಯಲ್ಲಿ ಉಮೇಶನ ಕೋಲೆ ಮಾಡಿ ಭಾಲ್ಕಿಯ ಕೇರೆಯಲ್ಲಿ ಬಿಸಾಕಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 18/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 11-02-2021 ರಂದು ನಾಗರಾಜ ತಂದೆ ಮಹಾಲಿಂಗಪ್ಪಾ ಪಾಟೀಲ್ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಜೇರಪೇಟ್ ಹುಮನಾಬಾದ ರವರು ಹುಮನಾಬಾದ ಪಟ್ಟಣದ ನಾಗಲಕ್ಷ್ಮೀ ಧಾಬಾದಲ್ಲಿ ಊಟ ಮಾಡಿಕೊಂಡು ಮೂತ್ರ ವಿಸರ್ಜನೆಗೆ ಹೋಗಿ ಮರಳಿ ಕಾಲ ನಡಿಗೆಯಲ್ಲಿ ನಡೆದುಕೊಂಡು ಎರಡು ಕಡೆ ನೋಡಿಕೊಂಡು ಕೈ ಸನ್ನೆ ಮಾಡಿ ರೋಡ ದಾಟಿಕೊಂಡು ಮರಳಿ ನಾಗಲಕ್ಷ್ಮೀ ಧಾಬಾದ ಕಡೆಗೆ ಬರುತ್ತಿರುವಾಗ ಹೈವೇ ರೋಡಿನ ಕಡೆಯಿಂದ ಒಂದು ಕಾರ್ ನಂ. ಎಮ್.ಹೆಚ್-04/ಇ.2008 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸ್ವಲ್ಪ ದೂರದಲ್ಲಿ ಹೋಗಿ ತನ್ನ ಕಾರನ್ನು ನಿಲ್ಲಿಸಿ ಕೆಳಗಡೆ ಇಳಿದು ಫಿರ್ಯಾದಿಗೆ ಗಾಯಗಳು ಆಗಿರುವುದನ್ನು ನೋಡಿ ತನ್ನ ಕಾರನ್ನು ನಿಲ್ಲಿಸದೇ ಕಾರ್ ಸಮೇತ ಐ.ಬಿ ಕಡೆಗೆ ಓಡಿ ಹೋಗಿತ್ತಾನೆ, ಕಾರಣ ಸದರಿ ಅಪಘಾತದಿಂದ ಫಿರ್ಯಾದಿಯ ಎಡಗಾಲ ಮೊಣಕಾಲಿಗೆ ತೀವ್ರ ಗುಪ್ತಗಾಯ, ತಲೆಯ ಹಿಂದೆ ಮತ್ತು ಬಲಗಾಲ ಕಣ್ ಕಾಲಿಗೆ ಸಾದಾ ರಕ್ತಗಾಯಗಳು ಆಗಿರುತ್ತವೆ, ನಂತರ ಅಲ್ಲೇ ಇದ್ದ ಅಣ್ಣ ವೀರಣ್ಣಾ ತಂದೆ ಮಹಾಲಿಂಗಪ್ಪಾ ಪಾಟೀಲ್ ಮತ್ತು ವಾಲ್ಮೀಕಿ ತಂದೆ ಈರಪ್ಪಾ ನಾಶಿ ಸಾ: ಜೇರಪೇಟ ಹುಮನಾಬಾದ ಇವರುಗಳು ಘಟನೆಯನ್ನು ಪ್ರತ್ಯೇಕ್ಷವಾಗಿ ನೋಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.